ತುಟಿ ಬಿಟ್ಟುಕೊಡುವ ಗುಟ್ಟು, ಇದು ಹೆಣ್ಣುಮಕ್ಕಳ ಆಂತರ್ಯ

By: ಶಂಕರ್ ಭಟ್
Subscribe to Oneindia Kannada

ಸಾಮುದ್ರಿಕಾ ಶಾಸ್ತ್ರ ಸರಣಿಯ ಮುಂದುವರಿದ ಭಾಗವಿದು. ಹೆಣ್ಣುಮಕ್ಕಳ ಹಣೆ, ಕಣ್ಣು ಹಾಗೂ ತಲೆಗೂದಲನ್ನು ನೋಡಿ ಹೇಳಬಹುದಾದ ನಡವಳಿಕೆಗಳ ಬಗ್ಗೆ ಸರಣಿಯ ಈ ಹಿಂದಿನ ಲೇಖನಗಳಲ್ಲಿ ಓದಿರುತ್ತೀರಿ. ಒಂದು ವೇಳೆ ಅವುಗಳನ್ನು ಓದಿಲ್ಲ ಅಂತಾದರೆ ಒಮ್ಮೆ ಅವುಗಳ ಮೇಲೆ ಕಣ್ಣು ಹಾಯಿಸಿದರೆ ಇಂದಿನ ಲೇಖನ ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಕಾರಿ ಆಗುತ್ತದೆ.

ಮಹಿಳೆಯರ ತಲೆಕೂದಲು ನೋಡಿ, ಭವಿಷ್ಯ ತಿಳಿದುಕೊಳ್ಳಿ

ಅಂದಹಾಗೆ ಇಂದಿನ ಲೇಖನದಲ್ಲಿ ಮಹಿಳೆಯರ ತುಟಿಯನ್ನು ನೋಡಿ ಹೇಳಬಹುದಾದ ಭವಿಷ್ಯದ ಬಗ್ಗೆ ತಿಳಿದುಕೊಳ್ಳಿ. ಸಾಮುದ್ರಿಕಾ ಶಾಸ್ತ್ರ ಎಂಬುದು ವಿಜ್ಞಾನ. ಇನ್ನು ಮಹಿಳೆಯ ಸೌಂದರ್ಯಕ್ಕೆ ಇನ್ನಷ್ಟು ಚಂದವನ್ನು ತುಂಬುವುದು ತುಟಿ. ಸಾಮುದ್ರಿಕಾ ಶಾಸ್ತ್ರ ಎಂಬ ವಿಜ್ಞಾನದ ಮೂಲಕ ತುಟಿಯನ್ನು ನೋಡಿ ಹೇಳಬಹುದಾದ ಗುಣಾವಗುಣಗಳನ್ನು ತಿಳಿಸುವ ಪ್ರಯತ್ನವಿದು.

ಸಾಮುದ್ರಿಕಾ ಶಾಸ್ತ್ರ: ಭವಿಷ್ಯ ನುಡಿಯುವ ಹೆಣ್ಣಿನ ಕಣ್ಣುಗಳು

ಸಿಟ್ಟಾದಾಗ ತುಟಿ ಕೊಂಕಿಸಿ, ತಪ್ಪಾದಾಗ ತುಟಿ ಕಚ್ಚಿ, ಹೆಚ್ಚಿಗೆ ಮಾತನಾಡಿದಾಗ ತುಟಿಗೆ ಮೀರಿದ ಹಲ್ಲು ಎನಿಸಿಕೊಂಡು ಹೀಗೆ ನಾನಾ ಬಗೆಯಲ್ಲಿ ತುಟಿಯ ಪ್ರಸ್ತಾವ ಆಗುತ್ತದೆ. ಅಂಥ ತುಟಿಯನ್ನು ನೋಡಿ ಎಂಥ ಭವಿಷ್ಯ ತಿಳಿಯಬಹುದು ಎಂಬ ಕುತೂಹಲ ಖಂಡಿತಾ ಇರುತ್ತದಲ್ಲವೇ? ಹಾಗಿದ್ದರೆ ಮುಂದಿನ ಸ್ಲೈಡ್ ಗಳನ್ನು ಓದಿ.

ಕಪ್ಪು ತುಟಿ

ಕಪ್ಪು ತುಟಿ

ಮಹಿಳೆಯ ತುಟಿ ಕಪ್ಪಾಗಿದ್ದರೆ ಅಂಥವರು ಬುದ್ಧಿವಂತೆಯರಾಗಿರುತ್ತಾರೆ. ತುಂಬ ವೇಗವಾಗಿ ಓದಬಲ್ಲವರಾಗಿರುತ್ತಾರೆ. ತಾವು ಹೇಳಬೇಕಾದ್ದನ್ನು ನಿಖರವಾಗಿ ಸಂವಹನ ಮಾಡುತ್ತಾರೆ. ತಮ್ಮ ಪತಿಯ ಸೇವೆ ಮಾಡುತ್ತಾರೆ. ಈ ಮಹಿಳೆಯರ ತಾರ್ಕಿಕ ಸಾಮರ್ಥ್ಯ ಹೆಚ್ಚಿರುತ್ತದೆ.

ದಪ್ಪ ತುಟಿಯಿರುವವರು

ದಪ್ಪ ತುಟಿಯಿರುವವರು

ಯಾವ ಮಹಿಳೆಯ ತುಟಿ ದಪ್ಪವಾಗಿರುತ್ತದೋ ಅಂಥವರು ಅಸಾಂಪ್ರದಾಯಿಕ ನಡವಳಿಕೆ ಹೊಂದಿರುತ್ತಾರೆ. ಇವರ ಕೋಪ ತುಂಬ ತೀಕ್ಷ್ಣವಾಗಿರುತ್ತದೆ. ಈ ಗುಣವನ್ನು ಸರಿಪಡಿಸುವುದು ಕಷ್ಟವಾದ್ದರಿಂದ ಕೆಲ ಬಾರಿ ಒತ್ತಡಕ್ಕೆ ಕಾರಣವಾಗುತ್ತದೆ.

ಕೆಂಪು ತುಟಿ

ಕೆಂಪು ತುಟಿ

ತುಟಿ ಕೆಂಪು ಬಣ್ಣದಿಂದ ಕೂಡಿದ್ದರೆ ಅಥವರಿಗೆ ತುಂಬ ಸುಂದರ ಹಾಗೂ ಬುದ್ಧಿವಂತ ಗಂಡುಮಕ್ಕಳ ಜನನವಾಗುತ್ತದೆ. ಬಾಹ್ಯಾಕಾಶ ಹಾಗೂ ಗ್ರಹಗಳಿಗೆ ಸಂಬಂಧಪಟ್ಟ ಸಂಶೋಧನೆಯಲ್ಲಿ ಉತ್ತಮ ಕೆಲಸ ಮಾಡುತ್ತಾರೆ. ಉನ್ನತ ಶಿಕ್ಷಣ ಸಿಕ್ಕರೆ ಇವರಲ್ಲಿನ ಅಹಂಕಾರ ಭಾವ ಹೆಚ್ಚಾಗುತ್ತದೆ.

ತುಟಿ ಕೆಳಗೆ ಕಂದು ಬಣ್ಣದ ಕೂದಲು

ತುಟಿ ಕೆಳಗೆ ಕಂದು ಬಣ್ಣದ ಕೂದಲು

ಯಾವ ಮಹಿಳೆಗೆ ತುಟಿಯ ಕೆಳಗೆ ಅಲ್ಪ ಪ್ರಮಾಣದ ಕೂದಲಿರುತ್ತದೋ ಅಂತಹವರು ಬೇರೆಯವರಿಂದ ಕೆಲಸ ಮಾಡಿಸಿಕೊಳ್ಳುವಲ್ಲಿ ನಿಸ್ಸೀಮರಾಗಿರುತ್ತಾರೆ. ಆದರೆ ಮೊಂಡುತನದ ಸ್ವಭಾವ ಇರುತ್ತದೆ. ತಮ್ಮ ಅತ್ತೆಯ ಸೇವೆ ಮಾಡುವವರಾಗಿರುತ್ತಾರೆ ಮತ್ತು ಪತಿಯನ್ನು ಸಂತುಷ್ಟರನ್ನಾಗಿ ಮಾಡುತ್ತಾರೆ. ಕಲಾತ್ಮಕ ಕೆಲಸ ಮಾಡುವುದರಲ್ಲಿ ಪರಿಣತರಾಗಿರುತ್ತಾರೆ. ಬೆಟ್ಟ ಪ್ರದೇಶಗಳಿಗೆ ಭೇಟಿ ನೀಡುವುದನ್ನು ಇಷ್ಟಪಡುತ್ತಾರೆ.

ತೆಳುವಾದ ತುಟಿ

ತೆಳುವಾದ ತುಟಿ

ತೆಳುವಾದ ಹಾಗೂ ತಿಳಿ ಕೆಂಪು ಬಣ್ಣದ ತುಟಿಯಿರುವ ಮಹಿಳೆಯರು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ತಮ್ಮ ವೃತ್ತಿ ಬದುಕಿನ ಬಗ್ಗೆ ಸಕಾರಾತ್ಮಕ ಭಾವನೆ ಹೊಂದಿರುತ್ತಾರೆ. ತಮ್ಮ ಪತಿಯ ಜತೆಗೆ ಉತ್ತಮ ಬಾಂಧವ್ಯ ಹಾಗೂ ಪ್ರೀತಿ ಹೊಂದಿರುತ್ತಾರೆ.

ಮಾದಕ ತುಟಿ

ಮಾದಕ ತುಟಿ

ಯಾವ ಮಹಿಳೆಯ ತುಟಿ ಮಾದಕವಾಗಿರುತ್ತದೋ ಅಥವಾ ವಿಪರೀತ ಆಕರ್ಷಣೀಯವಾಗಿರುತ್ತದೋ ಅಂಥವರು ಬುದ್ಧಿವಂತೆ ಆಗಿರುತ್ತಾರೆ. ಮತ್ತು ಅವರ ಆಲೋಚನೆಗಳು ಒಂದಕ್ಕೊಂದು ಸಂಬಂಧ ಇರುವುದಿಲ್ಲ. ಆದರೆ ವಿನಯವಂತೆ ಹಾಗೂ ಪ್ರಾಮಾಣಿಕರಾಗಿರುತ್ತಾರೆ. ಇವರಿಂದ ಕುಟುಂಬದ ಏಳ್ಗೆ ಆಗುತ್ತದೆ.

ದೊಡ್ಡ ಹಾಗೂ ಅಗಲ ತುಟಿ

ದೊಡ್ಡ ಹಾಗೂ ಅಗಲ ತುಟಿ

ಯಾರ ತುಟಿ ದೊಡ್ಡದಾಗಿರುತ್ತದೋ ಅಂಥವರು ಹೆಚ್ಚಿನ ಕೀರ್ತಿ ಸಂಪಾದಿಸುತ್ತಾರೆ. ತುಂಬ ಶ್ರಮ ಹಾಕದೆ ಎಲ್ಲರ ಗಮನವನ್ನು ಸೆಳೆಯುವಂಥವರಾಗಿರುತ್ತಾರೆ. ಮನರಂಜನಾ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ದೊರೆಯುತ್ತದೆ. ಆದರೆ ಇವರು ಯಶಸ್ಸು ಪಡೆಯಬೇಕಾದರೆ ತಮ್ಮ ಮನಸ್ಸಿನಲ್ಲಿ ಹೊಯ್ದಾಡುವ ವಿಪರೀತ ಭಾವನೆಗಳನ್ನು ನಿಯಂತ್ರಿಸಿಕೊಳ್ಳಬೇಕಾಗುತ್ತದೆ.

ಮೇಲ್ಮುಖದ ಕೆಂಪು ತುಟಿ

ಮೇಲ್ಮುಖದ ಕೆಂಪು ತುಟಿ

ಯಾವ ಮಹಿಳೆಯ ತುಟಿ ಕೆಂಪಾಗಿ, ಮೇಲ್ಮುಖವಾಗಿರುತ್ತದೋ ಸಣ್ಣ ವೃತ್ತದಂತೆ ಇದ್ದು, ಚೆರಿ ಹಣ್ಣಿನಂತೆ ಭಾಸವಾಗುತ್ತದೋ ಅಂಥವರ ಆಸೆಗಳಿಗೆ ಕೊನೆಯೇ ಇರುವುದಿಲ್ಲ. ಇವರಿಗೆ ಎಲ್ಲವನ್ನೂ ಪಡೆಯಬೇಕು ಎಂಬ ಆಸೆಯಿರುತ್ತದೆ. ಇಂಥವರಿಗೆ ಎಲ್ಲವೂ ಪರ್ಫೆಕ್ಟ್ ಆಗಿಯೇ ಇರಬೇಕು ಎಂಬ ಬಯಕೆ ಜತೆಗೆ ಬುದ್ಧಿವಂತಿಕೆ ಇರುತ್ತದೆ. ಇತರರನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಬಾಳಸಂಗಾತಿಗೆ ಹಾಗೂ ಸ್ನೇಹಿತರಿಗೆ ವಿಶ್ವಾಸದಿಂದ ಇರುತ್ತಾರೆ. ಇತರರಿಗೆ ಸಲಹೆ ನೀಡುವುದರಲ್ಲಿ ಇವರು ಎತ್ತಿದ ಕೈ.

ದೊಡ್ಡ ಹಾಗೂ ಸ್ವಲ್ಪ ಅಗಲವಾದ ತುಟಿ

ದೊಡ್ಡ ಹಾಗೂ ಸ್ವಲ್ಪ ಅಗಲವಾದ ತುಟಿ

ಯಾರಿಗೆ ದೊಡ್ಡ ಹಾಗೂ ಸ್ವಲ್ಪ ಮಟ್ಟಿಗೆ ಅಗಲವಾದ ತುಟಿ ಇರುತ್ತದೋ ಅಂಥವರು ಇತರ ವ್ಯಕ್ತಿಯನ್ನು ಬಹಳ ಬೇಗ ಆಕರ್ಷಿಸುತ್ತಾರೆ. ಪ್ರೀತಿ-ಪ್ರೇಮದ ವಿಚಾರಕ್ಕೆ ಬಂದರೆ ತಮ್ಮ ಬಾಳಸಂಗಾತಿಗೆ ಯಾವುದೇ ಕಾರಣಕ್ಕೂ ನಿರಾಸೆಗೊಳಿಸುವುದಿಲ್ಲ.

ಮೇಲ್ಮುಖ ಹಾಗೂ ಚೂಪಾದ ತುಟಿ

ಮೇಲ್ಮುಖ ಹಾಗೂ ಚೂಪಾದ ತುಟಿ

ಯಾವ ಮಹಿಳೆಯ ತುಟಿ ಮೇಲ್ಮುಖವಾಗಿಯೂ ಮತ್ತು ಚೂಪಾದ ತಿರುವು ಹೊಂದಿರುತ್ತದೋ ಅಂಥವರು ಯಾವುದೇ ಕಾರಣಕ್ಕೂ ತಮ್ಮ ರಹಸ್ಯ ಬಿಟ್ಟುಕೊಡುವುದಿಲ್ಲ. ಆರ್ಥಿಕವಾಗಿ ಸದೃಢರಾಗಿರುತ್ತಾರೆ. ಇಂತಹವರು ಬ್ಯಾಂಕಿಂಗ್ ಕ್ಷೇತ್ರದಲ್ಲಿದ್ದರೆ ಉನ್ನತ ಸ್ಥಾನವನ್ನು ತಲುಪುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In the samudrika Shastra of Astrology, today we will discuss about lips of women. Read how lips define woman's personality. ತುಟಿ ಬಿಟ್ಟುಕೊಡುವ ಗುಟ್ಟು, ಇದು ಹೆಣ್ಣುಮಕ್ಕಳ ಆಂತರ್ಯ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ