Weekly Horoscope: ಹೊಸವರ್ಷದ ಮೊದಲ ವಾರ ಈ ರಾಶಿಗಳಿಗೆ ಲಕ್ಷ್ಮಿ ಕಟಾಕ್ಷ

ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಮಾರ್ಗಶಿರ ಮಾಸದ ಕೃಷ್ಣಪಕ್ಷದ ಚತುರ್ದಶಿಯಿಂದ ಪುಷ್ಯಮಾಸದ ಶುಕ್ಲಪಕ್ಷ ಷಷ್ಠಿಯವರೆಗೆ.

ಈ ವಾರದ ಚಂದ್ರನ ಸಂಚಾರ ಜ್ಯೇಷ್ಠ ನಕ್ಷತ್ರದಿಂದ ಪೂರ್ಭಾಭಾದ್ರದವರೆಗೆ

29/12/2024-04/01/2025ರ ವಾರ ಭವಿಷ್ಯ

Weekly Horoscope In Kannada From December 29 To January 04 2025

ಮೇಷ ರಾಶಿಯ ವಾರ ಭವಿಷ್ಯ

ಈ ವಾರದಲ್ಲಿ ಬಹಳಷ್ಟು ಒಳ್ಳೆಯ ಸಂಗತಿಗಳು ನಿಮಗೆ. ಬಹುದಿನಗಳಿಂದ ನಿರೀಕ್ಷೆ ಇದ್ದ ಶುಕ್ರ ಈ ವಾರ ನಿಮಗೆ ಲಾಭಸ್ಥಾನಕ್ಕೆ ಬರುತ್ತಾನೆ. ಲಾಭ ಸ್ಥಾನದ ಶನಿ ಶುಕ್ರ ನಿಮಗೆ ಒಂದು ಮಹತ್ತರವಾದ ತಿರುವನ್ನು‌ ಕೊಡುತ್ತಾರೆ.‌ಈ ಬದಲಾವಣೆ ನಿಮಗೆ ಮನಸ್ಸಿಗೆ ಖುಷಿಯನ್ನು, ಜೀವನಕ್ಕೆ ಆಧಾರವನ್ನೂ ಕೊಡುತ್ತದೆ.‌ ನೀವು ನಿರೀಕ್ಷಿಸಿದ್ದ ಸಂದರ್ಶನಗಳು ಯೋಜನೆಗಳು ಸಫಲಗೊಂಡು ಉನ್ನತಿಯನ್ನು ಸಾಧಿಸುತ್ತೀರಿ. ಹಣಕಾಸಿನ ಹರಿವು ಉತ್ತಮವಾಗಿದೆ

Weekly Horoscope In Kannada From December 29 To January 04 2025

ವೃಷಭ ರಾಶಿಯ ವಾರ ಭವಿಷ್ಯ

ಮಂಗಳ ಮೂರನೇ ಮನೆಯಲ್ಲಿ, ರಾಹು ಆರನೇ ಮನೆಯಲ್ಲಿ, ಬುಧ ಏಳನೇ ಮನೆಯಲ್ಲಿ ಸಮಯ ಬಹಳ ಚೆನ್ನಾಗಿದೆ. ಒಳ್ಳೆಯ ಕೆಲಸಗಳನ್ನು ಮಾಡುತ್ತೀರಿ. ಧೈರ್ಯ ಪರಾಕ್ರಮ ಮುನ್ನುಗ್ಗುವ ಛಲ ಇದೆ. ನಿಮ್ಮ ಮನಸ್ಸಿನಂತೆ ಕೆಲಸಗಳು ನಡೆಯುತ್ತ ಪರಿಸ್ಥಿತಿ ನಿಮಗೆ ಅನುಕೂಲಕರವಾಗಿರುತ್ತದೆ. ಒಳ್ಳೆಯ ಅವಕಾಶಗಳು ಬರುತ್ತದೆ. ಸಂಗಾತಿಗೆ ಶುಭ ಸುದ್ದಿ‌ಇದೆ. ಸಹೋದರರಿಗೆ ಒಳ್ಳೆಯದಾಗುತ್ತದೆ.

Weekly Horoscope In Kannada From December 29 To January 04 2025

ಮಿಥುನ ರಾಶಿಯ ವಾರ ಭವಿಷ್ಯ

ಒಂಬತ್ತನೇ ಮನೆಗೆ ಶುಕ್ರನ ಪ್ರವೇಶ ನಿಮಗೆ ಒಳ್ಳೆಯದು ಮಾಡುತ್ತದೆ. ಮಾನಸಿಕ ನೆಮ್ಮದಿ ದೊರೆಯುತ್ತದೆ.‌ ಆರನೇ ಮನೆಯಲ್ಲಿ ಬುಧ, ಎರಡನೇ ಮನೆಯಲ್ಲಿ ಕುಜ ವ್ಯಯಸ್ಥಾನದಲ್ಲಿ ಗುರು ಕೊಂಚ ಖರ್ಚುಗಳನ್ನು ಕೊಡುತ್ತಾರೆ.‌ ವೃತ್ತಿಯಲ್ಲಿ ವೃಥಾ ಅಲೆದಾಟ ಕಿರಿಕಿರಿ ಇರುತ್ತದೆ. ಒಳ್ಳೆಯ ದಿನಗಳಿಗಾಗಿ ಇನ್ನೂ ಸ್ವಲ್ಪ ದಿನ ಕಾಯಬೇಕು.

Weekly Horoscope In Kannada From December 29 To January 04 2025

ಕಟಕ ರಾಶಿಯ ವಾರ ಭವಿಷ್ಯ

ಎಂಟನೇ ಮನೆಗೆ ಶುಕ್ರನ ಪ್ರವೇಶ ನಿಮಗೆ ಶುಭಫಲಗಳನ್ನು ಕೊಡುತ್ತದೆ. ‌ಲಾಭಸ್ಥಾನದ ಗುರುವಿನಿಂದ ಹೊಸ ಕೆಲಸ ಸಿಗುವುದು, ವಿವಾಹ ನಿಷ್ಕರ್ಶೆ ಆಗುವುದು ಮೊದಲಾದ ಬದುಕು ಕಟ್ಟಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಮೂರನೇ ಮನೆಯ ಕೇತು ನಿಮಗೆ ಧೈರ್ಯ ಸ್ಥೈರ್ಯ ಕೊಟ್ಟು ಕಾಪಾಡುತ್ತಾನೆ. ಐದನೇ ಮನೆಯ ಬುಧ ನಿಂದ ನಿಮ್ಮ ಯೋಜನೆಗಳೆಲ್ಲ ಯಾವುದೇ ಅಡೆತಡೆ ಇಲ್ಲದೆ ಮುಂದೆ ಸಾಗುತ್ತದೆ. ಆರನೇ ಮನೆಯ ಸೂರ್ಯ ಸಹ ನಿಮ್ಮ ಅಂತಃ ಶಕ್ತಿಯನ್ನು ಹೆಚ್ಚು ಮಾಡುತ್ತಾನೆ.

Weekly Horoscope In Kannada From December 29 To January 04 2025

ಸಿಂಹ ರಾಶಿಯ ವಾರ ಭವಿಷ್ಯ

ಏಳನೇ ಮನೆಯಲ್ಲಿ ಶುಕ್ರ ಶನಿ ಇದ್ದು ಇವೆರಡೂ ನಿಮಗೆ ಶತ್ರುಗ್ರಹಗಳಾದ್ದರಿಂದ ಈ ಗ್ರಹಗಳ ವೀಕ್ಷಣೆ ನಿಮಗೆ ಸ್ವಲ್ಲ ಒತ್ತಡಗಳನ್ನು ಕೊಡುತ್ತದೆ.‌ ಆದರೆ ನಾಲ್ಕನೇ ಬುಧನಿಂದ ಕೊಂಚಮಟ್ಟಿಗೆ ಆರಾಮ‌ಇದೆ.‌ನಿಮ್ಮ ಹಿಂದಿನ ರಾಶಿಯಲ್ಲಿ ಕುಜ ನಿಮ್ಮ ಮುಂದಿನ ರಾಶಿಯಲ್ಲಿ ಕೇತು ಇದ್ದು ಕ್ರೂರಗ್ರಹಗಳಿಂದ ಬಂಧಿತರಾಗಿದ್ದೀರಿ. ಒಳ್ಳೆಯ ಕೆಲಸಗಳು ಮಾಡಲು ಈ ಗ್ರಹಗಳು ಅವಕಾಶ ಕೊಡುವುದಿಲ್ಲ. ನಿಧಾನವಾಗಿ ಯೋಚಸಿ ಮುನ್ನಡೆಯಿರಿ.

Weekly Horoscope In Kannada From December 29 To January 04 2025

ಕನ್ಯಾ ರಾಶಿಯ ವಾರ ಭವಿಷ್ಯ

ಆರನೇ ಮನೆಯಲ್ಲಿ ಶನಿ ವಿಪರೀತವಾಗಿ ಹಣ ಸಹಾಯ ಮಾಡುತ್ತಾನೆ. ಮೂರರಲ್ಲಿ ಬುಧ ಸಾತ್ವಿಕ ಧೈರ್ಯ ಕೊಡುತ್ತಾನೆ. ಹಣದ ಹರಿವು‌ ಉತ್ತಮವಾಗಿದೆ. ಒಂಬತ್ತನೇ ಮನೆಯ ಗುರು ನಿಮ್ಮಲ್ಲಿ ಧಾರ್ಮಿಕ ಭಾವನೆಯಲ್ಲೂ ಉದ್ಧಿಪಿಸಿ ಒಳ್ಳೆಯ ಕೆಲಸ ಕಾರ್ಯ ಮಾಡಲು ಸಹಕಾರ ಕೊಡುತ್ತಾನೆ. ನಿಮ್ಮ ಪುಣ್ಯ ಹೆಚ್ಚುವಂತಹ ಕೆಲಸಗಳನ್ನು ಮಾಡುತ್ತೀರಿ.‌ ಸಂಗಾತಿಯ ಆರೋಗ್ಯದ ಬಗ್ಗೆ ನಿಗಾ ಇರಲಿ.

Weekly Horoscope In Kannada From December 29 To January 04 2025

ತುಲಾ ರಾಶಿಯ ವಾರ ಭವಿಷ್ಯ

ಎರಡನೇ ಮನೆಯಲ್ಲಿ ಬುಧ, ಐದನೇ ಮನೆಯಲ್ಲಿ ಶುಕ್ರ ಸಮಯ ಬಹಳ ಚೆನ್ನಾಗಿದೆ. ಪಂಚಮದಲ್ಲಿ ಶುಕ್ರನ ಜೊತೆ ಶನಿ ಇದ್ದರೂ ಈಗ ಶನಿಯ ಪ್ರಭಾವ ಬಹಳಷ್ಟು ಕಡಿಮೆ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಪಂಚಮ ಶನಿಯಿಂದ ಮುಕ್ತಿ ಸಿಕ್ಕು ನೀವು ನಿರಾಳವಾಗುತ್ತೀರಿ. ಮೂರನೇ ಮನೆಯಲ್ಲಿ ಸೂರ್ಯ ಶಕ್ತಿ‌ಪರಾಕ್ರಮ ಕೊಟ್ಟು ಕಾಪಾಡುತ್ತಾನೆ. ಮುಂದೆ ಬರುವ ದಿನಗಳು ನಿಮಗೆ ಸುಖಸಂತೋಷಗಳನ್ನು ಕೊಡುತ್ತದೆ.

Weekly Horoscope In Kannada From December 29 To January 04 2025

ವೃಶ್ಚಿಕ ರಾಶಿಯ ವಾರ ಭವಿಷ್ಯ

ಈಗ ಗುರು ಬಲ ಇದೆ. ಗುರುವಿನ ಅನುಗ್ರಹದಿಂದ ನಿಮ್ಮ ಜೀವನದ ಅಡತಡೆಗಳೆಲ್ಲಾ ಪರಿಹಾರವಾಗಿ ಸುಖ ನೆಮ್ಮದಿಯನ್ನು ಕಂಡುಕೊಳ್ಳುತ್ತೀರಿ. ನಿಮ್ಮ ಜೀವನದ ಒಂದು ಬಹುದೊಡ್ಡ ಕರ್ತವ್ಯವನ್ನು ನೆರವೇರಿಸಲು ಈಗ ಅವಕಾಶ ಒದಗಿ‌ ಬರುತ್ತದೆ. ನಿಮ್ಮ ಯೋಜನೆಗಳನ್ನು ಸಫಲಗೊಳಿಸುತ್ತೀರಿ.‌ ವೃತ್ತಿಯಲ್ಲಿ ಅಡೆತಡೆಗಳು ನಿವಾರಣೆಯಾಗುತ್ತದೆ. ಮೆಲಧಿಕಾರಿಗಳ ಪ್ರಶಂಸೆ ಗಳಿಸುತ್ತೀರಿ.

Weekly Horoscope In Kannada From December 29 To January 04 2025

ಧನಸ್ಸು ರಾಶಿಯ ವಾರ ಭವಿಷ್ಯ

ಈಗ ಗುರು ಆರನೇ ಮನೆಯಲ್ಲಿ ಇದ್ದಾನೆ ಇದರಿಂದ ಕೊಂಚ ಹಿನ್ನಡೆ ನಿಮಗೆ. ಕೆಲಸ ಕಾರ್ಯಗಳು ಬೇಗ ಯೋಜಿಸಿದಂತೆ ನಡೆಯುವುದಿಲ್ಲ. ನಿಂತು ನಿಂತು ಮುಂದೆ ಹೋಗುತ್ತದೆ. ಮೂರನೇ ಮನೆಯಲ್ಲಿ ಶನಿ ಇರುವುದು ಹಣಕಾಸಿಗೆ ಆಧಾರವಾಗಿದೆ. ಆರೋಗ್ಯದಲ್ಲಿ ಸ್ವಲ್ಪ ಜಾಗ್ರತೆ ವಹಿಸಿ. ಮೂರನೇ ಮನೆಯಲ್ಲಿ ಶುಕ್ರ ಇರುವುದು ಕೂಡ ನಿಮಗೆ ಒಳ್ಳೆಯ ಫಲಗಳನ್ನೇ ನೀಡುತ್ತದೆ.

Weekly Horoscope In Kannada From December 29 To January 04 2025

ಮಕರ ರಾಶಿಯ ವಾರ ಭವಿಷ್ಯ

ಐದನೇ ಮನೆಯಲ್ಲಿ ಗುರು, ಮೂರನೇ ಮನೆಯಲ್ಲಿ ರಾಹು ಎರಡನೇ ಮನೆಯಲ್ಲಿ ಶುಕ್ರ ಸಮಯ ಬಹಳ ಚೆನ್ನಾಗಿದೆ. ನೀವು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಕೆಲಸ ಸಫಲವಾಗಲಿದೆ. ಒಂದು ಒಳ್ಳೆಯ ಅವಕಾಶ ನಿಮ್ಮ ಕೈಸೇರಲಿದೆ. ಸಮಯ ಬಹಳ ಚೆನ್ನಾಗಿದೆ. ನಿಮ್ಮ ಯೋಜನೆಗಳನ್ನು ರೂಪಿಸಿಕೊಳ್ಳಿ. ಎಲ್ಲವೂ ಕಾರ್ಯರೂಪಕ್ಕೆ ಬರಲಿದೆ. ಸಾಡೆಸಾತಿ ಶನಿಯ ಪ್ರಭಾವ 99 % ಕಡಿಮೆ ಆಗಿದೆ.

Weekly Horoscope In Kannada From December 29 To January 04 2025

ಕುಂಭ ರಾಶಿಯ ವಾರ ಭವಿಷ್ಯ

ನಿಮ್ಮ ರಾಶಿಯಲ್ಲೇ ಶುಕ್ರ ಇದ್ದಾನೆ ಶುಕ್ರ ನಿಮಗೆ ಯೋಗಕಾರಕ ಗ್ರಹ ರಾಶಿಯಲ್ಲೇ ಶುಕ್ರ ಇರುವುದು ಬಹಳ ಒಳ್ಳೆಯ ಫಲಗಳನ್ನು ನೀಡುತ್ತದೆ. ಮನೆಯಲ್ಲಿ ಮಂಗಳ ಕಾರ್ಯ ನಡೆಯುವ ಸೂಚನೆ ಇದೆ. ಕೆಲವೇ ದಿನಗಳಲ್ಲಿ ಶನಿ ನಿಮ್ಮ ರಾಶಿ ಬಿಟ್ಟು ಮುಂದಿನ ರಾಶಿಗೆ ಪ್ರವೇಶವಾದಾಗ ಇನ್ನೂ ಹೆಚ್ವಿನ. ಶುಭಫಲ ದೊರೆಯುತ್ತದೆ. ಹತ್ತರಲ್ಲಿ ಬುಧ, ಹನ್ನೊಂದರಲ್ಲಿ ಸೂರ್ಯ ಶುಭಫಲಗಳನ್ನು ನೀಡುತ್ತಾರೆ.

Weekly Horoscope In Kannada From December 29 To January 04 2025

ಮೀನ ರಾಶಿಯ ವಾರ ಭವಿಷ್ಯ

ಸ್ವಲ್ಪ ಈಗ ನಿಮಗೆ ಸವಾಲುಗಳ ಕಾಲ. ಯಾವುದು ಹೊಸ ಯೋಜನೆ ಕೈಗೆತ್ತಿಕೊಳ್ಳಬೇಡಿ. ಯಾರಿಗೂ ಆಶ್ವಾಸನೆ ಕೊಡಬೇಡಿ. ನೀವಂದುಕೊಂಡ ಕೆಲಸಗಳು ನಿಮ್ಮ ಯೋಜನೆಯಂತೆ ನಡೆಯುವುದಿಲ್ಲ. ನಿಧಾನ ಪ್ರಗತಿ ನಿಧಾನ ಚಲನೆ. ಒಳ್ಳೆಯ ಸಮಯಕ್ಕೆ ಕೆಲವು ಕಾಲ ಕಾಯಬೇಕು. ಮನೆದೇವರ ಪ್ರಾರ್ಥನೆ ಮಾಡಿಕೊಳ್ಳಿ. ಆರೋಗ್ಯ ಜಾಗ್ರತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+