Self Love: ತಮ್ಮನ್ನೇ ತಾವು ಪ್ರೀತಿಸುವುದರಲ್ಲಿ ಈ ಐದು ರಾಶಿಯವರು ಪಂಟರು
ಜ್ಯೋತಿಷ್ಯದಲ್ಲಿರುವ ಹನ್ನೆರಡು ರಾಶಿಗಳಿಗಳು ವಿಭಿನ್ನ, ಅವುಗಳು ತಮ್ಮದೇ ಆದ ಗುಣ, ನಡೆತೆ ಹಾಗೂ ದೋಷಗಳನ್ನು ಹೊಂದಿರುತ್ತದೆ. ಎಲ್ಲಾ ರಾಶಿಯಲ್ಲೂ ಎಲ್ಲಾ ರೀತಿಯ ಗುಣಗಳು, ದೋಷಗಳು ಇರುತ್ತದೆ. ಗ್ರಹಗಳ ಚಲನೆಯ ಮೇಲೆ ಸ್ವಭಾವಗಳು ಬದಲಾಗುತ್ತದೆ. ಆದರೆ ಕೆಲವೊಂದು ರಾಶಿಯವರು, ಕೆಲವೊಂದು ಗುಣಗಳನ್ನು ಹೆಚ್ಚಾಗಿ ಹೊಂದಿರುತ್ತಾರೆ.
ಉದಾಹರಣೆಗೆ ಕೆಲವು ರಾಶಿಯವರು ಬೇರೆಯವರನ್ನು ಹೊಗಳುತ್ತಾರೆ, ತಮ್ಮ ಮೇಲೆ ತಮಗೆ ಅಸಮಾಧಾನ ಹೊಂದಿರುತ್ತಾರೆ. ತಮ್ಮ ಸ್ವಂತ ಶಕ್ತಿಯ ಮೇಲೆ ನಂಬಿಕೆ ಕಳೆದುಕೊಂಡಿರುತ್ತಾರೆ. ಆದರೆ ಕೆಲವು ರಾಶಿಯವರು ತಮ್ಮ ಮೇಲೆ ತಾವು ಅತಿಯಾದ ನಂಬಿಕೆ ಹೊಂದಿರುತ್ತಾರೆ. ಜೊತೆಗೆ ತಮಗೆ ತಾವೇ ಹೆಚ್ಚು ಪ್ರಮುಖ್ಯತೆಯನ್ನು ಕೊಡುತ್ತಾರೆ. ಅಲ್ಲದೇ ಬೇರೆಯವರ ಮುಂದೆ ತಮ್ಮನ್ನೂ ತಾವೂ ಎಂದಿಗೂ ಬಿಟ್ಟುಕೊಡುವುದಿಲ್ಲ.
ಇಂತಹ ಸ್ವಆರಾಧನೆ, ಆತ್ಮರತಿ ಹೊಂದಿರುವರು ನಮ್ಮ ನಿಮ್ಮ ನಡುವೆಯೂ ಹಲವು ಮಂದಿ ಇರುತ್ತಾರೆ. ತಮ್ಮ ಬಗ್ಗೆ ತಾವೇ ಅತಿ ಪ್ರೀತಿ ಹೊಂದಿರುವವರಂತೆ, ತಮ್ಮನ್ನು ತಾವು ಹೊಳುವವರು ಯಾವ ರಾಶಿಯವರು ಎನ್ನುವ ಮಾಹಿತಿ ಇಲ್ಲಿದೆ. ಈ ಕೆಳಗಿ ರಾಶಿಯವರು ಸ್ವಆರಾಧನೆಯಲ್ಲಿ ನಿಪುಣರಾಗಿರುತ್ತಾರೆ.

ಮೇಷ ರಾಶಿ
ರಾಶಿಚಕ್ರದ ಮೊದಲ ಚಿಹ್ನೆ ಮೇಷ ರಾಶಿ. ಈ ರಾಶಿಯ ಜನರು ಮಂಗಳ ಗ್ರಹದಿಂದ ಪ್ರಭಾವಿತರಾಗಿರುತ್ತಾರೆ. ಬೆಂಕಿಯ ಅಂಶವಾಗಿರುವ ಈ ರಾಶಿ ರಾಶಿಚಕ್ರ ಚಿಹ್ನೆಯಲ್ಲಿ ಬಹಳ ಪ್ರಾಬಲ್ಯವೆಂದು ಪರಿಗಣಿಸಲಾಗುತ್ತದೆ. ಈ ರಾಶಿಚಕ್ರದ ಜನರು ಎಲ್ಲರ ಗಮನದಲ್ಲಿರಲು ಬಯಸುತ್ತಾರೆ. ಎಲ್ಲರ ಮುಂದೆ ಕೇಂದ್ರ ಬಿಂದುವಾಗಲು ಬಯಸುತ್ತಾರೆ. ಇದು ಸ್ವಆರಾಧನೆಯ ಮೊದಲ ಹಂತ ಇರಬಹುದು. ಮೇಷ ರಾಶಿಯ ಜನರು ತಮ್ಮ ಮೇಲಿನ ಭರವಸೆಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಜೊತೆಗೆ ಇತರರ ಮೆಚ್ಚುಗೆ ಹಾಗೂ ಮನ್ನಣೆಯನ್ನು ಬಯಸುತ್ತಾರೆ. ಈ ರಾಶಿಯವರಿಗೆ ನಾಯಕತ್ವದ ಕಡೆಗೆ ಒಲವು ಇರುತ್ತದೆ.

ಸಿಂಹ ರಾಶಿ
ಸಿಂಹ ರಾಶಿಚಕ್ರದ ಆಳುವ ಗ್ರಹವು ಸೂರ್ಯನಾಗಿರುವುದರಿಂದ ಅವರು ಜನರ ಮೇಲೆ ಪ್ರಾಬಲ್ಯವನ್ನು ಸಾಧಿಸುವುದು ಸಹಜ. ಈ ರಾಶಿಯವರು ಆತ್ಮವಿಶ್ವಾಸ ಮತ್ತು ಮಹತ್ವಾಕಾಂಕ್ಷೆಯನ್ನು ಹೆಚ್ಚಾಗಿ ಹೊಂದಿರುತ್ತಾರೆ. ಜೊತೆಗೆ ಜನರು ತಮ್ಮನ್ನು ಗಮನಿಸುವುದನ್ನು ಹೆಚ್ಚು ಮಾಡಿಕೊಳ್ಳುವ ಕೌಶಲ್ಯವನ್ನು ಸಹ ಹೊಂದಿರುತ್ತಾರೆ. ಆದರೆ ಈ ರಾಶಿಯ ವ್ಯಕ್ತಿಗಳು ನಿರಂತರ ಮೆಚ್ಚುಗೆ ಬಯಸುವುದರಿಂದ ಕೆಲವೊಮ್ಮೆ ಅವರು ಸ್ವಆರಾಧನೆಯವರಂತೆ ಕಾಣುತ್ತಾರೆ. ಅವರಲ್ಲಿ ಸೆಲ್ಫ್ ಲವ್ ಹೆಚ್ಚಿದೆ ಎಂದು ಪ್ರಕಟವಾಗುತ್ತದೆ.ಇತರರಿಗೆ ಪರಿಗಣನೆಯ ಜೊತೆಗೆ ತಮ್ಮ ಸ್ವ-ಪ್ರೀತಿಯನ್ನು ಸಮತೋಲನಗೊಳಿಸುವುದು ಈ ರಾಶಿಯವರಿಗೆ ಅತ್ಯಗತ್ಯವಾಗಿದೆ.

ಮಿಥುನ ರಾಶಿ
ಮಿಥುನ ರಾಶಿಯವರು ತಮ್ಮ ದ್ವಂದ್ವ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿರುತ್ತಾರೆ. ಅವರ ದ್ವಂದ್ವತೆಯು ಇತರರನ್ನು ಆಕರ್ಷಿಸಿದರೂ ಇದು ಸ್ವಆರಾಧನೆ ಅಥವಾ ಸೆಲ್ಫ್ ಲವ್ ಪ್ರವೃತ್ತಿಗಳಿಗೆ ಕಾರಣವಾಗಬಹುದು. ಮಿಥುನ ರಾಶಿಯವರು ಅತ್ಯುತ್ತಮ ಸಂವಹನಕಾರರು ಮತ್ತು ಸಂದರ್ಭಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕುಶಲತೆಯಿಂದ ನಿರ್ವಹಿಸುವ ಜಾಣ್ಮೆಯನ್ನು ಹೊಂದಿರುತ್ತಾರೆ. ಈ ಪ್ರತಿಭೆಯನ್ನು ಕೆಲವೊಮ್ಮೆ ಸ್ವಯಂ ಉದ್ದೇಶಗಳಿಗಾಗಿ ಬಳಸಬಹುದು, ಇದರಿಂದಾಗಿ ಅವರು ಸ್ವ-ಪ್ರೀತಿ ಹೆಚ್ಚಾಗಿರುವಂತೆ ಕಾಣಿಸಿಕೊಳ್ಳುತ್ತಾರೆ. ಮಿಥುನ ರಾಶಿಯವರು ಹೆಚ್ಚಾಗಿ ಪೂರ್ಣ ಪ್ರಮಾಣದ ಸ್ವಆರಾಧನೆ ವ್ಯಕ್ತಿತ್ವವಾಗಿ ಬದಲಾಗದಂತೆ ಎಚ್ಚರಿಕೆ ವಹಿಸಬೇಕು.

ವೃಷಭ ರಾಶಿ
ವೃಷಭ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಜೀವನದಲ್ಲಿ ಸ್ಥಿರತೆ ಹಾಗೂ ವಿಶ್ವಾಸ ಹೊಂದಿರುತ್ತಾರೆ ಆದರೆ ಅವರ ಮೊಂಡುತನ ಮತ್ತು ಕೆಲವು ಸ್ವಭಾವವು ಕೆಲವೊಮ್ಮೆ ಸ್ವಆರಾಧನೆ (ನಾರ್ಸಿಸಿಸ್ಟಿಕ್) ನಡವಳಿಕೆಗೆ ಕಾರಣವಾಗಬಹುದು.
ಮೇಷ ಅಥವಾ ಸಿಂಹ ರಾಶಿಯವರು ಮಾಡುವ ರೀತಿಯಲ್ಲಿ ಅವರು ಎಲ್ಲರ ಗಮನ ಸೆಳೆಯದಿದ್ದರೂ, ತಮ್ಮ ಇಚ್ಛೆಗಳನ್ನು ಪೂರೈಸಿಕೊಳ್ಳುವಲ್ಲಿ ಹೆಚ್ಚಿನ ಪ್ರಯತ್ನ ನಡೆಸುತ್ತಾರೆ. ಹೀಗಾಗಿ ಜನರ ಎದುರು ಸೆಲ್ಫ್ ಲವ್ ಹೆಚ್ಚಾಗಿ ಇರುವವರಂತೆ ಪ್ರಕಟಗೊಳ್ಳುತ್ತಾರೆ.

ಮಕರ ರಾಶಿ
ಮಕರ ರಾಶಿಯವರು ಕೆಲಸದಲ್ಲಿ ಸ್ವಯಂ ನೀತಿ ಮತ್ತು ನಿರ್ಣಯಕ್ಕೆ ಹೆಸರುವಾಸಿಯಾಗಿರುತ್ತಾರೆ. ಇದು ಕೆಲವೊಮ್ಮೆ ಸ್ವಆರಾಧನೆಗೆ ಕಾರಣವಾಗಬಹುದು. ಅವರು ಮಹತ್ವಾಕಾಂಕ್ಷೆಯುಳ್ಳವರಾಗಿರುತ್ತಾರೆ. ಮತ್ತು ತಮ್ಮ ಗುರಿಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಈ ರಾಶಿಯವರು ಸಂಬಂಧಗಳು ಮತ್ತು ಭಾವನೆಗಳಿಗಿಂತ ತಮ್ಮ ವೈಯಕ್ತಿಕ ಸಾಧನೆಗಳಿಗೆ ಆದ್ಯತೆ ನೀಡಬಹುದು. ಹೀಗಾಗಿ ಇವರು ಸೆಲ್ಫ್ ಲವ್ ಇರುವವರಂತೆ ಪ್ರಕಟಗೊಳ್ಳುತ್ತಾರೆ.
(ಸೂಚನೆ-ಈ ಮೇಲಿನ ವಿಷಯಗಳನ್ನು ಅಂತರ್ಜಾಲದ ಮಾಹಿತಿ ಆಧಾರಿಸಿದೆ.ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಹೆಚ್ಚಿನ ಮಾಹಿತಿಗಾಗಿ ಜ್ಯೋತಿಷ್ಯ ಕ್ಷೇತ್ರದ ಪರಿಣಿತರಾದವರನ್ನು ಸಂಪರ್ಕಿಸುವುದು ಉತ್ತಮ)












Click it and Unblock the Notifications