Weekly Horoscope: ಈ ರಾಶಿಗಳಿಗೆ ದಿಢೀರ್ ಧನಲಾಭ: ಜುಲೈ ಮೊದಲ ವಾರದ ಅದೃಷ್ಟದ ರಾಶಿಗಳಿವು
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜ್ಯೇಷ್ಠ ಬಹುಳ ನವಮಿಯಿಂದ ಆಷಾಢ ಶುದ್ಧ ಬಿದಿಗೆಯವರೆಗೆ.ಅಂದರೆ
ಈ ವಾರದ ಚಂದ್ರನ ಸಂಚಾರ ರೇವತಿ ನಕ್ಷತ್ರದಿಂದ ಪುಷ್ಯದ ವರೆಗೆ.
30/06/2024-06/07/2024ರ ವಾರ ಭವಿಷ್ಯ
ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಜೂನ್ 30 ರಿಂದ ಜುಲೈ 06 ರವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.

ಮೇಷ ರಾಶಿಯ ವಾರ ಭವಿಷ್ಯ
ಈ ವಾರದ ಮೊದಲಲ್ಲಿ ಚಂದ್ರ ಮಂಗಳಯೋಗ ವಾರದ ಮಧ್ಯದಲ್ಲಿ ಗಜಕೇಸರಿ ಯೋಗ ನಿಮಗೆ ಶುಭಫಲಗಳನ್ನು ಕೊಡುತ್ತವೆ. ನಾಲ್ಕನೇ ಮನೆಯಲ್ಲಿ ಬುಧ ಕೂಡ ನಿಮಗೆ ಅನುಕೂಲಕರನಾಗಿ ಇದ್ದಾನೆ. ಬಂಧುಗಳಿಂದ ಲಾಭಇದೆ. ಶುಭ ಸಮಾರಂಭಗಳಿಗೆ ಭೇಟಿ ಸುಗ್ರಾಸ ಭೋಜನ ಮೊದಲಾದ ಖುಷಿ ಕೊಡುವ ವಿಚಾರಗಳು ಇವೆ.

ವೃಷಭ ರಾಶಿಯ ವಾರ ಭವಿಷ್ಯ
12 ನೇ ಮನೆಯಲ್ಲಿ ಚಂದ್ರ ಮಂಗಳಯೋಗದಿಂದ ವಿದೇಶ ಪ್ರವಾಸ ಯೋಗ ಕೂಡಿಬರಬಹುದು. ವಾರದ ಮಧ್ಯ ನಿಮ್ಮ ರಾಶಿಯಲ್ಲೇ ಗಜಕೇಸರಿ ಯೋಗ ವಾಗಿ ನಿಮಗೆ ಹೆಚ್ಚಿನಶುಭಫಲ ನೀಡುತ್ತದೆ. ಹಣದ ಹರಿವು ಉತ್ತಮವಾಗಿದೆ. ಧಾರ್ಮಿಕ ಕೆಲಸಗಳನ್ನು ಮಾಡುತ್ತೀರಿ. ಮೂರನೇ ಮನೆಯಲ್ಲಿ ಬುಧ ಸಹೋದರನಿಂದ ಅನುಕೂಲ ಮಾಡಿಸುತ್ತಾನೆ. ಲಾಭಸ್ಥಾನದ ರಾಹು ಹಣದ ಹರಿವನ್ನು ಸದಾ ಉತ್ತಮವಾಗಿಸುವಲ್ಲಿ ತೊಡಗಿರುತ್ತಾನೆ. ಶುಕ್ರ ಸೂರ್ಯ ಎರಡನೇ ಮನೆಯಲ್ಲಿ ಕೊಂಚ ವ್ಯತಿರಿಕ್ತ ಪರಿಣಾಮ ಇರುತ್ತದೆ. ಹಣ ಖರ್ಚಾಗುವ ಸಂದರ್ಭಗಳು ಬರುತ್ತದೆ.

ಮಿಥುನ ರಾಶಿಯ ವಾರ ಭವಿಷ್ಯ
ನಿಮ್ಮ ರಾಶಿಯಲ್ಲೇ ಶುಕ್ರ, ಎರಡನೇ ಮನೆಯಲ್ಲಿ ಬುಧ, ಲಾಭಸ್ಥಾನದಲ್ಲಿ ಮಂಗಳ ಈ ವಾರ ನಿಮಗೆ ಸರ್ವವಿಧ ಅನುಕೂಲ. ಹಣದ ಹರಿವು ಬಹಳ ಉತ್ತಮವಾಗಿರುತ್ತದೆ. ದೈವಕಾರ್ಯಕ್ಕೆ ಖರ್ಚು ಮಾಡುತ್ತೀರಿ. ಕೋರ್ಟ್ ಕೆಲಸಗಳಲ್ಲಿ ಅಲ್ಪ ಪ್ರಗತಿ ಇದೆ. ಸಾಲಗಳನ್ನು ತೀರಿಸುವ ನಿಟ್ಟಿನಲ್ಲಿ ಅನುಕೂಲಗಳು ಒದಗಿಬರುತ್ತದೆ. ಬಂಧುಗಳಿಂದ ಸಹಾಯ ಇದೆ.

ಕಟಕ ರಾಶಿಯ ವಾರ ಭವಿಷ್ಯ
ವಾರದ ಮೊದಲಲ್ಲೇ ಬುಧ ನಿಮ್ಮ ರಾಶಿಗೆ ಬರುತ್ತಾನೆ ಇದು ನಿಮಗೆ ಶುಭಫಲಗಳನ್ನು ಕೊಡುತ್ತದೆ. ನಿಮ್ಮನ್ನು ಅಪಾಯಗಳಿಂದ ರಕ್ಷಿಸುತ್ತದೆ. ಹತ್ತನೇ ಮನೆಯಲ್ಲಿ ಚಂದ್ರ ಮಂಗಳ ಯೋಗ ಆಗಿದೆ. ಇದು ವೃತ್ತಿಯಲ್ಲಿ ಯಶಸ್ಸನ್ನು ಕೊಡುತ್ತದೆ. ವಾರದ ಮಧ್ಯದಲ್ಲಿ ಗುರುವಿನಿಂದಿಗೆ ಲಾಭಸ್ಥಾನದಲ್ಲಿ ಚಂದ್ರನೂ ಇರುತ್ತಾನೆ. ಧನಲಾಭ ಇದೆ. ಈ ವಾರದಲ್ಲಿ ಹಣದ ಹರಿವು ಉತ್ತಮವಾಗಿರುತ್ತದೆ. ಮನೆಯಲ್ಲಿ ಶುಭಕಾರ್ಯ ನಡೆಯುವ ಸಮಯ.

ಸಿಂಹ ರಾಶಿಯ ವಾರ ಭವಿಷ್ಯ
ಒಂಬತ್ತನೇ ಮನೆಯಲ್ಲಿ ಚಂದ್ರಮಂಗಳ ಯೋಗವಾಗಿದೆ. ಇದು ಧಾರ್ಮಿಕ ಕಾರ್ಯಗಳಿಗೆ ಖರ್ಚು ಮಾಡಿಸುತ್ತದೆ. ಹತ್ತನೇ ಮನೆಯಲ್ಲಿ ಚಂದ್ರ ಗುರುವಿನ ಜೊತೆ ಬಂದಾಗ ವೃತ್ತಿಯಲ್ಲಿ ಒತ್ತಡದಿಂದ ಕೊಂಚ ಮುಕ್ತಿ ಸಿಗುತ್ತದೆ. ಹಣದ ಹರಿವು ಉತ್ತಮವಾಗಿದ್ದರೂ ಖರ್ಚುಗಳೂ ಬಹಳ ಇರುತ್ತದೆ. ಕೌಟುಂಬಿಕ ವಾತಾವರಣ ನಿಮಗೆ ಅನುಕೂಲಕರವಾಗಿಲ್ಲ. ಏನೋ ಕೊರತೆ ಅಸಂತೋಷ ನಿಮ್ಮನ್ನು ಕಾಡಿಸುತ್ತದೆ.

ಕನ್ಯಾ ರಾಶಿಯ ವಾರ ಭವಿಷ್ಯ
ಗುರುಬಲ ಇದ್ದರೂ ಸಹ ರಾಹು ನಿಮ್ಮ ರಾಶಿಯನ್ನು ನೋಡುವುದರಿಂದ ಹಾಗೂ ಕೇತು ನಿಮ್ಮ ರಾಶಿಯಲ್ಲೇ ಇರುವುದರಿಂದ ಕೆಲಸಗಳು ಕೊಂಚ ನಿಧಾನಗತಿಯಲ್ಲಿ ಇರುತ್ತದೆ. ಹಣ ಬರುವುದು ತಡವಾಗಿ ನಿಮಗೆ ಆತಂಕ ಏರ್ಪಡುತ್ತದೆ. ಬ್ಯಾಂಕ್ ಅಥವಾ ಸರ್ಕಾರಿ ಕೆಲಸಗಳು ಬೇಗ ಮುಗಿಯುವುದಿಲ್ಲ. ಗುರು ಭಾಗ್ಯಸ್ಥಾನದಲ್ಲಿ ಇರುವುದರಿಂದ ಧರ್ಮ ಕಾರ್ಯಗಳಿಂದ ಲಾಭ ಗಳಿಸುತ್ತೀರಿ. ಒಳ್ಳೆಯ ಹೆಸರು ಹಾಗೂ ಹಣ ಎರಡನ್ನೂ ಗಳಿಸುತ್ತಿರಿ. ಲಾಭ ಸ್ಥಾನದಲ್ಲಿ ಬುಧ ಸಹ ನಿಮಗೆ ಧನಲಾಭ ಕೊಡುತ್ತಾನೆ ನಿಜ.

ತುಲಾ ರಾಶಿಯ ವಾರ ಭವಿಷ್ಯ
ಏಳನೇ ಮನೆಯಲ್ಲಿ ವಾರದ ಮೊದಲಲ್ಲಿ ಚಂದ್ರಮಂಗಳಯೋಗ ಸಂಗಾತಿಗೆ ಅದೃಷ್ಟ ತರುತ್ತದೆ. ವಾರದ ಮಧ್ಯೆ ಎಂಟನೇ ಮನೆಯಲ್ಲಿ ಗಜಕೇಸರಿ ಯೋಗ ಅಪಾಯಗಳಿಂದ ಪಾರು ಮಾಡುತ್ತದೆ. ವಾರದ ಕೊನೆಯಲ್ಲಿ ಒಂಬತ್ತನೇ ಮನೆಯಲ್ಲಿ ಶುಕ್ರ ಸೂರ್ಯ ಚಂದ್ರ ನಿಮಗೆ ವೃತ್ತಿಯಲ್ಲಿ ಯಶಸ್ಸನ್ನು ತಂದುಕೊಡುತ್ತದೆ. ಹತ್ತನೇ ಮನೆಯಲ್ಲಿ ಬುಧ ವಾರಪೂರ್ತಿ ನಿಮಗೆ ಶುಭಫಲಗಳನ್ನು ಕೊಡುತ್ತಾನೆ. ಆರನೇ ಮನೆಯ ರಾಹು ಧನಲಾಭ ಹಾಗೂ ಶಕ್ತಿಯನ್ನು ಕೊಡುತ್ತಾನೆ.

ವೃಶ್ಚಿಕ ರಾಶಿಯ ವಾರ ಭವಿಷ್ಯ
ಆರನೇ ಮನೆಯಲ್ಲಿ ಚಂದ್ರ ಮಂಗಳ ಯೋಗ ನಿಮಗೆ ಶಕ್ತಿಯನ್ನು ಉತ್ತೇಜಿಸುತ್ತದೆ. ವಿದೇಶ ಪ್ರವಾಸ ಯೋಗ ಇದೆ. ವಾರದ ಮಧ್ಯ ಏಳನೇ ಮನೆಯಲ್ಲಿ ಗುರುಚಂದ್ರರ ಗಜಕೇಸರಿಯೋಗ ಸಂಗಾತಿಯೊಡನೆ ಉತ್ತಮ ಬಾಂಧವ್ಯಕ್ಕೆ ಬುನಾದಿ ಹಾಕುತ್ತದೆ. ಪತಿಪತ್ನಿಯರ ಸಂತೋಷಕ್ಕೆ ಕಾರಣವಾಗುತ್ತದೆ. ವಾರದ ಕೊನೆಯಲ್ಲಿ ಶುಕ್ರ ಸೂರ್ಯ ಚಂದ್ರ ಎಂಟನೇ ಮನೆಯಲ್ಲಿ ನಿಮಗೆ ರಕ್ಷೆ ಕೊಡುತ್ತಾರೆ. ಬುಧ ವಾರ ಪೂರ್ತಿ ಭಾಗ್ಯಸ್ಥಾನದಲ್ಲಿದ್ದು ನಿಮ್ಮ ಭಾಗ್ಯಗಳನ್ನು ಹೆಚ್ಚಿಸುತ್ತಾನೆ. ಈ ವಾರ ನಿಮಗೆ ಆಶಾದಾಯಕವಾಗಿದೆ

ಧನಸ್ಸು ರಾಶಿಯ ವಾರ ಭವಿಷ್ಯ
ವಾರದ ಮೊದಲಲ್ಲಿ ಐದನೇ ಮನೆಯಲ್ಲಿ ಚಂದ್ರಮಂಗಳ ಯೋಗದಿಂದ ಸಂತಾನಕ್ಕೆ ಒಳ್ಳೆಯದು. ಮನೆ ಅಥವಾ ತೋಟ ಖರೀದಿ ಮಾಡುವ ಯೋಗ ಇದೆ. ಆರನೇ ಮನೆಯಲ್ಲಿ ಗುರುವಿನ ಜೊತೆ ಚಂದ್ರ ಬಂದಾಗ ಮಾನಸಿಕ ಕಿರಿಕಿರಿ ಕೊಂಚಮಟ್ಟಿಗೆ ಶಾಂತವಾಗುತ್ತದೆ. ವಾರದ ಕೊನೆಯಲ್ಲಿ ಏಳನೇ ಮನೆಯಲ್ಲಿ ಶುಕ್ರ ಸೂರ್ಯ ಚಂದ್ರ ಸೇರಿ ಸಂಗಾತಿಗೆ ಕೊಂಚ ಒತ್ತಡಗಳು ಆಗುತ್ತದೆ. ಸಂಗಾತಿಯ ನಡವಳಿಕೆಯಿಂದ ಅಶಾಂತಿ ಮೂಡಬಹುದು. ಎಂಟನೇ ಮನೆಯಲ್ಲಿ ಬುಧ ಇರುವುದು ವೃತ್ತಿಯಲ್ಲಿ ಒತ್ತಡಗಳು ಉಂಟಾಗಬಹುದು. ನಾಲ್ಕನೇ ಮನೆಯಲ್ಲಿ ರಾಹು ಇರುವುದರಿಂದ ಸುಖ ಸ್ಥಾನಕ್ಕೆ ಕುತ್ತು. ನಿಮ್ಮ ವೈಯಕ್ತಿಕ ಸುಖಸಂತೋಷಗಳಿಗೆ ಧಕ್ಕೆ ಒದಗಬಹುದು.

ಮಕರ ರಾಶಿಯ ವಾರ ಭವಿಷ್ಯ
ನಾಲ್ಕನೇ ಮನೆಯಲ್ಲಿ ಚಂದ್ರ ಮಂಗಳ ಯೋಗದಿಂದ ಭೂಮಿಯಿಂದ ಅಥವಾ ವ್ಯವಸಾಯದಿಂದ ಲಾಭ ಇದೆ.ನೀವು ಬೆಳೆದ ಬೆಳೆಗೆ ಉತ್ತಮ ಮೌಲ್ಯ ಸಿಗಬಹುದು. ವಾರದ ಮಧ್ಯದಲ್ಲಿ ಗುರುವಿನೊಡನೆ ಚಂದ್ರ ಸೇರಿ ನಿಮಗೆ ಏನೋಒಂದು ಒಳ್ಳೆಯ ಬದಲಾವಣೆ ಅಥವಾ ಶುಭಸೂಚನೆ ಗೋಚರಿಸುತ್ತದೆ. ಏಳನೇ ಮನೆಯಲ್ಲಿ ಇರುವ ಬುಧ ನಿಮ್ಮ ರಾಶಿಯನ್ನು ನೋಡುವುದರಿಂದ ಆಪತ್ತುಗಳಿಂದ ಪಾರಾಗುವಿರಿ. ಮೂರರ ರಾಹು ಅಜ್ಞಾತ ಮೂಲದಿಂದ ಹಣ ಕೊಡಿಸುತ್ತಾನೆ. ನಿಮ್ಮ ಶಕ್ತಿ ಪರಾಕ್ರಮ ವನ್ನು ಹೆಚ್ವಿಸುತ್ತಾನೆ

ಕುಂಭ ರಾಶಿಯ ವಾರ ಭವಿಷ್ಯ
ಮೂರನೇ ಮನೆಯಲ್ಲಿ ಕುಜ ಇರುವುದು ನಿಮಗೆ ಬಹಳ ಶುಭಕರ. ಆಸ್ತಿವಿವಾದ ಪರಿಹರಿಸುತ್ತಾನೆ. ಭೂಮಿಯಿಂದ ಲಾಭ ಇರುತ್ತದೆ. ಕುಜನ ಜೊತೆ ಚಂದ್ರನೂ ವಾರದ ಮೊದಲಲ್ಲಿ ಇರುತ್ತಾನೆ ಇದೂ ಕೂಡ ನಿಮಗೆ ಶುಭಕರವಾಗಿರುತ್ತದೆ. ವಾರದ ಮಧ್ಯದಲ್ಲಿ ಗುರು ಚಂದ್ರ ನಾಲ್ಕನೇ ಮನೆಯಲ್ಲಿ ಕೊಂಚ ಮಾನಸಿಕ ಒತ್ತಡ ಕೊಡುತ್ತಾರೆ. ವಾರದ ಕೊನೆಯಲ್ಲಿ ಸೂರ್ಯ ಶುಕ್ರ ಚಂದ್ರ ಇದು ವಿದ್ಯಾರ್ಥಿಗಳಿಗೆ ಲಾಭ ಕೊಡುತ್ತದೆ.

ಮೀನ ರಾಶಿಯ ವಾರ ಭವಿಷ್ಯ
ಎರಡನೇ ಮನೆಯಲ್ಲಿ ಕುಜ ಚಂದ್ರ ಭೂಮಿಯಿಂದ ಲಾಭ, ಬಿಳಿಯ ಪದಾರ್ಥ ವಸ್ತುಗಳಿಂದ ಲಾಭ. ಹಾಲುಮೊಸರು ಐಸ್ ಕ್ರೀಂ ವ್ಯಾಪಾರಸ್ಥರಿಗೆ ಲಾಭ. ವಾರದ ಮಧ್ಯದಲ್ಲಿ ಗುರು ಚಂದ್ರ ಮೂರನೇ ಮನೆಯಲ್ಲಿ ಸಹೋದರ, ಮೈದುನರು ಭಾವಂದಿರು ಇಂಥವರಿಂದ ಸಹಕಾರ ನೆರವು ಸಿಗುತ್ತದೆ. ನಾಲ್ಕನೇ ಮನೆಯಲ್ಲಿ ಶುಕ್ರ ಚಂದ್ರ ಸೂರ್ಯ ಇರುವುದು ವಾಹನದಿಂದ ಲಾಭ ತಾಯಿಯಿಂದ ಲಾಭ ತಾಯಿಯ ಆರೋಗ್ಯ ಚೇತರಿಕೆ ಹೀಗೆ ಈ ವಾರದಲ್ಲಿ ಆದಷ್ಟು ಶುಭಫಲಗಳನ್ನು ಅನುಭವಿಸುತ್ತೀರಿ. ಖರ್ಚುವೆಚ್ಚಗಳ ಮೇಲೆ ನಿಗಾ ಇರಲಿ.












Click it and Unblock the Notifications