ಬಿಜೆಪಿ ಆಡಳಿತದ ಮಹಾ, ದಿಲ್ಲಿ ಆಯ್ತು, ಇದೀಗ ಯೋಗಿ ಉತ್ತರ ಪ್ರದೇಶ ಸರ್ಕಾರದಿಂದಲೂ ಗ್ಯಾರಂಟಿ ಯೋಜನೆ

ಲಕ್ನೋ, ಜುಲೈ 22: ಫ್ರೀಬಿ, ಉಚಿತ ಅಥವಾ ಗ್ಯಾರಂಟಿ ಯೋಜನೆ ಎಂದು ಕಾಂಗ್ರೆಸ್ ಸರಕಾರ ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಘೋಷಿಸಿತ್ತು. ಈ ಯೋಜನೆಗಳಿಗೆ ಜನರು ಅಭೂತಪೂರ್ವ ಸ್ಪಂದಿಸಿದ ಕಾರಣ, ಕಾಂಗ್ರೆಸ್‌ಗೆ ಸ್ಷಷ್ಟ ಬಹುಮತ ಪಡೆದು, ಕರ್ನಾಟಕದಲ್ಲಿ ಆಡಳಿತ ನಡೆಸುವಂತಾಯಿತು. ಮೊದಲು ಸಿದ್ದರಾಮಯ್ಯ ಸರಕಾರದ ಚುಕ್ಕಾಣಿ ಹಿಡಿದು, ಈ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿಯೂ ಯಶಸ್ವಿಯಾದರು. ಇದೀಗ ಅಧಿಕಾರದಲ್ಲಿರುವ ಡಿ.ಕೆ.ಶಿವಕುಮಾರ್ ಸಹ ಗ್ಯಾರಂಟಿಯ ಯೋಜನೆಗಳ ಪರಿಶೀಲನೆಯೊಂದಿಗೆ ಯೋಜನೆಗೆ ಬಲ ತುಂಬಿದ್ದಾರೆ. ಅರ್ಹರು ಮಾತ್ರ ಈ ಗ್ಯಾರಂಟಿ ಲಾಭ ಪಡೆಯುವಂತೆ ನೋಡಿಕೊಂಡಿದ್ದಾರೆ.

ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಸೇರಿ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಸದಾ ಒಂದಲ್ಲೊಂದು ಅಪಸ್ವರ ಎತ್ತಿದ ಬಿಜೆಪಿ,ದೇಶದ ಆರ್ಥಿಕ ಅಭಿವೃದ್ಧಿಗೆ ಇಂಥ ಉಚಿತ ಯೋಜನೆಗಳು ಮಾರಕವೆಂದೇ ಬಿಂಬಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಸೇರಿ, ಬೇರೆ ರಾಜ್ಯಗಳಲ್ಲಿ ಪ್ರಚಾರ ಮಾಡುವಾಗ ಈ ಯೋಜನೆಗಳಿಂದ ಅಷ್ಟೇನೂ ಉಪಯೋಗವಿಲ್ಲವೆಂದೇ ಹೇಳುತ್ತಿದ್ದರು. ಈ ಯೋಜನೆಗಳು ಜನಪ್ರಿಯವಾದವು. ಯೋಜನೆಯ ಲಾಭವನ್ನು ಅರ್ಹರು ಸುಲಭವಾಗಿ ಬಳಸುವಂತೆ ಕ್ರಮ ಕೈಗೊಂಡ ಕಾರಣ, ಜನಪ್ರಿಯವಾದವು. ಸಿದ್ದರಾಮಯ್ಯ ಮೂರು ವರ್ಷಗಳ ನಂತರ ಅಧಿಕಾರವನ್ನು ಡಿ.ಕೆ.ಶಿವಕುಮಾರ್ ಅವರಿಹೆ ಹಸ್ತ್ರಾಂತರಿಸಿದರೂ, ಯೋಜನೆಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

Uttrar Pradesh Yogi Adityanath government to provide free scooties as Guarantee scheme of Karnataka

ಬಿಜೆಪಿ ಆಡಳಿತದ ರಾಜ್ಯದಲ್ಲೂ ಜಾರಿ

ಡಿಕೆಶಿ ಅಧಿಕಾರಕ್ಕೆ ಬಂದ ಮೇಲೆ ಅರರ್ಹರನ್ನು ಯೋಜನೆಯಿಂದ ಕೈ ಬಿಡಲು, ಕೆವೈಸಿ ಕಡ್ಡಾಯಗೊಳಿಸಿತ್ತು. ಇದರಿಂದ ಆದಾಯ ತೆರಿಗೆ ಪಾವತಿದರರೂ ಸೇರಿ ಅನರ್ಹರು ಯೋಜನೆಯಿಂದ ಹೊರ ಬರಬೇಕಾಯಿತು. ಆಗಲೂ ಯೋಜನೆ ಹೆಸರು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ, ಜನರನ್ನು ವಂಚಿಸುತ್ತಿದೆ. ಮಹಿಳೆಯರ ಸ್ವಾಭಿಮಾನಕ್ಕೆ ಇಂಬು ಕೊಡುವುದಾಗಿ ಹೇಳಿ, ಇದೀಗ ಗೃಹಲಕ್ಷ್ಮಿ ಹಣ ಉಳಿಸಲು ಮುಂದಾಗುತ್ತಿದೆ ಎಂದೇ ಬೊಬ್ಬೆ ಹಾಕಿತ್ತು. ಯಾರೇನೇ ಹೇಳಿದರೂ ಕರ್ನಾಟಕದ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ ಮಾದರಿಯಲ್ಲಿಯೇ ಬಿಜೆಪಿ ಆಡಳಿತಕ್ಕೆ ಬಂದ ಮಹಾರಾಷ್ಟ್ರ, ದಿಲ್ಲಿ ಸರಕಾರವೂ ಜಾರಿಗೊಳಿಸಿವ. ಮಹಾರಾಷ್ಟ್ರದಲ್ಲಿ ಅರ್ಹ ಮಹಿಳೆಯರಿಗೆ ಮಾಂಜಿ ಲಡ್ಕೀ ಬಹೀನ್ ಯೋಜನೆಯಡಿಯಲ್ಲಿ 1500 ರೂ. ನೀಡಿದರೆ, ದಿಲ್ಲಿ ಸರಕಾರವೂ ಮುಂದಿನ ತಿಂಗಳು ಇಂಥದ್ದೇ ಯೋಜನೆ ಜಾರಿಗೊಳಿಸಲು ಉದ್ದೇಶಿಸಿದ್ದು, 2500 ರೂ. ನೀಡುತ್ತಿದೆ. ಅದರಲ್ಲಿ 1000 ರೂ ವಿತ್ ಡ್ರಾ ಮಾಡಬಹುದಾಗಿದ್ದು, ಇನ್ನುಳಿದ 1,500 ರೂ ಆರ್ಡಿಯಾಗಿ ಪರಿವರ್ತನೆಗೊಳ್ಳಲ್ಲಿದ್ದು, ಮೂರು ವರ್ಷಗಳ ನಂತರ ವಿಥ್ ಡ್ರಾ ಮಾಡಬಹುದಾಗಿದೆ.

ಇದೀಗ ಯೋಗಿ ನೇತೃತ್ವದ ಯುಪಿ ಸರದಿ

ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಯೋಗಿ ಆದಿತ್ಯನಾಥ್ ಹ್ಯಾಟ್ರಿಕ್ ಮಾಡ್ತಾರಾ ನೋಡಬೇಕು. ಈಗಾಗಲೇ ಸತತ ಎರಡು ಸಲ ಅಧಿಕಾರದ ಚುಕ್ಕಾಣಿ ಹಿಡಿದ ಯೋಗಿಗೆ ಈ ವರ್ಷ ಆಯೋಧ್ಯೆ ರಾಮ ಮಂದಿರ ಹುಂಡಿ ಕಳವು ಪ್ರಕರಣ ಮುಳ್ಳಾಗುವ ಸಾಧ್ಯತೆ ಇದೆ. ಕೋಟ್ಯಾಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ಈ ಘಟನೆಯಿಂದ ಘಾಸಿಗೊಂಡ ಯೋಗಿ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಕರ್ನಾಟಕದ ಕಾಂಗ್ರೆಸ್ ಸರಕಾರದಂತೆಯೇ ಉಚಿತ ಯೋಜನೆ ಘೋಷಿಸಿದೆ.

ಪದವಿ ಪಡೆದ ಹೆಣ್ಣು ಮಕ್ಕಳಿಗೆ ಸ್ಕೂಟಿ

ಯೋಗಿ ನೇತೃತ್ವದ ಉತ್ತರ ಪ್ರದೇಶ ಸರಕಾರ ಮಂಗಳವಾರದ ಕ್ಯಾಬಿನೆಟ್ ಸಭೆಯಲ್ಲಿ ಪದವಿ ಪಡೆದ ಅರ್ಹ ಮಹಿಳೆಯರಿಗೆ ಸ್ಕೂಟಿ ನೀಡಲು ಸಮ್ಮತಿಸಿದೆ. ರಾಣಿ ಲಕ್ಷ್ಮಿಬಾಯಿ ಸ್ಕೂಟಿ ಯೋಜನೆ ಎಂಬ ಈ ಸ್ಕೀಂ ಅಡಿಯಲ್ಲಿ ವಾರ್ಷಿಕ ಆದಾಯ 12 ಲಕ್ಷ ರೂಗಿಂತ ಕಡಿಮೆ ಇರುವ, ಪ್ರತೀ ವಿಶ್ವವಿದ್ಯಾಲ ಅಥವಾ ಕಾಲೇಜಿನ ಶೇ.5 ಮಹಿಳಾ ವಿದ್ಯಾರ್ಥಿನಿಯರಿಗೆ ಸ್ಕೂಟಿ ನೀಡಲಾಗುವುದು. ಬರೀ ಸ್ಕೂಟಿ ಮಾತ್ರವಲ್ಲ, ಸರಕಾರವೇ ಪ್ರತೀ ಅರ್ಹರಿಗೂ ವಿಮೆ ಮಾಡಿಸಿ, ಗಾಡಿಯ ರಿಜಿಸ್ಟ್ರೇಷನ್ ಮಾಡಿಸುವುದಲ್ಲದೇ, ಹೆಲ್ಮೆಟ್ ಹಾಗೂ ಇತರೆ ಅಗತ್ಯ ವಸ್ತುಗಳನ್ನು ನೀಡುತ್ತದೆ. ಜೊತೆಗೆ ಐದು ಲೀಟರ್ ಪೆಟ್ರೋಲನ್ನೂ ಉಚಿತವಾಗಿ ನೀಡಲಿದೆ ಎಂದು, ಉನ್ನತ ಶಿಕ್ಷಣ ಸಚಿವ ಯೋಗೇಂದ್ರ ಉಪಾಧ್ಯಾಯ್ ಅವರು ಹೇಳಿದ್ದಾರೆ.

ಒಟ್ಟಿನಲ್ಲಿ ಉತ್ತರ ಪ್ರದೇಶ ಸರಕಾರಕ್ಕೂ ಕರ್ನಾಟಕದ ಗ್ಯಾರಂಟಿ ಯೋಜನೆಯೇ ಮಾದರಿಯಾಗಲಿದ್ದು, ಯೋಗಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗುತ್ತಾ ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+