Weekly Horoscope: ನಾಳೆಯಿಂದ ಈ ರಾಶಿಗಳಿಗೆ ಸುಖನಿದ್ರೆ, ಒಳ್ಳೆ ಊಟ, ಧನ ಲಾಭದ ಯೋಗ
ಕ್ರೋಧಿ ನಾಮ ಸಂವತ್ಸರ ದಕ್ಚಿಣಾಯನ ಶರದ್ ಋತು ಆಶ್ವಯುಜ ಮಾಸದ ಬಹುಳ ದಶಮಿಯಿಂದ ಕಾರ್ತಿಕ ಮಾಸದ ಶುಕ್ಲಪಕ್ಷದ ತದಿಗೆ ವರೆಗೆ
ಈ ವಾರದ ಚಂದ್ರನ ಸಂಚಾರ ಮಖಾ ನಕ್ಷತ್ರದಿಂದ ಅನೂರಾಧವರೆಗೆ
27/10/2024-02/11/2024ರ ವಾರ ಭವಿಷ್ಯ

ಮೇಷ ರಾಶಿಯ ವಾರ ಭವಿಷ್ಯ
ಲಗ್ನಾಧಿಪತಿ ನಾಲ್ಕನೇ ಮನೆಯಲ್ಲಿ, ಎರಡನೇ ಮನೆಯಲ್ಲಿ ಗುರು, ಎಂಟನೇ ಮನೆಯಲ್ಲಿ ಶುಕ್ರ, ಬುಧ ಸಮಯ ಬಹಳ ಚೆನ್ನಾಗಿದೆ. ಹೊಸ ನೌಕರಿಸಿಗುವ ಯೋಗ ಇದೆ. ಹಣಕಾಸಿನ ಸ್ಥಿತಿ ಸುಗಮವಾಗಿದೆ. ನೌಕರಿಯಲ್ಲಿ ಬಡ್ತಿ ಸಿಗುವ ಯೋಗ ಇದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ. ಒಳ್ಳೆಯ ಸಮಯ ನಡೆಯುತ್ತಿದೆ. ಒಳ್ಳೆಯದಾಗುತ್ತದೆ.

ವೃಷಭ ರಾಶಿಯ ವಾರ ಭವಿಷ್ಯ
ಹನ್ನೊಂದನೇ ಮನೆಯಲ್ಲಿ ರಾಹು ಇರುವುದು ದೊಡ್ಡ ಶಕ್ತಿ ನಿಮಗೆ. ನಿಮ್ಮ ಪ್ರಯತ್ನಗಳು ಖಂಡಿತಾ ಶುಭ ಫಲ ನೀಡುತ್ತದೆ. ಮೂರನೇ ಮನೆಯಲ್ಲಿ ಕುಜ ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತಾನೆ. ಸಹೋದರರಿಗೆ ಶುಭ. ಏಳನೇ ಮನೆಯಲ್ಲಿ ಬುಧ ಶುಕ್ರ ಇರುವುದು ಸಂಗಾತಿಗೆ ಶುಭ. ಆರನೇ ಮನೆಯಲ್ಲಿ ಇರುವ ಸೂರ್ಯ ಕೂಡ ನಿಮ್ಮ ಪ್ರಯತ್ನಗಳಿಗೆ ಶಕ್ತಿತುಂಬುತ್ತಾನೆ

ಮಿಥುನ ರಾಶಿಯ ವಾರ ಭವಿಷ್ಯ
ಆರನೇ ಮನೆಯಲ್ಲಿ ಬುಧ ಶುಕ್ರ, ಎರಡನೇ ಮನೆಯಲ್ಲಿ ಕುಜ, ನಾಲ್ಕನೇ ಮನೆಯಲ್ಲಿ ಕೇತು, ಸಮಯ ಅಷ್ಟು ಪ್ರಶಸ್ತವಾಗಿಲ್ಲ. ಪ್ರಯತ್ನ ಜಾಸ್ತಿಫಲ ಕಡಿಮೆ. ತಾಯಿಗೆ ಒತ್ತಡಗಳು ಇರುತ್ತವೆ. ಖರ್ಚು ಹೆಚ್ಚು. ಸೂರ್ಯ ಐದನೇ ಮನೆಯಿಂದ ಆರನೇ ಮನೆಗೆ ಹೋದಾಗ ಮತ್ತು ಕುಜ ಎರಡನೇ ಮನೆಯಿಂದ ಮೂರನೇ ಮನೆಗೆ ಹೋದಾಗ ನಿಮಗೆ ಇನ್ನೂ ಹೆಚ್ಚಿನ ಶುಭಫಲ ಇದೆ.

ಕಟಕ ರಾಶಿಯ ವಾರ ಭವಿಷ್ಯ
ಮೂರನೇ ಮನೆಯಲ್ಲಿ ಕೇತು, ಹನ್ನೊಂದನೇ ಮನೆಯಲ್ಲಿ ಗುರು ಸಮಯ ಬಹಳ ಚೆನ್ನಾಗಿದೆ. ಲಾಭಸ್ಥಾನದ ಗುರು ಅಧಿಕ ಧನಲಾಭ ಮತ್ತು ಒಳ್ಳೆಯ ಫಲಗಳನ್ನು ಕೊಡುತ್ತಾನೆ. ಸ್ನೇಹಿತರು ಬಂಧುಗಳಿಂದ ಸಹಾಯ ದೊರೆಯುತ್ತದೆ. ಸ್ತಿರಾಸ್ತಿ ಕೊಳ್ಳುವಿರಿ. ಐದನೇ ಮನೆಯಲ್ಲಿ ಶುಕ್ರ ಬುಧ ಸಹ ನಿಮ್ಮ ನೆರವಿಗೆ ಇದ್ದಾರೆ. ಸಮಯ ಚೆನ್ನಾಗಿದೆ.

ಸಿಂಹ ರಾಶಿಯ ವಾರ ಭವಿಷ್ಯ
ನಾಲ್ಕನೇ ಮನೆಯಲ್ಲಿ ಬುಧ ಶುಕ್ರ ವಾಹನದಿಂದ ಲಾಭ, ಕಂಪ್ಯೂಟರ್‌ಗೆ ಸಂಬಂಧ ಪಟ್ಟ ವಸ್ತುಗಳಿಂದ ಲಾಭ, ಬಂಧುಗಳಿಂದ ಲಾಭ, ಲೆಕ್ಕಶಾಸ್ತ್ರ ದವರಿಗೆ ಲಾಭ, ತಾಯಿಯಿಂದ, ಅತ್ತೆಯಿಂದ ಲಾಭ. ಸುಖನಿದ್ರೆ, ಒಳ್ಳೆಯ ಊಟದ ಯೋಗವಿದೆ. ಸಿಹಿತಿಂಡಿ ವ್ಯಾಪಾರ ಹೆಚ್ಚು ಆಗುತ್ತದೆ. ಒಣಹಣ್ಣು ವ್ಯಾಪಾರಿಗಳಿಗೆ, ಸುಗಂಧ ವ್ಯಾಪಾರಿಗಳಿಗೆ ಬಟ್ಟೆಯ ವ್ಯಾಪಾರಿಗಳಿಗೆ ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಲಾಭ ಇದೆ. ಮನೆಯಲ್ಲಿ ಕೊಂಚ ಅಸೌಖ್ಯ ಇದೆ. ವೃತ್ತಿಯಲ್ಲಿ ಲಾಭವೂ ಇದೆ ಒತ್ತಡಗಳೂ ಇವೆ.

ಕನ್ಯಾ ರಾಶಿಯ ವಾರ ಭವಿಷ್ಯ
ಮೂರನೇ ಮನೆಯಲ್ಲಿ ಬುಧ ಶುಕ್ರ ಸಹೋದರ ಸಹೋದರೊಯರಿಂದ ಲಾಭ ಇದೆ. ವಾಸ್ತುಶಾಸ್ತ್ರಜ್ಞರಿಗೆ ಲಾಭ ಇದೆ. ಹೆಚ್ಚು ಕಾಂಟ್ರಾಕ್ಟ್ ಸಿಗುತ್ತದೆ. ಆದರೆ ಆರೋಗ್ಯ ಜೋಪಾನ. ಆರೋಗ್ಯದಲ್ಲಿ ಏರುಪೇರು ಇದೆ. ಒಂದು ಶಸ್ತ್ರ ಚಿಕಿತ್ಸೆ ಆಗುವ ಸಂಭವ ಇದೆ. ಜಾಗ್ರತೆ ವಹಿಸಿ. ಗುರುವಿನ ಅನುಗ್ರಹದಿಂದ ಎಲ್ಲ ಸಂಕಟಗಳಿಂದಲೂ ಪಾರಾಗುವಿರಿ. ಭೂಮಿಯಿಂದ ಲಾಭ ಇದೆ. ಹಣಕಾಸಿನ ಸ್ಥಿತಿ ಉತ್ತಮವಾಗಿದೆ.

ತುಲಾ ರಾಶಿಯ ವಾರ ಭವಿಷ್ಯ
ಎರಡನೇ ಮನೆಯಲ್ಲಿ ಬುಧ ಶುಕ್ರ ಹತ್ತನೇ ಮನೆಯಲ್ಲಿ ಮಂಗಳ ಆರನೇ ಮನೆಯಲ್ಲಿ ರಾಹು ಸಮಯ ಬಹಳ ಚೆನ್ನಾಗಿದೆ. ಹಣದ ಹರಿವಿಗೆ ಸಮಸ್ಯೆ ಇಲ್ಲ. ಹೊಸ ಅವಕಾಶ ಗಳು ಹುಡುಕಿ ಬರುತ್ತದೆ. ಎಂಟರಲ್ಲಿ ಗುರು ಇರುವುದರಿಂದ ಮಾನಸಿಕ ಅಶಾಂತಿ ಇರುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಶನಿಯ ಆರನೇ ಮನೆಯ ಸಂಚಾರ ನಿಮ್ಮ ಜೀವನದಲ್ಲಿ ಮಹತ್ತರ ಬದಲಾವಣೆ ತರುತ್ತದೆ. ಒಳ್ಳೆಯ ದಿನಗಳು ಸಧ್ಯದಲ್ಲೇ ಪ್ರಾರಂಭವಾಗಲಿದೆ.

ವೃಶ್ಚಿಕ ರಾಶಿಯ ವಾರ ಭವಿಷ್ಯ
ಗುರು ಏಳನೇ ಮನೆಯಲ್ಲಿ ಇದ್ದು ಸಕಲ ಅಭಿವೃದ್ಧಿಯನ್ನು ಕೊಡುತ್ತಾನೆ. ನಿಮ್ಮ ರಾಶಿಯಲ್ಲೇ ಬುಧ ಶುಕ್ರ ಇದ್ದು ನಿಮ್ಮ ಬೆಳವಣಿಗೆಗೆ ಕಾರಣವಾಗುತ್ತಾರೆ. ಐದನೇ ಮನೆಯಲ್ಲಿ ರಾಹು, ನಾಲ್ಕನೇ ಮನೆಯಲ್ಲಿ ಶನಿ ಇರುವುದು ಕೊಂಚ ದೋಷಕರವಾಗಿದೆ. ಇದು ನಿಮಗೆ ಹಿನ್ನಡೆಯನ್ನು ಕೊಡುತ್ತದೆ. ಹನ್ನೊಂದನೇ ಮನೆಯಲ್ಲಿ ಕೇತು ಧನಲಾಭ ಕೊಡುತ್ತಾನೆ. ನಿಮಗೆ ಬೆಂಬಲ ಕೊಡುವ ಜನರು ಹಿಂದೆ ಸರಿಯುತ್ತಾರೆ. ಜನ ಬೆಂಬಲ ಇಲ್ಲದೆ ಸೊರಗುತ್ತೀರಿ.

ಧನಸ್ಸು ರಾಶಿಯ ವಾರ ಭವಿಷ್ಯ
ಗುರು ಆರನೇ ಮನೆಯಲ್ಲಿ ಮಾನಸಿಕವಾಗಿ ಹಿಂಸೆ ಕೊಡುತ್ತಾನೆ. ಸರಾಗವಾಗಿ ಹೋಗುತ್ತಿದ್ದ ದಾರಿಗೆ ಆಚಾನಕ್ ಆಗಿ ಎಡರುತೊಡರುಗಳು ಬರುವುದು, ಜೀವನನಿಂತ ನೀರಾದಂತೆ ಅನಿಸುವುದು ಹೀಗೆಲ್ಲ ಆಗುತ್ತದೆ. 12ನೇ ಮನೆಯಲ್ಲಿ ಬುಧ ಶುಕ್ರ ಇರುವುದೂ ಸಹ ಖರ್ಚಿಗೆ ದಾರಿ ಮಾಡಿಕೊಡುತ್ತದೆ. ಹನ್ನೊಂದನೇ ಮನೆಯಲ್ಲಿ ಸೂರ್ಯ ಮೂರನೇ ಮನೆಯಲ್ಲಿ ಶನಿ ಇರುವುದು ಕೊಂಚ ಉಪಯೋಗಿಯಾಗಿದೆ. ಯಾವುದೇ ನಿರ್ಧಾರ ಮಾಡುವಾಗ ದುಡುಕಬೇಡಿ ಮತ್ತು ಸರಿಯಾಗಿ ಯೋಚಿಸಿ ನಿರ್ಧರಿಸಿ.

ಮಕರ ರಾಶಿಯ ವಾರ ಭವಿಷ್ಯ
ಗುರು ಐದನೇ ಮನೆಯಲ್ಲಿ ರಾಹು ಮೂರನೇ ಮನೆಯಲ್ಲಿ ಸಮಯ ಬಹಳ ಚೆನ್ನಾಗಿದೆ. ಬೆಟ್ಟವನ್ನೇ ಕಿತ್ತು ಇಡುವಂಥ ಧೈರ್ಯ ಪರಾಕ್ರಮ ಇರುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಶನಿ ಮೂರನೇ ಮನೆಗೆ ಪ್ರವೇಶವಾದಾಗ ಇನ್ನೂ ಹೆಚ್ವಿನ ಹಣಕಾಸಿನ ನೆರವು, ಪದವಿ ಅಧಿಕಾರ ಎಲ್ಲವೂ ಸಿಗುವ ಯೋಗ ಇದೆ. ನೀವು ಕಳೆದುಕೊಂಡದ್ದನ್ನು ಪಡೆದುಕೊಳ್ಳುವ ಯೋಗ. ಅವಕಾಶಗಳು ಹುಡುಕಿ ಬರುತ್ತದೆ. ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಿ

ಕುಂಭ ರಾಶಿಯ ವಾರ ಭವಿಷ್ಯ
ಹತ್ತನೇ ಮನೆಯಲ್ಲಿ ಶುಕ್ರ ಬುಧ ಅಷ್ಟು ಒಳ್ಳೆಯ ಫಲ ಇಲ್ಲ. ನಾಲ್ಕರಲ್ಲಿ ಗುರು ಕೂಡ ಶುಭಕಾರಕನಲ್ಲ. ನಿಮ್ಮ ರಾಶಿಯಲ್ಲೇ ಶನಿ ಇದ್ದು ಸಾಕಷ್ಟು ಒತ್ತಡಗಳನ್ನು ಕೊಡಿತ್ತಾನೆ. ಎರಡನೇ ಮನೆಯಲ್ಲಿ ರಾಹು ಸಹ ಕುಟುಂಬದಲ್ಲಿ ಅಶಾಂತಿ ಅಸೌಖ್ಯ ಕೊಡುತ್ತಾನೆ. ಜಾಗ್ರತೆಯಿಂದ ಮುಂದುವರೆಯಿರಿ. ಯಾವುದೇ ತೀರ್ಮಾನ ಪರಾಮರ್ಶೆ ಮಾಡಿ ತೆಗೆದುಕೊಳ್ಳಿ.

ಮೀನ ರಾಶಿಯ ವಾರ ಭವಿಷ್ಯ
ನಿಮಗಿನ್ನೂ ಸಾಡೆಸಾತಿ ಶನಿಯ ಪ್ರಭಾವ ಮೊದಲ ಹಂತದಲ್ಲೇ ಇದೆ. ಬಹಳ ಕಿರುಕುಳ ಅನುಭವಿಸುತ್ತಿದ್ದೀರ. ವಿದ್ಯಾರ್ಥಿಗಳಿಗೆ ತಾವು ಅಂದುಕೊಂಡ ಗುರಿ ಮುಟ್ಟದೆ ಪರಿತಪಿಸುತ್ತಾರೆ. ಹಣಕಾಸಿನ ತಾಪತ್ರಯ ಇರುತ್ತದೆ. ಮದುವೆ ಗೃಹಪ್ರವೇಶ ಮುಂತಾದ ಮಂಗಳ ಕಾರ್ಯಗಳು ಮುಂದೆ ಹೋಗುತ್ತದೆ. ನಿಮ್ಮ ಯೋಜನೆಯಂತೆ ಈಗ ಕೆಲಸ ಕಾರ್ಯಗಳು ನಡೆಯುವುದು ಕಷ್ಟ. ಮನೆಯಲ್ಲಿ ಹಿರಿಯರಿಗೆ ಅನಾರೋಗ್ಯ, ಕುಟುಂಬದಲ್ಲಿ ಅಶಾಂತಿಇರುತ್ತದೆ. ಮನೆ ದೇವರ ಪ್ರಾರ್ಥನೆ ಒಂದೇ ಮದ್ದು.












Click it and Unblock the Notifications