ವರ್ಷ ಭವಿಷ್ಯ: ನರೇಂದ್ರ ಮೋದಿಗೆ 2017 ಹೇಗಿರುತ್ತೆ?

By: ನಾಗನೂರಮಠ ಎಸ್.ಎಸ್.
Subscribe to Oneindia Kannada

ಮತ್ತೊಂದು ವರ್ಷ ಕಳೆದು, ಇನ್ನು ಕೆಲವೇ ದಿನಗಳಲ್ಲಿ 2017 ಕಾಲಿಡಲಿದೆ. ಮುಂಬರುವ ವರ್ಷದಲ್ಲಿ ಕೆಲ ಮುಖ್ಯವ್ಯಕ್ತಿಗಳ ವರ್ಷ ಭವಿಷ್ಯ ಏನು ಹೇಳುತ್ತದೆ? ಎಂಬುದರ ಬಗ್ಗೆ ಒಮ್ಮೆ ಅವಲೋಕಿಸೋಣ. ಅದರಲ್ಲೂ ಮುಖ್ಯಸ್ಥಾನಗಳನ್ನು ನಿರ್ವಹಿಸುವವರ ಭವಿಷ್ಯ ಹೇಗಿರುತ್ತದೆ ಎಂಬುದು ಬಹಳ ಪ್ರಾಮುಖ್ಯ ಪಡೆಯುತ್ತದೆ.

ಏಕೆಂದರೆ ನಮ್ಮನ್ನಾಳುವವರು ತೆಗೆದುಕೊಳ್ಳುವ ನಿರ್ಧಾರ ನಮ್ಮ ಜೀವನದಲ್ಲೂ ಪರಿಣಾಮ ಬೀರುತ್ತದೆ. ಉದಾಹರಣೆಗೆ ಪ್ರಧಾನಿ ಮೋದಿಯವರು ಮಾಡಿದ ನೋಟ್ ರದ್ದು ನಿರ್ಧಾರದಿಂದ ಇಡೀ ದೇಶಕ್ಕೆ ಎಷ್ಟು ಲಾಭವಾಗಿದೆ ಮತ್ತು ಎಷ್ಟು ನಷ್ಟವಾಗಿದೆ ಎಂಬುದು ಪ್ರಸ್ತುತ ನಮ್ಮ ಕಣ್ಣ ಮುಂದಿರುವ ಜೀವಂತ ಸಾಕ್ಷಿ.[ಶನಿ-ಕುಜ ಯೋಗ, ಯುದ್ಧ ಮುಂದೂಡಿದ ನೋಟಿನ 'ಯಾಗ']

ಈಗಾಗಲೇ ಮೋದಿಯವರ ಜನ್ಮಜಾತಕದ ಬಗ್ಗೆ ನೀವೆಲ್ಲ ಓದಿದ್ದೀರಿ. ಆದರೆ ವೈಯಕ್ತಿಕವಾಗಿ ಮೋದಿಯವರ ಜೀವನದಲ್ಲಿ ಹೊಸ ವರ್ಷದ ಪರಿಣಾಮಗಳು ಏನು ಎಂಬುದರ ಚುಟುಕು ನೋಟ ಇಲ್ಲಿದೆ. ಪ್ರಶ್ನಾಫಲದ ಪ್ರಕಾರ ಮೋದಿಯವರು ಸೆಪ್ಟೆಂಬರ್ 17, 1950ರಂದು ಗುಜರಾತ್ ರಾಜ್ಯದ ವರದಾನಗರದಲ್ಲಿ ಬೆಳಗ್ಗೆ 11 ಕ್ಕೆ ಜನಿಸಿದರು ಎಂಬುದು ದಾಖಲೆಯಲ್ಲಿದೆ.

ಅವರು ಹುಟ್ಟಿದ ದಿನ ಸೂರ್ಯನ ಅಧಿಪತ್ಯವಿರುವ ರವಿವಾರದಂದು. ಇವರ ರಾಶಿ ವೃಶ್ಚಿಕ ಮತ್ತು ಲಗ್ನವೂ ವೃಶ್ಚಿಕವಾಗಿದೆ. ಅನುರಾಧಾ ನಕ್ಷತ್ರದ 2ನೇ ಚರಣದಲ್ಲಿ ಇವರ ಜನ್ಮವಾಗಿದೆ. ಇನ್ನು ಮೋದಿಯವರ ವೈಯಕ್ತಿಕ ಜೀವನದ ಹೊಸ ವರ್ಷದ ಭವಿಷ್ಯ ನೋಡೋಣ.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ರಾಜಕೀಯ ಏರಿಳಿತ

ರಾಜಕೀಯ ಏರಿಳಿತ

ಈಗಾಗಲೇ ಪಕ್ಷದಲ್ಲಿ ಮತ್ತು ಅಧಿಕಾರದಲ್ಲಿ ರಾಜಕೀಯ ಉತ್ತುಂಗದಲ್ಲಿರುವ ಮೋದಿಯವರು ಇದೇ ರೀತಿ ಮುಂದಿನ ವರ್ಷವೂ ಮುಂದುವರೆಸಿಕೊಂಡು ಹೋಗುತ್ತಾರೆ. ಗುರು ಈಗ ಲಾಭ ಸ್ಥಾನದಲ್ಲಿದ್ದಾನೆ. ಮುಂದಿನ ವರ್ಷದ ಮಧ್ಯದಲ್ಲಿ ಗುರು ದ್ವಾದಶ ಸ್ಥಾನಕ್ಕೆ ಬರುವುದರಿಂದ ಸ್ವಲ್ಪ ರಾಜಕೀಯ ಹಿನ್ನಡೆ ಎನಿಸಿದರೂ ಅದು ಭಿನ್ನಮತವೆನಿಸಿಕೊಳ್ಳುವುದಿಲ್ಲ. ಹೀಗಾಗಿ ರಾಜಕೀಯದಲ್ಲಿ ಏರಿಕೆಯೇ ಹೊರತು ಇಳಿಕೆಯಿಲ್ಲ.

ಚುನಾವಣೆ ಫಲಿತಾಂಶ

ಚುನಾವಣೆ ಫಲಿತಾಂಶ

ಮುಂದಿನ ವರ್ಷ ಐದು ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ. ಇದರಲ್ಲಿ ನರೇಂದ್ರ ಮೋದಿಯವರು ಮತ್ತೆ ಪವಾಡ ಮಾಡಲಿದ್ದಾರೆ. ಪ್ರಜ್ಞಾವಂತರ ಮನಸ್ಸು ಗೆದ್ದಿರುವ ಮೋದಿಗೆ ಜನ ವೋಟು ಹಾಕಿದರೂ ಸ್ಥಳೀಯ ಮುಖಂಡರು ಒಳ್ಳೆಯವರಿಗೆ ಟಿಕೆಟ್ ನೀಡಿದ್ದರೆ ಮಾತ್ರ ಮೋದಿ ಮೋಡಿ ನಿಜವಾಗುತ್ತದೆ. ಇಲ್ಲವಾದರೆ ಕೇವಲ ಮೋದಿಯವರಿಂದಲೇ ನಮ್ಮನ್ನು ಗೆಲ್ಲಿಸಿ ಎಂದು ಯಾರೂ ಹೇಳುವ ಹಾಗಿಲ್ಲ. ಲೋಕಸಭೆ ಚುನಾವಣೆಯಲ್ಲಿ ಗುಜರಾತ್ ನ ಅಭಿವೃದ್ಧಿ ಪಡಿಸಿದ್ದ ಬಗ್ಗೆ ಜನರಿಗೆ ಗೊತ್ತಿತ್ತು. ಹೀಗಾಗಿ ಲೋಕಸಭೆಯಲ್ಲಿ ಮೋದಿ ಮೋಡಿ ನಡೆಯಿತು. ಈಗ ರಾಜ್ಯಗಳ ಚುನಾವಣೆ ನಡೆಯುವುದರಿಂದ ಮೋದಿಗಿಂತ ವೈಯಕ್ತಿಕ ಹೆಸರು ಚೆನ್ನಾಗಿರುವವರು ಚುನಾವಣೆಗೆ ನಿಂತರೆ ಮಾತ್ರ ಗೆಲ್ಲುವುದು ಸಾಧ್ಯ. ಇದಕ್ಕಾಗಿ ಮೋದಿಯವರು ಮೊದಲೇ ಅರ್ಹ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಐದು ರಾಜ್ಯಗಳ ಚುನಾವಣೆಯಲ್ಲಿ ಕನಿಷ್ಠ ನಾಲ್ಕರಲ್ಲಾದರೂ ಮೋದಿ ಮೋಡಿ ಕೆಲಸ ಮಾಡುತ್ತದೆ.

ಆಂತರಿಕ ಭಿನ್ನಮತ

ಆಂತರಿಕ ಭಿನ್ನಮತ

ಆಂತರಿಕ ಭಿನ್ನಮತವು ಐದು ರಾಜ್ಯಗಳ ಚುನಾವಣೆ ಮುಗಿದ ಮೇಲೆ ಕಂಡು ಬರುವುದು. ಏಕೆಂದರೆ ಗುರು ದ್ವಾದಶ ಸ್ಥಾನದಲ್ಲಿ ಬರುವುದರಿಂದ ಆ ಸಮಯದಲ್ಲಿ ಸ್ವಲ್ಪ ಗುರುಬಲ ಕಮ್ಮಿಯಾಗುತ್ತದೆ. ಜೊತೆಗೆ ಸಾಡೇಸಾತಿಯೂ ಕೂಡ ಮೂರನೇ ಸ್ಥಾನಕ್ಕೆ ಕಾಲಿಡುತ್ತದೆ. ಇದರಿಂದ ಶತ್ರುಗಳು ಹೆಚ್ಚಿಕೊಂಡರೂ ಅದರಿಂದ ನಷ್ಟವೇನಿಲ್ಲ. ಹೆಸರು ಕೆಡಬಹುದು ಅಥವಾ ಕೆಡಿಸಬಹುದು ಅಷ್ಟೇ ಹೊರತು ಅದರಿಂದ ಇವರ ಹುದ್ದೆಗೇನೂ ನಷ್ಟವಿಲ್ಲ.

ಆರೋಗ್ಯ

ಆರೋಗ್ಯ

ನರೇಂದ್ರ ಮೋದಿ ಅವರಿಗೆ ಅಜೀರ್ಣದ ಸಮಸ್ಯೆ ಕಾಡಬಹುದು. ಮೇಲಾಗಿ ಮೊಣಕಾಲು ನೋವು ಅಥವಾ ಮಂಡಿ ನೋವು ಕಂಡು ಬರುತ್ತದೆ. ಇನ್ನು ಬೆನ್ನಿಗೆ ಸಂಬಂಧಪಟ್ಟ ನೋವುಗಳು ಉದ್ಭವಿಸಬಹುದು. ಯಾವುದಕ್ಕೂ ಇವೆಲ್ಲ ಸಮಸ್ಯೆಗಳು ಶುಕ್ರವಾರವೇ ಕಾಣಿಸಿಕೊಳ್ಳುತ್ತವೆ. ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚಿನ ತೊಂದರೆಗಳು ಬರುತ್ತವೆ.

ಅಸಮಾಧಾನ

ಅಸಮಾಧಾನ

ಪ್ರತಿಪಕ್ಷಗಳ ಅಸಮಾಧಾನ ಹೆಚ್ಚುವುದರಿಂದ ಮೋದಿಗೆ ವೈಯಕ್ತಿಕವಾಗಿ ಬೇಸರ ಹೆಚ್ಚುತ್ತದೆ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಮೋದಿಯ ಕೆಲವು ನಿರ್ಧಾರಗಳು ತಮ್ಮ ಪಕ್ಷದೊಳಗಿನವರಿಗೆ ಹೆಚ್ಚಿನ ತೊಂದರೆ ನೀಡಬಲ್ಲವು. ಈ ಬಗ್ಗೆ ಅರಿಯುವ ಮೋದಿಯವರು ಕೆಲ ಆತ್ಮೀಯರಲ್ಲಿ ಸೂಕ್ತ ಅಂತರ ಕಾಯ್ದುಕೊಳ್ಳಲು ಆರಂಭಿಸುತ್ತಾರೆ.

ಆರೋಪಗಳು

ಆರೋಪಗಳು

ಹಣಕಾಸಿನ ಅವ್ಯವಹಾರ ಸಹಜವಾಗಿ ಬಂದರೂ ಕೆಲವೊಂದು ಹುದ್ದೆಗಳಿಗೆ ಅನರ್ಹಹರನ್ನು ಆಯ್ಕೆ ಮಾಡಿದ್ದರ ಬಗ್ಗೆ ಆರೋಪಗಳು ಕೇಳಿಬರುತ್ತವೆ. ಇನ್ನು ದೇಶದ ಆರ್ಥಿಕ ಪರಿಸ್ಥಿತಿ ಹಾಳಾಗಲು ಮೋದಿಯವರೇ ಕಾರಣವೆಂದು ಪ್ರತಿಭಟನೆಗಳು ನಡೆದು ಗಲಭೆಗಳಾಗಿ ಪರಿವರ್ತನೆಗೊಳ್ಳುವ ಸಂಭವವಿರುತ್ತದೆ. ಇದರಿಂದ ಮೋದಿಯವರಿಗೆ ಆರೋಪಗಳು ಬಂದರೂ ಇದ್ಯಾವುದನ್ನೂ ತಲೆ ಕೆಡಿಸಿಕೊಳ್ಳದೆ ತಮ್ಮ ದಿಟ್ಟ ನಡೆ ಮುಂದುವರೆಸಿಕೊಂಡು ಹೋಗುತ್ತಾರೆ.

ರಾಜಕೀಯ ವೈರಿಗಳು

ರಾಜಕೀಯ ವೈರಿಗಳು

ಈಗಾಗಲೇ ಸ್ವಪಕ್ಷದಲ್ಲಿ ಮತ್ತು ವಿಪಕ್ಷಗಳಲ್ಲಿ ಸಾಕಷ್ಟು ಸಂಖ್ಯೆ ವೈರಿಗಳನ್ನು ಹೆಚ್ಚಿಸಿಕೊಂಡಿರುವ ಮೋದಿಯವರು ಭಯೋತ್ಪಾದಕರ ಮೊದಲ ಗುರಿಯಾಗಿದ್ದಾರೆ. ಆದರೆ ಇವರ ಹತ್ಯೆಯ ಯತ್ನಗಳನ್ನು ತಡೆಯಲಾಗುತ್ತದೆ. ಮತ್ತು ಮೋದಿಯವರಿಗೆ ವೃಶ್ಚಿಕ ರಾಶಿಯಲ್ಲಿ ರಾಶ್ಯಾಧಿಪತಿ ಮಂಗಳನು ಇರುವುದರಿಂದ ಸಿಕ್ಕಾಪಟ್ಟೆ ಧೈರ್ಯವಿರುತ್ತದೆ ಮತ್ತು ವೈರಿಗಳನ್ನು ಹೆಚ್ಚಿಸಿಕೊಂಡರೂ ಇವರಿಗೆ ಭಯವಿರುವುದಿಲ್ಲ. ವೈರಿಗಳಿದ್ದಷ್ಟು ಒಳ್ಳೆಯದೇ ಎನ್ನುವ ಸ್ವಭಾವ ಇವರದು.

ಮಹತ್ವದ ತೀರ್ಮಾನಗಳು

ಮಹತ್ವದ ತೀರ್ಮಾನಗಳು

ಇನ್ನು ದೇಶ ರಕ್ಷಣೆಗಾಗಿ ಚಿಕ್ಕ ಯುದ್ಧಾದಿಗಳನ್ನು ಮಾಡಲು ಮೋದಿ ಆದೇಶ ನೀಡುತ್ತಾರೆ ಹೊರತು ದೊಡ್ಡ ಪ್ರಮಾಣದ ಯುದ್ಧವಲ್ಲ. ಯುದ್ಧ ಘೋಷಣೆ ಮಾಡುವ ಸಾಧ್ಯತೆ ಕಡಿಮೆ. ಹಾಗೇನಾದರೂ ಒತ್ತಡ ಬಂದರೆ ತಾವೇ ಮಧ್ಯಸ್ಥಿಕೆ ವಹಿಸಿ ಶಾಂತಿ ಸಭೆ ನಡೆಸಲು ಮುಂದಾಗುತ್ತಾರೆ. ಜೊತೆಗೆ ಪಾಕಿಸ್ತಾನದ ಸಹಾಯ ಹಸ್ತ ನೀಡಲು ಕೋರುತ್ತಾರೆ. ಇದರಿಂದ ವಿಶ್ವವೇ ಇಂಡಿಯಾ- ಪಾಕ್ ಯುದ್ಧದ ಸಮಯವನ್ನು ಬೆರಗುಗಣ್ಣಿನಿಂದ ಕಾಯುತ್ತದೆ. ಆದರೆ ಮೋದಿಯವರು ಮುಂದಿನ ವರ್ಷವಂತೂ ಈ ಬಗ್ಗೆ ಚಕಾರವೆತ್ತುವುದಿಲ್ಲ. ಇದೇ ರೀತಿ ಭೂಮಿಗೆ ಸಂಬಂಧಿಸಿದ ಮಹತ್ವದ ಕಾನೂನುಗಳನ್ನು ಜಾರಿಗೊಳಿಸುತ್ತಾರೆ. ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾರೆ.

ಹತ್ಯಾ ಪ್ರಯತ್ನ

ಹತ್ಯಾ ಪ್ರಯತ್ನ

ಈಗಾಗಲೇ ಹಲವಾರು ಬಾರಿ ಮೋದಿ ಅವರ ಹತ್ಯಾ ಪ್ರಯತ್ನಗಳು ನಡೆದಿವೆ. ಅಂಥವುಗಳನ್ನು ನಮ್ಮ ಪೊಲೀಸರು ತಡೆಗಟ್ಟಿ ಹಂತಕರ ಹೆಡೆಮುರಿ ಕಟ್ಟಿದ್ದಾರೆ. ಆದರೆ ಕೆಲವೊಂದು ಬಾರಿ ಶುಕ್ರವಾರವೇ ಮೋದಿಯವರ ಹತ್ಯೆಗೆ ಪ್ರಯತ್ನಿಸುವುದನ್ನು ಪೊಲೀಸರು ವಿಫಲಗೊಳಿಸುತ್ತಾರೆ. ಇದೇ ರೀತಿ ಮುಂದಿನ ವರ್ಷದ ಅಕ್ಟೋಬರ್ ನಲ್ಲಿ ನಡೆಯುವ ಕೆಲವೊಂದು ದುರ್ಘಟನೆಗಳು ಮೋದಿಯವರಿಗೆ ಏನೂ ತೊಂದರೆ ಮಾಡುವುದಿಲ್ಲ.

ಯುದ್ಧ ಭೀತಿ

ಯುದ್ಧ ಭೀತಿ

ಈಗಾಗಲೇ ಈ ಬಗ್ಗೆ ವಿವರಿಸಲಾಗಿದೆ. ಆದರೆ ವಿಶ್ವದ ಗಮನ ಸೆಳೆಯಲೆಂದು ಮೋದಿಯವರು ಮಹತ್ವದ ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕುತ್ತಾರೆ. ಹೀಗಾದಲ್ಲಿ ಯುದ್ಧದ ಸಂಭವ ಕಡಿಮೆ ಎನ್ನಬಹುದು. ಆದರೆ ಭಯೋತ್ಪಾದಕರ ಮೇಲಿನ ನಿರಂತರ ದಾಳಿ ಮುಂದುವರೆಯುತ್ತದೆ. ಭಯೋತ್ಪಾದಕರ ಹುಟ್ಟಡಗಿಸಲು ಸೇನೆಗೆ ಸರ್ವ ಸ್ವಾತಂತ್ರ್ಯ ನೀಡುತ್ತಾರೆ ಮೋದಿ.

ಜನಾಕ್ರೋಶ

ಜನಾಕ್ರೋಶ

ಈಗಾಗಲೇ ಹಲವಾರು ರೀತಿಯಲ್ಲಿ ಜನಾಕ್ರೋಶ ಎದುರಿಸುತ್ತಿರುವ ಮೋದಿಯವರು ಹೆಚ್ಚಿನ ಪ್ರಮಾಣದಲ್ಲಿ ವೈರಿಗಳನ್ನು ವೃದ್ಧಿಸಿಕೊಂಡರೂ ಇವರ ಹಿತ ಬಯಸುವ ಜನರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಜನಾಕ್ರೋಶ ಕೇವಲ ಬಾಯಿ ಮಾತಿಗೆ ಮಾತ್ರ ಇರುತ್ತದೆ. ಇನ್ನೊಂದು ವಿಷಯವೇನೆಂದರೆ ಮುಖ್ಯವಾಗಿ ಮೋದಿಯವರಿಗೆ ರಾಜಕೀಯ ಗೊತ್ತಿಲ್ಲ. ಆದರೂ ಅವರು ರಾಜಕಾರಣಿಯಾಗಿ ಆಡಳಿತ ನಡೆಸುತ್ತಿರುವುದು ಮಾತ್ರ ವಿಶೇಷ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India' Prime minister Narendra Modi's 2017 yearly horoscope prediction by astrologer S.S.Naganooramata.
Please Wait while comments are loading...