ಸಂಖ್ಯಾಶಾಸ್ತ್ರ: 2ನೇ ಸಂಖ್ಯೆಯಲ್ಲಿ ಹುಟ್ಟಿದವರ ಮಾತು ಚಂದ

ಸಂಖ್ಯಾಶಾಸ್ತ್ರದ ಪ್ರಕಾರ ಸಂಖ್ಯೆ 2ರ ಬಗ್ಗೆ ತಿಳಿದುಕೊಳ್ಳೋಣ. ಯಾವುದೇ ತಿಂಗಳ 2, 11, 20, 29ನೇ ತಾರೀಖು ಹುಟ್ಟಿದವರ ಜನ್ಮ ಸಂಖ್ಯೆ 2 ಆಗುತ್ತದೆ. ಈ ದಿನ ಹುಟ್ಟಿದವರಿಗೆ ಚಂದ್ರ ಅಧಿಪತಿ. ಒಳ್ಳೆ ಸಂಧಾನಕಾರರು ಇವರು. ಮುನಿಸಿಕೊಂಡವರ ಮಧ್ಯೆ ಸ್ನೇಹ ತರುವಂತಹ ಸೊಗಸಾದ ಮಾತುಗಾರರು. ಇವರು ತುಂಬ ಸೂಕ್ಷ್ಮ ಸ್ವಭಾವದವರು, ನಿಸ್ವಾರ್ಥಿ, ಸಹಕಾರ ಮನೋಭಾವ ಇರುತ್ತದೆ ಆದ್ದರಿಂದ ಜತೆಗೆ ಕೆಲಸ ಮಾಡುವುದು ಸಲೀಸು.

ಆದರೆ, ವಿಪರೀತ ಎನ್ನುವಷ್ಟು ಭಾವುಕರು. ಎಷ್ಟೇ ಹುಷಾರಾಗಿದ್ದರೂ ಮನಸ್ಸಿನ ಮಾತು ಕೇಳಿ ಕೆಲ ಸಲ ಮೋಸ ಹೋಗ್ತಾರೆ, ಕೆಲವು ದಿನ ಮತ್ತೆ ಜಾಗ್ರತೆಯಿಂದ ಇರ್ತಾರೆ. ಆಮೇಲೆ ಮತ್ತೆ ಇನ್ನ್ಯಾರಿಂದಲೋ ಮೋಸ-ಅವಮಾನ ಆಗಿ, ಬದಲಾಗ್ತಾರೆ. ಇದು ಇವರ ಸ್ವಭಾವ. ಈ ದಿನ ಹುಟ್ಟಿದವರಿಗೆ ಸಿಕ್ಸ್ತ್ ಸೆನ್ಸ್ ಕೆಲಸ ಮಾಡ್ತಿರುತ್ತೆ. ಆದರೆ ಇವರೇ ಅದನ್ನು ನಂಬದೆ ವಿರುದ್ಧವಾಗಿ ವರ್ತಿಸಿ ತೊಂದರೆ ತಂದುಕೊಳ್ತಾರೆ.[ಸಂಖ್ಯಾಶಾಸ್ತ್ರ: ಧೀರೂಭಾಯಿ ಅಂಬಾನಿ ಹುಟ್ಟಿದ್ದೂ 1ನೇ ತಾರೀಕು]

Number 2 born people charterstics, traits etc

ಬಂಡೆಗೆ ತಲೆ ಚಚ್ಚಿಕೊಳ್ಳುವುದು ಅಂತಾರಲ್ಲ ಆ ರೀತಿಯ ಜಾಯಮಾನದವರು. ಆದರೆ ಎಂಥ ಏಟು ಬಿದ್ದರೂ ಛಂಗನೆ ಎದ್ದು ನಿಂತುಬಿಡ್ತಾರೆ. ಸಮಾಧಾನವಾಗಿ ಇರಬೇಕು ಅನ್ನೋದು ಈ ದಿನ ಹುಟ್ಟಿದವರ ಮೊದಲ ಆದ್ಯತೆ ಆಗಿರುತ್ತದೆ. ಎದುರಿನವರ ಸ್ವಭಾವ ಅಳೆದು-ತೂಗಿ, ಬೇಕು-ಬೇಡಗಳನ್ನ ಪತ್ತೆ ಹಚ್ಚಿ ಸ್ನೇಹ ಮಾಡುವುದರಲ್ಲಿ ನಿಸ್ಸೀಮರು. ಸಂಬಂಧಗಳಿಗೆ ಇವರು ಎಷ್ಟು ನಿಷ್ಠರೋ ಎದುರಿನವರಿಂದಲೇ ಅದನ್ನೇ ನಿರೀಕ್ಷಿಸುತ್ತಾರೆ.

ಆದರೆ, ಬಲೇ ಮೂಡಿಗಳು. ಕೆಲವು ಸಲವಂತೂ ದಮ್ಮಯ್ಯಗುಡ್ಡೆ ಹಾಕಿದರೂ ಯಾವ ಜವಾಬ್ದಾರಿಯನ್ನೂ ವಹಿಸಿಕೊಳ್ಳಲ್ಲ. ಸ್ವಂತ ನಿರ್ಧಾರಗಳಲ್ಲಂತೂ ಈಗೊಂದು, ಗಳಿಗೆಗೊಂದು ಎಂಬಂಥ ಗುಣ ಇವರದು. ಒಂಟಿತನ ಇವರಲ್ಲಿ ಭಯ ಉಂಟು ಮಾಡುತ್ತೆ. ಆ ಕಾರಣಕ್ಕೆ ಕೆಲವು ತಪ್ಪುಗಳನ್ನೂ ಮಾಡ್ತಾರೆ. ಕೆಲ ಸಲವಂತೂ ಈ ಆಸಾಮಿಯ ಹೀಗೆ ಇರೋದು ಅನ್ನೋಷ್ಟು ನಿರ್ಭಾವುಕರಾಗಿ ಬಿಡ್ತಾರೆ. ಕನ್ ಫ್ಯೂಸ್ ಆಗೋದು ಬೇಡ. ಅದು ಅವರ ಮೂಡ್ ನ ಸಮಸ್ಯೆ ಅಷ್ಟೆ.[ಪಂಚ ಮಹಾಪುರುಷ ಯೋಗ: ನಿಮ್ಮ ಜಾತಕದಲ್ಲಿ ಯಾವುದಿದೆ?]

Number 2 born people charterstics, traits etc

ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಈ ಮಾತು ಮಾತ್ರ ಈ ದಿನ ಹುಟ್ಟಿದವರ ಸಂಬಂಧಿಕರು ಹಾಗೂ ಸ್ನೇಹಿತರು ಮಾಡಬೇಕು. ಏಕೆಂದರೆ ಸ್ವತಃ ಆ ಬಗ್ಗೆ ಹೆಚ್ಚಿನ ಗಮನ ಕೊಡದ 2 ಸಂಖ್ಯೆಯವರ ಬಗ್ಗೆ ಇತರರೇ ಕಾಳಜಿ ವಹಿಸಬೇಕು.

2ರ ಸಂಖ್ಯೆಯವರ ಮಾತು ಚೆಂದ ಚೆಂದ. ಆದ್ದರಿಂದ ಒಳ್ಳೆ ಭಾಷಣಕಾರರು, ಕಾರ್ಯಕ್ರಮಗಳಲ್ಲಿ ನಿರೂಪಕರು ಆಗಬಹುದು. ವೈಭವದ, ಸುಂದರವಾದ ವಸ್ತುಗಳು ತುಂಬ ಬೇಗ ಸೆಳೆಯುವುದರಿಂದ ಶಾಪಿಂಗ್ ಗೆ ಹೋದಾಗ ಪರ್ಸ್ ಕೂಡ ನೋಡದೆ ಖರೀದಿ ಆರಂಭಿಸಿ ಬಿಡ್ತಾರೆ. ಇವರ ರೂಮ್, ಮನೆಯಲ್ಲಿ ಅದೇ ರೀತಿಯ ತುಂಬ ಸುಂದರವಾಗಿ ಕಾಣುವ ವಸ್ತುಗಳೇ ಇರುತ್ತವೆ.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಈ ದಿನ ಹುಟ್ಟಿದವರ ಸಾಂಸಾರಿಕ ಜೀವನವೇ ಚೂರು ಸಮಸ್ಯೆ. ಏಕೆಂದರೆ ಜವಾಬ್ದಾರಿ ವಿಚಾರದಲ್ಲಿ ಈ ಸಂಖ್ಯೆಯವರು ನಿರ್ಲಕ್ಷ್ಯ ಜಾಸ್ತಿ. ಕೋರ್ಟ್-ಕಟಕಟೆವರೆಗೆ ಹೋಗದಂತೆ ನೋಡಿಕೊಳ್ಳಿ.

1,2,3,4,6,7,8,9ರ ಸಂಖ್ಯೆಯಲ್ಲಿ ಹುಟ್ಟಿದವರು ಒಳ್ಳೆ ಬಿಜಿನೆಸ್ ಪಾರ್ಟನರ್ ಆಗ್ತಾರೆ.

1,2,4,6,9ರ ಸಂಖ್ಯೆಯಲ್ಲಿ ಹುಟ್ಟಿದವರ ಜೊತೆ ಮದುವೆಯಾದರೆ ಹೊಂದಾಣಿಕೆ ಚೆನ್ನಾಗಿರತ್ತೆ.

ನಂಬರ್ 2ರಲ್ಲಿ ಹುಟ್ಟಿದವರು- ಅಮಿತಾಬ್ ಬಚ್ಚನ್, ಶಾರುಕ್ ಖಾನ್, ಸುದೀಪ್, ವಿನೋಬಾ ಭಾವೆ, ಥಾಮಸ್ ಆಲ್ವಾ ಎಡಿಸನ್.

ಶುಭ ದಿನ: ಭಾನುವಾರ, ಸೋಮವಾರ.
ಶುಭ ಬಣ್ಣ: ಬಿಳಿ, ತಿಳಿ ಹಸಿರು.
ಶುಭ ದಿನಾಂಕ: 1,2,7
ಶುಭ ರತ್ನ: ಬಿಳಿ ಮುತ್ತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+