Weekly Horoscope: ಕನ್ಯಾ ಸೇರಿದಂತೆ ಈ ರಾಶಿಗಳಿಗೆ ಸಂಭ್ರಮದ ಸುಗ್ಗಿ ಕಾಲ
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವರ್ಷ ಋತು ಭಾದ್ರಪದ ಮಾಸದ ಶುದ್ಧ ಪಂಚಮಿಯಿಂದ ದ್ವಾದಶಿಯವರೆಗೆ
ಈ ವಾರದ ಚಂದ್ರನ ಸಂಚಾರ ಸ್ವಾತಿ ನಕ್ಷತ್ರದಿಂದ ಶ್ರವಣಾ ವರೆಗೆ

ಮೇಷ ರಾಶಿಯ ವಾರ ಭವಿಷ್ಯ
ಐದನೇ ಮನೆಯಲ್ಲಿ ಸೂರ್ಯ ಬುಧ ವಿದ್ಯಾರ್ಥಿಗಳಿಗೆ ಶುಭ. ಗಣಿತಜ್ಞರು, ಸಿಎಗಳು, ಅಕೌಂಟಿಂಗ್ ವಿಭಾಗದಲ್ಲಿ ಕೆಲಸ ಮಾಡುವವರು, ಕಂಪ್ಯೂಟರ್ ವಿಭಾಗದಲ್ಲಿ ಕೆಲಸ ಮಾಡುವವರು ಇವರಿಗೆಲ್ಲ ಶುಭ ಸಂಗತಿಗಳು ಇವೆ. ಧನಲಾಭ ಇದೆ. ಪರಾಕ್ರಮದಿಂದ ಯಾವುದೇ ಕೆಲಸ ಮಾಡಿದರೂ ಜಯ ಲಭಿಸುತ್ತದೆ.

ವೃಷಭ ರಾಶಿಯ ವಾರ ಭವಿಷ್ಯ
ನಾಲ್ಕನೇ ಮನೆಯಲ್ಲಿ ಬುಧ ಸೂರ್ಯ ನಿಮಗೆ ತಂದೆಯಿಂದ ಸಹಾಯ ಇದೆ. ಭೂಮಿ ತೆಗೆದುಕೊಳ್ಳ ಬಯಸುವವರಿಗೆ ಈಗ ಸುಸಮಯ. ಸ್ಥಿರಾಸ್ತಿಯನ್ನೂ ಈಗ ಮಾಡಬಹುದು. ಹನ್ನೊಂದನೇ ಮನೆಯ ರಾಹುವಿನಿಂದ ಧನಲಾಭ ಇದೆ. ಕೊಂಚ ಒತ್ತಡಗಳ ನಡುವೆಯೂ ಜೀವನ ಸರಾಗವಾಗಿ ನಡೆಯುತ್ತದೆ.

ಮಿಥುನ ರಾಶಿಯ ವಾರ ಭವಿಷ್ಯ
ಮೂರನೇ ಮನೆಯಲ್ಲಿ ಸೂರ್ಯ ಬುಧ ಇರುವುದು ಪರಾಕ್ರಮ ದಿಂದ ಯಾವ ಕೆಲಸ ಮಾಡಿದರೂ ಜಯ ಲಭಿಸುತ್ತದೆ. ಸಹೋದರರಿಂದ ಸಹಾಯ ಸಹಕಾರ ಇದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ವಹಿಸುತ್ತೀರಿ. ನೌಕರಿಯಲ್ಲಿ ಕೆಲವು ಬದಲಾವಣೆ ಇದೆ. ಇದು ನಿಮಗೆ ಯಶಸ್ಸು ತಂದುಕೊಡುತ್ತದೆ. ಗುರುಬಲ ಇಲ್ಲದಿರುವುದರಿಂದ ಕೊಂಚ ಇಕ್ಕಟ್ಟಿನ ಪರಿಸ್ಥಿತಿ ಗಳು ಎದುರಾಗಬಹುದು ನಿಪುಣತೆಯಿಂದ ನಿಭಾಯಿಸಿ.

ಕಟಕ ರಾಶಿಯ ವಾರ ಭವಿಷ್ಯ
ಲಾಭಸ್ಥಾನದಲ್ಲಿ ಗುರು, ಮೂರನೇ ಮನೆಯಲ್ಲಿ ಕೇತು ಎರಡನೇ ಮನೆಯಲ್ಲಿ ಬುಧ ಸಮಯ ತುಂಬಾ ಚೆನ್ನಾಗಿದೆ. ಧಾರ್ಮಿಕ ಕೆಲಸಗಳನ್ನು ಮಾಡುತ್ತೀರಿ. ಆರೋಗ್ಯದ ಬಗ್ಗೆ ನಿಗಾ ಇರಲಿ. ಮೂರನೇ ಮನೆ ಕೇತುವಿನಿಂದ ಬಲ ಇದೆ. ನೀವು ಈಗ ಯಾವ ಕೆಲಸ ಮಾಡಬೇಕೆಂದರೂ ಜಯ ಲಭಿಸುತ್ತದೆ, ಯಶಸ್ಸು ಇದೆ. ವಿದ್ಯಾರ್ಥಿಗಳಿಗೆ ಲಾಭ ಇದೆ. ಹಣದ ಹರಿವು ಉತ್ತಮವಾಗಿದೆ

ಸಿಂಹ ರಾಶಿಯ ವಾರ ಭವಿಷ್ಯ
ರಾಶಿಯಲ್ಲೇ ಸೂರ್ಯ ಬುಧ ಇದ್ದಾರೆ. ಯಾವುದೇ ರಾಶಿಯಾಗಲಿ ರಾಶಿಯ ಅಧಿಪತಿ ರಾಶಿಯಲ್ಲೇ ಇದ್ದರೆ ಅವನು ತನ್ನ ರಾಶಿಗೆ ಒಳ್ಳೆಯದನ್ನೇ ಮಾಡುತ್ತಾನೆ. ಬುಧ ಸಹ ಸೂರ್ಯನ ಮಿತ್ರ ಹಾಗಾಗಿ ಅವನಿಂದಲೂ ನಿಮಗೆ ಪ್ರಯೋಜನಗಳು ಇವೆ. ಎದುರಿನಿಂದ ನಿಮ್ಮ ರಾಶಿಯನ್ನೇ ನೋಡುತ್ತಿರುವ ಶನಿಯ ದೃಷ್ಟಿಯನ್ನು ಬುಧ ತಡೆಯುತ್ತಾನೆ. ಎರಡನೇ ಮನೆಯಲ್ಲಿ ಶುಕ್ರ ಕೇತು ಇದ್ದಾರೆ.ನೀಚ ಶುಕ್ರನಾದ್ದರಿಂದ ಖರ್ಚುಗಳು ಹೆಚ್ಚು ಇರುತ್ತದೆ. ಕಾರ್ಯಕ್ಷೇತ್ರದಲ್ಲಿ ಸವಾಲುಗಳನ್ನು ಎದುರಿಸ ಬೇಕಾಗುತ್ತದೆ. ಆರೋಗ್ಯ ಜೋಪಾನ. ಲಾಭಸ್ಥಾನದಲ್ಲಿರುವ ಮಂಗಳನಿಂದ ಧನಲಾಭ ಇದೆ.

ಕನ್ಯಾ ರಾಶಿಯ ವಾರ ಭವಿಷ್ಯ
ಒಂಬತ್ತನೇ ಮನೆಯಲ್ಲಿ ಗುರು, ಹತ್ತನೇ ಮನೆಯಲ್ಲಿ ಕುಜ, ಸಮಯ ಬಹಳ ಚೆನ್ನಾಗಿದೆ. ಅಂದುಕೊಂಡ ಕೆಲಸಗಳೆಲ್ಲ ಸಲೀಸಾಗಿ ನೆರವೇರುತ್ತದೆ. ಧನಲಾಭ ಕಾರ್ಯಸಿದ್ದಿ ಇದೆ. ಧಾರ್ಮಿಕ ಕಾರ್ಯಗಳನ್ನು ಮಾಡುತ್ತೀರಿ. ಮನೆಯಲ್ಲಿ ಹಿತವಾದ ವಾತಾವರಣ. ಸಂತೋಷ ಸಂಭ್ರಮದ ಸಂದರ್ಭಗಳು ನಿಮಗೆ ಮುದ ಕೊಡುತ್ತದೆ.

ತುಲಾ ರಾಶಿಯ ವಾರ ಭವಿಷ್ಯ
ಹನ್ನೊಂದನೇ ಮನೆಯಲ್ಲಿ ಸೂರ್ಯ ಬುಧ ಇರುವುದು ಶುಭಫಲಗಳನ್ನು ನಿರೀಕ್ಷಿಸಬಹುದು. ಆದರೆ ಗುರು ಎಂಟನೇ ಮನೆಯಲ್ಲಿ ಇರುವುದು ಆರೋಗ್ಯದಲ್ಲಿ ವ್ಯತ್ಯಾಸಗಳು ಆಗಬಹುದು. ಆರನೇ ಮನೆಯಲ್ಲಿ ರಾಹುಇರುವುದು ಕೂಡ ನಿಮಗೆ ಒಳ್ಳೆಯ ಸೂಚನೆ. ಹಣದ ಹರಿವು ಉತ್ತಮವಾಗಿರುತ್ತದೆ. ಸಣ್ಣಪುಟ್ಟ ಕಿರಿಕಿರಿಗಳ ನಡುವೆ ಈ ವಾರ ಕಳೆಯಲಿದೆ.

ವೃಶ್ಚಿಕ ರಾಶಿಯ ವಾರ ಭವಿಷ್ಯ
ಗುರುಬಲ ಇದೆ. ನಿಮಗೆ ನಿರಾಳ. ಯಾವುದೇ ಕೆಲಸ ಮಾಡಬೇಕೆಂದರೂ ಸರಾಗವಾಗಿ ನಡೆಯುತ್ತದೆ. ಅರ್ಹರಿಗೆ ವಿವಾಹ ಮಾತುಕತೆಗಳು ನಡೆದು ವಿವಾಹ ನಿಷ್ಕರ್ಷೆ ಆಗಬಹುದು. ವೃತ್ತಿಯಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಮಕ್ಕಳಿಂದ ಕಿರಿಕಿರಿ ಇದೆ. ಲಾಭಸ್ಥಾನದ ಶುಕ್ರ ಹಾಗು ಕೇತು ಧನಲಾಭ ಕೊಡುತ್ತಾರೆ. ಎಂಟನೇ ಮನೆಯಲ್ಲಿ ಕುಜ ಇರುವುದರಿಂದ ಪವರ್‌ಗೆ ಸಂಬಂಧಿಸಿದ ವಿಷಯಳಿಂದ ದೂರವಿರಿ.

ಧನಸ್ಸು ರಾಶಿಯ ವಾರ ಭವಿಷ್ಯ
ಈಗ ಒತ್ತಡಗಳು ಜಾಸ್ತಿ. ಒಂದಾದನಂತರ ಒಂದು ಸಮಸ್ಯೆಗಳು ಉದ್ಭವಿಸುತ್ತದೆ. ಮನಸ್ಸಿಗೆ ನೆಮ್ಮದಿ ಕಡಿಮೆಯಾಗಿದೆ. ನಿಮ್ಮ ಪಾಡಿಗೆ ನೀವಿದ್ದವರು ಈಗ ಏನೇನೋ ಒತ್ತಡಗಳಲ್ಲಿ ಸಿಕ್ಕಿಕೊಳ್ತೀರಿ. ಹಣಕಾಸಿನ ಸಮಸ್ಯೆಯೂ ಇದೆ. ಇನ್ನೇನು ಆಗಿಯೇ ಹೋಯ್ತು ಎಂಬಂತಾಗಿದ್ದ ಕೆಲಸಗಳು ಹಠಾತ್ತಾಗಿ ನಿಂತುಬಿಡುತ್ತದೆ. ಕುಂಟುತ್ತಾ ಎಡವುತ್ತಾ ಸಾಗುವ ಜೀವನ ಬೇಸರ ತರಿಸುತ್ತದೆ. ಕಾಲ ಬರಬೇಕು ಸಹನೆ ಬೇಕು.

ಮಕರ ರಾಶಿಯ ವಾರ ಭವಿಷ್ಯ
ಅವಕಾಶಗಳು ಹುಡುಕಿಬರುವ ಸಮಯ. ಯಾವುದೋ ಆಗುವುದೇ ಇಲ್ಲವೆಂದು ಎಣಿಸಿದ್ದ ಕೆಲಸ ಈಗ ಹಠಾತ್ತಾಗಿ ಮುಂಚೂಣಿಗೆ ಬರುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ವಿದ್ಯಾರ್ಥಿಗಳಿಗೆ ಶುಭವಿದೆ. ವಿದೇಶ ಪ್ರಯಾಣಕ್ಕೆ ಅವಕಾಶ ಒದಗಿಬರುತ್ತದೆ. ನೀವೆಣಿಸಿದಂತೆ ಕೆಲಸ ಕಾರ್ಯಗಳು ನಡೆಯುತ್ತದೆ. ದೇವರ ಗುರುಗಳ ಅನುಗ್ರಹ ಇದೆ. ಯಾವ ಕೆಲಸ ಮಾಡಿದರೂ ಜಯಶೀಲರಾಗುತ್ತೀರಿ.

ಕುಂಭ ರಾಶಿಯ ವಾರ ಭವಿಷ್ಯ
ಗುರುಬಲ ಇಲ್ಲದಿರುವುದರಿಂದ ಯಾವ ಕೆಲಸವೂ ಸರಾಗವಾಗಿ ಆಗುವುದಿಲ್ಲ. ಆರನೇ ಮನೆಯಲ್ಲಿ ಏಳನೇ ಮನೆಯ ಸೂರ್ಯ ಹಾಗು ಬುಧ ನಿಮ್ಮ ರಾಶಿಯಲ್ಲಿ ಇರುವ ಶನಿಯ ದೃಷ್ಡಿಗೆ ಪಾತ್ರರಾಗಿದ್ದಾರೆ. ಇದರಿಂದ ನಿಮಗೆ ನೆಗೆಟಿವ್ ಎಫೆಕ್ಟ್ ಜಾಸ್ತಿಇರುತ್ತದೆ. ದೊಡ್ಡ ಅಧಿಕಾರದಲ್ಲಿ ಇರುವವರಿಗೆ ಸ್ವಲ್ಪ ತೊಂದರೆ ಇದೆ. ಯಾವುದಕ್ಕೂ ದುಡುಕಬೇಡಿ.

ಮೀನ ರಾಶಿಯ ವಾರ ಭವಿಷ್ಯ
ನಿಮಗೆ ಶನಿಯ 12ನೇ ಮನೆಯ ಪ್ರಭಾವದಿಂದ ಖರ್ಚು ಹೆಚ್ಚು. ರಾಶಿಯಲ್ಲೇ ರಾಹು ಇರುವುದರಿಂದ ಆರೋಗ್ಯಕ್ಕೂ ತೊಂದರೆ. ಯಾವುದನ್ನೂ ಜಾಣತನದಿಂದ ನಿಭಾಯಿಸಬೇಕು. ಆರನೇ ಮನೆಯ ಸೂರ್ಯನಿಂದ ಅಲ್ಪ ಸಹಕಾರ ಇದೆ. ಇನ್ನೂ ಹೆಚ್ವಿನ ಅನುಕೂಲಕ್ಕಾಗಿ ನೀವು ಕಾಯಬೇಕು. ದತ್ತಾತ್ರೇಯ ಪ್ರಾರ್ಥನೆ ಮಾಡಿಕೊಳ್ಳಿ. ಯಾವುದೇ ದುಡುಕಿನಿಂದ ನಿರ್ಧಾರಗಳನ್ನು ಮಾಡಬೇಡಿ. ತಣ್ಣೀರನ್ನೂ ತಣಿಸಿ ಕುಡಿಯಿರಿ.












Click it and Unblock the Notifications