Get Updates
Get notified of breaking news, exclusive insights, and must-see stories!

ಮಿಥುನಕ್ಕೆ ಯುಗಾದಿ ಮಸ್ತೋ ಮಸ್ತು, ಆದರೆ ಸುಸ್ತಾದರೆ ವೈದ್ಯರಿಗೆ ತೋರಿಸಿ

ಮೃಗಶಿರಾ ನಕ್ಷತ್ರದ ಮೂರು- ನಾಲ್ಕನೇ ಪದ, ಆರಿದ್ರಾ ನಕ್ಷತ್ರದ ನಾಲ್ಕೂ ಪಾದ ಹಾಗೂ ಪುನರ್ವಸು ಒಂದು, ಎರಡು ಹಾಗೂ ಮೂರನೇ ಪಾದದವರು ಮಿಥುನ ರಾಶಿಗೆ ಬರುತ್ತದೆ. ಬುಧ ಈ ರಾಶಿಯ ಅಧಿಪತಿ. ವಿಳಂಬಿನಾಮ ಸಂವತ್ಸರದಲ್ಲಿ ಈ ಸಂವತ್ಸರ ಪೂರ್ತಿ ಏಳನೇ ಮನೆಯಲ್ಲಿ ಶನಿ ಹಾಗೂ ಅಕ್ಟೋಬರ್ ವರೆಗೆ ಐದನೇ ಮನೆಯಲ್ಲಿ ಗುರು ಗ್ರಹ ಸ್ಥಿತವಾಗಿರುತ್ತದೆ.

ಈ ಸಂವತ್ಸರದಲ್ಲಿ ಮಿಥುನ ರಾಶಿಯವರ ಆದಾಯ 8 ಆದರೆ, ವ್ಯಯ 2 ಇದೆ. ರಾಜ ಪೂಜೆ 4 ಆದರೆ, ರಾಜ ಕೋಪ 3 ಇದೆ. ಇದರ ಫಲ ಹೇಳಬೇಕು ಅಂದರೆ, ಆದಾಯದಲ್ಲಿ ಉಳಿಸುವಂಥ ಅವಕಾಶಗಳು ಕಾಣುತ್ತಿವೆ. ಆದರೆ ಕುಟುಂಬ- ಸ್ನೇಹಿತರ ಮನೆ- ಕಾರ್ಯಕ್ರಮಗಳಲ್ಲಿ ಕೆಲ ಮಟ್ಟಿಗೆ ಅವಮಾನ ಎದುರಿಸಬೇಕಾಗುತ್ತದೆ.

ಆದರೆ, ಹಣ ಉಳಿತಾಯದ ಅವಕಾಶ ತುಂಬ ದೊಡ್ಡ ಮಟ್ಟದಲ್ಲಿ ಕಾಣುತ್ತಿಲ್ಲ. ಸಮಸ್ಯೆ ಇರುವುದು ಸಪ್ತಮ ಸ್ಥಾನದಲ್ಲಿನ ಶನಿಯದು. ಅಂದರೆ ಒಂದೇ ಕೆಲಸಕ್ಕೆ ಹಲವು ಸಲ ಪ್ರಯತ್ನ ಮಾಡಬೇಕಾಗುತ್ತದೆ. ಈ ರಾಶಿಯವರು ವಿದೇಶಕ್ಕೆ ಹೋಗಬೇಕು ಎಂಬ ಪ್ರಯತ್ನದಲ್ಲಿದ್ದರೆ ಕೆಲಸಗಳು ಸಲೀಸಾಗಿ ವಿದೇಶ ಪ್ರಯಾಣ ಯೋಗವಿದೆ. ಇನ್ನು ಸಂತಾನ ಅಪೇಕ್ಷಿಗಳು ಶುಭ ಸುದ್ದಿ ನಿರೀಕ್ಷಿಸಬಹುದು.

ದುಡಿದು, ಉಳಿಸಿದ್ದೆಲ್ಲ ಕುಟುಂಬದ ಸಲುವಾಗಿ ಖರ್ಚಾಗಲಿದೆ

ದುಡಿದು, ಉಳಿಸಿದ್ದೆಲ್ಲ ಕುಟುಂಬದ ಸಲುವಾಗಿ ಖರ್ಚಾಗಲಿದೆ

ಬಹಳ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ಸಂವತ್ಸರ ಇದು. ಜ್ಞಾನ ಸಂಪಾದನೆಗೆ ಅನುಕೂಲವಾದ ವಾತಾವರಣ. ಅಕ್ಟೋಬರ್ ವರೆಗೆ ಒಳ್ಳೆ ಕಾಲ. ಆದರೆ ಈ ಸಲ ನಿಮ್ಮ ಆದಾಯದಲ್ಲಿ ಉಳಿಯಬಹುದಾದ ಎಲ್ಲವೂ ಕುಟುಂಬದಲ್ಲಿನ ಶುಭ ಕಾರ್ಯಗಳಿಗೆ ವ್ಯಯ ಆಗುತ್ತದೆ. ಮನೆ ಕಟ್ಟುವ, ಮದುವೆ ಮಾಡುವ ಆಲೋಚನೆಗಳಿದ್ದರೆ ಅದಕ್ಕೆ ನಿಮ್ಮಿಂದ ಹಣ ಖರ್ಚಾಗುತ್ತದೆ. ವೃಷಭ ರಾಶಿಯವರು ಈ ಸಂವತ್ಸರದಲ್ಲಿ ರಾಜಕೀಯವಾಗಿ ಉನ್ನತಿ- ಯಶಸ್ಸು ಕಾಣಬಹುದು.

ಮಾತು ಕೇಳುತ್ತಿಲ್ಲ ಎಂಬ ಬೇಸರ ಬೇಡ

ಮಾತು ಕೇಳುತ್ತಿಲ್ಲ ಎಂಬ ಬೇಸರ ಬೇಡ

ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವವರಿಗೆ ಲಾಭ ಇದೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ, ಅಧ್ಯಾಪಕರಿಗೆ, ವಕೀಲರಿಗೆ ಬಹಳ ಉತ್ತಮ ಸಮಯ. ಇನ್ನೊಂದು ವಿಚಾರ ನೆನಪಿಟ್ಟುಕೊಳ್ಳಿ, ಹಣ ಕೊಟ್ಟವನು ನಾನು. ಆದರೆ ನನ್ನ ಅಭಿಪ್ರಾಯಕ್ಕೆ ಮನ್ನಣೆ ಕೊಡುತ್ತಿಲ್ಲವಲ್ಲ ಎಂಬ ಬೇಸರ ಇರುತ್ತಿದೆ. ಇನ್ನು ದೈಹಿಕವಾಗಿ ತೂಕ ಇಳಿದರೆ ಒಂದಿಷ್ಟು ಗಮನ ಕೊಡಿ. ಮಧುಮೇಹದ ಪರೀಕ್ಷೆ ಮಾಡಿಸಿಕೊಳ್ಳಿ.

ಸಂವತ್ಸರದ ಅಂತ್ಯಕ್ಕೆ ಒಂದಿಷ್ಟು ಸಮಸ್ಯೆಗಳು

ಸಂವತ್ಸರದ ಅಂತ್ಯಕ್ಕೆ ಒಂದಿಷ್ಟು ಸಮಸ್ಯೆಗಳು

ವಿಳಂಬಿನಾಮ ಸಂವತ್ಸರದ ಅಂತ್ಯ ಕಾಲಕ್ಕೆ ಸರಿದಂತೆ ಹೊಟ್ಟೆಗೆ ಸಂಬಂಧಿಸಿದಂತೆ ಕೆಲವು ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಉದ್ಯೋಗದ ವಿಚಾರದಲ್ಲೂ ಅಲ್ಪ- ಸ್ವಲ್ಪ ಸಮಸ್ಯೆ ಕಾಣಿಸಿಕೊಳ್ಳಲಿದೆ. ಕೆಲಸ ಬದಲಿಸುವ ಆಲೋಚನೆ ಇದ್ದರೆ ಸಂವತ್ಸರದ ಆದಿಯಲ್ಲೇ ಮಾಡಿ. ಅಕ್ಟೋಬರ್ ನಂತರ ಪ್ರಯತ್ನಿಸಿ, ಹಿನ್ನಡೆ ಆದರೆ ಚಿಂತೆ ಜಾಸ್ತಿ ಆಗುತ್ತದೆ.

ಖರ್ಚು ಮಾಡಿದ್ದನ್ನು ಎದುರಿಗೇ ಲೆಕ್ಕ ಹೇಳಲು ಹೋಗಬೇಡಿ

ಖರ್ಚು ಮಾಡಿದ್ದನ್ನು ಎದುರಿಗೇ ಲೆಕ್ಕ ಹೇಳಲು ಹೋಗಬೇಡಿ

ಮಿಥುನ ರಾಶಿಯವರಿಗೆ ಒಂದು ಮುಖ್ಯ ಸಲಹೆ ಏನೆಂದರೆ, ಹಣ ಉಳಿತಾಯದ ವಿಚಾರದಲ್ಲಿ ಬಹಳ ಬುದ್ಧಿವಂತಿಕೆ ಮಾಡುವ ಪ್ರಯತ್ನದಲ್ಲಿ ಇರ್ತೀರಿ. ಅದು ತಪ್ಪಲ್ಲ. ಆದರೆ ತಂದೆ-ತಾಯಿ, ಹೆಂಡತಿ-ಮಕ್ಕಳು, ಅತ್ತೆ-ಮಾವ ಹಾಗೂ ಹತ್ತಿರದ ಬಂಧುಗಳಿಗೆ ಮಾಡಿದ ಖರ್ಚನ್ನು ಅವರೆದುರು ಲೆಕ್ಕ ಹೇಳೋದು, ತಮಾಷೆ ಮಾಡುವುದು ಖಂಡಿತಾ ಬೇಡ. ನೀವು ಅವರಿಗೆ ಮಾಡಿದ ಖರ್ಚು ಇಷ್ಟು ಎಂದು ಹೇಳಿ, ಬೇಸರಕ್ಕೆ ಕಾರಣವಾಗಬೇಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+