Weekly Horoscope: ಆಗಸ್ಟ್‌ ತಿಂಗಳ ಮೊದಲ ವಾರ ಈ ರಾಶಿಗಳಿಗೆ ಭರ್ಜರಿ ಅದೃಷ್ಟ..!

ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಆಷಾಢ ಬಹುಳ‌ ಅಷ್ಠಮಿಯಿಂದ ಅಮಾವಾಸ್ಯೆಯ ವರೆಗೆ

ಈ ವಾರದ ಚಂದ್ರನ ಸಂಚಾರ ಅಶ್ವಿನಿ ನಕ್ಷತ್ರದಿಂದ ಪುಷ್ಯದ ವರೆಗೆ

28/07/2024-03/08/2024ರ ವಾರ ಭವಿಷ್ಯ

Weekly Horoscope In Kannada From July 28 To August 03 2024

ಮೇಷ ರಾಶಿಯ ವಾರ ಭವಿಷ್ಯ

ರಾಹು ಒಂದು ಬಿಟ್ಟು ಬಾಕಿ ಎಲ್ಲ ಗ್ರಹಗಳೂ ನಿಮಗೆ ಈ ವಾರ ಅನುಕೂಲ ಸ್ಥಿತಿಯಲ್ಲಿ‌ಇವೆ. ಕೇತು ಮತ್ತು ಶನಿ ಹಣದ ಹರಿವು ಉತ್ತಮ ಪಡಿಸುತ್ತಾರೆ. ನಾನಾ ಮೂಲಗಳಿಂದ ಹಣ ಒದಗಿ‌ಬರುತ್ತದೆ. ಎರಡನೇ ಮನೆಯ ಗುರುವಿನಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಮನಸ್ಸಿಗೆ ಖುಷಿ‌ ಹಗುರ ಎನಿಸುವ ಜೀವನ ನಿಮ್ಮದಾಗಿರುತ್ತದೆ. ವಿದ್ಯಾರ್ಥಿಗಳಿಗೆ ಶುಭವಿದೆ. ಸಂತಾನ ಬಯಸುವವರಿಗೆ ಶುಭಸುದ್ದಿ ಇದೆ. ವಾಹನದಿಂದ ಲಾಭ ಇದೆ. ಹೊಸ ವಾಹನ ಖರೀದಿ ಯೋಗ ಇದೆ

Weekly Horoscope In Kannada From July 28 To August 03 2024

ವೃಷಭ ರಾಶಿಯ ವಾರ ಭವಿಷ್ಯ

ಗುರು ನಿಮ್ಮರಾಶಿಯಲ್ಲಿ ಇರುವುದು ಹಣದ ಖರ್ಚು ಬಹಳವಾಗಿರುತ್ತದೆ. ಹಣ ಬರುವ ದಾರಿ ಸುಗಮವಿದ್ದರೂ ಖರ್ಚುಗಳೂ ಅದೇ ರೀತಿ ಇವೆ.‌ಮೂರನೇ ಮನೆಯಲ್ಲಿ ಸೂರ್ಯ, ಶುಕ್ರ, ನಾಲ್ಕರಲ್ಲಿ ಬುಧ ಲಾಭ ಸ್ಥಾನದಲ್ಲಿ ರಾಹು ನಿಮಗೆ ಬಹಳ ವಿಧದಲ್ಲಿ ಅನುಕೂಲ ಒದಗಿಸಿಕೊಡುತ್ತಾರೆ.‌ ಈ ವಾರದ ಚಂದ್ರನ ಸಂಚಾರ ಸಹ ನಿಮಗೆ ಅನುಕೂಲವಾಗಿದೆ.

Weekly Horoscope In Kannada From July 28 To August 03 2024

ಮಿಥುನ ರಾಶಿಯ ವಾರ ಭವಿಷ್ಯ

ಎರಡನೇ ಮನೆಯಲ್ಲಿ ಸೂರ್ಯ ಶುಕ್ರ ಮೂರನೇ ಮನೆಯಲ್ಲಿ ಬುಧ ನಿಮಗೆ ಅನುಕೂಲರು. ನಾಲ್ಕನೇ ಮನೆಯ ಕೇತು, ವ್ಯಯಸ್ಥಾನದಲ್ಲಿ ಗುರು ಮಂಗಳ ನಿಮಗೆ ಖರ್ಚುಗಳನ್ನು ಹೆಚ್ಚಿಸುತ್ತಾರೆ. ಒಂಬತ್ತರ ಶನಿ ಧಾರ್ಮಿಕ ಮನೋಭಾವನೆ ಹೆಚ್ಚಿಸುತ್ತಾನೆ. ಇನ್ನೂ ಕೆಲವು ದಿನ ನೀವು ಕಷ್ಟ ಪಡಬೇಕು. ನಾನಾ ವಿಧದ ಖರ್ಚುವೆಚ್ಚಗಳು ದಾಳಿ ಇಡುತ್ತದೆ. ಆದರೆ ಶುಭಸಂದರ್ಭಕ್ಕೆ ಖರ್ಚು ಮಾಡುತ್ತೀರಿ ಎಂಬುದೊಂದೇ ಸಮಾಧಾನ.

Weekly Horoscope In Kannada From July 28 To August 03 2024

ಕಟಕ ರಾಶಿಯ ವಾರ ಭವಿಷ್ಯ

ನಿಮ್ಮ ರಾಶಿಯಲ್ಲೇ ಶುಕ್ರ, ಎರಡನೇ ಮನೆಯ ಬುಧ ಹಾಗು ಲಾಭಸ್ಥಾನದಲ್ಲಿ ಗುರು ಮತ್ತು ಮಂಗಳ ನಿಮಗೆ ಈಗ ಅನುಕೂಲರು. ಹಣದ ಹರಿವು ಉತ್ತಮವಾಗಿದೆ. ಕಳೆದ ವರ್ಷ ಕಳೆದುಕೊಂಡದ್ದೆಲ್ಲ ಈಗ ಹಂತಹಂತವಾಗಿ ಪಡೆದುಕೊಳ್ಳುವಿರಿ. ನಿಮ್ಮನ್ನು ಅಲಕ್ಷ್ಯ ಮಾಡಿದ್ದವರು ಈಗ ನಿಮ್ಮ ಬಳಿ ಬರುತ್ತಾರೆ. ಮನೆಯಲ್ಲಿ ಮಂಗಳ ಕಾರ್ಯದ ವಾತಾವರಣ ಇರುತ್ತದೆ. ಮನಸ್ಸಿಗೆ ಹರ್ಷ ಇದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಇದೆ.

Weekly Horoscope In Kannada From July 28 To August 03 2024

ಸಿಂಹ ರಾಶಿಯ ವಾರ ಭವಿಷ್ಯ

ನಿಮ್ಮ ರಾಶಿಯಲ್ಲೇ ಬುಧ ನಿಮಗೆ ಅಲ್ಪ ಪ್ರಮಾಣದ ತಂಪು ಕೊಡುತ್ತಾನೆ. ವಾಹನಕಾರಕ ಶುಕ್ರ 12 ನೇ ಮನೆಯಲ್ಲಿ ಇರುವುದರಿಂದ ನಿಮ್ಮ ವಾಹನಗಳಿಗೆ ದಿಢೀರ್ ಖರ್ಚು ಬಂದರೂ ಬರಬಹುದು. ವಾಹನದಿಂದ ನಷ್ಟ ಇದೆ. ನಿಮಗೆ ಸಂಬಂಧಿಸಿದಂತೆ ಸರ್ಕಾರದ ಕೆಲಸಗಳು ನಿಧಾನವಾಗುತ್ತದೆ. ಸರ್ಕಾರದಿಂದಲೂ ನಷ್ಟ ಇದೆ. ವೃತ್ತಿಯಲ್ಲಿ ಒತ್ತಡ, ವ್ಯಾಪಾರ ವಹಿವಾಟು ಗಳನ್ನು ಹಣಕಾಸಿನ ಅಸಮರ್ಪಕ ಹರಿವು ನಿಮಗೆ ಉದ್ವೇಗ ಕೊಡುತ್ತದೆ. ಶೃಂಗಾರ ಅಲಂಕಾರ ಇದಕ್ಕೆ ಸಂಬಂಧಿಸಿದ ಖರ್ಚುಗಳೂ ಇವೆ.‌

Weekly Horoscope In Kannada From July 28 To August 03 2024

ಕನ್ಯಾ ರಾಶಿಯ ವಾರ ಭವಿಷ್ಯ

ಶನಿಯ ಷಷ್ಠ ಸಂಚಾರ, ಭಾಗ್ಯಸ್ಥಾನದ ಗುರು, ಲಾಭಸ್ಥಾನದ ಸೂರ್ಯ ಶುಕ್ರ ನಿಮಗೆ ಅಧಿಕ ಲಾಭ ಕೊಡುತ್ತಿದ್ದಾರೆ. ವಿದೇಶ ಪ್ರಯಾಣ ಒದಗಿ ಬರಬಹುದು. ವಿದ್ಯಾರ್ಥಿಗಳಿಗೆ ಶುಭಸುದ್ದಿ ಇದೆ. ಅವಿವಾಹಿತರಿಗೆ ವಿವಾಹ ಯೋಗ, ಸಂತಾನ ಅಪೇಕ್ಷಿಗಳಿಗೆ ಸಂತಾನಯೋಗ ಇದೆ. ಸರ್ಕಾರದಿಂದ ಅಮುಕೂಲ ಇದೆ.‌ ಶೇರು ವ್ಯವಹಾರದಲ್ಲಿ ಲಾಭ ಇದೆ. ಹಣದ ಹರಿವು ಉತ್ತಮವಾಗಿದೆ.

Weekly Horoscope In Kannada From July 28 To August 03 2024

ತುಲಾ ರಾಶಿಯ ವಾರ ಭವಿಷ್ಯ

ಈಗ ಗುರುಬಲ ಇಲ್ಲದೆ ಇದ್ದರೂ ರಾಹುಬಲ ಇದೆ. ರಾಹು ದೈಹಿಕ ಶಕ್ತಿಯನ್ನು ಕೊಡುತ್ತಾನೆ. ಹಣದ ಹರಿವನ್ನು ವೃದ್ಧಿ ಗೊಳಿಸುತ್ತಾನೆ. ಅಡೆತಡೆಗಳನ್ನು ಮೀರಿ ಮುಂದೆ ಹೋಗಲು ಸಹಾಯ ಮಾಡುತ್ತಾನೆ. ಆದರೆ ಗುರು ಎಂಟನೇ ಮನೆಯಲ್ಲಿ ಇರುವುದರಿಂದ ಆರೋಗ್ಯ ಜೋಪಾನ.‌ ಶನಿಯು ಪಂಚಮ ಸ್ಥಾನದಲ್ಲಿದ್ದು ನಿಮಗೆ ಸಹಕಾರಿ ಅಲ್ಲ. ಹನ್ನೊಂದರಲ್ಲಿ ಬುಧ ನಿಮಗೆ ಉಪಕಾರಿ. ವಿದ್ಯಾರ್ಥಿಗಳಿಗೆ ಶುಭ.‌ ವ್ಯಾಪಾರಸ್ಥರಿಗೆ ಶುಭ. ಕಂಪ್ಯೂಟರ್ ಗೆ ಸಂಬಂಧಿಸಿದ ಕೆಲಸ ಮಾಡುವವರಿಗೆ ಶುಭ. ಇನ್ನು ಕೆಲವೇ ದಿನಗಳಲ್ಲಿ ಸೂರ್ಯ ಲಾಭಸ್ಥಾನಕ್ಕೆ ಬಂದಾಗ ನಿಮಗೆ ಇನ್ನೂ ಒಳಿತಾಗುತ್ತದೆ.‌

Weekly Horoscope In Kannada From July 28 To August 03 2024

ವೃಶ್ಚಿಕ ರಾಶಿಯ ವಾರ ಭವಿಷ್ಯ

ಈಗ ನಿಮಗೆ ಗುರುಬಲ ಇದೆ. ನೀವು ಯೋಜಿಸಿದ್ದ ಕೆಲಸಗಳು ಯಶಸ್ವಿಯಾಗಿ ನಡೆಯುತ್ತದೆ. ಹೊಸ ನೌಕರಿ ಸಿಗುವುದು ಬಡ್ತಿ ಸಿಗುವುದು ವಿವಾಹಯೋಗ ಮುಂತಾದ ಶುಭಫಲಗಳು ಇದೆ. ಮಕ್ಕಳಿಂದ ಕಿರಿಕಿರಿ ಇರುತ್ತದೆ. ಹತ್ತನೇ ಮನೆಯಲ್ಲಿ ಬುಧ ಇದ್ದು ನೌಕರಿಯಲ್ಲಿ ಒಂದು ಒಳ್ಳೆಯ ಬದಲಾವಣೆ ಕಾಣುತ್ತೀರಿ. ಒಂಬತ್ತರಲ್ಲಿ ಶುಕ್ರ ಸೂರ್ಯ ಇದ್ದು ತಂದೆಯಿಂದ ಲಾಭ ಇದೆ. ವಾಹನದಿಂದ ಲಾಭ ಇದೆ. ಈ ರಾಶಿಯ ಕಲಾವಿದರಿಗೆ ಶುಭಫಲಗಳು ಇವೆ.

Weekly Horoscope In Kannada From July 28 To August 03 2024

ಧನಸ್ಸು ರಾಶಿಯ ವಾರ ಭವಿಷ್ಯ

ಗುರುಬಲ ಇಲ್ಲದಿರುವುದರಿಂದ ಮಾನಸಿಕ ತೊಳಲಾಟ ಇರುತ್ತದೆ. ಏನೋ ಯೋಚನೆ ಒಂದು ವಿಧವಾದ ಭಯ ಅಂದುಕೊಂಡ ಕೆಲಸಗಳು ನಿಧಾನವಾಗಿ ಮುನ್ನಡೆಯುವುದು ಹೀಗೆ ನಾನಾರೀತಿಯ ಮಾನಸಿಕ‌ಕ್ಲೇಶ ಇರುತ್ತದೆ. ಹಣದ ಹರಿವಿಗೆ ಕೊರತೆ ಇಲ್ಲ. ಒಂಬತ್ತನೇ ಮನೆಯಲ್ಲಿ ಬುಧ ಧಾರ್ಮಿಕ ಕಾರ್ಯಗಳನ್ನು ಮಾಡಿಸುತ್ತಾನೆ. ಆರರಲ್ಲಿ ಕುಜ ಇರುವುದು ನಿಮ್ಮ ಛಲ ಧೈರ್ಯವನ್ನು ಉಜ್ವಲಗೊಳಿಸುತ್ತದೆ. ಎಷ್ಟೇ ಹಿನ್ನಡೆಯಾದರೂ ಛಲಬಿಡದ ವಿಕ್ರಮನಂತೆ ಮತ್ತೆ ಪ್ರಯತ್ನ ಮಾಡುವ ಹುಮ್ಮಸ್ಸು ಕೊಡುತ್ತದೆ.

Weekly Horoscope In Kannada From July 28 To August 03 2024

ಮಕರ ರಾಶಿಯ ವಾರ ಭವಿಷ್ಯ

ಒಂದು ಸಣ್ಣ ಪ್ರಮಾಣದ ಆರೋಗ್ಯ ತೊಂದರೆ ಎದುರಾಗುತ್ತದೆ. ಭಯಪಡುವ ಕಾರಣವಿಲ್ಲ. ಗುರುಬಲ‌ ರಾಹುಬಲ ನಿಮ್ಮೊಂದಿಗೆ ಇರುವುದರಿಂದ ಯಾವುದೇ ತೊಂದರೆಗೂ ಅವಕಾಶವಿಲ್ಲ. ಜೀವನದಲ್ಲಿ ಶುಭಕರ ಬದಲಾವಣೆ ಆಗುವ ಸಮಯ. ಅವಕಾಶ ಬಾಗಿಲು ತಟ್ಟುವ ಸಮಯ.‌ ನಿಮ್ಮ ಕಷ್ಟನಷ್ಟಗಳು ಕೊನೆಗೊಳ್ಳುವ ಸಮಯ. ಅವಿವಾಹಿತರಿಗೆ ವಿವಾಹ ಭಾಗ್ಯವೂ ಇದೆ. ಹೊಸ ನೌಕರಿ ಬಡ್ತಿ ಎಲ್ಲವೂ ಇದೆ.

Weekly Horoscope In Kannada From July 28 To August 03 2024

ಕುಂಭ ರಾಶಿಯ ವಾರ ಭವಿಷ್ಯ

ಆರನೇ ಮನೆಯಲ್ಲಿ ಸೂರ್ಯ ಏಳನೇ ಮನೆಯಲ್ಲಿ ಬುಧ ಈಗ ನಿಮಗೆ ಶಕ್ತಿ‌ಕೊಡುವ ಗ್ರಹಗಳು. ಆದರೂ ಈಗ ಜೀವನ ಬಹಳಷ್ಟು ಪಾಠ ಕಲಿಸುತ್ತದೆ. ನಿಮಗೆ ಆಪ್ತರು ಯಾರು‌ ಆಗದವರು ಯಾರು ಎಂದು ತಿಳಿಸಿಕೊಡುತ್ತದೆ.‌ ಪ್ರತಿಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಿ.‌ ಅಪವಾದಗಳು ಆಪ್ತರಿಂದ ಆಕ್ಷೇಪಣೆಗಳು ಬರುತ್ತದೆ. ನಿಮ್ಮ ಅಧಿಕಾರಕ್ಕೂ ಕುತ್ತು ಇದೆ. ಜಾಗ್ರತೆಯಿಂದ ನಿಭಾಯಿಸಿ.

Weekly Horoscope In Kannada From July 28 To August 03 2024

ಮೀನ ರಾಶಿಯ ವಾರ ಭವಿಷ್ಯ

ಈಗ ನಿಮ್ಮ ರಾಶಿಯಲ್ಲೇ ರಾಹು ಇದ್ದಾನೆ ವಿಷ ವಸ್ತು ವಿಷಜಂತುಗಳ ಉಪಟಳ ಇರುತ್ತದೆ. ಹೆಚ್ಚು ಖರ್ಚು ಆದಾಯ ಕಡಿಮೆ. ಈ ಸಧ್ಯಕ್ಕೆ ನಾಲ್ಕನೇ ಮನೆಯಲ್ಲಿ ಶುಕ್ರ ಐದನೇ ಮನೆಯಲ್ಲಿ ಬುಧ ನಿಮಗೆ ಸಹಾಯ ಮಾಡುತ್ತಾರೆ. ವಾಹನದಿಂದ ಲಾಭ ಇದೆ. ವಿದ್ಯಾರ್ಥಿಗಳಿಗೆ ಲಾಭ ಇದೆ. ಮೂರನೇ ಮನೆಯಲ್ಲಿ ಗುರು ಮಂಗಳಯೋಗ ಆಗಿದೆ. ಪರಾಕ್ರಮ ಮತ್ತು ಧೈರ್ಯದಿಂದ ಎದುರಾದ ಸವಾಲುಗಳನ್ನು ನಿಗ್ರಹಿಸಿ ಮುಂದೆ ಸಾಗುವಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+