November Horoscope: ಈ ರಾಶಿಗಳಿಗೆ ನವೆಂಬರ್‌ ತಿಂಗಳಲ್ಲಿ ಅದೃಷ್ಟವೋ ಅದೃಷ್ಟ..ಹಣದ ಮಳೆ

ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯನ ಶರದ್ ಋತು ಕಾರ್ತಿಕ ಮಾಸ

ಮಾಸವಿಶೆಷ: 01.11.24: ಕನ್ನಡ ರಾಜ್ಯೋತ್ಸವ

02.11.24: ಬಲಿಪಾಡ್ಯಮಿ/ದೀಪಾವಳಿ

13.11.24: ತುಳಸಿಹಬ್ಬ

15.11.24: ಗುರುನಾನಕ್ ಜಯಂತಿ

18.11.24: ಕನಕದಾಸ ಜಯಂತಿ

07.11.24: ಶುಕ್ರ ಧನಸ್ಸು ರಾಶಿಗೆ ಪ್ರವೇಶ

16.11.24: ಸೂರ್ಯ ವೃಶ್ಚಿಕ ರಾಶಿಗೆ ಪ್ರವೇಶ

Monthly Horoscope For November 2024 Masika Rashi Bhavishya For 12 Zodiac Signs In Kannada

ಮೇಷ ರಾಶಿಯ ಮಾಸ ಭವಿಷ್ಯ

ಎರಡನೇ ಮನೆಯಲ್ಲಿ ಗುರು ಇದ್ದು ಸಂಪೂರ್ಣ ಗುರುಬಲ ಇದೆ. ಯಾವುದೇ ಕೆಲಸಕ್ಕೆ ಕೈಹಾಕಿದರೂ ನಿರ್ವಿಘ್ನವಾಗಿ ನೆರವೇರುತ್ತದೆ. ಅರ್ಹರಿಗೆ ಕಂಕಣಬಲ ಇದೆ. ನೌಕರಿಯಲ್ಲಿ ಯಶಸ್ಸು, ಗೃಹಕೃತ್ಯಗಳಲ್ಲಿ ಸಮಾಧಾನಕರ ಬೆಳವಣಿಗೆಗಳು ಇರುತದೆ. ಮನಸ್ಸಿನ ಚಿಂತೆ ದೂರವಾಗುತ್ತದೆ. ಯಾವುದೋ ಒಂದು ಕೆಲಸ ನಿಮ್ಮ ಪರವಾಗಿ ಆಗದೆ ಚಿಂತೆ ಕೊಡುತ್ತಿದ್ದರೆ, ಈಗ ಆ ಸಮಸ್ಯೆ ಪರಿಹಾರವಾಗಿ ನೀವು ಅಂದುಕೊಂಡ ಕೆಲಸ ಯಶಸ್ವಿಯಾಗಿ ನೆರವೇರುತ್ತದೆ.

7ನೇ ತಾರೀಖು ಶುಕ್ರ ಒಂಬತ್ತನೇ ಮನೆಗೆ ಪ್ರವೇಶ ಮಾಡುತ್ತಾನೆ. ಇದು ನಿಮಗೆ ಇನ್ನಷ್ಟು ಯಶಸ್ಸನ್ನು ಭಾಗ್ಯಗಳನ್ನೂ ಕೊಡಲಿದೆ. ಕೇತು ಆರನೇ ಮನೆಯಲ್ಲಿ ಇದ್ದು ಹಣಕಾಸಿಗೆ ತೊಂದರೆ ಬರದಂತೆ ಕಾಪಾಡುತ್ತಾನೆ. ನಿಮ್ಮ ರಾಶಿಯ ಅಧಿಪತಿ ಮಂಗಳ ನಾಲ್ಕನೇ ಮನೆಯಲ್ಲಿ ನೀಚನಾಗಿರುತ್ತಾನೆ. ಹೀಗಾಗಿ ನಿಮಗೆ ಮಂಗಳನ ಬೆಂಬಲ ಸಿಗುವುದಿಲ್ಲ. ಗುರು ಎರಡನೇ ಮನೆಯಲ್ಲಿ ಇರುವವವರೆಗೂ ಯಾವುದೇ ಆತಂಕಕ್ಕೆ ಕಾರಣ ಇಲ್ಲ. ಗುರು ನಿಮ್ಮನ್ನು ಸದಾ ಕಾಪಾಡುತ್ತಾನೆ.

Monthly Horoscope For November 2024 Masika Rashi Bhavishya For 12 Zodiac Signs In Kannada

ವೃಷಭ ರಾಶಿಯ ಮಾಸ ಭವಿಷ್ಯ

ಈಗ ಗುರು ನಿಮ್ಮ ರಾಶಿಯಲ್ಲೇ ಇದ್ದಾನೆ. ಇದು ಕೊಂಚ ಒತ್ತಡಗಳನ್ನು ಕೊಡುತ್ತದೆ. ಆದರೆ ರಾಹು ಲಾಭಸ್ಥಾನದಲ್ಲಿ ಇರುವುದು ನಿಮಗೆ ಲಾಭದಾಯಕವಾಗಿದೆ. ರಾಹು ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಕೊಡುವುದರ ಜೊತೆಗೆ ಧನಲಾಭವನ್ನೂ ಕೊಡುತ್ತಾನೆ. ಏಳನೇ ಮನೆಯಲ್ಲಿ ಬುಧ, ಎಂಟನೇ ಮನೆಯಲ್ಲಿ ಶುಕ್ರ, ಮೂರನೇ ಮನೆಯಲ್ಲಿ ಮಂಗಳ ಸಮಯ ಬಹಳ ಚೆನ್ನಾಗಿದೆ.

ಹಣಕಾಸಿನ ಹರಿವು ಉತ್ತಮವಾಗಿದೆ. ತಂದೆಯಿಂದ ಲಾಭ ಇದೆ. ಅಣ್ಣತಮ್ಮಂದಿರಿಗೆ ಒಳ್ಳೆಯದಾಗುತ್ತದೆ. ವೃತ್ತಿಯಲ್ಲಿ ಯಶಸ್ಸು ಇದೆ. ಮುಂದಿನ ದಿನಗಳಲ್ಲಿ ನಿಮಗೆ ಇನ್ನೂ ಬಹಳ ಶುಭಫಲಗಳು ಸಿಗುತ್ತವೆ. ಐದನೇ ಮನೆಯಲ್ಲಿ ಕೇತು ಶತ್ರುರಾಶಿಯಾದ ಕನ್ಯಾದಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆ. ಈ ತಿಂಗಳ 16 ರ ವರೆಗೂ ಸೂರ್ಯ ಆರನೇ ಮನೆಯಲ್ಲಿ ಇರುವುದೂ ಸಹ ನಿಮಗೆ ಶಕ್ತಿಯನ್ನು ಹೆಚ್ಚಿಸುತ್ತದೆ. ಸರ್ಕಾರದಿಂದ ಲಾಭ ಇದೆ.

Monthly Horoscope For November 2024 Masika Rashi Bhavishya For 12 Zodiac Signs In Kannada

ಮಿಥುನ ರಾಶಿಯ ಮಾಸ ಭವಿಷ್ಯ

12ನೇ ಮನೆಯಲ್ಲಿ ಗುರು, ಎರಡನೇ ಮನೆಯಲ್ಲಿ ಕುಜ ಇರುವುದು ಕೊಂಚ ತೊಂದರೆಯನ್ನು ತೋರಿಸುತ್ತಿದೆ. ನೀವು ಅಂದುಕೊಂಡ ಕೆಲಸಗಳಲ್ಲಿ ಮುನ್ನಡೆ ಸಾಧಿಸಲಾಗದೆ ಬೇಸರ ಅನುಭವಿಸಬೇಕಾಗುತ್ತದೆ. ಆರನೇ ಮನೆಯಲ್ಲಿ ಬುಧ ಏಳನೇ ಮನೆಯಲ್ಲಿ ಶುಕ್ರ ಇದ್ದು ಇದು ಕೊಂಚ ನಿಮಗೆ ಉಪಶಮನ ಕೊಡುತ್ತದೆ. ಶನಿ ಒಂಬತ್ತನೇ ಮನೆಯಲ್ಲಿ ಇದ್ದು ನಿಮಗೆ ಧಾರ್ಮಿಕ ಭಾವನೆಯನ್ನು ಉದ್ದೀಪಿಸುತ್ತಾನೆ.

ಧರ್ಮ ಕಾರ್ಯ ದೈವ ಕಾರ್ಯ ಮಾಡುತ್ತೀರಿ. ವಾಹನದಿಂದ ಲಾಭ ಇದೆ. ತಾಯಿಗೆ ಅಥವಾ ತಾಯಿ ಸಮಾನರಾದವರಿಗೆ ಕೊಂಚ ಬೇಸರ ಇದೆ. ಕೆಲಸದ ಒತ್ತಡದಿಂದ ಅವರಿಗೆ ಶ್ರಮ ಎನಿಸಬಹುದು. ಹಣಕಾಸಿಗೆ ಕೊಂಚ ಅಡೆತಡೆ ಇದೆ. ನೀವು ಹಣವನ್ನು ಈಗ ಬೇಕಾಬಿಟ್ಟಿ ಖರ್ಚು ಮಾಡಿ ಇಕ್ಕಟ್ಟಿಗೆ ಸಿಕ್ಕಿಕೊಳ್ಳಬೇಡಿ. ಹಣವನ್ನು ವಿವೇಚನೆಯಿಂದ ಖರ್ಚು ಮಾಡಿ. ಯಾರಿಗೂ ಸಾಲ ಕೊಡಬೇಡಿ. ಸುಬ್ರಹಣ್ಯನನ್ನು ಆರಾಧಿಸಿ. ದುರ್ಗಾ ಸ್ತೋತ್ರ ಹೇಳಿಕೊಳ್ಳಿ.

Monthly Horoscope For November 2024 Masika Rashi Bhavishya For 12 Zodiac Signs In Kannada

ಕಟಕ ರಾಶಿಯ ಮಾಸ ಭವಿಷ್ಯ

ಈಗ ನಿಮಗೆ ಗುರುಬಲ ಸಂಪೂರ್ಣವಾಗಿದ್ದು ಯಾವುದೇ ಚಿಂತೆಗೆ ಕಾರಣವಿಲ್ಲ. ನಿಂತು ಹೋಗಿದ್ದ ಎಲ್ಲ ಕೆಲಸಗಳೂ ಈಗ ಮತ್ತೆ ವೇಗ ಪಡೆದುಕೊಳ್ಳುತ್ತದೆ. ಒಂಬತ್ತನೇ ಮನೆಯ ಗುರು ನಿಮಗೆ ರಕ್ಷೆಯಾಗಿ ನಿಂತಿದ್ದಾನೆ. ಮೂರನೇ ಮನೆಯಲ್ಲಿ ಕೇತು ಇದ್ದು ಇದೂ ಸಹ ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ. ಆರನೇ ಮನೆಯಲ್ಲಿ ಶುಕ್ರ ಐದನೇ ಮನೆಯಲ್ಲಿ ಬುಧ ನಿಮಗೆ ಅನುಕೂಲಕರವಾಗಿದ್ದಾರೆ.

ನಾಲ್ಕನೇ ಮನೆಯಲ್ಲಿ ಸೂರ್ಯ ಇರುವುದು ತಾಯಿಗೆ ಕೊಂಚ ಮಾನಸಿಕ ಕಿರಿಕಿರಿಗೆ ಕಾರಣವಾಗುತ್ತದೆ. ನಿಮ್ಮ ರಾಶಿಯಲ್ಲೇ ಮಂಗಳ ಇದ್ದು ನಿಮಗೆ ಕೊಂಚ ಉಷ್ಣ ಪ್ರಕೋಪ ಆಗಬಹುದು. ನೀವೂ ಸಹ ಸುಬ್ರಹ್ಮಣ್ಯನ ಆರಾಧನೆ ಮಾಡಿ. ಅಷ್ಟಮ ಶನಿಯ ಪ್ರಭಾವ ಕಡಿಮೆಯಾಗಲು ಹನುಮಾನ ಚಾಲೀಸ ಹೇಳಿಕೊಳ್ಳಿ. ಒಂಬತ್ತರಲ್ಲಿ ರಾಹು ಇದ್ದು ವೈಯುಕ್ತಿಕ ವರ್ಚಸ್ಸಿಗೆ ಧಕ್ಕೆ ತರಬಹುದು. ಯಾರೊಂದಿಗೂ ವೈಮನಸ್ಯ ಬೇಡ.

Monthly Horoscope For November 2024 Masika Rashi Bhavishya For 12 Zodiac Signs In Kannada

ಸಿಂಹ ರಾಶಿಯ ಮಾಸ ಭವಿಷ್ಯ

ಮುಂಬರುವ ದಿನಗಳು ನಿಮಗೆ ವ್ಯತಿರಿಕ್ತವಾಗಿ ಇರುವುದರಿಂದ ಈಗಿನಿಂದಲೇ ಒಂದು ಯೋಜನೆ ತಯಾರಿಸಿಕೊಳ್ಳಿ. ಹಣದ ವಿಲೇವಾರಿಯನ್ನು ವಿವೇಚನೆಯಿಂದ ಮಾಡುವ ತಯಾರಿ ಈಗಿನಿಂದಲೇ ಮಾಡಿಕೊಳ್ಳಿ, ಅನಾವಶ್ಯಕ ಖರ್ಚು ಬೇಡ. ವೃತ್ತಿಯಲ್ಲೂ ಅನೇಕ ಸವಾಲುಗಳು ಎದುರಾಗಲಿವೆ. ಮೇಲಿನ ಅಧಿಕಾರಿಗಳೊಂದಿಗೆ ಸಾಮರಸ್ಯ ಕಾಯ್ದುಕೊಳ್ಳಿ. ದೊಡ್ಡ ಹುದ್ದೆಯಲ್ಲಿ ಇರುವವರು ಸ್ವಂತ ಸಂಸ್ಥೆಯನ್ನು ನಡೆಸುವವರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಸಾಕಷ್ಟು ಅಪವಾದಗಳನ್ನು ಎದುರಿಸಬೇಕಾಗುತ್ತದೆ.

ಹಣದ ಹರಿವು ಕಠಿಣವಾಗಲಿದೆ. ವೃಥಾ ಅಲೆದಾಟ ತಿರುಗಾಟ ಹೊತ್ತಿಗೆ ಸರಿಯಾಗಿ ಆಹಾರ ನಿದ್ರೆ ಇಲ್ಲದೆ ಆರೋಗ್ಯ ಹದಗೆಡಬಹುದು. ಮನೆಯಲ್ಲಿ ವಾತಾವರಣ ಗಂಭೀರವಾಗಬಹುದು. ಯಾವುದೋ ನಿರ್ಲಕ್ಷಿಸಿದ್ದ ಒಂದು ಸಣ್ಣ ತಪ್ಪು ಇಂದು ಬೃಹದಾಕಾರ ತಾಳಿ ನಿಮ್ಮನ್ನು ದೃತಿಗೆಡಿಸಬಹುದು. ಅಕ್ಟೋಬರ್ 16 ರವರೆಗೂ ಸೂರ್ಯ ಮೂರನೇ ಮನೆಯಲ್ಲಿ ಇದ್ದು ನಿಮಗೆ ಅಲ್ಪ ಲಾಭ ಕೊಡುತ್ತಾನೆ. 7ನೇ ತಾರೀಖು ಶುಕ್ರ ಐದನೇ ಮನೆಗೆ ಪ್ರವೇಶಮಾಡಿದಾಗ ನಿಮಗೆ ತುಸು ಅನುಕೂಲಗಳು ಗೋಚರಿಸುತ್ತದೆ.

Monthly Horoscope For November 2024 Masika Rashi Bhavishya For 12 Zodiac Signs In Kannada

ಕನ್ಯಾ ರಾಶಿಯ ಮಾಸ ಭವಿಷ್ಯ

ಈಗ ಗುರುಬಲ ಶನಿಬಲ ಇದೆ. ಯಾವುದೇ ಮುಖ್ಯ ಕೆಲಸಗಳನ್ನು ವಾಯಿದೆ ಹಾಕದೆ ಈ ಒಂದೆರಡು ತಿಂಗಳಲ್ಲಿ ಮುಗಿಸಿಕೊಳ್ಳಿ. ಮುಂಬರುವ ದಿನಗಳಲ್ಲಿ ನಿಮಗೆ ಸ್ವಲ್ಪ ಹಿನ್ನಡೆ ಆಗಬಹುದು. ಹಣಕಾಸಿಗೆ ತೊಂದರೆ ಇಲ್ಲ. ಯಾವುದೋ ಮೂಲದಿಂದ ಹಣ ಹರಿದು ಬರುತ್ತದೆ. ಈಗ ನಿಮಗೆ ವಿವಿಧ ಸಂಸ್ಥೆಗಳಲ್ಲಿ ಶೇರುಗಳಲ್ಲಿ ಹಣ ಹೂಡಲು ಒಳ್ಳೆಯ ಸಮಯ. ಆಸ್ತಿಪಾಸ್ತಿ ಖರೀದಿ ಮಾಡಬಹುದು. ಬಾಕಿ ಹಣ ಬಾರದೆ ಕಿರುಕುಳ ಅನುಭವಿಸುತ್ತಿರುವ ನಿಮಗೆ ಈಗ ಸಧ್ಯದಲ್ಲೇ ಹಣ ವಾಪಸ್ಸು ಬರಲಿದೆ.

ಅವಿವಾಹಿತರಿಗೆ ವಿವಾಹ ನಿಷ್ಕರ್ಷೆ ಆಗಲಿದೆ. ಗೃಹಪ್ರವೇಶ, ಬಡ್ತಿ ಮನೆಯಲ್ಲಿ ಮಂಗಳ ಕಾರ್ಯ, ದೈವಕಾರ್ಯಗಳು ನಡೆದು ನಿಮಗೆ ಮನಸ್ಸಿಗೆ ಶಾಂತಿ ಲಭಿಸುತ್ತದೆ. ವೃತ್ತಿ ಕ್ಷೇತ್ರದಲ್ಲಿ ಒಳ್ಳೆಯ ಅಭಿವೃದ್ಧಿ ಇದೆ. ಬಡ್ತಿ ಮುಂತಾದ ಖುಷಿ ಕೊಡುವ ಸಂಗತಿಗಳು ನಡೆಯಲಿದೆ. 7ನೇ ತಾರೀಕಿನಿಂದ ಶುಕ್ರ ನಾಲ್ಕನೇ ಮನೆಗೆ ಪ್ರವೇಶವಾಗುತ್ತಾನೆ. ವಾಹನದಿಂದ ಲಾಭ, ಹೊಸ ವಾಹನ ಕೊಳ್ಳುವುದು ಮುಂತಾದ ಸಂಗತಿಗಳು ಇವೆ. ಹೊಸ ಅಧಿಕಾರ ಪ್ರಾಪ್ತಿಯಾಗುತ್ತದೆ. ಮನಸ್ಸಿಗೆ ಖುಷಿ ಇದೆ.

Monthly Horoscope For November 2024 Masika Rashi Bhavishya For 12 Zodiac Signs In Kannada

ತುಲಾ ರಾಶಿಯ ಮಾಸ ಭವಿಷ್ಯ

ಈಗ ಗುರು ಎಂಟನೇ ಮ,ನೆಯಲ್ಲಿ ಇರುವುದರಿಂದ ಹಾಗೂ ಶನಿ ಪಂಚಮದಲ್ಲಿ ಇರುವುದರಿಂದ ಕೆಲವು ಹಿನ್ನಡೆಗಳನ್ನು ಅನುಭವಿಸುತ್ತಿದ್ದೀರಿ. ಯಾವ ಕೆಲಸಕ್ಕೆ ಕೈ ಹಾಕಿದರೂ ನಿಧಾನಗತಿ. ಅಪವಾದಗಳು, ಅನಾರೋಗ್ಯ, ಕಾರಣವಿಲ್ಲದೆ ಭೀತಿ ಮಾನಸಿಕ ಕಳವಳ ಇಂಥ ಅನುಭವಗಳು ನಿಮ್ಮದಾಗಿರುತ್ತದೆ. ಈಗ ರಾಹು ಮಾತ್ರ ನಿಮ್ಮ ಪರವಾಗಿ ಆರನೇ ಮನೆಯಲ್ಲಿ ಇದ್ದಾನೆ. ರಾಹು ಆರನೇ ಮೆನಯಲ್ಲಿ ಶಕ್ತಿಯನ್ನೂ ಧೈರ್ಯವನ್ನೂ ಕೊಡುತ್ತಾನೆ. ಯಾವುದೋ ನೀವು ತಿಳಿಯದ ಮೂಲದಿಂದ ಹಣಕಾಸಿನ ನೆರವನ್ನೂ ಕೊಡುತ್ತಾನೆ.

ಹಿಡಿದ ಕೆಲಸ ಎಷ್ಟೇ ಕಷ್ಟವಾದರೂ ಮಾಡಿ ಮುಗಿಸುವ ಛಲವನ್ನು ಕೊಡುತ್ತಾನೆ. ನಿಮಗೆ ಎಷ್ಟೇ ಮಾನಸಿಕ ಹಿಂಸೆಗಳಾದರೂ ಪುಟಿದು ನಿಲ್ಲುವ ಜೀವನೋತ್ಸಾಹ ಕೊಡುತ್ತಾನೆ. ಕೆಲವೇ ದಿನಗಳಲ್ಲಿ ಶನಿ ಆರನೇ ಮನೆಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಶಕ್ತಿ ಸಾಮಥ್ರ್ಯ ಹಾಗೂ ಧನ ಸಂಪಾದನೆ ಆಗುತ್ತದೆ. ವಿವಾಹದ ನಿರೀಕ್ಷೆಯಲ್ಲಿ ಇರುವವರು ಇನ್ನೂ ಕೊಂಚ ದಿನ ಕಾಯಬೇಕು. ವೃತ್ತಿಯಲ್ಲಿ ಬಡ್ತಿ ನಿಮಗೆ ಬೇಕಾದ ಕಡೆ ವರ್ಗಾವಣೆ ಇವೆಲ್ಲದಕ್ಕೂ ಕೊಂಚ ಕಾಯಬೇಕು. ಮುಂಬರುವ ದಿನಗಳಲ್ಲಿ ಮಹತ್ತರ ಬದಲಾವಣೆ ನಿರೀಕ್ಷಿಸಿ.

Monthly Horoscope For November 2024 Masika Rashi Bhavishya For 12 Zodiac Signs In Kannada

ವೃಶ್ಚಿಕ ರಾಶಿಯ ಮಾಸ ಭವಿಷ್ಯ

ಈಗ ಗುರು ಏಳನೇ ಮನೆಯಲ್ಲಿ ಕೇತು ಹನ್ನೊಂದನೇ ಮನೆಯಲ್ಲಿ ಇದ್ದು ನಿಮಗೆ ಲಾಭವನ್ನು ಕೊಡುತ್ತಿದ್ದಾರೆ. ಬುಧ ನಿಮ್ಮ ಅರಾಶಿಯಲ್ಲೇ ಇದ್ದು ನಿಮ್ಮನ್ನು ಕಾಪಾಡುತ್ತಾನೆ. ನಿಮ್ಮ ಎಲ್ಲ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ಆಗುತ್ತಿವೆ. ಅವಿವಾಹಿತರಿಗೆ ವಿವಾಹ ಭಾಗ್ಯ ಇದೆ. ನಾಲ್ಕನೇ ಮನೆಯಲ್ಲಿ ಶನಿ ಹಾಗೂ ಐದನೇ ಮನೆಯಲ್ಲಿ ರಾಹು ಇರುವುದು ಅಷ್ಟು ಒಳ್ಳೆಯದಲ್ಲ. ಸುಬ್ರಹ್ಮಣ್ಯನಿಗೆ ಹಾಲಿನ ಅಭಿಷೇಕ ಮಾಡಿಸಿ.

ಮಕ್ಕಳೊಡನೆ ವಿರೋಧ ಉಂಟಾಗುವ ಸಾಧ್ಯತೆ ಇದೆ. ಮಕ್ಕಳೊಡನೆ ಅನಗತ್ಯ ವಾದವಿವಾದ ಮಾಡಬೇಡಿ. ಅವರ ಮನಸ್ಸಿಗೆ ವಿರುದ್ಧ ಹೋಗಬೇಡಿ. ತಾಯಿಗೆ ಅನಾರೋಗ್ಯ ಆಗಲಿದೆ. ಅಥವಾ ತಾಯಿಗೆ ಒತ್ತಡಗಳು ಇರುತ್ತದೆ. 7ನೇ ತಾರೀಕಿನಿಂದ ಶುಕ್ರ ಎರಡನೇ ಮನೆ ಧನಸ್ಸು ರಾಶಿಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಅನುಕೂಲ ಧನಲಾಭ ಆಗಲಿದೆ. ಒಂಬತ್ತನೇ ಮನೆಯಲ್ಲಿ ಮಂಗಳ ಇರುವುದು ಸಹ ನಿಮಗೆ ಹೆಚ್ಚಿನ ಶುಭವನ್ನು ತರುತ್ತದೆ.

Monthly Horoscope For November 2024 Masika Rashi Bhavishya For 12 Zodiac Signs In Kannada

ಧನಸ್ಸು ರಾಶಿಯ ಮಾಸ ಭವಿಷ್ಯ

ಗುರು ಆರನೇ ಮನೆಯಲ್ಲಿ ಇದ್ದಾನೆ. ಇದು ಕೊಂಚ ಮಾನಸಿಕವಾಗಿ ಘಾಸಿ ಮಾಡುತ್ತದೆ. ಮನಸ್ಸಿಗೆ ಪದೇ ಪದೇ ನೋವಾಗುವುದು, ವ್ಯಕ್ತಿತ್ವಕ್ಕೆ ಧಕ್ಕೆ ಬರುವಂಥ ಘಟನೆಗಳು ಪದೇ ಪದೇ ಸಂಭವಿಸುವುದು ಈರೀತಿ ಇರುತ್ತದೆ. ಭಯ ಪಡಬೇಡಿ. ಆದಷ್ಟು ಪ್ರಾಮಾಣಿಕರಾಗಿರಿ. ಯಾರಾದರೂ ನಿಮ್ಮ ಅತಿ ಆತ್ಮೀಯರೊಡನೆ ಎಲ್ಲವನ್ನೂ ಹಂಚಿಕೊಳ್ಳಿ. ಗುರುಗಳ ಸ್ಮರಣೆ ಮಾಡಿ. ಹಣಕಾಸಿನ ಭಾವವೂ ತಲೆದೋರಬಹುದು. ಮೂರರಲ್ಲಿ ಶನಿ ಇರುವ ವರೆಗೂ ಹಣಕಾಸಿಗೆ ಬಲ ಇರುತ್ತದೆ. ಆದರೆ ಕೆಲವೇ ತಿಂಗಳುಗಳಲ್ಲಿ ಶನಿ ನಾಲ್ಕನೇ ಮನೆಗೆ ಪ್ರವೇಶವಾಗುತ್ತಾನೆ.

ರಾಹು ಮೂರನೇ ಮನೆಗೆ ಪ್ರವೇಶವಾಗುತ್ತಾನೆ. ಆಗ ನಿಮಗೆ ಹಣದ ಹರಿವಿಗೆ ಯಾವುದೇ ತೊಂದರೆ ಆಗುವುದಿಲ್ಲ. ಬಾಕಿಯಂತೆ ಏಳನೇ ತಾರೀಕಿನಿಂದ ಶುಕ್ರ ನಿಮ್ಮ ರಾಶಿಗೇ ಪ್ರವೇಶವಾಗುತ್ತಾನೆ. ಬುಧ ಹನ್ನೊಂದನೇ ಮನೆಯಲ್ಲಿ ಇದ್ದಾನೆ ಇವೆರಡೂ ನಿಮಗೆ ಶುಭಫಲ ನೀಡುತ್ತದೆ. ವೃತ್ತಿಯಲ್ಲಿ ಏರುಪೇರುಗಳು ಇರುತ್ತವೆ. ಸಂಭಾಳಿಸಿಕೊಂಡು ಹೋಗಿ. ಒತ್ತಡಗಳಿಂದ ಕೆಲಸ ಮಾಡಬೇಕಾಗುತ್ತದೆ. ಬೇಸರಿಸಬೇಡಿ. ಮುಂದೆ ಎಲ್ಲ ಪರಿಸ್ಥಿತಿಯೂ ತಿಳಿಯಾಗಲಿದೆ.

Monthly Horoscope For November 2024 Masika Rashi Bhavishya For 12 Zodiac Signs In Kannada

ಮಕರ ರಾಶಿಯ ಮಾಸ ಭವಿಷ್ಯ

ಈಗ ರಾಹು ಮೂರನೇ ಮನೆಯಲ್ಲಿ ಇನ್ನು ಹಲವಾರು ತಿಂಗಳುಗಳ ಕಾಲ ಇದ್ದು ನಿಮ್ಮ ಹಣದ ಹರಿವನ್ನು ಉತ್ತಮಪಡಿಸುತ್ತಾನೆ. ಇದರ ಜೊತೆಗೆ ಶನಿ ಕೂಡ ಸಧ್ಯದಲ್ಲೇ ಮೂರನೇ ಮನೆಗೆ ಪ್ರವೇಶವಾಗಿ ನಿಮಗೆ ಇನ್ನೂ ಉತ್ತಮ ಅವಕಾಶಗಳು ಶುಭಫಲಗಳು ಸಿಗುವಂತೆ ಮಾಡುತ್ತಾನೆ. ಸಾಹಸದಿಂದ ಪರಾಕ್ರಮದಿಂದ ಶತಾಯ ಗತಾಯ ನಿಮ್ಮ ಕೆಲಸಗಳು ಗುರಿ ನೆರವೇರುವಂತೆ ಸಹಾಯ ಮಾಡುತ್ತಾನೆ. ಗುರು ಐದನೇ ಮನೆಯಲ್ಲಿ ಇದ್ದು ಮನೆಯಲ್ಲಿ ಶುಭಕಾರ್ಯಗಳು ನಡೆಯುವಂತೆ ಮಾಡುತ್ತಾನೆ. ನಿಮ್ಮ ಯಾವುದೇ ಪ್ರಯತ್ನಕ್ಕೆ ತನ್ನ ಅನುಗ್ರಹದಿಂದ ಅದು ಶೀಘ್ರ ಕೈಗೂಡುವಂತೆ ಮಾಡುತ್ತಾನೆ.

ಗುರುವಿನ ಅನುಗ್ರಹ ನಿಮ್ಮ ಜೀವನದಲ್ಲಿ ಒಳ್ಳೆಯ ಕ್ರಾಂತಿಯನ್ನು ಬದಲಾವಣೆಯನ್ನು ತರುತ್ತದೆ. ಈಗ ಸಾಡೆಸಾತಿ ಶನಿಯ ಪ್ರಭಾವವೂ ಮುಗಿರುವುದರಿಂದ ನಿಮಗೆ ನದುಕಿನಲ್ಲಿ ಬಹಳ ಒಳ್ಳೆಯ ಬದಲಾವಣೆ ಆಗಲಿದೆ. ವೃತ್ತಿಪರವಾಗಿ ಬಹು ದೊಡ್ಡ ಪದವಿಯನ್ನು ಅಲಂಕರಿಸುತ್ತೀರಿ. ಆಸ್ತಿ ಪಾಸ್ತಿ ಕೊಳ್ಳುವ ಯೋಗ ಇದೆ. ಯಾರೂ ನಿಮಗೆ ಎದುರಾಗದೆ ಎಲ್ಲರೂ ಆತ್ಮೀಯವಾಗಿ ವರ್ತಿಸುತ್ತಾರೆ, ಶತ್ರುಗಳು ದೂರವಾಗುತ್ತದೆ. ನಿಮ್ಮ ಬದುಕಿನಲ್ಲಿ ಅಡೆತಡೆಗಳು ದೂರವಾಗಿ ನೆಮ್ಮದಿ ಅನುಭವಿಸುತ್ತೀರಿ.

Monthly Horoscope For November 2024 Masika Rashi Bhavishya For 12 Zodiac Signs In Kannada

ಕುಂಭ ರಾಶಿಯ ಮಾಸ ಭವಿಷ್ಯ

ಈಗ ನಿಮಗೆ ಗಂಭೀರ ಸಮಯವೇನೋ ಹೌದು. ನಾಲ್ಕನೇ ಮನೆಯಲ್ಲಿ ಗುರು ಇರುವುದು ಅಷ್ಟೇನೂ ಶುಭಕರವಲ್ಲ. ತಾಯಿಯ ಆರೋಗ್ಯ ಏರುಪೇರಾಗಬಹುದು. ತಾಯಿ ಅಥವಾ ತಾಯಿಯ ಸಮಾನರೊಡನೆ ಮನಸ್ಥಾಪ ಆಗಬಹುದು. ನಿಮ್ಮ ರಾಶಿಯಲ್ಲೇ ಶನಿ ಇದಾನೆ ಹಾಗೂ ಎರಡನೇ ಮನೆಯಲ್ಲಿ ರಾಹು ಇದ್ದಾನೆ. ಇದು ನಿಮಗೆ ಹಿನ್ನಡೆ ಕೊಡುತ್ತದೆ. ವೃತ್ತಿಜೀವನ ಏರುಪೇರಾಗಬಹುದು. ಅಧಿಕಾರ ಕಳೆದುಕೊಳ್ಳಬೇಕಾಗಬಹುದು. ಮನೆಯಲ್ಲಿ ಅಶಾಂತಿ ಅನಾರೋಗ್ಯ ಇರುತ್ತದೆ. ಮನೆಯ ವಾತಾವರಣ ನಿಮಗೆ ಹುಮ್ಮಸ್ಸನ್ನು ಕೊಡುವುದಿಲ್ಲ. ಹಣಕಾಸಿಗೂ ಬಿಕ್ಕಟ್ಟು ಅನುಭವಿಸುತ್ತೀರಿ.

ನಿಮ್ಮ ರಾಶಿಯವರು ಹಠದ ಸ್ವಭಾವ. ಈ ಹಠವೇ ನಿಮ್ಮ ಏಳಿಸುತ್ತದೆ ಅಥವಾ ಬೀಳಿಸುತ್ತದೆ. ಆದ್ದರಂದ ಯೋಚಿಸಿ ಮುಂದುವರೆಯಿರಿ. ಏಳನೇ ತಾರೀಕಿನಿಂದ ಹನ್ನೊಂದನೇ ಮನೆಯಲ್ಲಿ ಶುಕ್ರ ಪ್ರವೇಶವಾಗುವುದರಿಂದ ನಿಮಗೆ ಅಲ್ಪಮಟ್ಟಿನ ಧನಲಾಭ ಆಗಲಿದೆ. 16ನೇ ತಾರೀಕಿನ ನಂತರ ಸೂರ್ಯ ವೃಶ್ಚಿಕ ರಾಶಿಗೆ ಪ್ರವೇಶವಾದಾಗ ಬಿಕ್ಕಟ್ಟುಗಳು ಕೊಂಚ ಸಡಿಲಗೊಳ್ಳುತ್ತದೆ. ಎಂಟನೇ ಮನೆಯಲ್ಲಿ ಕೇತು ಇರುವುದರಿಂದ ಆರೋಗ್ಯದಲ್ಲಿ ಜಾಗ್ರತೆ ವಹಿಸಿ. ಗುರುಗಳ, ದತ್ತಾತ್ರೇಯನ ಅನುಗ್ರಹ ಪಡೆದುಕೊಳ್ಳಿ. ಜಪತಪ ಹೆಚ್ಚು ಮಾಡಿ.

Monthly Horoscope For November 2024 Masika Rashi Bhavishya For 12 Zodiac Signs In Kannada

ಮೀನ ರಾಶಿಯ ಮಾಸ ಭವಿಷ್ಯ

ನೀವು ಸಾಡೆಸಾತಿಯ ಮೊದಲ ಭಾಗದಲ್ಲಿ ಇದ್ದೀರಿ. ಬಹಳಷ್ಟು ತೊಂದರೆಗಳನ್ನು , ಹಣದ ಅಡಚಣೆಗಳನ್ನು ಅನುಭವಿಸುತ್ತಿದ್ದೀರಿ. ಸಾಕಷ್ಟು ಅಪವಾದಗಳು ಕಿರಿಕಿರಿಗಳು ನಿಮ್ಮ ಜೀವನದಲ್ಲಿ ಉಂಟಾಗಿವೆ. ಜೀವನವೇ ಬೇಸರ ಬರುವಷ್ಟು ಮಾನಸಿಕ ಹಾಗೂ ಹಣಕಾಸಿನ ತೊಂದರೆಗಳನ್ನು ಅನುಭವಿಸುತ್ತಿದ್ದೀರಿ. ಕುಟುಂಬದಲ್ಲೂ ವಾತಾವರಣ ಅಷ್ಟೊಂದು ಹಿತಕರವಾಗಿಲ್ಲ. ಮನೆಯಲ್ಲಿ ದೊಡ್ಡವರಿಗೆ ಅನಾರೋಗ್ಯ ಮಾನಸಿಕ ಹಿಂಸೆ ಇದೆ. ನಿಮ್ಮ ಮೇಲೂ ಪರಿಣಾಮ ಬೀರಿದೆ. ಉತ್ಸಾಹ ಕಳೆದುಕೊಂಡಿದ್ದೀರಿ.

ಕೊಂಚ ದಿನಗಳು ಹೀಗೇ ಇರುತ್ತದೆ. ಸಾಡೆಸಾತಿ ಶನಿ ಯಾರನ್ನೂ ಬಿಟ್ಟಿಲ್ಲ. ಮನಸ್ಸನ್ನು ಗಟ್ಟಿ ಮಾಡಿಕೊಳ್ಳಿ. ಬುಧ ವೃಶ್ಚಿಕ ರಾಶಿಗೆ ಪ್ರವೇಶವಾದಾಗ ನಿಮಗೆ ಕೊಂಚ ಹಗುರ ಎನಿಸಲಿದೆ. ಕೆಲವೇ ದಿನಗಳಲ್ಲಿ ಶನಿ ನಿಮ್ಮ ರಾಶಿಗೇ ಪ್ರವೇಶವಾಗುತ್ತಾನೆ. ಆಗ ನಿಮಗೆ ಸಾಡೆಸಾತಿಯ ಮೊದಲ ಹಂತ ಮುಗಿಯುತ್ತದೆ. ಆದಷ್ಟು ಹನುಮಾನ್ ಧ್ಯಾನ ಮಾಡಿ. ವಿಷ್ಣು ಸಹಸ್ರನಾಮ ಹೇಳಿಕೊಳ್ಳಿ. ನಿಮ್ಮ ಕೈಲಾದಷ್ಟು ದಾನಧರ್ಮ ಮಾಡಿ. ಕೋಪಕ್ಕೆ ಬುದ್ಧಿ ಕೊಡಬೇಡಿ. ಮತ್ತೂ ಅನರ್ಥಗಳು ಆಗುತ್ತವೆ. ಯಾವುದೆ ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಭಾಯಿಸಿ. ಗುರು ಮೂರನೇ ಮನೆಯಲ್ಲಿ ಇರುವುದು ಅತ್ಯಲ್ಪ ಗುರುಬಲವನ್ನು ಸೂಚಿಸುತ್ತಿದೆ. ಈಗ ನಿಮಗೆ ಸಹನೆಯೇ ಸರ್ವಸ್ವ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+