ನಿರುಪಮಾ. ಕೆ.ಎಸ್.

ಸಂಪಾದಕಿ
ಮಲೆನಾಡಿನ ತೀರ್ಥಹಳ್ಳಿಯಳು. ಗುಜರಾತ್ ವಿವಿಯ ಎಲ್‌ಎಲ್‌ಬಿ ಪದವೀಧರೆ. ವೃತ್ತಿ ಆರಂಭಿಸಿದ್ದು ಶಿವಮೊಗ್ಗ ಜಿಲ್ಲಾ ವರದಿಗಾತಿಯಾಗಿ ವಿಜಯ್ ಟೈಮ್ಸ್‌ನಲ್ಲಿ. ನಂತರ ಉಪ ಸಂಪಾದಕಿಯಾಗಿ ಸೇರಿದ್ದು ಒನ್ ಇಂಡಿಯಾ ಸಂಸ್ಥೆಯನ್ನು. 23 ವರ್ಷಗಳು ಕನ್ನಡ ಪ್ರಿಂಟ್ ಹಾಗೂ ಡಿಜಿಟಲ್ ಪತ್ರಿಕೋದ್ಯಮಿಯಾಗಿ ಸೇವೆ ಸಲ್ಲಿಸಿದ್ದು, ಇದೀಗ ಒನ್ ಇಂಡಿಯಾ ಕನ್ನಡದ ಸಂಪಾದಕಿ. ಈ ಮಧ್ಯೆ ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್‌ನ ಆ್ಯಕ್ಟಿಂಗ್ ಎಡಿಟರ್ ಆಗಿಯೂ ಸೇವೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿ ಕೆಲವು ಸಂಸ್ಥೆಗಳು ಸನ್ಮಾಸಿವೆ. ಸುಳ್ಳು ಸುದ್ದಿ ಪತ್ತೆ ಹಚ್ಚುವ ಮೆಟಾ ಫೆಲೋಶಿಪ್, ಗೂಗಲ್ ಎಸ್‌ಇಒ ಟ್ರೈನಿಂಗ್‌ನಲ್ಲಿ ಭಾಗಿ. ಲೈಫ್‌ಸ್ಟೈಲ್, ಅಸ್ಟೋಲಜಿ, ರಾಜಕೀಯ, ಸಿನಿಮಾ ಸೇರಿ ಎಲ್ಲ ಕ್ಷೇತ್ರಗಳಲ್ಲಿಯೂ ಆಸಕ್ತಿ ಇದೆ. ಡಿಜಿಟಲ್ ಜರ್ನಲಿಸಂ‌ ಉಸಿರು.

Recent Posts