Gold Astrology : ಈ ರಾಶಿಯವರು ಚಿನ್ನದ ಉಂಗುರ ಹಾಕಿದರೆ ಮಾತ್ರ ಅದೃಷ್ಟ : ನೀವು ಕೂಡಾ ಇದೇ ರಾಶಿಯವರಾ?

Gold Astrology : ಜ್ಯೋತಿಷ್ಯದ ಪ್ರಕಾರ ಚಿನ್ನಕ್ಕೆ ವಿಶೇಷ ಮಹತ್ವವಿದೆ. ಸೂರ್ಯ ಮತ್ತು ಗುರು ಈ ಲೋಹದ ಅಧಿಪತಿ ಗ್ರಹಗಳು. ಚಿನ್ನ ಸಿರಿವಂತಿಕೆ, ಸಮೃದ್ದಿಯ ಸಂಕೇತ ಹೌದು. ಆದರೆ ಜ್ಯೋತಿಷ್ಯದ ಪ್ರಕಾರ ಎಲ್ಲಾ ರಾಶಿಯವರು ಚಿನ್ನವನ್ನು ಹಾಕುವಂತಿಲ್ಲ. ಕೆಲವರಿಗೆ ಚಿನ್ನ ಅದೃಷ್ಟ ತಂದೆ ಇನ್ನು ಕೆಲವರಿಗೆ ಚಿನ್ನವೇ ಕೆಲಸ ಕೆಡಿಸುವುದು. ರಾಶಿಗೆ ಅನುಗುಣವಾಗಿ ಲೋಹ, ರತ್ನಗಳಿವೆ.

ಯಾವ ರಾಶಿಯವರಿಗೆ ಯಾವ ಲೋಹ ಹೆಚ್ಚು ಸೂಕ್ತ, ಯಾವ ರತ್ನ ಅದೃಷ್ಟ ಎನ್ನುವುದನ್ನು ಹೇಳಲಾಗಿದೆ. ಗುರು ಮತು ಸೂರ್ಯ ಬಂಗಾರದ ಅಧಿಪತಿ ಗ್ರಹಗಳಾಗಿರುವುದರಿಂದ ಈ ಎರಡು ಗ್ರಹಗಳ ಬಲವಾದ ಪ್ರಭಾವ ಯಾವ ರಾಶಿಯವರ ಜಾತಕದ ಮೇಲೆ ಇರುವುದೋ ಅವರಿಗೆ ಬಂಗಾರ ಅದೃಷ್ಟವನ್ನು ಹೊತ್ತು ತರುವುದು. ಈ ರಾಶಿಯವರು ಮೈ ಮೇಲೆ ಒಂದು ತುಂಡು ಚಿನ್ನ ಧರಿಸಿದರೂ ಅದೃಷ್ಟ ಅವರಿಗೆ ಒಲಿಯುವುದು. ಅದರಲ್ಲಿಯೂ ಚಿನ್ನದ ಉಂಗುರ ಹಾಕಿದರೆ ಕೆಲವು ರಾಶಿಯವರಿಗೆ ಹೆಚ್ಚಿನ ಲಾಭವಾಗುವುದಂತೆ.

Which Zodiac Sign people Should Wear Gold To get Huge Luck Success In Life Gold Astrology In Kannada

ಹಾಗಿದ್ದರೆ ಯಾವ ರಾಶಿಯವರಿಗೆ ಚಿನ್ನ ಶುಭ ಎನ್ನುವುದನ್ನು ನೋಡೋಣ.

ಮೇಷ ರಾಶಿ (Aries)

ಮೇಷ ರಾಶಿಯವರಿಗೆ ಚಿನ್ನ ಧರಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಉಂಗುರದ ಬೆರಳಿಗೆ ಹಾಕುವ ಚಿನ್ನ ಅವರ ಧೈರ್ಯ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆಯಂತೆ. ವೃತ್ತಿಜೀವನದ ಪ್ರಗತಿಗೆ ಅವಕಾಶ ಸಿಗುವುದು. ಅದೃಷ್ಟ ಇವರ ಜೊತೆ ಇರಬೇಕಾದರೆ ಇವರು ಒಂದು ತುಂಡಾದರೂ ಬಂಗಾರ ಧರಿಸಲೇಬೇಕಂತೆ.

ಸಿಂಹ ರಾಶಿ (Leo)

ಸಿಂಹ ರಾಶಿಯವರಿಗೆ ಕೂಡಾ ಚಿನ್ನ ಅದೃಷ್ಟ. ಸಿಂಹ ರಾಶಿ ಬೆಂಕಿಯ ಅಂಶದ ರಾಶಿಯಾಗಿದೆ. ಇವರ ಅಧಿಪತಿ ಗ್ರಹ ಕೂಡಾ ಸೂರ್ಯ. ಹಾಗಾಗಿ ಇವರು ಬಂಗಾರ ಧರಿಸಲೇ ಬೇಕು ಎನ್ನುತ್ತದೆ ಜ್ಯೋತಿಷ್ಯ. ಚಿನ್ನ ಧರಿಸಿದ ಕೂಡಲೇ ಇವರ ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುವುದು. ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಎಲ್ಲಾ ಕಡೆ ನಿಮಗೆ ನಿಮ್ಮ ಮಾತಿಗೆ ಮನ್ನಣೆ ಇರುವುದು.

ಧನು ರಾಶಿ (Sagittarius)

ಧನು ರಾಶಿಯ ಅಧಿಪತಿ ಗುರು. ಮೊದಲೇ ಹೇಳಿದ ಹಾಗೆ ಚಿನ್ನದ ಅಧಿಪತಿ ಗ್ರಹ ಕೂಡಾ ಗುರು. ಹಾಗಾಗಿ ಧನು ರಾಶಿಯವರು ಚಿನ್ನದ ಉಂಗುರ ಧರಿಸಿದರೆ ಕೆಲಸದಲ್ಲಿ ಎದುರಾಗುವ ಅಡೆತಡೆಗಳು ನಿವಾರಣೆಯಾಗುವುದು. ಇವರಿಗೆ ಚಿನ್ನವು ವಿಶೇಷವಾಗಿ ಮಂಗಳಕರವಾಗಿರುವುದು. ಇದನ್ನು ಧರಿಸುವುದರಿಂದ ಧನು ರಾಶಿಯವರ ಅದೃಷ್ಟ ಹೆಚ್ಚಾಗುವುದು. ಉದ್ಯೋಗ ಮತ್ತು ವೈವಾಹಿಕ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು.

ಮೀನ ರಾಶಿ (Pisces)

ಮೀನ ರಾಶಿಯವರಿಗೂ ಚಿನ್ನ ಧರಿಸುವುದರಿಂದ ಶುಭ ಫಲ ಸಿಗುವುದು. ಇದು ಅವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವುದು. ಅದೃಷ್ಟವನ್ನು ಹೆಚ್ಚಿಸುವುದು. ಇವರು ಉಂಗುರ, ಚೈನ್ ಅಥವಾ ಬಳೆ ಹೀಗೆ ಯಾವ ರೂಪದಲ್ಲಿಯಾದರೂ ಸರಿ ಚಿನ್ನ ಧರಿಸಬೇಕು. ಈ ರಾಶಿಯವರಿಗೆ ಚಿನ್ನ ಅದೃಷ್ಟವಾದರೆ ಇನ್ನು ಕೆಲವು ರಾಶಿಯವರು ಚಿನ್ನ ಧರಿಸುವಾಗ ಹೆಚ್ಚು ಜಾಗರೂಕರಾಗಿರಬೇಕು. ಯಾಕೆಂದರೆ ಇವರು ಹಾಕುವ ಚಿನ್ನವೇ ಇವರ ಅದೃಷ್ಟ ಕೆಡಿಸಬಹುದು.

ವೃಷಭ ರಾಶಿ (Taurus)

ವೃಷಭ ರಾಶಿಯವರು ಯಾವತ್ತೂ ಚಿನ್ನ ಹಾಕಬಾರದು. ಶುಕ್ರ ಮತ್ತು ಗುರುಗಳ ನಡುವಿನ ಸಂಬಂಧದಿಂದಾಗಿ, ಈ ರಾಶಿಯಲ್ಲಿ ಜನಿಸಿದವರು ಚಿನ್ನವನ್ನು ಧರಿಸಬಾರದು. ಇದು ಅವರ ಮಾನಸಿಕ ಒತ್ತಡ ಹೆಚ್ಚಿಸುವುದಂತೆ. ಮಾಡುವ ಕೆಲಸಗಳಲ್ಲಿ ಅಡೆತಡೆ ಉಂಟಾಗಲು ಕಾರಣವಾಗುವುದಂತೆ.

ಕುಂಭ ರಾಶಿ (Aquarius)

ಕುಂಭ ರಾಶಿಯವರು ಚಿನ್ನ ಧರಿಸುವ ಮೊದಲು ಎಚ್ಚರಿಕೆಯಿಂದ ಯೋಚಿಸಬೇಕು. ಚಿನ್ನ ಅವರ ಜೀವನದಲ್ಲಿ ಸವಾಲುಗಳನ್ನು ಹೆಚ್ಚಿಸುವುದು. ಇವರ ಅದೃಷ್ಟವನ್ನು ಬಂಗಾರ ನಿರ್ಧರಿಸುವುದು. ಕುಂಭ ರಾಶಿಯವರು ಜ್ಯೋತಿಷಿಯನ್ನು ಸಂಪರ್ಕಿಸಿದ ನಂತರವೇ ಚಿನ್ನವನ್ನು ಧರಿಸುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+