Weekly Horoscope: ಶ್ರಾವಣದ ಮೊದಲ ವಾರ ಯಾರಿಗೆ ಶುಭ..? ಯಾರಿಗೆ ಅಶುಭ..?
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವರ್ಷ ಋತು ಶ್ರಾವಣ ಶುದ್ದ ಸಪ್ತಮಿಯಯಿಂದ ಚತುರ್ದಶಿಯ ವರೆಗೆ.
ಈ ವಾರದ ಚಂದ್ರನ ಸಂಚಾರ ಸ್ವಾತಿಯಿಂದ ಶ್ರವಣಾ ನಕ್ಷತ್ರದವರೆಗೆ
11/08/2024-17/08/2024ರ ವಾರ ಭವಿಷ್ಯ

ಮೇಷ ರಾಶಿಯ ವಾರ ಭವಿಷ್ಯ
ಕಳೆದ ವಾರದಂತೆ ಈ ವಾರವೂ ಮುಂದುವರೆಯುತ್ತದೆ. ಗ್ರಹಗಳ ಬದಲಾವಣೆ ಹೆಚ್ಚಾಗಿ ಇಲ್ಲ. ಶುಕ್ರ ಅಸ್ತನಾಗಿದ್ದಾನೆ ಹಾಗಾಗಿ ವಾಹನಗಳ ಖರೀದಿ ಗೃಹ ಖರೀದಿ ಚಿನ್ನಾಭರಣ ಖರೀದಿ ಮುಂದಕ್ಕೆ ಹಾಕಿ. ವಿದ್ಯಾರ್ಥಿಗಳಿಗೆ ಮಧ್ಯಮ ಫಲ. ಈ ವಾರದ ಕೊನೆಯಲ್ಲಿ ಸೂರ್ಯ ತನ್ನ ಸ್ವಂತ ಮನೆಯಾದ ಸಿಂಹರಾಶಿಗೆ ಹೋಗುತ್ತಾನೆ. ಇದು ನಿಮಗೆ ಅನೇಕ ಲಾಭಗಳನ್ನು ತಂದುಕೊಡುತ್ತದೆ. ಗುರು ಶನಿ ಇಬ್ಬರೂ ನಿಮಗೆ ಅನುಕೂಲರಾಗಿದ್ದಾರೆ.

ವೃಷಭ ರಾಶಿಯ ವಾರ ಭವಿಷ್ಯ
ನಿಮಗೂ ಈ ವಾರ ಸುಲಭವಾಗಿ ಮುಂದುವರೆಯುತ್ತದೆ. ಈ ವಾರ ಪೂರ್ತಿ ಸೂರ್ಯ ಮೂರನೇ ಮನೆಯಲ್ಲಿ ಇದ್ದು ಲಾಭವನ್ನು ಕೊಡುತ್ತಾನೆ. ಲಾಭಸ್ಥಾನದ ರಾಹುವಿನಿಂದಲೂ ಹಣಕಾಸಿನ ನೆರವು ಸಿಗುತ್ತದೆ. ನಾಲ್ಕರಲ್ಲಿ ಬುಧ ಶುಕ್ರ ಇದ್ದು ಇಲ್ಲಿ ಶುಕ್ರ ಅಸ್ತನಾಗಿದ್ದಾನೆ. ಬುಧನೊಬ್ಬನಿಂಲೇ ಅನುಕೂಲಗಳು ಇವೆ. ವಾಹನದಿಂದ ನಷ್ಟ ಇದೆ. ಅನಾವಶ್ಯಕವಾಗಿ ಕೆಲವು ಖರ್ಚುಗಳು ಆಗಿತ್ತದೆ. ಹಿಡಿತ ಇರಲಿ.

ಮಿಥುನ ರಾಶಿಯ ವಾರ ಭವಿಷ್ಯ
ಎರಡನೇ ಮನೆಯಲ್ಲಿ ಸೂರ್ಯ ಮೂರರಲ್ಲಿ ಬುಧ ಶುಕ್ರ ಸಮಯ ಚೆನ್ನಾಗಿ ಇದೆ ಆದರೆ ಈ ವಾರದ ಕೊನೆಯಲ್ಲಿ ಸೂರ್ಯ ಮೂರನೇ ಮನೆಗೆ ಪ್ರವೇಶವಾದ ನಂತರ ನಿಮಗೆ ಇನ್ನಷ್ಟು ಬಲ ಸಿಗುತ್ತದೆ. ಈಗ ಖರ್ಚು ಬಹಳಷ್ಟು ಇದೆ. ಜಾಗ ಬದಲಾವಣೆಯ ಸಾಧ್ಯತೆ ಇದೆ. ವರ್ಗಾವಣೆ ಆಗಬಹುದು/ ಮನೆ ಬದಲಿಸಬಹುದು.

ಕಟಕ ರಾಶಿಯ ವಾರ ಭವಿಷ್ಯ
ಮನೆಯಲ್ಲಿ ಶುಭ ಕಾರ್ಯದ ಸಡಗರ ಸಂಭ್ರಮ ಇರುತ್ತದೆ. ಹಣದ ಹರಿವು ಉತ್ತಮವಾಗಿದೆ. ಮೂರರಲ್ಲಿ ಕೇತು ನಿಮ್ಮ ಬಲವನ್ನು ವೃದ್ಧಿಸುತ್ತಾನೆ. ಎರಡನೇ ಮನೆಯಲ್ಲಿ ಬುಧ ಶುಕ್ರ ಕುಟುಂಬ ಸೌಖ್ಯವನ್ನು ಕೊಡುತ್ತಾರೆ. ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ. ದೇವರ ಕಾರ್ಯ ದಾನ ಧರ್ಮ ಮಾಡುತ್ತೀರಿ. ಗುರುಗಳ ಆಶೀರ್ವಾದ ಸಿಗುವ ಯೋಗ ಇದೆ.

ಸಿಂಹ ರಾಶಿಯ ವಾರ ಭವಿಷ್ಯ
ಮನಸ್ಸಿಗೆ ಏನೋ ಕಸಿವಿಸಿ. ಯಾವ ಕೆಲಸ ಹಿಡಿದರೂ ವೇಗ ಇಲ್ಲ ನಿಧಾನ. ಖರ್ಚುಗಳನ್ನು ನಿಭಾಯಿಸಲು ಆಗುತ್ತಿಲ್ಲ. ವಾಹನ ದಿಂದ ನಷ್ಟ ಇದೆ. ಮನೆಯ ವಾತಾವರಣ ಸಹ ಸಹನೀಯವಾಗಿಇಲ್ಲ. ಎಲ್ಲವೂ ನಿಮಗೆ ವ್ಯತಿರಿಕ್ತವಾಗಿ ಇದೆ ಎಂಬ ಅನಿಸಿಕೆ. ಹೆದರ ಬೇಡಿ. ಗುರುಬಲ ಇಲ್ಲದಿರುವುದರಿಂದ ನಿಧಾನ ಗತಿಯ ಬೆಳವಣಿಗೆ ಇರುತ್ತದೆ. ನಿಮ್ಮ ಕೆಲಸಗಳನ್ನು ಪ್ರಮಾಣಿಕವಾಗಿ ಮಾಡಿ. ಯಾರೊಂದಿಗೂ ಘರ್ಷಣೆ ಬೇಡ.

ಕನ್ಯಾ ರಾಶಿಯ ವಾರ ಭವಿಷ್ಯ
ಈಗ ನಿಮಗೆ ಸಂಪೂರ್ಣ ಗುರುಬಲ ಇದ್ದು, ಎಲ್ಲ ಕೆಲಸಗಳೂ ಹಗುರವಾಗಿ ನೆರವೇರುತ್ತದೆ. ಮನಸ್ಸು ಹಗುರವಾಗಿರುತ್ತದೆ. ಮನೆಯಲ್ಲಿ ಮಂಗಳ ಕಾರ್ಯದ ಸಡಗರ ಇರುತ್ತದೆ. ಲಾಭ ಸ್ಥಾನದಲ್ಲಿ ಬುಧ ಶುಕ್ರ ಇದ್ದು ಹಣಕ್ಕೆ ಕೊರತೆ ಇಲ್ಲ. ಆರನೇ ಮನೆಯಲ್ಲಿ ಶನಿ ಇದ್ದು ಬೇರೆ ಬೇರೆ ಹೂಡಿಕೆಗಳಿಂದ ಹಣ ಹರಿದು ಬರುತ್ತದೆ. ಭಾಗ್ಯಸ್ಥಾನದಲ್ಲಿ ಗುರು ಇದ್ದು ದೇವ ಧರ್ಮಕಾರ್ಯಗಳನ್ನು ಮಾಡುತ್ತೀರಿ.

ತುಲಾ ರಾಶಿಯ ವಾರ ಭವಿಷ್ಯ
ಈಗ ಗುರು ಎಂಟನೇ ಮನೆಯಲ್ಲಿ ಇದ್ದಾನೆ ಹಾಗಾಗಿ ಆರೋಗ್ಯದ ಸಮಸ್ಯೆಗಳು ಕಾಣಿಸಬಹುದು. ರಾಹು ಆರನೇ ಮನೆಯಲ್ಲಿದ್ದು ನಿಮ್ಮ ಮಾನಸಿಕ ಶಕ್ತಿ ಸಾಮರ್ಥ್ಯ ವೃದ್ಧಿಸುತ್ತಾನೆ. ಹಣದ ಅಡಚಣೆ ದೂರ ಮಾಡುತ್ತಾನೆ. ಹಣದ ಹರಿವು ಉತ್ತಮ ಪಡಿಸುತ್ತಾನೆ. ಪಂಚಮ ಶನಿಯಿಂದ ಕೆಲವು ಕಿರಿಕಿರಿಗಳು ಇರುತ್ತದೆ. ಬೆಳವಣಿಗೆಗೆ ಅಡೆತಡೆಯಾಗುತ್ತದೆ. ಹನ್ನೊಂದನೇ ಮನೆಯಲ್ಲಿ ಇರುವ ಬುಧ ಶುಕ್ರರೂ ನಿಮಗೆ ಅನುಕೂಲ ಮಾಡಿಕೊಡುತ್ತಾರೆ.

ವೃಶ್ಚಿಕ ರಾಶಿಯ ವಾರ ಭವಿಷ್ಯ
ಗುರುಬಲ ಇದೆ ಅಡೆತಡೆಗಳು ನಿವಾರಣೆ ಆಗುತ್ತದೆ. ಹಣದ ಹರಿವು ಉತ್ತಮವಾಗುತ್ತದೆ. ಅಭಿವೃದ್ಧಿ ಕೆಲಸಗಳು ಚಾಲನೆ ಪಡೆದುಕೊಳ್ಳುತ್ತದೆ. ಅವಿವಾಹಿತರಿಗೆ ವಿವಾಹ ನಿಷ್ಕರ್ಷೆ ಆಗುತ್ತದೆ. ಮನೆಯಲ್ಲಿ ಶುಭಕಾರ್ಯದ ಸಂಭ್ರಮದ ವಾತಾವರಣ ಇರುತ್ತದೆ. ನೌಕರಿಯಲ್ಲಿ ಬಡ್ತಿ ಇದೆ. ಹನ್ನೊಂದನೇ ಮನೆಯಲ್ಲಿ ಇರುವ ಕೇತು ಸಹ ನಿಮಗೆ ಅನುಕೂಲಕರ ನಾಗಿ ಇದ್ದಾನೆ. ಮಕ್ಕಳಿಂದ ಕೊಂಚ ಮನಸ್ಸಿಗೆ ಕಸಿವಿಸಿ ನೋವು ಆಗುತ್ತದೆ. ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆ ಇದೆ.

ಧನಸ್ಸು ರಾಶಿಯ ವಾರ ಭವಿಷ್ಯ
ಮೂರನೆಯ ಮನೆಯ ಶನಿ ಬಲಿಷ್ಠನಾಗಿದ್ದಾನೆ. ಅತ್ಯಂತ ಶಕ್ತಿಯನ್ನೂ ಜನಪ್ರಿಯತೆಯನ್ನೂ ಹಣವನ್ನು ಕೊಡುತ್ತಾನೆ. ಶತ್ರುಗಳನ್ನು ದೂರ ಮಾಡುತ್ತಾನೆ. ಒಂಬತ್ತನೆಯ ಮನೆಯ ಬುಧ ಶುಕ್ರ ಧರ್ಮ ಕಾರ್ಯ ದೈವ ಕಾರ್ಯ ಮಾಡಿಸುತ್ತಾರೆ. ನಿಮಗೆ ಒಳ್ಳೆಯ ಹೆಸರೂ ಕೀರ್ತಿ ಪ್ರಸಿದ್ಧಿಗಳು ದೊರೆಯುತ್ತದೆ. ನೌಕರಿಯಲ್ಲಿ ಉನ್ನತ ಸ್ಥಾನಮಾನ ಸಿಗುತ್ತದೆ. ಸ್ತ್ರೀಯರ ಮುಖಾಂತರ ಸಹಾಯ ಒದಗಿ ಬರುತ್ತದೆ.

ಮಕರ ರಾಶಿಯ ವಾರ ಭವಿಷ್ಯ
ಈಗ ನಿಮಗೆ ಅದೃಷ್ಟದ ಕಾಲ. ದೈವ ಸಹಾಯ ಗುರುಗಳ ಅನುಗ್ರಹ ಎಲ್ಲವೂ ಇದೆ. ಉನ್ನತ ಮಟ್ಟದ ಅಧಿಕಾರ ಸಿಗುವ ಯೋಗ ಇದೆ. ಸಾಮಾಜಿಕ ಸ್ಥಾನಮಾನ ಪ್ರಸಿದ್ಧಿ ಎಲ್ಲವೂ ನಿಮಗೆ ದೊರೆಯುತ್ತದೆ. ಅಸಾಧ್ಯವಾದದ್ದನ್ನೂ ಸಾಧ್ಯ ಮಾಡಿಕೊಳ್ಳುತ್ತೀರಿ. ಅಪಾರವಾಗಿ ಹಣ ಬರುವ ಯೋಗ ಇದೆ. ಕಷ್ಟದ ದಿನಗಳನ್ನು ಮರೆತು ಬಿಡಿ. ಇನ್ನು ಮುಂದೆ ನಿಮಗೆ ಒಳ್ಳೆಯ ದಿನಗಳೇ. ದಿಗ್ವಿಜಯವನ್ನು ಸಾಧಿಸುತ್ತೀರಿ.

ಕುಂಭ ರಾಶಿಯ ವಾರ ಭವಿಷ್ಯ
ಈಗ ನಾನಾ ಕಾರಣಗಳಿಂದ ಮಾನಸಿಕ ಹಿಂಸೆ ಅವಮಾನಗಳನ್ನು ಅನುಭವಿಸುತ್ತಿದ್ದೀರಿ. ನೀವು ಏನೇ ಮಾಡಿದರೂ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ. ಎಂದೋ ಅಜ್ಞಾನದಿಂದ ಮಾಡಿದ ತಪ್ಪಿಗೆ ಇಂದು ಬೆಲೆ ತೆರಬೇಕಾಗುತ್ತದೆ. ಒಳ್ಳೆಯ ಸಮಯಕ್ಕೆ ನೀವು ಇನ್ನೂ ಕಾಯಬೇಕು. ನಾಲ್ಕನೇ ಮನೆಯಲ್ಲಿ ಗುರು ಮಂಗಳ ಯೋಗದಿಂದ ಆಸ್ತಿ ಜಮೀನಿಗೆ ಸಂಬಂಧಪಟ್ಟ ವಿವಾದಗಳು ತಲೆದೋರುತ್ತದೆ.

ಮೀನ ರಾಶಿಯ ವಾರ ಭವಿಷ್ಯ
ಸಾಡೆಸಾತಿಯ ಮೊದಲ ಹಂತದಲ್ಲಿ ಇರುವ ನಿಮಗೆ ಈಗ ಖರ್ಚುಗಳು ಹೆಚ್ಚು. ಖರ್ಚು ವೆಚ್ಚಗಳನ್ನು ನಿಭಾಯಿಸಲು ಹೆಣಗಬೇಕಾಗುತ್ತದೆ. ಮೂರರಲ್ಲಿ ಇರುವ ಕುಜ ಸ್ವಲ್ಪ ಶಕ್ತಿಯನ್ನು ಕೊಡುತ್ತಾನೆ ಎಂಬುದು ಹೊರತುಪಡಿಸಿ ಬೇರೆ ಯಾವುದೇ ಗ್ರಹಗಳ ಬಲ ಇಲ್ಲ. ಪ್ರತಿಯೊಂದು ನಡೆಯನ್ನು ಎಚ್ಚರಿಕೆಯಿಂದ ಮುನ್ನಡೆಸಿ. ಯಾವುದನ್ನೂ ಸಲೀಸಾಗಿ ನಂಬಬೇಡಿ.












Click it and Unblock the Notifications