Weekly Horoscope: ಸೆಪ್ಟೆಂಬರ್ ತಿಂಗಳ ಮೊದಲ ವಾರ ಈ ರಾಶಿಗಳಿಗೆ ಲಕ್ಷ್ಮಿ ಕಟಾಕ್ಷ
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವರ್ಷ ಋತು ಶ್ರಾವಣ ಬಹುಳ ಚತುರ್ದಶಿಯಿಂದ ಭಾದ್ರಪದ ಶುದ್ಧ ಪಂಚಮಿಯ ವರೆಗೆ.
ಈ ವಾರದ ಚಂದ್ರನ ಸಂಚಾರ ಆಶ್ಲೇಷಾ ನಕ್ಷತ್ರದಿಂದ ಸ್ವಾತಿಯ ವರೆಗೆ
01/09/2024-07/09/2024ರ ವಾರ ಭವಿಷ್ಯ

ಮೇಷ ರಾಶಿಯ ವಾರ ಭವಿಷ್ಯ
ಸೂರ್ಯ ಬುಧ ಐದನೇ ಮನೆಯಲ್ಲಿ, ಗುರು ಎರಡನೇ ಮನೆಯಲ್ಲಿ, ಮಂಗಳ ಮೂರನೇ ಮನೆಯಲ್ಲಿ, ಶನಿ 11 ನೇ ಮನೆಯಲ್ಲಿ ಸಮಯ ಬಹಳ ಚೆನ್ನಾಗಿದೆ. ಬಲಿಷ್ಠ ಗ್ರಹಗಳೆಲ್ಲ ಆಯಕಟ್ಟಿನ ಸ್ಥಳಗಳಲ್ಲಿ ಇದ್ದು ನಿಮ್ಮ ಧನಬಲ, ದೈಹಿಕ ಬಲ ಹೆಚ್ಚಿಸಿದೆ. ಯಶಸ್ಸು, ಭಾಗ್ಯಗಳನ್ನು ಒದಗಿಸಿ ಕೊಡುತ್ತದೆ. ಕಾರ್ಯಕ್ಷೇತ್ರದಲ್ಲಿ ಉತ್ತಮ ಸಾಧನೆ ಇದೆ.

ವೃಷಭ ರಾಶಿಯ ವಾರ ಭವಿಷ್ಯ
ನಿಮ್ಮ ರಾಶಿಯಲ್ಲೇ ಗುರು ಕೊಂಚ ಒತ್ತಡಗಳನ್ನು ಕೊಟ್ಟರೂ ಆ ಒತ್ತಡಗಳನ್ನು ನಿವಾರಿಸಿಕೊಳ್ಳುವ ಶಕ್ತಿ ಲಾಭಸ್ಥಾನದ ರಾಹು ಕೊಡುತ್ತಾನೆ. ರಾಹು ಧನಲಾಭವನ್ನೂ ಕೊಡುತ್ತಾನೆ. ನಾಲ್ಕನೇ ಮನೆಯಲ್ಲಿ ಬುಧಾದಿತ್ಯ ಯೋಗ ನಿಮಗೆ ಮತ್ತಷ್ಟು ಯಶಸ್ಸನ್ನು ಕೊಡುತ್ತದೆ. ಕರ್ಮಸ್ಥಾನದ ಶನಿ ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಕೊಡುತ್ತಾನೆ

ಮಿಥುನ ರಾಶಿಯ ವಾರ ಭವಿಷ್ಯ
ಮೂರನೇ ಮನೆಯಲ್ಲಿ ಬುಧಾದಿತ್ಯ ಯೋಗದಿಂದ ಒಳ್ಳೆಯ ಫಲಗಳು ಇವೆ. ಸಹೊದರರಿಂದ ಒಳ್ಳೆಯದಾಗುತ್ತದೆ. ನಾಲ್ಕನೇ ಮನೆಯಲ್ಲಿ ಇರುವ ಶುಕ್ರನಿಂದ ತಾಯಿಗೆ ಒಳ್ಳೆಯದಾಗುತ್ತದೆ. ವಾಹನದಿಂದ ಲಾಭ ಇದೆ. ಕಾರ್ಯಕ್ಷೇತ್ರದಲ್ಲಿ ಜಾಗ ಬದಲಾವಣೆ ಇದೆ. ಒತ್ತಡಗಳು ಇದ್ದರೂ ನೀವು ಸಂಭಾಳಿಸಿಕೊಂಡು ಹೋಗುವಿರಿ. ಮನೆಯ ಸುಖಶಾಂತಿಯ ಬಗ್ಗೆ ಗಮನ ಕೊಡಿ. ಸಂಗಾತಿಯ ಮನಸ್ಸಿಗೆ ನಿಮ್ಮಿಂದ ಬೇಸರ ಆಗುವುದು ಬೇಡ.

ಕಟಕ ರಾಶಿಯ ವಾರ ಭವಿಷ್ಯ
ಲಾಭಸ್ಥಾನದ ಗುರು ನಿಮ್ಮೆಲ್ಲ ಆಸೆಗಳನ್ನು ಪೂರೈಸುತ್ತಾನೆ. ಯಶಸ್ಸನ್ನು ಕೊಡುತ್ತಾನೆ. ವಿದ್ಯಾರ್ಥಿಗಳಿಗೆ ತಮ್ನ ಸಾಮರ್ಥ್ಯಕ್ಕೆ ತಕ್ಕಂತೆ ಉನ್ನತ ವ್ಯಾಸಂಗಕ್ಕೆ ಹೋಗಬಹುದು. ಸೀಟು ಸಿಗಲು ಇರುವ ಗೊಂದಲ ನಿವಾರಣೆಯಾಗುತ್ತದೆ. ಮೂರನೇ ಮನೆಯಲ್ಲಿ ಶುಕ್ರ ಕೇತು ಸಹ ನಿಮ್ಮ ಸಹಾಯಕ್ಕೆ ಇದ್ದಾರೆ. ಧರ್ಮಕಾರ್ಯಕ್ಕೆ ಸಹಾಯ ಮಾಡುತ್ತೀರಿ. ಮನೆಯಲ್ಲಿ ಶುಭಸಮಾರಂಭದ ವಾತಾವರಣ ಇರುತ್ತದೆ

ಸಿಂಹ ರಾಶಿಯ ವಾರ ಭವಿಷ್ಯ
ಒತ್ತಡಗಳು ಹೆಚ್ಚಾಗಿವೆ. ಹಣಕಾಸಿನ ಹರಿವು ಉತ್ತಮವಾಗಿದ್ದರೂ ಕಾರ್ಯಕ್ಷೇತ್ರದಲ್ಲಿ ಒತ್ತಡಗಳು ಇವೆ. ಎರಡನೇ ಮನೆಯಲ್ಲಿ ಶುಕ್ರ ಇರುವುದರಿಂದ ಮನೆಯಲ್ಲಿ ಕೊಂಚ ಸಮಾಧಾನಕರ ವಾತಾವರಣ ಇರುತ್ತದೆ. ಉದ್ಯೋಗ ಮಾಡುವವರಿಗೆ ತಮ್ಮ ಸ್ಥಾನಮಾನದ ಬಗ್ಗೆ ಎಚ್ಚರಿಕೆ ಇರಲಿ. ಹತ್ತಿರದವರೇ ಪಿತೂರಿ ಮಾಡಿ ನಿಮ್ಮ ಸ್ಥಾನಕ್ಕೆ ಕುತ್ತು ತರುತ್ತಾರೆ. ನಯವಂಚಕರ ಬಗ್ಗೆ ಜಾಗರೂಕರಾಗಿರಿ. ಆರೋಗ್ಯ ಜೋಪಾನ. ತಲೆನೋವು, ಪಿತ್ತ ಸಂಬಂಧಿ ಸಮಸ್ಯೆಗಳು ಉಲ್ಬಣಿಸುವ ಸಾಧ್ಯತೆ ಇದೆ.

ಕನ್ಯಾ ರಾಶಿಯ ವಾರ ಭವಿಷ್ಯ
ಬೆಟ್ಟದಂತೆ ಬಂದ ಕಷ್ಟವೊಂದು ಮಂಜಿನಂತೆ ಕರಗಿಹೋಗುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹಣಕಾಸಿನ ಸಮಸ್ಯೆಗಳು ಕೊಂಚಕೊಂಚವಾಗಿ ಬಿಡಿಸಿಕೊಳ್ಳುತ್ತದೆ. ಬರಬೇಕಾದ ಬಾಕಿ ಹಣ ನೀವು ನಿರೀಕ್ಷಿಸಿದ ಸಹಾಯ ಈ ವಾರದಲ್ಲಿ ನಿಮ್ಮ ಕೈಗೆ ಸಿಗುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಭಾಗ್ಯಸ್ಥಾನದಲ್ಲಿ ಗುರು ಇರುವುದರಿಂದ ನಿಮಗೆ ಯಶಸ್ಸು, ಸಂತಸ ಮಾನಸಿಕ ನೆಮ್ಮದಿ ವೃದ್ಧಿಯಾಗುತ್ತದೆ.

ತುಲಾ ರಾಶಿಯ ವಾರ ಭವಿಷ್ಯ
ಗುರುಬಲ ಇಲ್ಲದಿರುವುದರಿಂದ ಒತ್ತಡಗಳು ಹೆಚ್ಚು. ಪಂಚಮ ಶನಿಯ ಪ್ರಭಾವ ಇದೆ. ಇದೂಕೂಡ ನಿಮಗೆ ಅಡ್ಡಿ ಆತಂಕಗಳನ್ನು ಉಂಟು ಮಾಡುತ್ತದೆ. ಆದರೆ ಈಗ ನಿಮಗೆ ರಾಹು ಬಲಇದೆ. ರಾಹು ಆರನೇ ಮನೆಯಲ್ಲಿ ಇದ್ದು ನಿಮಗೆ ಛಲ ಹಾಗೂ ಪರಾಕ್ರಮ ಕೊಡುತ್ತಾನೆ. ಸಿಕ್ಕುಗಳನ್ನು ನಿವಾರಿಸಿಕೊಂಡು ಮುನ್ನಡೆಯುತ್ತೀರಿ. ಹಣಕಾಸಿನ ಹರಿವು ಸಹ ಉತ್ತಮವಾಗಿದೆ.

ವೃಶ್ಚಿಕ ರಾಶಿಯ ವಾರ ಭವಿಷ್ಯ
ಈಗ ಗುರುಬಲ ಇದೆ. ಇದೇ ನಿಮಗೆ ಬೆಟ್ಟದಷ್ಟು ಧೈರ್ಯ ಸಹಕಾರ ಕೊಡುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಮನೆಯಲ್ಲಿ ಶುಭ ಸಮಾರಂಭದ ವಾತಾವರಣ ಇರುತ್ತದೆ. ಮಕ್ಕಳಿಂದ ವಿರೋಧ ಎದುರಿಸುತ್ತೀರಿ. ವೃತ್ತಿಯಲ್ಲಿ ಬಹಳವಾಗ ಶುಭಫಲಗಳು ಸಿಗುತ್ತದೆ. ಉನ್ನತ ಹುದ್ದೆಯ ಭಾಗ್ಯ ಇದೆ. ಹನ್ನೊಂದರಲ್ಲಿ ಕೇತುಶುಕ್ರ ಸಹ ನಿಮಗೆ ನೆರವು ನೀಡುತ್ತಾರೆ.

ಧನಸ್ಸು ರಾಶಿಯ ವಾರ ಭವಿಷ್ಯ
ಗುರುಬಲ ಇಲ್ಲವಾದರೂ ಶನಿಬಲ ಇದೆ. ಸೂರ್ಯ ಸ್ವಂತ ಮನೆಯಲ್ಲಿ ಇದ್ದಾನೆ. ಭಾಗ್ಯಸ್ಥಾನದಲ್ಲಿ ಬುಧಾದಿತ್ಯ ಯೋಗ ಆಗಿದೆ. ಇವೆಲ್ಲ ನಿಮಗೆ ಯಶಸ್ಸು ತಂದುಕೊಡುತ್ತದೆ. ಗುರು ಆರನೇ ಮನೆಯಲ್ಲಿ ಇರುವುದು ಅನೇಕ ಮಾನಸಿಕ ಒತ್ತಡಗಳಿಗೆ ಕಾರಣವಾಗುತ್ತದೆ. ನೇರವಾಗಿ ಮಾತನಾಡುವ ಸ್ವಭಾವದ ನೀವು ನಿಮ್ಮ ಮಾತುಗಳಿಂದಲೇ ಇಕ್ಕಟ್ಟಿಗೆ ಸಿಕ್ಕಿಕೊಳ್ಳುತ್ತಿರಿ. ಕೊಂಚ ಬಣ್ಣದ ಮಾತಾಡುವುದನ್ನು ಕಲಿಯಿರಿ. ಆಗ ಅಪನಿಂದನೆಗಳು ದೂರವಾಗುತ್ತದೆ. ಯಾವುದೇ ಹೊಸ ಆಲೋಚನೆ ನಿರ್ಧಾರ ಈಗ ಬೇಡ.

ಮಕರ ರಾಶಿಯ ವಾರ ಭವಿಷ್ಯ
ಈಗ ಗುರುಬಲ ಹಾಗೂ ರಾಹುಬಲ ಇದೆ. ಇನ್ನು ಕೊಂಚ ದಿನಗಳಲ್ಲಿ ಶನಿಬಲವು ದೊರೆತು ಬದುಕು ಹಸನಾಗುತ್ತದೆ. ಬಂಗಾರವಾಗುತ್ತದೆ. ಅವಕಾಶಗಳು ನಿಮ್ಮನ್ನು ಹುಡುಕಿ ಬರುತ್ತದೆ. ಇದುವರೆಗೂ ಬಹಳ ಕಷ್ಟ ಪಟ್ಡಿದ್ದೀರಿ ಈಗ ನೆಮ್ಮದಿಯಾಗಿ ಇರುವ ಕಾಲ. ಅರ್ಹರಿಗೆ ವಿವಾಹ ಯೋಗ ಇದೆ. ಯಾವುದೆ ತಂಟೆ ತಗಾದೆಗಳು ಇದ್ದರೂ ಈಗ ಅವೆಲ್ಲಕ್ಕೂ ಪರಿಹಾರ ದೊರೆಯುತ್ತದೆ

ಕುಂಭ ರಾಶಿಯ ವಾರ ಭವಿಷ್ಯ
ಸಣ್ಣ ಸಣ್ಣ ರಿಯಾಯಿತಿಗಳಲ್ಲಿ ತೂರಿಕೊಳ್ಳುತ್ತ ಇದ್ದೀರಿ. ಬೆಟ್ಟದ ಹಾಗೆ ಆಪತ್ತು ಬಂದರೂ ಅಲ್ಲಲ್ಲೇ ಸಣ್ಣ ರಿಲೀಫ್ ಕೂಡ ಸಿಗುತ್ತಿದೆ. ಹಾಗಂತ ಏಮಾರಬೇಡಿ. ನಿಮ್ಮ ಸುರಕ್ಷತೆಗೆ ಏನು ಬೇಕೋ ರಕ್ಷಣೆ ಮಾಡಿಕೊಳ್ಳಿ. ನಿಮಗೆ ನಾಲ್ಕೂ ಕಡೆಯಿಂದ ಘೇರಾವ್ ಇದೆ. ಚಕ್ರವ್ಯೂಹ ದಲ್ಲಿ ನುಗ್ಗಿಬಿಟ್ಟಿದ್ದೀರಿ ಹೊರಬರಲು ಸಾಹಸ ಪಡುತ್ತಿದ್ದೀರಿ. ಸಂಗಾತಿಗೆ ಅನಾರೋಗ್ಯ ಆಗಬಹುದು. ಗೃಹಕೃತ್ಯದ ವಿಷಯಗಳಲ್ಲೂ ಒತ್ತಡ ಇರುತ್ತದೆ. ಯಾವುದೇ ಸಮಸ್ಯೆಗಳಿದ್ದರೂ ನವಿರಾಗಿ ಬಿಡಿಸಿಕೊಳ್ಳಿ. ಆತುರ ಬೇಡ.

ಮೀನ ರಾಶಿಯ ವಾರ ಭವಿಷ್ಯ
ಮನೆಯ ಸದಸ್ಯರಲ್ಲಿ ಅಸಂತೋಷ ಭಯ ಇರುತ್ತದೆ. ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಆಗಿ ನಿಮಗೆ ಒತ್ತಡ, ಕಾರ್ಯಭಾರ ಹೆಚ್ಚಾಗಬಹುದು. ಹಣಕಾಸಿನ ಖರ್ಚೂಗಳೂ ಇರುತ್ತದೆ. ಎಲ್ಲವನ್ನೂ ಸಹನೆಯಿಂದ ನಿಭಾಯಿಸಿ. ಯಾವುದಕ್ಕೂ ದುಡುಕಬೇಡಿ. ಆರರಲ್ಲಿ ಸೂರ್ಯ ಇರುವುದು ನಿಮಗೆ ಸ್ವಲ್ಪ ಶಕ್ತಿ ಪರಾಕ್ರಮವನ್ನು ಕೊಟ್ಟು ಕಾಪಾಡುತ್ತಾನೆ.












Click it and Unblock the Notifications