Shukra Gochara: ಸೆಪ್ಟೆಂಬರ್ 2ರ ನಂತರ ಈ ರಾಶಿಯವರಿಗೆ ಕೋಟ್ಯಾಧಿಪತಿ ಯೋಗ: ಅನಿರೀಕ್ಷಿತವಾಗಿ ಹರಿದು ಬರಲಿದೆ ಹಣ
ಜ್ಯೋತಿಷ್ಯದ ಪ್ರಕಾರ, ಶುಕ್ರನು ಸೌಕರ್ಯ, ಸಂಪತ್ತು, ವೈಭವ, ಪ್ರೀತಿ, ಕಲೆ, ವ್ಯವಹಾರ ಮತ್ತು ಭೌತಿಕ ಸುಖಗಳಿಗೆ ಕಾರಣನಾಗುವ ಗ್ರಹ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಶುಕ್ರನು ಸೆಪ್ಟೆಂಬರ್ 2, 2026 ರ ಮಧ್ಯಾಹ್ನ 1:51 ಕ್ಕೆ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ತುಲಾ ರಾಶಿಯನ್ನು ಶುಕ್ರನ ಮೂಲತ್ರಿಕೋನ ರಾಶಿ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯ ದೃಷ್ಟಿಕೋನದಿಂದ ಈ ಗ್ರಹ ಸಂಚಾರವನ್ನು ಬಹಳ ಮುಖ್ಯ ಎಂದು ಕೂಡಾ ಪರಿಗಣಿಸಲಾಗುತ್ತದೆ.
ತುಲಾ ರಾಶಿಗೆ ಪ್ರವೇಶಿಸುವ ಶುಕ್ರನು ಬೇರೆ ಬೇರೆ ರಾಶಿಯವರ ಜೀವನದಲ್ಲಿ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತಾನೆ. ಸಂಬಂಧಗಳು, ಹಣಕಾಸು ಮತ್ತು ವೃತ್ತಿಪರ ಜೀವನಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು. ನಿರ್ದಿಷ್ಟವಾಗಿ ನಾಲ್ಕು ರಾಶಿಯವರ ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚಿನ ಲಾಭವಾಗುವ ಅವಕಾಶಗಳಿವೆ.

ಶುಕ್ರ ಗ್ರಹವು ತುಲಾ ರಾಶಿಯಲ್ಲಿ ತನ್ನ ಚಲನೆಯನ್ನು ಆರಂಭಿಸುವ ಮೂಲಕ ಶುಭ ಯೋಗದಿಂದ ಕೆಲವು ರಾಶಿಯವರಿಗೆ ಸಾಕಷ್ಟು ಶುಭ ಫಲ ಸಿಗಲಿದೆ. ಸುಖ, ಸಮೃದ್ಧಿ, ಧನ, ಸಂಪತ್ತು ಹೆಚ್ಚಾಗುವ ಮೂಲಕ ಐಶಾರಾಮಿ ಜೀವನ ಒಲಿದು ಬರುವುದು. ಶುಕ್ರನ ಈ ರಾಶಿ ಬದಲಾವಣೆಯಿಂದಾಗಿ ಐದು ರಾಶಿಯವರ ಅದೃಷ್ಟ ಹೆಚ್ಚಾಗುವುದು.
ಮೇಷ ರಾಶಿ (Aries)
ತುಲಾ ರಾಶಿಗೆ ಶುಕ್ರನ ಪ್ರವೇಶವು ಪಾಲುದಾರಿಕೆ ವ್ಯವಹಾರದಲ್ಲಿ ಲಾಭಕ್ಕೆ ಕಾರಣವಾಗುವುದು. ವೃತ್ತಿಪರ ಸಂಬಂಧಗಳ ವಿಷಯದಲ್ಲಿಯೂ ಈ ಸಂಚಾರ ಮುಖ್ಯವಾಗಿರುವುದು. ಹೊಸ ವ್ಯಾಪಾರ ಪಾಲುದಾರರೊಂದಿಗೆ ಕೆಲಸ ಮಾಡುವ ಅವಕಾಶ ಸಿಗಬಹುದು. ವ್ಯಾಪಾರ ಒಪ್ಪಂದಗಳಲ್ಲಿ ಲಾಭವಾಗುವುದು. ಉದ್ಯೋಗಿಗಳಿಗೆ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಬೆಂಬಲ ಸಿಗುವುದು. ಹೊಸ ಉದ್ಯೋಗಗಳಿಗಾಗಿ ಪ್ರಯತ್ನಿಸುವವರಿಗೆ ಯಶಸ್ಸು ಸಿಗುವುದು. ನಿರುದ್ಯೋಗಿಗಳಿಗೂ ಉದ್ಯೋಗ ಸಿಗುವ ಸಾಧ್ಯತೆ ಇದೆ. ವೈಯಕ್ತಿಕ ಸಂಬಂಧಗಳಲ್ಲಿ ಸಾಮರಸ್ಯ ಹೆಚ್ಚಾಗುವುದು.
ಮಿಥುನ ರಾಶಿ (Gemini)
ಮಿಥುನ ರಾಶಿಯವರಿಗೆ ಶುಕ್ರನ ಈ ಸಂಚಾರ ಹೆಚ್ಚಿನ ಪ್ರಯೋಜನವನ್ನು ನೀಡುವುದು. ಆರ್ಥಿಕ ಸ್ಥಿತಿಯಲ್ಲಿ ದೊಡ್ಡಮಟ್ಟದ ಸುಧಾರಣೆಯಾಗುವುದು. ಹಣಕಾಸಿನ ತೊಂದರೆಗಳಿಗೆ ಪರಿಹಾರ ಸಿಗುವುದು. ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುವುದು. ಅಂದುಕೊಂಡ ಕೆಲಸ ಸಾಧಿಸುವಿರಿ. ಉನ್ನತ ಶಿಕ್ಷಣ ಮುಂದುವರೆಸುವುದಕ್ಕೂ ಸೂಕ್ತ ಸಮಯ.
ಕನ್ಯಾರಾಶಿ (virgo)
ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಈ ಸಂಚಾರ ಬಹಳ ಮುಖ್ಯವಾಗಿರುವುದು. ಆದಾಯ ಹೆಚ್ಚಳಕ್ಕೆ ಹೊಸ ಮಾರ್ಗಗಳು ಸಿಗುವುದು. ತುಂಬಾ ಸಮಯದಿಂದ ಹೊರಗಡೆ ಸಿಕ್ಕಿ ಹಾಕಿಕೊಂಡಿರುವ ಹಣ ವಾಪಸ್ ಬರುವುದು. ಸಾಲದಿಂದಲೂ ಮುಕ್ತಿ ಸಿಗುವುದು. ಕೆಲಸದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವುದು. ಹೊಸ ಜವಾಬ್ದಾರಿಗಳೊಂದಿಗೆ ಬಡ್ತಿ ಸಿಗುವುದು. ಸಂಬಳವೂ ಹೆಚ್ಚಾಗುವುದು. ವ್ಯವಹಾರ ವಿಸ್ತರಣೆಗೆ ಅವಕಾಶ ಸಿಗುವುದು. ಆದರೂ ಹೂಡಿಕೆ ಮಾಡುವಾಗ ಆತುರಪಡಬೇಡಿ.
ಮಕರ ರಾಶಿ (Capricorn)
ವೃತ್ತಿಪರ ಜೀವನದಲ್ಲಿ ಅತ್ಯಂತ ನಿರ್ಣಾಯಕ ಸಮಯವಾಗಿರುವುದು. ಕಚೇರಿಯಲ್ಲಿ ಜವಾಬ್ದಾರಿಗಳು ಹೆಚ್ಚಾಗುವುದು. ಕಚೇರಿಯಲ್ಲಿ ಉನ್ನತ ಸ್ಥಾನಮಾನ ಸಿಗುವುದು. ಉದ್ಯಮಿಗಳಿಗೆ ವ್ಯಾಪಾರ ವ್ಯವಹಾರದಲ್ಲಿ ದೊಡ್ಡ ಮಟ್ಟದ ಲಾಭವಾಗುವುದು. ವ್ಯವಹಾರ ವಿಸ್ತರಿಸಲು ಬಯಸಿದರೆ ಇದು ಸರಿಯಾದ ಸಮಯ. ಈ ಸಮಯದಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಬಹುದು. ಆರ್ಥಿಕ ಸ್ಥಿತಿ ಸುಧಾರಿಸುವುದು. ಹೊಸ ಹೊಸ ಅವಕಾಶಗಳು ಸಿಗಬಹುದು.
ಕುಂಭ ರಾಶಿ (Aquarius)
ಶುಕ್ರನ ಸಂಚಾರವು ಅದೃಷ್ಟ ಮತ್ತು ಪ್ರಗತಿಗೆ ಕಾರಣವಾಗುವುದು. ವೃತ್ತಿಪರ ಅಭಿವೃದ್ಧಿಗೆ ಹೊಸ ಅವಕಾಶಗಳು ಸಿಗಬಹುದು. ಉದ್ಯೋಗಗಳನ್ನು ಬದಲಾಯಿಸುವ ಬಗ್ಗೆ ಯೋಚಿಸಬಹುದು. ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಯೋಚಿಸುತ್ತಿರುವವರಿಗೆ ಸಕಾರಾತ್ಮಕ ಫಲಿತಾಂಶ ಸಿಗಬಹುದು. ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರ ಭವಿಷ್ಯದಲ್ಲಿ ಲಾಭದಾಯಕವಾಗಬಹುದು. ವಿದ್ಯಾರ್ಥಿಗಳಿಗೂ ಈ ಸಮಸಯ ಅನುಕೂಲಕರವಾಗಿರುವುದು.


Click it and Unblock the Notifications
