ಇಂದಿನಿಂದ ಬೆಳಗುವುದು ಈ ರಾಶಿಯವರ ಅದೃಷ್ಟ : ಆಗುವುದು ಸಂಪತ್ತಿನ ಸುರಿ ಮಳೆ

ವೈದಿಕ ಜ್ಯೋತಿಷ್ಯದಲ್ಲಿ, ದೇವಗುರು ಗುರುವನ್ನು ಎಲ್ಲಾ ಗ್ರಹಗಳಲ್ಲಿ ಅತ್ಯಂತ ಶುಭ ಗ್ರಹ ಎಂದೇ ಹೇಳುವುದು. ಅದೃಷ್ಟ, ಶಿಕ್ಷಣ, ಮಕ್ಕಳು, ವೈವಾಹಿಕ ಜೀವನದಲ್ಲಿ ಸುಖ ಮತ್ತು ಸಂಪತ್ತು ಒಲಿದು ಬರುವುದಕ್ಕೆ ಗುರುವೇ ಕಾರಣವಂತೆ. ಯಾರ ಜಾತಕದಲ್ಲಿ ಗುರುದೆಸೆ ನಡೆಯುತ್ತಿರುತ್ತದೆಯೋ ಅವರು ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುವರು. ಅದೃಷ್ಟ ಅವರ ಬೆನ್ನ ಹಿಂದೆಯೇ ಇರುವುದು.

ಗುರು ತನ್ನ ಸ್ಥಾನ ಅಥವಾ ನಕ್ಷತ್ರವನ್ನು ಬದಲಾಯಿಸಿದಾಗಲೆಲ್ಲಾ, ಎಲ್ಲಾ ಹನ್ನೆರಡು ರಾಶಿಯ ಜನರ ಜೀವನದ ಮೇಲೆ ದೊಡ್ಡ ಮಟ್ಟದಲ್ಲಿಯೇ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ದೇವಗುರು ಇಂದು ಈಗ ಆಶ್ಲೇಷ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಗುರು ಗ್ರಹದ ಈ ಸಂಚಾರದ ಪರಿಣಾಮ ಕೆಲವು ರಾಶಿಯವರ ಜೀವನದಲ್ಲಿ ಹೆಚ್ಚು ಗೋಚರಿಸಲಿದೆ.

jupiter star transit 2026 3 zodiac sign to get financial benefits and success in career

ಗುರುವಿನ ನಕ್ಷತ್ರ ಸಂಕ್ರಮಣ ಯಾವಾಗ ಸಂಭವಿಸುತ್ತದೆ? ಎಷ್ಟು ಕಾಲದವರೆಗೆ ಪ್ರ ಪರಿಣಾಮ ಇರುತ್ತದೆ? :
ಪಂಚಾಂಗ ಮತ್ತು ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಗುರು ಗ್ರಹವು ಆಗಸ್ಟ್ 19, 2026 ರಂದು ಅಂದರೆ ಇಂದು ಆಶ್ಲೇಷ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ನವೆಂಬರ್ 18, 2026 ರವರೆಗೆ ಗುರು ಇದೇ ನಕ್ಷತ್ರದಲ್ಲಿ ಸಂಚಾರ ಮಾಡುತ್ತಾ ಇರುತ್ತಾನೆ. ಈ ಸಂಪೂರ್ಣ ಅವಧಿಯಲ್ಲಿ, ಅನೇಕ ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ.

ಈ 3 ಅದೃಷ್ಟ ರಾಶಿಯವರಿಗೆ ಆಗುವುದು ಭಾರೀ ಲಾಭ

ಮೇಷ ರಾಶಿ (Aries): ಗುರುವಿನ ಈ ನಕ್ಷತ್ರ ಬದಲಾವಣೆಯು ಮೇಷ ರಾಶಿಯ ಸ್ಥಳೀಯರಿಗೆ ಅತ್ಯಂತ ಶುಭಕರವಾಗಿರುವುದು. ನಿಮ್ಮ ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚಾಗುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ವಿಶೇಷ ಮನ್ನಣೆ ಸಿಗುವುದು. ಮೇಲಧಿಕಾರಿಗಳಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುವುದು. ಹೊಸ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ, ಸಮಯವು ತುಂಬಾ ಅನುಕೂಲಕರವಾಗಿರುವುದು. ಆರ್ಥಿಕ ಪರಿಸ್ಥಿತಿ ಬಲಗೊಳ್ಳುವುದು. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಮನೆ ಮಾಡುವುದು.

ಕರ್ಕಾಟಕ ರಾಶಿ (Cancer): ದೇವಗುರುವಿನ ಈ ಸಂಚಾರವು ಕರ್ಕಾಟಕ ರಾಶಿಯವರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿರುವುದು. ನಿಂತು ಹೋಗಿದ್ದ ಕೆಲಸಗಳು ಚುರುಕು ಪಡೆಯುವುದು. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುವುದು. ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವುದು. ನಿಮ್ಮ ಆಸೆಯಂತೆ ನಿಮಗೆ ಬೇಕಾದ ಜಾಗಕ್ಕೆ ವರ್ಗಾವಣೆಯಾಗುವುದು. ಉದ್ಯಮಿಗಳಿಗೆ ಹಠಾತ್ ಆರ್ಥಿಕ ಲಾಭವಾಗುವುದು. ಇದರಿಂದ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುವುದು.

ವೃಶ್ಚಿಕ ರಾಶಿ (Scorpio): ಈ ಸಂಚಾರವು ವೃಶ್ಚಿಕ ರಾಶಿಯವರ ಅದೃಷ್ಟದ ಬಾಗಿಲು ತೆರೆಯುವ ಸಂಕೇತವಾಗಲಿದೆ. ಪ್ರತಿಯೊಂದು ಪ್ರಯತ್ನದಲ್ಲೂ ಅದೃಷ್ಟ ನಿಮ್ಮ ಕೈ ಹಿಡಿಯುವುದು. ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಇದು ಉತ್ತಮ ಸಮಯ. ನಿಮ್ಮ ಕೆಲಸ ಕಾರ್ಯಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗುವುದು. ತುಂಬಾ ಸಮಯದಿಂದ ಹೊರಗೆ ಉಳಿದಿದ್ದ ಹಣ ಮತತೆ ವಾಪಸ್‌ ಸಿಗುವುದು. ವೈವಾಹಿಕ ಜೀವನವು ಹೆಚ್ಚು ಸಾಮರಸ್ಯದಿಂದ ಕೂಡಿರುವುದು. ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಅವಕಾಶ ಸಿಗುವುದು.

ಈ ರಾಶಿಯವರಿಗೆ ಅಶುಭ ಫಲ

ಗುರು ಗ್ರಹದ ನಕ್ಷತ್ರ ಬದಲಾವಣೆ ಮೂರು ರಾಶಿಯವರಿಗೆ ಅದೃಷ್ಟ ತಂದರೆ ಇನ್ನು ಮೂರು ರಾಶಿಯವರಿಗೆ ಅಶುಭ ಫಲಗಳನ್ನು ನೀಡಲಿದೆ. ಮಿಥುನ, ಧನು ಮತ್ತು ಮೀನರಾಶಿಯವರ ಕೆಲಸಗಳಿಗೆ ಸ್ವಲ್ಪ ಮಟ್ಟಿನ ಅಡೆತಡೆಗಳು ಎದುರಾಗಬಹುದು. ಇವರು ಹೂಡಿಕೆ ಮಾಡುವ ಬಗ್ಗೆ ಯೋಚನೆ ಮಾಡದಿರುವುದೇ ಒಳ್ಳೆಯದು. ಪ್ರಗತಿಯಲ್ಲಿರುವ ಕೆಲಸಗಳಲ್ಲಿ ಸಮಸ್ಯೆ ಕಾಣುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+