Weekly Horoscope: ಈ ರಾಶಿಗಳ ಅವಿವಾಹಿತರಿಗೆ ಕೂಡಿ ಬರಲಿದೆ ಕಂಕಣ ಭಾಗ್ಯ
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವರ್ಷ ಋತು ಶ್ರಾವಣ ಶುದ್ಧ ಚತುರ್ದಶಿಯಿಂದ ಶ್ರಾವಣ ಬಹುಳ ಷಷ್ಠಿಯವರೆಗೆ.
ಈ ವಾರದ ಚಂದ್ರನ ಸಂಚಾರ ಶ್ರವಣಾ ನಕ್ಷತ್ರದಿಂದ ಭರಣಿ ನಕ್ಷತ್ರದವರೆಗೆ
18/08/2024-24/08/2024ರ ವಾರ ಭವಿಷ್ಯ

ಮೇಷ ರಾಶಿಯ ವಾರ ಭವಿಷ್ಯ
ಎರಡನೇ ಮನೆಯಲ್ಲಿ ಗುರು ಕುಜ ಹನ್ನೊಂದನೇ ಮನೆಯಲ್ಲಿ ಶನಿ ಐದನೇ ಮನೆಯಲ್ಲಿ ಬುಧ ಶುಕ್ರ ಸೂರ್ಯ ಇದ್ದಾರೆ. ಸಮಯ ಬಹಳ ಚೆನ್ನಾಗಿದೆ. ಅಂದುಕೊಂಡಿರುವ ಕೆಲಸಗಳು ನಿರ್ವಿಘ್ನವಾಗಿ ನೆರವೇರುತ್ತದೆ. ಧನಾಗಮನ ಉತ್ತಮವಾಗಿದೆ. ಕುಟುಂಬದಲ್ಲಿ ಶಾಂತಿ ಸಮಾಧಾನಗಳು ಇವೆ.

ವೃಷಭ ರಾಶಿಯ ವಾರ ಭವಿಷ್ಯ
ಲಾಭಸ್ಥಾನದಲ್ಲಿ ರಾಹು, ನಾಲ್ಕನೇ ಮನೆಯಲ್ಲಿ ಬುಧ ಶುಕ್ರ ಸೂರ್ಯ ಇದ್ದು ಸಮಯ ಬಹಳ ಚೆನ್ನಾಗಿದೆ. ನಾಲ್ಕನೇ ಮನೆಯಲ್ಲಿ ಸೂರ್ಯ ಸ್ವಂತ ಮನೆಯಲ್ಲಿ ಇದ್ದು ಅಲ್ಲಿ ಒಂದು ರಾಜಯೋಗ ಆಗಿದೆ. ಸುಖಸ್ಥಾನ ಭದ್ರವಾಗಿದೆ. ಯಾವುದಾದರೂ ಆಸ್ತಿ ಜಮೀನು ಕೊಳ್ಳಲು ಕಾಲ ಪ್ರಶಸ್ತವಾಗಿದೆ. ತಂದೆಯಿಂದ ಲಾಭ ಅಥವಾ ಉಪಕಾರ.

ಮಿಥುನ ರಾಶಿಯ ವಾರ ಭವಿಷ್ಯ
ಮೂರನೇ ಮನೆಯಲ್ಲಿ ಸೂರ್ಯ ಬುಧ ಶುಕ್ರರು ನಿಮ್ಮ ಸಹಾಯಕ್ಕೆ ಇದ್ದಾರೆ. ಸಹೋದರರಿಂದ ಲಾಭ ಇದೆ. ಸರ್ಕಾರದ ಮಟ್ಟದಲ್ಲಿ ಕೆಲಸಗಳು ಆಗಬೇಕಿದ್ದರೆ ಈಗ ಸುಲಭಸಾಧ್ಯ. ಉನ್ನತ ಮಟ್ಟದ ಅಧಿಕಾರದಲ್ಲಿ ಇರುವವರಿಗೆ ಈಗ ಕೊಂಚ ಮಟ್ಟಿಗೆ ನಿರಾಳತೆ ಸಿಗಲಿದೆ. ಕೆಲಸದ ಒತ್ತಡ ಇರುತ್ತದೆ. ಕೆಲಸಗಳು ಮುಂದುವರೆಯುವುದು ಕೊಂಚ ನಿಧಾನ. ಈಗ ನಿಮಗೆ ತಾಳ್ಮೆ ಯೇ ದೇವರು.

ಕಟಕ ರಾಶಿಯ ವಾರ ಭವಿಷ್ಯ
ಗುರುಬಲ ಇದೆ. ಯಾವ ಕೆಲಸವೇ ಆಗಲಿ ನಿರಾತಂಕವಾಗಿ ನಡೆಯುತ್ತದೆ. ಗುರುಗಳ ದರ್ಶನ ಆಶೀರ್ವಾದ ಸಿಗುತ್ತದೆ. ದೂರ ಪ್ರಯಾಣ ಯೋಗ ಇದೆ. ಸತ್ಸಂಗ ಲಭಿಸುತ್ತದೆ. ಹಣದ ಹರಿವು ಉತ್ತಮವಾಗಿದೆ. ಎರಡನೇ ಮನೆಯಲ್ಲಿ ಬುಧ ಶುಕ್ರ ಸೂರ್ಯ ಇದ್ದು ಕುಟುಂಬ ಸ್ಥಾನ ಭದ್ರವಾಗಿದೆ. ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ. ಅರ್ಹರಿಗೆ ಬಡ್ತಿ ಸಿಗಲಿದೆ

ಸಿಂಹ ರಾಶಿಯ ವಾರ ಭವಿಷ್ಯ
ಕೆಲಸದ ಒತ್ತಡಗಳು ಬಹಳ ಇರುತ್ತದೆ. ಅನಾವಶ್ಯಕ ತೊಂದರೆಗಳು ಎದುರಾಗುತ್ತದೆ. ಖರ್ಚುಗಳೂ ಬಹಳವಾಗಿ ಇರುತ್ತದೆ. ನಿಮಗೆ ತೊಂದರೆ ಕೊಡುವ ಜನಗಳೂಇರುತ್ತಾರೆ. ನೀವು ಸರಿಯಾಗಿದ್ದರೂ ಎದುರಿನ ಜನಗಳಿಂದ ಅನಾವಶ್ಯಕ ಕಿರಿಕಿರಿ ಅನುಭವಿಸಬೇಕಾಗಬಹುದು. ಗ್ರಹಗಳು ವ್ಯತಿರಿಕ್ತವಾಗಿ ಇರುವುದರಿಂದ ಯಾವುದೇ ಮಾಡಬೇಕಾದರೂ ಯೋಚಿಸಿ ಮಾಡಿ. ವಿಶ್ವಾಸ ಕಳೆದುಕೊಳ್ಳಬೇಡಿ.

ಕನ್ಯಾ ರಾಶಿಯ ವಾರ ಭವಿಷ್ಯ
ಈಗ ಗುರುಬಲ ಇದೆ. ಗುರು ದೃಷ್ಟಿಯೂ ಕನ್ಯಾರಾಶಿಯ ಮೇಲಿದೆ. ಶುಕ್ರ ಬುಧ ಸೂರ್ಯ ಇವರೆಲ್ಲ ವ್ಯಯ ಸ್ಥಾನದಲ್ಲಿ ಇರುವುದರಿಂದ ಖರ್ಚುಗಳು ಎದುರಾಗುತ್ತದೆ. ಹಾಗೆಯೇ ಹಣದ ಹರಿವೂ ಕೂಡ ಉತ್ತಮವಾಗಿಯೇ ಇದೆ. ಹೀಗಾಗಿ ಖರ್ಚು ವೆಚ್ಚಗಳನ್ನು ನಿರ್ವಹಣೆ ಮಾಡುತ್ತೀರಿ. ಅರ್ಹರಿಗೆ ವಿವಾಹ ಯೋಗ ಇದೆ.

ತುಲಾ ರಾಶಿಯ ವಾರ ಭವಿಷ್ಯ
ಈಗ ಗುರು ಎಂಟನೇ ಮನೆಯಲ್ಲಿ ಇರುವುದರಿಂದ ಆರೋಗ್ಯದಲ್ಲಿ ಎಚ್ಚರಿಕೆ ತೆಗೆದುಕೊಳ್ಳಿ. ಹೊಟ್ಟೆಗೆ ಸಂಬಂಧ ಪಟ್ಟ ತೊಂದರೆಗಳು ಎದುರಾಗುತ್ತದೆ. ಹಣ ಖರ್ಚಾಗುತ್ತದೆ. ರಾಹು ಆರನೇ ಮನೆಯಲ್ಲಿ ಇರುವುದರಿಂದ ಕೊಂಚಮಟ್ಟಿನ ಬಲ ಕೊಡುತ್ತಾನೆ. ಅಡಚಣೆಗಳನ್ನು ನಿವಾರಣೆ ಮಾಡುತ್ತಾನೆ. ಹಣದ ಹರಿವನ್ನೂ ವೃದ್ಧಿಪಡಿಸುತ್ತಾನೆ. ಹನ್ನೊಂದರಲ್ಲಿ ಬುಧ ಶುಕ್ರ ಸೂರ್ಯ ಇರುವುದು ಲಾಭಕರವಾಗಿದೆ. ಈ ಮೂರು ಗ್ರಹಗಳ ಸಹಾಯದಿಂದಲೂ ಉತ್ತಮ ಫಲಗಳನ್ನು ನಿರೀಕ್ಷಿಸಬಹುದು.

ವೃಶ್ಚಿಕ ರಾಶಿಯ ವಾರ ಭವಿಷ್ಯ
ಈಗ ಗುರುಬಲ ಇದೆ. ಅರ್ಹರಿಗೆ ವಿವಾಹ ಯೋಗ ಇದೆ. ಹತ್ತನೇ ಮನೆಯಲ್ಲಿ ಮೂರುಗ್ರಹಗಳಿದ್ದು ವೃತ್ತಿಸಂಬಂಧವಾಗಿ ಬಹಳ ದೊಡ್ಡ ಬದಲಾವಣೆ ಆಗಲಿದೆ. ಇದು ನಿಮಗೆ ಯಶಸ್ಸಿನ ದಾರಿ ತೋರಿಸುತ್ತದೆ. ಹನ್ನೊಂದನೇ ಮನೆಯಲ್ಲಿ ಕೇತು ಧನಾಗಮನವನ್ನು ವೃದ್ಧಿಸುತ್ತಾನೆ. ಐದನೇ ಮನೆಯಲ್ಲಿ ರಾಹು ಇರುವುದರಿಂದ ಮಕ್ಕಳಿಂದ ನಿಷ್ಟೂರ ಅನುಭವಿಸುತ್ತೀರಿ. ಆದಷ್ಟು ಮಕ್ಕಳ ಮನಸ್ಸಿಗೆ ಬೇಸರವಾಗದಂತೆ ನಡೆದುಕೊಳ್ಳಿ.

ಧನಸ್ಸು ರಾಶಿಯ ವಾರ ಭವಿಷ್ಯ
ಮೂರನೇ ಮನೆಯಲ್ಲಿ ಶನಿ ಇದ್ದು ನಿಮ್ಮಎಲ್ಲ ಅಡಚಣೆಗಳನ್ನು ದೂರ ಮಾಡುತ್ತಾನೆ. ಒಂಬತ್ತನೇ ಮನೆಯಲ್ಲಿ ಮೂರುಗ್ರಹಗಳು ಸೇರಿ ಒಂದು ರಾಜಯೋಗವಾಗಿದೆ. ಇದು ನಿಮಗೆ ಧರ್ಮದ ಬುದ್ಧಿಯನ್ನು ಹೆಚ್ಚಿಸುತ್ತದೆ. ಧರ್ಮ ಕಾರ್ಯಗಳನ್ನು ಮಾಡುತ್ತೀರಿ. ಉದ್ಯೋಗ ಏರಿಳಿತವಿಲ್ಲದೆ ಸಾಗುತ್ತದೆ. ತಾಯಿಯೊಂದಿಗೆ ಕೊಂಚ ಕಿರಿಕಿರಿ ಆಗುತ್ತದೆ. ಅದು ವಿಕೋಪ ಕ್ಕೆ ಹೋಗದಂತೆ ನಿಭಾಯಿಸಿಕೊಳ್ಳಿ.

ಮಕರ ರಾಶಿಯ ವಾರ ಭವಿಷ್ಯ
ಈಗ ನಿಮಗೆ ಅವಕಾಶಗಳು ಹೆಚ್ಚು. ನಿಮ್ಮ ಅನುಭವ ಸಾಮರ್ಥ್ಯಕ್ಕೆ ತಕ್ಕಂತೆ ಅವಕಾಶಗಳನ್ನು ಪಡೆಯುವ ಭಾಗ್ಯ ನಿಮ್ಮದು. ಗ್ರಹಗತಿಗಳು ನಿಮಗೆ ಅನುಕೂಲವಾಗಿದೆ. ಗುರುಬಲ ರಾಹುಬಲ ಇದೆ. ಇನ್ನು ಕೆಲವೇ ದಿನದಲ್ಲಿ ಶನಿಬಲವೂ ಸಿಗಲಿದ್ದು ನಿಮಗೆ ರಾಜಯೋಗ ಸಿಗಲಿದೆ. ಅರ್ಹರಿಗೆ ವಿವಾಹ ಪ್ರಾಪ್ತಿ ಇದೆ. ಸಾಮಾಜಿಕ ಗೌರವ ಮನ್ನಣೆಗಳು ಸಿಗುತ್ತವೆ. ಜನರು ನಿಮ್ಮನ್ನು ಗೌರವಿಸುತ್ತಾರೆ.

ಕುಂಭ ರಾಶಿಯ ವಾರ ಭವಿಷ್ಯ
ಈಗ ಗುರುಬಲ ಇಲ್ಲದಿರುವುದು, ಸಾಡೆಸಾತಿ ಶನಿ ನಡೆಯುತ್ತಿರಿವುದು, ಎರಡನೇ ಮನೆಯಲ್ಲಿ ರಾಹು ಇರುವುದೂ ಈಮೂರೂ ಗಂಭೀರ ಸಮಯವನ್ನೇ ತೋರಿಸುತ್ತದೆ. ಏಳನೇ ಮನೆಯಲ್ಲಿ ಸೂರ್ಯ ಹಾಗೂ ನಿಮ್ಮ ರಾಶಿಯಲ್ಲಿ ಶನಿ ಪರಸ್ಪರ ನೋಡುವುದರಿಂದ ಆರೋಗ್ಯಕ್ಕೆ ಕೊಂಚ ತೊಂದರೆ ಎದುರಾಗುತ್ತದೆ. ನೀವು ಈಗ ಯಾವುದಕ್ಕೂ ದುಡುಕಬೇಡಿ. ತಾಳ್ಮೆ ಸಹನೆ ಈಗ ನಿಮ್ಮಮಂತ್ರ.

ಮೀನ ರಾಶಿಯ ವಾರ ಭವಿಷ್ಯ
ನಿಮಗೂ ಸಹ ಸಾಡೆಸಾತಿ ಪ್ರಭಾವ ಇರುವುದರಿಂದ ನಿಧಾನ ನಡೆ ಒಳ್ಳೆಯದು. ಯಾವುದೇ ತೀರ್ಮಾನ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಆರನೇ ಮನೆಯಲ್ಲಿ ಇರುವ ಸೂರ್ಯ ಹಾಗೂ ಮೂರರಲ್ಲಿ ಇರುವ ಕುಜ ಈಗ ನಿಮಗೆ ಕೊಂಚ ಸಹಾಯ ಮಾಡುತ್ತಾರೆ. ನಿಮ್ಮ ರಾಶಿಯಲ್ಲೇ ರಾಹು ಇರುವುದು ಅನಾರೋಗ್ಯಕ್ಕೆ ಕಾರಣ ಆಗಬಹುದು.ಖರ್ಚು ವೆಚ್ಚಗಳು ವಿಪರೀತ ಇರುತ್ತದೆ. ಒತ್ತಡಗಳು ಇರುತ್ರದೆ. ಎಲ್ಲವನ್ನು ವಿವೇಚನೆ ಜಾಣತನದಿಂದ ನಿಭಾಯಿಸಿಕೊಳ್ಳಬೇಕು.












Click it and Unblock the Notifications