Weekly Horoscope: ಡಿಸೆಂಬರ್ ತಿಂಗಳ ಮೊದಲ ವಾರ ಈ ರಾಶಿಗಳಿಗೆ ಲಕ್ಷ್ಮೀ ಕಟಾಕ್ಷ
ಕ್ರೋಧಿ ನಾಮ ಸಂವತ್ಸರ ದಕ್ಚಿಣಾಯನ ಹೇಮಂತ ಋತು ಮಾರ್ಗಶಿರಮಾಸದ ಶುಕ್ಲಪಕ್ಷ ಪಾಡ್ಯದಿಂದ ಅಷ್ಟಮಿಯವರೆಗೆ.
ಈ ವಾರದ ಚಂದ್ರನ ಸಂಚಾರ ಅನುರಾಧ ನಕ್ಷತ್ರದಿಂದ ಶತಭಿಷದ ವರೆಗೆ.
01/12/2024-07/12/2024ರ ವಾರ ಭವಿಷ್ಯ

ಮೇಷ ರಾಶಿಯ ವಾರ ಭವಿಷ್ಯ
ಲಾಭ ಸ್ಥಾನದಲ್ಲಿ ಶನಿ ಆರನೇ ಮನೆಯಲ್ಲಿ ಕೇತು ನಿಮಗೆ ಧನಲಾಭ ಕೊಡುತ್ತಾರೆ. ಹತ್ತನೇ ಮನೆಯ ಶುಕ್ರನಿಂದ ಪ್ರಯೋಜನ ಇಲ್ಲ. ಶುಕ್ರ ಹನ್ನೊಂದನೇ ಮನೆಗೆ ಪ್ರವೇಶವಾದಾಗ ಬಹಳ ಒಳ್ಳೆಯ ಫಲಗಳು ದೊರೆಯುತ್ತದೆ. ಸೂರ್ಯ ಎಂಟನೇ ಮನೆಯಿಂದ ಒಂಬತಗತನೇ ಮನೆ ಧನಸ್ಸುರಾಶಿಗೆ ಪ್ರವೇಶವಾದಾಗ ಇನ್ನೂ ಹೆಚ್ಚಿನ ಲಾಭ ಇದೆ.

ವೃಷಭ ರಾಶಿಯ ವಾರ ಭವಿಷ್ಯ
ಒಂಬತ್ತನೇ ಮನೆಯಲ್ಲಿ ಶುಕ್ರ ಲಾಭಸ್ಥಾನದಲ್ಲಿ ರಾಹು ಮೂರನೇ ಮನೆಯಲ್ಲಿ ಕುಜ ಸಮಯ ಬಹಳ ಚೆನ್ನಾಗಿದೆ. ಧನಲಾಭ ಇದೆ. ಅಂದುಕೊಂಡ ಕೆಲಸಗಳನ್ನು ಸರಾಗವಾಗಿ ಮಾಡುವಿರಿ. ಹಳೆಯ ಬಾಕಿ ಚುಕ್ತಾ ಮಾಡುವಿರಿ. ಖರ್ಚುಗಳು ವಿಪರೀತ ಇದ್ದರೂ ಹಣದ ಹರಿವು ಕೂಡ ಅಷ್ಟೇ ಉತ್ತಮವಾಗಿದೆ. ಗುರು ನಿಮ್ಮ ರಾಶಿಯಲ್ಲೇ ಇರುವುದರಿಂದ ಮಾನಸಿಕವಾಗಿ ಭಾವನಾತ್ಮಕವಾಗಿ ಚಿಂತೆಗಳು ಇವೆ.

ಮಿಥುನ ರಾಶಿಯ ವಾರ ಭವಿಷ್ಯ
ಎಂಟನೇ ಮನೆಗೆ ಶುಕ್ರನ ಪ್ರವೇಶವಾಗಿದೆ. ಇದು ಶುಭಫಲಗಳನ್ನು ಕೊಡುತ್ತದೆ. ಆದರೂ ಈಗ ನಿಮಗೆ ಏನೋ ಒಂದು ಕೊರತೆ ಕಾಡಿಸುತ್ತದೆ. ಒತ್ತಡಗಳು ಇರುತ್ತದೆ. ಆರೋಗ್ಯದಲ್ಲಿ ಏರುಪೇರು ಇದೆ. ಐವತ್ತು ವರ್ಷ ಮೇಲ್ಪಟ್ಟವರು ಆರೋಗ್ಯದಲ್ಲಿ ಎಚ್ಚರಿಕೆ ತೆಗೆದುಕೊಳ್ಳಿ. ಕೇತು ಮೂರನೇ ಮನೆಯ ಬರುವ ವರೆಗೂ ಕಾಯಬೇಕು. ಆಸ್ತಿಪಾಸ್ತಿ ಗಳಲ್ಲಿ ತಕರಾರು ಬರುವುದು ಓದಿನಲ್ಲಿ ಹಿಂದೆ ಬೀಳುವುದು ಮುಂತಾದ ಸಂಗತಿಗಳು ಇರುತ್ತದೆ.

ಕಟಕ ರಾಶಿಯ ವಾರ ಭವಿಷ್ಯ
ಮೂರರಲ್ಲಿ ಕೇತು ಧೈರ್ಯ ಸಾಹಸಗಳನ್ನು ಕೊಡುತ್ತಾನೆ. ಲಾಭಸ್ಥಾನದಲ್ಲಿ ಗುರು ಇದ್ದರೂ ವಕ್ರಿಯಾಗಿ ಇರುವುದರಿಂದ ಶುಭಫಲಗಳು ಕಡಿಮೆ. ಏಳರಲ್ಲಿ ಶುಕ್ರ ಸಹ ಶುಭಕರನಲ್ಲ. ಐದನೇ ಮನೆಯಲ್ಲಿ ಬುಧ ಈಗ ಸಧ್ಯಕ್ಕೆ ನಿಮಗೆ ಬೆಂಬಲ ಕೊಡುತ್ತಿದ್ದಾನೆ. ಸೂರ್ಯ ಆರನೇ ಮನೆಗೆ ಬಂದಾಗ ಕೂಡ ಶುಭಫಲಗಳು ಸಿಗುತ್ತವೆ.

ಸಿಂಹ ರಾಶಿಯ ವಾರ ಭವಿಷ್ಯ
ಆರನೇ ಮನೆಯಲ್ಲಿ ಶುಕ್ರ, ನಾಲ್ಕನೇ ಮನೆಯಲ್ಲಿ ಬುಧ ಸೂರ್ಯ ಹತ್ತರಲ್ಲಿ ಗುರು, ಏಳರಲ್ಲಿ ಶನಿ ಯಾವಗ್ರಹಗಳೂ ಬಲ ಕೊಡುತ್ತಿಲ್ಲ. ಕೊಂಚ ಕಿರಿಕಿರಿ ಯ ದಿನಗಳು. ಉತ್ಸಾಹ ಇಲ್ಲದ ದಿನಗಳು. ಯಾವ ಕೆಲಸವೂ ಮುಂದೆ ಸಾಗದು. ಶ್ರಮ ಹೆಚ್ಚು ಫಲ ಕಡಿಮೆ. ಹಣಕಾಸಿಗೆ ಒತ್ತಡ ಇರುತ್ತದೆ. ಕಾರ್ಯಭಾರ ಹೆಚ್ಚು. ಮನೆಯವರೊಡನೆಯೂ ಕೊಂಚ ಸಮಯ ಕಳೆಯಲಾರದಷ್ಟು ಕಾರ್ಯಭಾರ. ಸಹನೆ ಇರಲಿ.

ಕನ್ಯಾ ರಾಶಿಯ ವಾರ ಭವಿಷ್ಯ
ಈಗ ಸಮಯ ಚೆನ್ನಾಗಿದೆ. ಆದರೆ ಆರೋಗ್ಯದ ಒತ್ತಡ ಇರುತ್ತದೆ. ಮೂರನೇ ಮನೆಯಲ್ಲಿ ಬುಧ ಸೂರ್ಯ ಐದನೇ ಮನೆಯಲ್ಲಿ ಶುಕ್ರ, ಒಂಬತ್ತನೇ ಮನೆಯಲ್ಲಿ ಗುರು, ಆರರಲ್ಲಿ ಶನಿ ಇರುವುದು ನಿಮಗೆ ಬಹಳ ಸಹಕಾರಿ ಆಗಿದೆ. ವಾಹನದಿಂದ ಲಾಭ, ಫ್ಯಾಷನ್ ಡಿಸೈನರ್‌ಗಳಿಗೆ ಲಾಭ, ಕಲಾವಿದರಿಗೆ ಲಾಭ ಇದೆ. ಸರ್ಕಾರಿ ಕೆಲಸಗಳಿಂದ ಲಾಭ ಇದೆ. ಧಾರ್ಮಿಕ ಕಾರ್ಯಗಳನ್ನು ಮಾಡುತ್ತೀರಿ. ಭೂಮಿಯಿಂದ ಲಾಭ ಇದೆ. ಆದರೆ ಆರೋಗ್ಯ ಮಾತ್ರ ಜೋಪಾನ.

ತುಲಾ ರಾಶಿಯ ವಾರ ಭವಿಷ್ಯ
ನಾಲ್ಕನೇ ಮನೆಯಲ್ಲಿ ಶುಕ್ರ ಇದು ಬಹಳ ಒಳ್ಳೆ ಫಲ ನೀಡುತ್ತದೆ. ವಾಹನದಿಂದ ಲಾಭ, ಹೊಸ ವಾಹನ ಖರೀದಿ ಯೋಗ ಇದೆ. ಎರಡನೇ ಮನೆಯಲ್ಲಿ ಬುಧ ಕೂಡ ಹಣದ ಹರಿವನ್ನು ಹೆಚ್ಚಿಸುತ್ತಾನೆ. ಗುರುಬಲ ಶನಿ ಬಲ ಇಲ್ಲದಿದ್ದರೂ ತಾತ್ಕಾಲಿಕವಾಗಿ ಶುಕ್ರನ ಬಲ ಬುಧನ ಬಲ ಮತ್ತು ರಾಹುಬಲ ನಿಮ್ಮನ್ನು ರಕ್ಷಿಸುತ್ತದೆ. ಯಾವುದೋ ಮೂಲದಿಂದ ಧನಾಗಮನ ಆಗುತ್ತದೆ. ಪಂಚಮ ಶನಿಯಿಂದಲೂ ಕೆಲವೇ ದಿನಗಳಲ್ಲಿ ಮುಕ್ತಿಸಿಗಲಿದೆ.

ವೃಶ್ಚಿಕ ರಾಶಿಯ ವಾರ ಭವಿಷ್ಯ
ಈಗ ಗುರುಬಲ ಇದ್ದರೂ ವಕ್ರಿ ಗುರು 100% ಫಲಗಳನ್ನು ಕೊಡುವುದಿಲ್ಲ. ವಕ್ರಿಗುರು ಸರಿ ಹೋದಾಗ ನಿಮಗೆ ಖಂಡಿತಾ ಶುಭಫಲಗಳು ಇವೆ. ಈಗ ಯಾವುದೇ ಕೆಲಸಕಾರ್ಯ ನಿಧಾನಗತಿಯಲ್ಲಿ ಇದ್ದರೆ ಬೇಸರಿಸಬೇಡಿ. ಕೆಲವೇ ದಿನಗಳಲ್ಲಿ ವಕ್ರಗುರು ಸರಿಯಾದ ನಂತರ ನಿಮಗೂ ಆಶಾದಾಯಕ ಸಂಗತಿಗಳು ಇವೆ. ಈಗ ಮೂರರಲ್ಲಿ ಶುಕ್ರ, ಹನ್ನೊಂದರಲ್ಲಿ ಕೇತು ಸ್ವಲ್ಪಮಟ್ಟಿಗೆ ಕಾಪಾಡುತ್ತಾರೆ. ಬೆಂಬಲ ನೀಡುತ್ತಾರೆ.

ಧನಸ್ಸು ರಾಶಿಯ ವಾರ ಭವಿಷ್ಯ
ಈಗ ನಿಮಗೆ ಗುರುಬಲ ಇಲ್ಲ ವಾದ್ದರಿಂದ ಕೊಂಚ ಸಹಿಸಿಕೊಳ್ಳಬೇಕು. ಕಾರ್ಯಕ್ಷೇತ್ರದಲ್ಲಿ ಕುಟುಂಬದಲ್ಲಿ ಒತ್ತಡಗಳು ಇರುತ್ತದೆ. ಮನೆಯ ಸದಸ್ಯರೊಡನೆ ಅಪಾರ್ಥ ಮಾಡಿಕೊಂಡು ಜಗಳಗಳು ಮುನಿಸು ಇವೆಲ್ಲ ಇರುತ್ತದೆ. ಕಾರ್ಯಕ್ಷೇತ್ರದಲ್ಲಿ ಮೇಲಧಿಕಾರಿಗಳ ಕಿರುಕುಳ, ಸಮಯಕ್ಕಿಂತ ಬೇಗ ಮುಗಿಸಲು ಒತ್ತಡ ಹಾಕುವ ಪ್ರಾಜೆಕ್ಟ್ ಗಳು, ಸಹೋದ್ಯೋಗಿಗಳ ಅಸಹಕಾರ ಹೀಗೆಲ್ಲ ಎದುರಿಸಬೇಕಾಗುತ್ತದೆ. ಹಣಕಾಸಿನ ಅಭಾವವೂ ಇರುತ್ತದೆ. ಎಲ್ಕದಕ್ಕೂ ಈಗ ಸಹನೆ ಮುಖ್ಯ. ನಿಮ್ಮ ಕೆಲಸ, ನಡವಳಿಕೆ ಪ್ರಾಮಾಣಿಕವಾಗಿರಲಿ. ಉಳಿದದ್ದು ದೇವರಿಗೆ ಬಿಡಿ.

ಮಕರ ರಾಶಿಯ ವಾರ ಭವಿಷ್ಯ
ಕಾಯುವಿಕೆಗೆ ಮತ್ತೊಂದು ಹೆಸರು ನಿಮ್ಮ ರಾಶಿ. ಕೈಗೆ ಸಿಗುತ್ತದೆ ಎನ್ನುವಾಗ ಮಾಯವಾಗುತ್ತದೆ. ಕೈಗೆ ಬಂದ ತುತ್ತು ಬಾಯಿಗೆ ಬರಲ್ಲ. ಈ ಎಲ್ಲಕ್ಕೂ ಒಂದು ಕೊನೆ ಇದೆ. ನಿಮಗೂ ಅವಕಾಶಗಳು ಹುಡುಕಿ ಬರುತ್ತದೆ. ಈಗ ಗುರು ವಕ್ರಿಯಾಗಿ ಇರುವುದರಿಂದ ಸ್ವಲ್ಪ ತೊಂದರೆ, ನಿಧಾನಗತಿ. ಆದರೆ ರಾಶಿಯಲ್ಲೇ ಶುಕ್ರ ಮತ್ತು ಲಾಭಸ್ಥಾನದಲ್ಲಿ ಬುಧ ಸೂರ್ಯ ನಿಮಗೆ ಒಳಿತನ್ನು ಮಾಡುತ್ತಾರೆ. ಮೂರರ ರಾಹು ಧೈರ್ಯ ಸಾಹಸ ಕೊಡುತ್ತಾನೆ. ಹಣದ ಹರಿವು ಉತ್ತಮವಾಗಿದೆ.

ಕುಂಭ ರಾಶಿಯ ವಾರ ಭವಿಷ್ಯ
ನಿಮ್ಮ ರಾಶಿ ಶುಭಫಲಗಳನ್ನು ಪಡೆಯಲು ಇನ್ನೂ ಕಾಯಬೇಕು. ಈಗ ಖರ್ಚುಗಳು ಹೆಚ್ಚು. ನಿಮ್ಮ ಗಮನಕ್ಕೆ ಬರದೆ, ಒಂದು ಲೆಕ್ಕಾಚಾರ ಇಲ್ಲದೆ ಹಣ ಖರ್ಚಾಗುತ್ತದೆ. ಆರನೇ ಮನೆಯಲ್ಲಿ ಕುಜ ಇರುವುದು ಕೊಂಚ ತಂಗಾಳಿ ಬೀಸಿದ ಹಾಗೆ ಅನಿಸುತ್ತದೆ. ನಾಲ್ಕರ ಗುರು ಅಪಮಾನವನ್ನು, ಒತ್ತಡಗಳನ್ನು ಕೊಡುತ್ತಾನೆ. ದತ್ತಾತ್ರೇಯ ದರ್ಶನ ಮಾಡಿ.

ಮೀನ ರಾಶಿಯ ವಾರ ಭವಿಷ್ಯ
ನಿಮಗೆ ಸಾಡೆಸಾತಿ ಶನಿಯ ಮೊದಲ ಭಾಗ ಕಳೆಯಲು ಕೆಲವೇ ದಿನ ಬಾಕಿ ಇದೆ. ಈಗ ಹನ್ನೊಂದನೇ ಮನೆಯ ಶುಕ್ರ ಧನಲಾಭ ಕೊಡುತ್ತಾನೆ. ಒಂಬತ್ತನೇ ಮನೆಯಲ್ಲಿ ಸೂರ್ಯ ಬುಧ ನಿಮಗೆ ಸಹಸಯ ಮಾಡುತ್ತಾರೆ. ಆದರೂ ಕೊಂಚ ಕಷ್ಟಗಳ ಕಾಲ. ಸಹಿಸಬೇಕು ಮತ್ತು ನಿರ್ಣಯ ದೇವರಿಗೆ ಬಿಡಬೇಕು. ಎಚ್ಚರಿಕೆಯಿಂದ ಮುನ್ನಡೆಯಿರಿ. ಸಹನೆಯಿಂದ ತೀರ್ಮಾನಗಳನ್ನು ತೆಗೆದುಕೊಳ್ಳಿ. ಮನೆ ದೇವರ ಗುರುಗಳ ದರ್ಶನ ಸಂಕಟಗಳನ್ನು ಕಡಿಮೆ ಮಾಡುತ್ತದೆ.












Click it and Unblock the Notifications