ಸಂಖ್ಯಾಶಾಸ್ತ್ರ: 3ರ ಸಂಖ್ಯೆಯವರ ಮ್ಯಾಜಿಕ್ ಏನು ಗೊತ್ತಾ?

ಯಾವುದೇ ತಿಂಗಳ 3, 12, 21, 30ನೇ ತಾರೀಕಿನಲ್ಲಿ ಹುಟ್ಟಿದವರ ಸಂಖ್ಯೆ 3 ಆಗುತ್ತದೆ. ಈ ಸಂಖ್ಯೆಯವರ ಗುಣ, ವಿಶೇಷ, ನಡವಳಿಕೆ, ಶಕ್ತಿ ಹಾಗೂ ದೌರ್ಬಲ್ಯಗಳ ಬಗ್ಗೆ ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಹೇಗೆ ಸಂಖ್ಯೆ 1ರವರೋ ಅದೇ ರೀತಿ ಈ ಮೂರನೇ ಸಂಖ್ಯೆಯವರಲ್ಲಿಯೂ ಕೆಲ ಸಾಮ್ಯತೆಗಳನ್ನು ಕಾಣಬಹುದು.

ಈ ಸಂಖ್ಯೆಯವರ ಅಧಿಪತಿ ಗುರು. ಇವರ ಮಾನಸಿಕ ಶಕ್ತಿ ಬಲೇ ಗಟ್ಟಿ. ಸದಾ ಗುರಿಯ ಕಡೆಗೆ ದೃಷ್ಟಿ ನೆಟ್ಟಿರುತ್ತಾರೆ. ವೃತ್ತಿ ಬದುಕು ಮೊದಲ ಆದ್ಯತೆಯಾಗಿರುತ್ತದೆ. ತಲುಪಬೇಕಾದ ಗಮ್ಯದ ಕಡೆಗೆ ಹೆಜ್ಜೆ ಹಾಕುತ್ತಲೇ ಇರುತ್ತಾರೆ ಅದ್ದರಿಂದ ಸದಾ ಒಂದಿಲ್ಲೊಂದು ಕೆಲಸಗಳನ್ನು ಮೈ ಮೇಲೆ ಎಳೆದುಕೊಂಡಿರುತ್ತಾರೆ.[ಸಂಖ್ಯಾಶಾಸ್ತ್ರ: 2ನೇ ಸಂಖ್ಯೆಯಲ್ಲಿ ಹುಟ್ಟಿದವರ ಮಾತು ಚಂದ]

Number 3 born people charterstics, traits etc

ಇನ್ನೊಬ್ಬರ ಕೆಳಗೆ ಕೆಲಸ ಮಾಡುವುದು ಅಂದರೆ ಇವರಿಗೆ ಹಿಂಸೆ. ಅಧಿಕಾರ ಅಂದರೆ ಏನು, ಅದರ ಗತ್ತು-ಗೈರತ್ತು ಇವರಿಗೆ ಉಳಿದೆಲ್ಲರಿಗಿಂತ ಚೆನ್ನಾಗಿ ಗೊತ್ತು. ಅದ್ದರಿಂದಲೇ ಏಣಿಯನ್ನು ಸರಸರ ಏರಿ ಮೇಲೆ ಕೂರುವ ಬಗ್ಗೆಯೇ ಆಲೋಚಿಸುತ್ತಾರೆ. ಹಾಗೆಯೇ ಅ ಅಧಿಕಾರವನ್ನು ಹೇಗೆ ಬಳಸಬೇಕು ಎಂಬುದು ಸಹ ಇವರಿಗೆ ಗೊತ್ತು. ಆ ಕಾರಣಕ್ಕೆ ಕಂಡ ಕನಸಿನ ಬೆನ್ನು ಹತ್ತಿದರೆ ಬಡಪೆಟ್ಟಿಗೆ ಬಿಡುವ ಅಸಾಮಿಗಳಲ್ಲ.

ಈ ತಾರೀಕುಗಳಲ್ಲಿ ಹುಟ್ಟಿದವರಿಗೆ ತಾವು ನಂಬಿದ ವಿಚಾರಗಳ ಬಗ್ಗೆ ಸಂಶಯ ಬರುವುದೇ ವಿರಳ. ಜತೆಗೆ ಯಾರಾದರೂ ಕನ್ ಫ್ಯೂಷನ್ ನಲ್ಲಿ ಇದ್ದಂತೆ ಕಂಡುಬಂದರಂತೂ ಸರ್ರನೆ ಸಿಟ್ಟು ಬರುತ್ತದೆ. ಏನಾದರೂ ಆಲೋಚನೆ ಬಂದರೆ ಸುಮ್ಮನೆ ನುಗ್ಗಿಬಿಡುವ ಪೈಕಿ ಇವರಲ್ಲ. ಚೆನ್ನಾಗಿ ಪ್ಲಾನ್ ಮಾಡಿ, ಅದರ ಬಗ್ಗೆಯೇ ಧೇನಿಸಿ, ಸರಿಯಾಗಿ ಜಾರಿಗೆ ಬರುವವರೆಗೆ ಈ ಜೀವಕ್ಕೆ ಸಮಾಧಾನ ಇರುವುದಿಲ್ಲ.[ಸಂಖ್ಯಾಶಾಸ್ತ್ರ: ಧೀರೂಭಾಯಿ ಅಂಬಾನಿ ಹುಟ್ಟಿದ್ದೂ 1ನೇ ತಾರೀಕು]

ಜತೆಯಲ್ಲಿ ಕೆಲಸ ಮಾಡುವವರಿಂದ ಗೌರವ ನಿರೀಕ್ಷೆ ಮಾಡುವ ಇವರಿಗೆ ಅನಾಯಾಸವಾಗಿ ಅದು ದೊರೆಯುತ್ತದೆ. ಆಟದ ನಿಯಮಗಳನ್ನು ಪಾಲಿಸುವುದರಲ್ಲಿ ನಿಸ್ಸೀಮರು. ಬೇರೆಯವರಿಂದಲೂ ಅದನ್ನೇ ನಿರೀಕ್ಷೆ ಮಾಡ್ತಾರೆ. ಆದ್ದರಿಂದಲೇ ಇವರು ಬುದ್ಧಿವಂತ ಕಮ್ಯಾಂಡರ್ ಆಗ್ತಾರೆ. ಶಕ್ತಿಯೆಲ್ಲ ಸೋರಿ ಕಾಲು ತಲುಪಿ ನಿತ್ರಾಣರಾಗುವವರೆಗೆ ಸೋಲು ಮಾತ್ರ ಒಪ್ಪುವುದಿಲ್ಲ.

ಕೆಲವೊಮ್ಮೆ ಅಸಾಧ್ಯ ಕೋಪ ತೋರಿಸ್ತಾರೆ. ಈ ಮನುಷ್ಯನಿಗೆ ಎಂಥ ಅಹಂಕಾರ ಅನ್ನೋ ಹಾಗೆ ನಡೆದುಕೊಳ್ತಾರೆ. ಶತ್ರುಗಳನ್ನು ತಾವೇ ಮಾಡಿಕೊಳ್ತಾರೆ. ಬೇರೆಯವರಿಂದ ಸಣ್ಣ ಸಹಾಯ ಪಡೆಯುವುದು ಕೂಡ ಈ ಸಂಖ್ಯೆಯವರಿಗೆ ಇರುಸುಮುರುಸು. ಅಸಾಧ್ಯವಾದ ಗುರಿ ಹಾಕಿಕೊಳ್ಳುವುದು, ವಿಪರೀತವಾದ ಕೋಪ ಮಾಡುವುದನ್ನ ಬಿಡಬೇಕು.[ಮೇಷ : ಪರ ಗಂಡಸರ ಬಗ್ಗೆ ಎಚ್ಚರ]

Number 3 born people charterstics, traits etc

ಕೆಲವು ಸನ್ನಿವೇಶದಲ್ಲಿ ಅಗತ್ಯವೇ ಇಲ್ಲದಷ್ಟು ರಿಯಾಕ್ಟ್ ಮಾಡುತ್ತಾರೆ. ತಮ್ಮ ಶಕ್ತಿಯನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಂಡರೆ ಕನಸುಗಳನ್ನು ಈಡೇರಿಸಿಕೊಳ್ಳುವ ದಾರಿ ಸಲೀಸಾಗುತ್ತದೆ. ಬೇರೆಯವರಿಗೂ ಇವರ ಜತೆ ಸ್ನೇಹ ಸುಲಭ ಎಂಬ ನವಿರಾದ ಭಾವವೂ ಮೂಡುತ್ತದೆ.

3,5,6,7,9ರ ಸಂಖ್ಯೆಯಲ್ಲಿ ಹುಟ್ಟಿದವರು ಒಳ್ಳೆ ಬಿಜಿನೆಸ್ ಪಾರ್ಟನರ್ ಆಗ್ತಾರೆ.

3,5,6,7,9ರ ಸಂಖ್ಯೆಯಲ್ಲಿ ಹುಟ್ಟಿದವರ ಜೊತೆ ಮದುವೆಯಾದರೆ ಹೊಂದಾಣಿಕೆ ಚೆನ್ನಾಗಿರತ್ತೆ.

ನಂಬರ್ 3ರಲ್ಲಿ ಹುಟ್ಟಿದವರು- ಸ್ವಾಮಿ ವಿವೇಕಾನಂದ, ಅಲೆಕ್ಸಾಂಡರ್ ಗ್ರಹಾಂ ಬೆಲ್, ರಮಣ ಮಹರ್ಷಿ. ಅಬ್ರಹಾಂ ಲಿಂಕನ್, ಹೆನ್ರಿ ಫೋರ್ಡ್, ಬೆನಜಿರ್ ಭುಟ್ಟೋ, ರಜನಿಕಾಂತ್

ಶುಭ ದಿನ: ಗುರುವಾರ, ಸೋಮವಾರ. ಬುಧವಾರ

ಶುಭ ಬಣ್ಣ: ಹಳದಿ, ಗುಲಾಬಿ, ನೀಲಿ, ತಿಳಿ ನೇರಳೆ

ಶುಭ ದಿನಾಂಕ: 3,12,21,30,6,9,15,18,24,27

ಶುಭ ರತ್ನ: ಕನಕ ಪುಷ್ಯರಾಗ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+