2025 Horoscope: ಹೊಸ ವರ್ಷದಿಂದ ಬದಲಾಗಲಿದೆ ಈ ರಾಶಿಗಳ ಅದೃಷ್ಟ: ಹಣವೋ ಹಣ

ಕ್ರೋಧಿ ಮತ್ತು ವಿಶ್ವಾವಸು ನಾಮ ಸಂವತ್ಸರದ ದ್ವಾದಶರಾಶಿಗಳ ಫಲಾಫಲಗಳು.

ತಾ.01.01.2025 ರಿಂದ 31.12.2025

ಈ ವರ್ಷದ ಆದಿಯಲ್ಲಿ ಅಂದರೆ ಮಾರ್ಚ್ 29. 2025 ರಂದು ಶನಿ ತಾನು ಇದುವರೆಗೂ ಇದ್ದ ಕುಂಭರಾಶಿಯನ್ನು ಬಿಟ್ಟು ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ. ತಾ. 14.05.25 ರಂದು ಗುರು ತಾನು ಇದುವರೆಗೂ ಇದ್ದ ವೃಷಭ ರಾಶಿಯನ್ನು ಬಿಟ್ಟು ಮಿಥುನ ರಾಶಿಗೆ ಪ್ರವೇಶ ಮಾಡುತ್ತಾನೆ. ರಾಹು ಕೇತುಗಳು 20.05.24 ರಂದು ತಾವು ಇದುವರೆಗೂ ಇದ್ದ ಮೀನ-ಕನ್ಯಾ ರಾಶಿಯನ್ನು ಬಿಟ್ಟು ಕುಂಭ-ಸಿಂಹ ರಾಶಿಗೆ ಪ್ರವೇಶ ಮಾಡುತ್ತಾರೆ.

ಈ ವರ್ಷದ ಆರಂಭದಲ್ಲೇ ಮಕರ ರಾಶಿಗೆ ಸಾಡೆಸಾತಿ ಶನಿಯಿಂದ ಮುಕ್ತಿ ದೊರೆತು. ಈ ರಾಶಿಯವರು ಗ್ರಹಣ ಬಿಟ್ಟ ಸೂರ್ಯನಂತೆ ಪ್ರಕಾಶಿಸುತ್ತಾರೆ. ಮೇಷರಾಶಿಗೆ ಸಾಡೆಸಾತಿ ಶನಿ ಪ್ರಾರಂಭ. ಸಿಂಹ ರಾಶಿಗೆ ಅಷ್ಟಮ ಶನಿ ಪ್ರಾರಂಭ. ವೃಶ್ಚಿಕ ರಾಶಿಗೆ ಪಂಚಮ ಶನಿ ಪ್ರಾರಂಭ.

ಈ ವರ್ಷದ ಅದೃಷ್ಟದ ರಾಶಿಗಳು ವೃಷಭ, ತುಲಾ, ಧನಸ್ಸು, ಮಕರ. ಮಧ್ಯಮ ಫಲದ ರಾಶಿಗಳು ಮೇಷ, ಮಿಥುನ ಸಿಂಹ, ಕನ್ಯಾ, ಕುಂಭ. ಯಾವ ಗ್ರಹಗಳ ಬಲವೂ ಇಲ್ಲದ ರಾಶಿಗಳು ಕಟಕ, ವೃಶ್ಚಿಕ, ಮೀನ.

ದ್ವಾದಶ ರಾಶಿಗಳ ಗೋಚಾರಫಲ

Monthly Horoscope For January 2025 Masika Rashi Bhavishya For 12 Zodiac Signs In Kannada

ಮೇಷ ರಾಶಿ ಭವಿಷ್ಯ

ಈ ವರ್ಷದ ಆದಿಯಿಂದಲೇ ನಿಮಗೆ ಸಾಡೆಸಾತಿಯ ಪ್ರಭಾವ ಪ್ರಾರಂಭವಾಗುತ್ತದೆ. ಹಣಕಾಸಿಗೆ ಒತ್ತಡ ಬರಬಹುದು. ಖರ್ಚುಗಳು ಹೆಚ್ಚಾಗಬಹುದು. ಯಾವುದಾದರೂ ನೀವು ಯೋಚಿಸಿಕೊಂಡ ಯೋಜನೆಗಳು ಮುಂದುವರೆಯದೆ ನಿಂತಲ್ಲೇ ನಿಲ್ಲಬಹುದು. ಹಣಕಾಸಿನ ಖರ್ಚು ಹೆಚ್ಚಾದರೂ ಹಣದ ಹರಿವು ಉತ್ತಮವಾಗಿದೆ. ಏಕೆಂದರೆ ಮೇ ವರೆಗೂ ಗುರುಬಲ ಇರುತ್ತದೆ. ಎರಡನೇ ಮನೆಯಲ್ಲಿ ಗುರು ಇರುವುದು ಧನಲಾಭ ಕೊಡುತ್ತದೆ.

ಮೇ ತಿಂಗಳಲ್ಲಿ ಗುರು ಮೂರನೇ ಪವೇಶ್ರವಾಗುತ್ತಾನೆ ಆದರೆ ರಾಹು ಲಾಭ ಸ್ಥಾನಕ್ಕೆ ಬರುತ್ತಾನೆ. ಹೀಗಾಗಿ ರಾಹು ನಿಮಗೆ ಹಣ ಸಮಯಕ್ಕೆ ಒದಗುವಂತೆ ಮಾಡುತ್ತಾನೆ. ಈ ಮಾಸದಲ್ಲೂ ನಿಮಗೆ ಲಾಭದ ಅಂಶಗಳು ಇವೆ. ಎರಡನೇ ಮನೆಯ ಅಧಿಪತಿ ಶುಕ್ರ ಲಾಭಸ್ಥಾನದಲ್ಲಿ ಇದ್ದು ಹಣಕಾಸಿನ ನೆರವನ್ನು ಕೊಡುತ್ತಾನೆ. ಆರನೇ ಮನೆಯಲ್ಲಿ ಇರುವ ಕೇತು ಸಹ ನಿಮ್ಮಶಕ್ತಿಯನ್ನು ಹೆಚ್ಚಿಸುತ್ತಾನೆ. ಈ ವರ್ಷ ನೀವು ಆದಷ್ಟು ಆಂಜನೇಯನ ಆರಾಧನೆ ಮಾಡಿ.

Monthly Horoscope For January 2025 Masika Rashi Bhavishya For 12 Zodiac Signs In Kannada

ವೃಷಭ ರಾಶಿ ಭವಿಷ್ಯ

ಈ ವರ್ಷದ ಆದಿಯಿಂದಲೇ ನಿಮಗೆ ಲಾಭಕರ ಹಾಗೂ ಶುಭಕರ ಅಂಶಗಳು ಗೋಚರಿಸುತ್ತವೆ. ಅವಿವಾಹಿತರಿಗೆ ಈ ವರ್ಷ ವಿವಾಹವಾಗುತ್ತದೆ. ನೌಕರಿಯಲ್ಲಿ ಬಡ್ತಿ, ಯಶಸ್ಸು ಕೀರ್ತಿ ಸಿಗುತ್ತದೆ. ಮಾರ್ಚಿನಲ್ಲಿ ಶನಿಯ 11 ನೇ ಮನೆಯ ಪ್ರವೇಶದಿಂದ ನಿಮ್ಮ ಜೀವನದಲ್ಲಿ ಮಹತ್ತರ ಬದಲಾವಣೆ ಇದೆ. ಇದು ನಿಮ್ಮ ಭಾಗ್ಯದ ಬಾಗಿಲನ್ನು ತೆರೆಯುತ್ತದೆ. ಮೇನಲ್ಲಿ ಗುರು ಎರಡನೇ ಮನೆಗೆ ಪ್ರವೇಶವಾಗುವುದು ನಿಮಗೆ ಇನ್ನಷ್ಟು ಬಲ ಹಾಗೂ ಲಾಭ.

ಶನಿ ಹಾಗೂ ಗುರುವಿನ ಅನುಗ್ರಹ ಈ ವರ್ಷಪೂರ್ತಿ ನಿಮ್ಮ ಮೇಲೆ ಇರುತ್ತದೆ. ನೀವು ಸಾಧಿಸಿಕೊಳ್ಳಬೇಕೆಂದಿದ್ದ ಎಲ್ಲ ವಿಷಯದಲ್ಲೂ ಯಶಸ್ಸು ಗೆಲುವು ಇದೆ. ವೈರಿಗಳು ದೂರವಾಗುತ್ತಾರೆ. ಸಾಲ ತೀರಿಸುತ್ತೀರಿ. ಈ ಮಾಸವೂ ಸಹ ನಿಮಗೆ ಅನುಕೂಲಕರವಾಗಿದೆ. ಲಾಭದಲ್ಲಿ ರಾಹು ಇದ್ದು ಹಣದ ಅಡಚಣೆ ಇರುವುದಿಲ್ಲ. ಮೂರನೇ ಮನೆಯಲ್ಲಿ ಕುಜ ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತಾನೆ. ಒಳ್ಳೆಯ ರಾಜಯೋಗ ಅನುಭವಿಸುತ್ತೀರಿ. ದುರ್ಗಾದೇವಿಯನ್ನು ಆರಾಧಿಸಿ.

Monthly Horoscope For January 2025 Masika Rashi Bhavishya For 12 Zodiac Signs In Kannada

ಮಿಥುನ ರಾಶಿ ಭವಿಷ್ಯ

ನಿಮಗೆ ಈ ವರ್ಷ ಹೆಚ್ಚಿನದೇನೂ ಲಾಭ ಇಲ್ಲದಿದ್ದರೂ ಮೇ ನಲ್ಲಿ ಕೇತು ಮೂರನೇ ಬರುತ್ತಾನೆ. ಅದು ನಿಮಗೆ ಹಣವನ್ನೂ ಶಕ್ತಿಯನ್ನೂ ಕೊಟ್ಟು ಕಾಪಾಡುತ್ತದೆ. ವೈರಿಗಳನ್ನು ದೂರಮಾಡುತ್ತದೆ. ಇಷ್ಟು ನಾಲ್ಕನೇ ಮನೆಯಲ್ಲಿ ಇದ್ದ ಕೇತುವಿನಿಂದ ದೈಹಿಕವಾಗಿ ಕೆಲವು ನೋವುಗಳನ್ನು ಅನುಭವಿಸಿದ್ದೀರಿ. ಕಾಲು ನೋವು ಮಂಡಿನೋವು ಇಂತಹ ತೊಂದರೆಗಳಿರುವವರಿಗೆ ಮೇ ಯಿಂದ ಪರಿಹಾರ ಸಿಗುತ್ತದೆ.

ಹತ್ತನೇ ಮನೆಗೆ ಶನಿಯ ಪ್ರವೇಶ ಹಾಗೂ ನಿಮ್ಮ ರಾಶಿಗೆ ಗುರುವಿನ ಪ್ರವೇಶ ನಿಮಗೆ ಅಷ್ಟು ಪ್ರಯೋಜನಕಾರಿ ಅಲ್ಲ. ಈ ವರ್ಷ ಪೂರ್ತಿ ನಿಮಗೆ ಕೇತು ಒಬ್ಬನೇ ಹಿತೈಷಿ. ಈ ಮಾಸದಲ್ಲಿ ಹೆಚ್ಚಿನ ಲಾಭ ಇಲ್ಲದಿದ್ದರೂ ತೊಂದರೆ ಏನೂ ಇಲ್ಲ. ಒತ್ತಡಗಳೊಂದಿಗೆ ಸಾಗುತ್ತದೆ. ಯಾವುದೇ ಹೊಸ ಯೋಜನೆಗಳಿಗೆ ಕೈ ಹಾಕಬೇಡಿ. ಶೇರ್ಸ್ ನಲ್ಲಿ ಹಣ ಹೂಡಬೇಡಿ. ಸ್ತಿರಾಸ್ತಿ ಚರಾಸ್ತಿ ಕೊಡುಕೊಳ್ಳುವಿಕೆ ಮುಂದಕ್ಕೆ ಹಾಕಿ. ಹಣಕಾಸಿನ ಅಡಚಣೆ ಮೇ ನಂತರ ಕೊಂಚ ತಹಬದಿಗೆ ಬರುತ್ತದೆ. ಈಶ್ವರನನ್ನು ಆರಾಧಿಸಿ.

Monthly Horoscope For January 2025 Masika Rashi Bhavishya For 12 Zodiac Signs In Kannada

ಕಟಕ ರಾಶಿ ಭವಿಷ್ಯ

ಈಗ ಕಟಕರಾಶಿಗೆ ಮೂರನೇ ಮನೆಯಲ್ಲಿ ಕೇತು ಲಾಭಸ್ಥಾನದಲ್ಲಿ ಗುರು ಇದ್ದಾರೆ. ಮೇ ವರೆಗೂ ನಿಮ್ಮ ಎಲ್ಲ ಕೆಲಸಗಳೂ ಸಲೀಸಾಗಿ ನಡೆಯುತ್ತದೆ. ಈ ಜನವರಿಯಿಂದಲೇ ನಿಮ್ಮ ಅಷ್ಟಮಶನಿಯ ಪ್ರಭಾವ ಕಡಿಮೆಯಾಗುತ್ತದೆ. ನೀವು ಯೋಜಿಸಿದ್ದ ಕೆಲಸಕಾರ್ಯಗಳು ಒಂದೊಂದೇ ಮರುಚಾಲನೆ ಪಡೆದುಕೊಳ್ಳುತ್ತದೆ. ಜನವರಿಯಲ್ಲಿ ಎಂಟನೇ ಮನೆಗೆ ಬಂದು ಸೇರುವ ಶುಕ್ರನಿಂದ ಸಹ ಶುಭಫಲಗಳಿವೆ.

ಮೇ ವರೆಗೂ ಗುರುಬಲ ಇರುವುದರಿಂದ ನಿಮ್ಮ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಳ್ಳಿ. ನಂತರ ಗುರು ವ್ಯಯಸ್ಥಾನಕ್ಕೆ ಬರುತ್ತಾನೆ. ಒಂದು ಸಣ್ಣ ಸ್ಥಳ ಬದಲಾವಣೆ ಯೋಗ ಇದೆ. ಧರ್ಮ ಕಾರ್ಯಕ್ಕೆ ದೈವಕಾರ್ಯಕ್ಕೆ ಹಣ ವ್ಯಯವಾಗುತ್ತದೆ. ಮೇ ನಂತರ ರಾಹು ಎಂಟನೇ ಮನೆಗೆ ಬಂದರೂ ನಿಮಗೆ ಹೆಚ್ಚಿನ ತೊಂದರೆ ಇಲ್ಲ. ಕುಂಭರಾಶಿ ರಾಹುವಿಗೆ ಸ್ವಂತ ಮನೆ ಇದ್ದಂತೆ ಹಾಗಾಗಿ ಅಷ್ಟಮರಾಹು ನಿಮಗೇನೂ ತೊಂದರೆ ಮಾಡುವುದಿಲ್ಲ. ನೀವು ಸುಬ್ರಹ್ಮಣ್ಯನನ್ನು ಆರಾಧಿಸಿ.

Monthly Horoscope For January 2025 Masika Rashi Bhavishya For 12 Zodiac Signs In Kannada

ಸಿಂಹ ರಾಶಿ ಭವಿಷ್ಯ

ಈ ವರ್ಷದ ಪ್ರಾರಂಭದಲ್ಲೇ ನಿಮಗೆ ಅಷ್ಟಮಶನಿಯ ಪ್ರಭಾವ ಅನುಭವಕ್ಕೆ ಬರಲಿದೆ. ಮಾರ್ಚಿನಲ್ಲಿ ಶನಿ ಮೀನರಾಶಿಗೆ ಪ್ರವೇಶವಾಗುವುದು ನಿಮಗೆ ಕೊಂಚ ಹಿನ್ನಡೆ. ಹಣಕಾಸಿನ ಖರ್ಚು, ಬೇಡದ ರಗಳೆಗಳು, ಅಪವಾದ, ಅವಮಾನ, ಯಾವುದೇ ಯೋಜನೆ ಮುಂದಕ್ಕೆ ಹೋಗದೆ ನಿಂತ್ತಲ್ಲೇ ಇರುವುದು ಹೀಗೆಲ್ಲ ಇರುತ್ತದೆ. ಸಿಂಹರಾಶಿಯ ರಾಜಕೀಯ ವ್ಯಕ್ತಿಗಳಿಗೆ ಆದಾಯತೆರಿಗೆ ಮುಂತಾದ ಸಂಸ್ಥೆಗಳಿಂದ ದಾಳಿ ಆಗುವುದು, ಅಪಪ್ರಚಾರ ಇಂಥವೆಲ್ಲ ನಡೆಯುತ್ತದೆ. ಸಾಧ್ಯವಾದಷ್ಟು ಜಾಗರೂಕರಾಗಿರಿ. ಯಾವುದೇ ಹೊಸ ಯೋಜನೆ ಕೈಗೊಳ್ಳಬೇಡಿ. ಯಾರೊಂದಿಗೂ ಮನಸ್ತಾಪ ಜಗಳ ಬೇಡ.

ಮೇ ನಂತರ ಗುರುಬಲ ಬಂದು ಕೊಂಚ ಉಸಿರಾಡುವಷ್ಟು ಅವಕಾಶ ಸಿಕ್ಕರೂ ಅಷ್ಟಮ ಶನಿಯ ಪ್ರಭಾವ ಮೇಲಾಗಿರುತ್ತದೆ. ಸಣ್ಣ ಸಣ್ಣ ಪರಿಹಾರದ ದಾರಿಗಳು ಮೇ ನಂತರ ಕಾಣುತ್ತದೆ. ನಿಮ್ಮ ರಾಶೀಗೇ ಕೇತು ಬರುವುದರಿಂದಲೂ ಕೊಂಚ ಕಿರಿಕರಿ ಇರುತ್ತದೆ. ಈ ಮಾಸದಲ್ಲಿ 14 ರ ನಂತರ ಆರನೇ ಮನೆಗೆ ಸೂರ್ಯ ಪ್ರವೇಶವಾದಾಗ ನಿಮಗೆ ಹಣದ ಹರಿವು ಉತ್ತಮವಾಗಿ, ಕೆಲಸಕಾರ್ಯಗಳು ನಿಧಾನವಾಗಿಯಾದರೂ ಮುನ್ನಡೆಯುತ್ತದೆ. ಕುಜ ಹನ್ನೊಂದನೇ ಮನೆಯಲ್ಲಿ ಇರುವುದು ಧನಾಗಮನಕ್ಕೆ ಕೊಂಚ ಸಹಾಯವಾಗುತ್ತದೆ. ಗುರುಗಳ ಪ್ರಾರ್ಥನೆ ಈಗ ನಿಮಗೆ ಹಿತಕಾರಿ.

Monthly Horoscope For January 2025 Masika Rashi Bhavishya For 12 Zodiac Signs In Kannada

ಕನ್ಯಾ ರಾಶಿ ಭವಿಷ್ಯ

ಇದುವರೆಗೂ ಆರನೇ ಮನೆಯ ಶನಿಯಿಂದ ಬಹಳ ಒಳ್ಳೆಯ ಫಲಗಳನ್ನು ಧನಲಾಭವನ್ನೂ ಅನುಭವಿಸಿದ್ದೀರಿ. ಈಗ ಮಾರ್ಚ್‌ನಲ್ಲಿ ಶನಿಯ ಏಳನೇ ಮನೆ ಪ್ರವೇಶ ನಿಮಗೆ ಅಷ್ಟೇನೂ ಲಾಭ ಕೊಡುವುದಿಲ್ಲ. ಗುರು ಕೂಡ ವರ್ಷದ ಮೊದಲಲ್ಲಿ ಭಾಗ್ಯಸ್ಥಾನದಲ್ಲಿ ಇದ್ದು ಒಳ್ಳೆಯ ಫಲಗಳನ್ನು ಕೊಡುತ್ತಾನೆ. ಮೇ ನಂತರ ಗುರು ದಶಮ ಸ್ಥಾನಕ್ಕೆ ಬಂದು ಗುರು ಬಲ ಕಡಿಮೆಯಾಗುತ್ತದೆ. ಉದ್ಯೋಗದಲ್ಲಿ ಸ್ಥಾನಪಲ್ಲಟ ಆಗಬಹುದು. ಹಣಕಾಸಿನ ಪರಿಸ್ಥಿತಿ ಏರುಪೇರು ಆಗಬಹುದು.

ಶನಿ-ಗುರು ಇಬ್ಬರ ಅನುಗ್ರಹವನ್ನೂ ಕಳೆದುಕೊಂಡ ನಿಮಗೆ ರಾಹು ಆರನೇ ಮನೆಗೆ ಪ್ರವೇಶ ಮಾಡಿ ನಿಮ್ಮ ಕಾಪಾಡುತ್ತಾನೆ. ಕೈ ಹಿಡಿಯುತ್ತಾನೆ. ಆರನೇ ಮನೆಯ ರಾಹು ಪರಾಕ್ರಮವನ್ನೂ , ಹಣದ ಬಲವನ್ನೂ ಕೊಡುತ್ತಾನೆ. ಈ ಮಾಸದಲ್ಲಿ ಅಷ್ಟೇನೂ ಹೆಚ್ಚಿನ ಬೆಳವಣಿಗೆ ನಿಮ್ಮ ರಾಶಿಗೆ ಇಲ್ಲ. ಮೇವರೆಗೂ ಕಾಯಬೇಕು. ಮೇ ನಂತರ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಕೇತು ನಿಮ್ಮ ರಾಶಿಯನ್ನು ಬಿಟ್ಟು 12ನೇ ಮನೆಯಾದ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ. ಇದೂ ಕೂಡ ನಿಮ್ಮ ಅನೇಕ ತೊಂದರೆಗಳನ್ನು ನಿವಾರಿಸುತ್ತದೆ.

Monthly Horoscope For January 2025 Masika Rashi Bhavishya For 12 Zodiac Signs In Kannada

ತುಲಾ ರಾಶಿ ಭವಿಷ್ಯ

ಈ ವರ್ಷ ಪೂರ್ತಿ ನಿಮಗೆ ಅದೃಷ್ಟದ ವರ್ಷ. ನಿಮಮ ಆಸೆ-ಕನಸು-ಯೋಜನೆಗಳು ನೆರವೇರುವ ವರ್ಷ. ಮೇ ತಿಂಗಳಲ್ಲಿ ಗುರು ಒಂಬತ್ತನೇ ಮನೆಗೆ, ಕೇತು ಹನ್ನೊಂದನೇ ಮನೆಗೆ, ಹಾಗೂ ಶನಿ ಆರನೇ ಮನೆಗೆ ಬರುವುದು ನಿಮಗೆ ಎಂದೂ ಊಹಿಸದಿದ್ದ ಲಾಭ ತಂದುಕೊಡುತ್ತದೆ. ಶತ್ರುಗಳು ದೂರವಾಗುತ್ತಾರೆ. ಹಣದ ಹರಿವು ಬಹಳ ಉತ್ತಮವಾಗಿದೆ. ಯಾವುದಾದರೂ ಬಾಕಿ ಉಳಿದಿದ್ದ ಹಣ ವಸೂಲಾಗುತ್ತದೆ. ಪಿತ್ರಾರ್ಜಿತ ಆಸ್ತಿ ಕೈಸೇರುತ್ತದೆ. ಕೋರ್ಟು ಕಚೇರಿಯ ಕೇಸು ಇದ್ದರೆ ಜಯ ನಿಮಗೆ ಲಭಿಸುತ್ತದೆ. ಪ್ರಕರಣಗಳು ನಿಮಗೆ ಬಹುದೊಡ್ಡ ನಿರಾಳತೆ ಕೊಡುತ್ತದೆ.

ಹೊಸಮನೆ, ವಾಹನ ಖರೀದಿಯೋಗ ಇದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ತೀರ್ಥಯಾತ್ರೆ ವಿಹಾರ ಪ್ರವಾಸ ವಿದೇಶಯಾತ್ರೆ ಎಲ್ಲವೂ ಈವರ್ಷ ನೀವು ಅನುಭವಿಸುವುರಿ. ಈ ಮಾಸದ ಲೆಕ್ಕದಲ್ಲಿ ಎರಡನೇ ಮನೆಯ ಬುಧ ಮೂರನೇ ಮನೆಯಲ್ಲಿ ಸೂರ್ಯ ಹಾಗೂ ನಾಲ್ಕನೇ ಮನೆಯಲ್ಲಿ ಶುಕ್ರ. ಆರನೇ ಮನೆಯಲ್ಲಿ ರಾಹು ನಿಮಗೆ ಬೆಂಬಲವಾಗಿ ಇದ್ದಾರೆ. ಹಣದ ಹರಿವು ಉತ್ತಮವಾಗಿದೆ. ವಾಹನದಿಂದ ಲಾಭ ಇದೆ.

Monthly Horoscope For January 2025 Masika Rashi Bhavishya For 12 Zodiac Signs In Kannada

ವೃಶ್ಚಿಕ ರಾಶಿ ಭವಿಷ್ಯ

ಈ ವರ್ಷದ ಆದಿಯಿಂದಲೇ ನಿಮಗೆ ಪಂಚಮ ಶನಿಯ ಪ್ರಭಾವ ಗೋಚರಿಸುತ್ತದೆ. ಮಾರ್ಚಿ ತಿಂಗಳಳ್ಲಿ ಶನಿ ಐದನೇ ಮನೆಗೆ ಪ್ರವೇಶವಾಗುವುದು ಅಷ್ಟೇನೂ ನಿಮಗೆ ಲಾಭಕರವಲ್ಲ. ಕೆಲಸಗಳು ನಿಮ್ಮ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತದೆ. ಹಣಕಾಸಿನ ಭಾವ ಕಾಡಬಹುದು. ಅನಾರೋಗ್ಯ ಆಗಬಹುದು. ಎಚ್ಚರಿಕೆಯಿಂದ ಇರಿ. ನಾಲ್ಕನೇ ಮನೆಯಲ್ಲಿ ರಾಹು ಹಾಗೂ ಐದನೇ ಮನೆಯ ಶನಿ ಇಬ್ಬರೂ ನಿಮಗೆ ವಿರೋಧವಾಗಿಯೇ ಇದ್ದಾರೆ.

ವೃಥಾ ತಿರುಗಾಟ, ನೆಮ್ಮದಿಯಿಲ್ಲದ ದಿನಗಳು ಇರುತ್ತವೆ. ಆದಷ್ಟು ಎಲ್ಲ ಕೆಲಸಗಳನ್ನು ಯೋಜನಾಬದ್ಧವಾಗಿ ಮಾಡಿಕೊಳ್ಳಿ. ಮೇ ವರೆಗೂ ಗುರುಬಲ ಇರುವುದರಿಂದ ಭಯವಿಲ್ಲ ಗುರು ಬೆಂಬಲ ಕೊಡುತ್ತಾನೆ. ಮೇ ನಂತರ ಕೊಂಚ ಬಿಸಿಬಿಸಿ ವಾತಾವರಣ ಅನುಭವವಾಗುತ್ತದೆ. ಈ ಮಾಸದ ಪ್ರಕಾರ ಮೂರನೇ ಮನೆಯಲ್ಲಿ ಶುಕ್ರ, ನಿಮ್ಮ ರಾಶಿಯಲ್ಲೇ ಬುಧ ಇರುವುದು ನಿಮಗೆ ಅಧಿಕ ಲಾಭದಾಯಕವಾಗಿದೆ. ಏಳನೇ ಮನೆಯಲ್ಲಿ ಗುರು ಇರುವುದು ಮನೆಯಲ್ಲಿ ಶುಭಕಾರ್ಯ ನಡೆಯುವ ಸಂಭವ ತೋರಿಸುತ್ತದೆ. ಹಣದ ಹರಿವು ಉತ್ತಮವಾಗಿದೆ.

Monthly Horoscope For January 2025 Masika Rashi Bhavishya For 12 Zodiac Signs In Kannada

ಧನಸ್ಸು ರಾಶಿ ಭವಿಷ್ಯ

ಈ ವರ್ಷ ನಿಮಗೆ ಅದೃಷ್ದ ವರ್ಷ. ಇದುವರೆಗೂ ಶನಿ ಮೂರನೇ ಮನೆಯಲ್ಲಿ ಇದ್ದು ನಿಮ್ಮನ್ನು ಬೆಂಬಲಿಸುತ್ತಿದ್ದ. ಮಾರ್ಚಿನಲ್ಲಿ ಶನಿ ನಾಲ್ಕನೇ ಮನೆಗೆ ಪ್ರವೇಶವಾಗುತ್ತಾನೆ. ಆದರೆ ಮೇ ತಿಂಗಳಲ್ಲಿ ರಾಹು ಈಗ ಇರುವ ನಾಲ್ಕನೇ ಮನೆಯಿಂದ ಮೂರನೇ ಮನೆಗೆ ಪ್ರವೇಶವಾಗುವುದು ನಿಮಗೆ ಅದೃಷ್ಟ ತರುತ್ತದೆ. ನಾನಾ ಮೂಲಗಳಿಂದ ಧನಲಾಭ ಇದೆ. ನೀವು ಅಂದುಕೊಂಡ ಕೆಲಸಕಾರ್ಯಗಳು ಶೀಘ್ರವಾಗಿ ನೆರವೇರುತ್ತದೆ. ಮೇ ತಿಂಗಳಲ್ಲಿ ಗುರು ಏಳನೇ ಮನೆಗೆ ಬರುವುದರಿಂದ ವೃತ್ತಿಯಲ್ಲಿ ಅಭಿವೃದ್ಧಿ, ಯಶಸ್ಸು, ಬಡ್ತಿ ಸಿಗುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ.

ನಿಮ್ಮ ಬಂಧುಬಳಗ ಸ್ನೇಹಿತರೊಡನೆ ಸೇರಿ ಸಂತೋಷವಾಗಿ ಇರುವಿರಿ. ಹೆಚ್ಚು ಹೆಚ್ಚು ಮನಸ್ಸಿಗೆ ಸಂತೋಷ ನೀಡುವ ಘಟನೆಗಳು ಎದುರಾಗುತ್ತದೆ. ಕೋರ್ಟು ಕಚೇರಿ ಪ್ರಕರಣಗಳು ನಿಮಗೆ ಜಯ ತಂದುಕೊಡುತ್ತದೆ. ಈ ಮಾಸದ ಅವಧಿಗೆ ಶುಕ್ರ ಎರಡನೇ ಹಾಗೂ ಶನಿ ಮೂರನೇ ಮನೆಯಲ್ಲಿ ಇರುವುದು ಹಣದ ಹರಿವಿಗೆ ತೊಂದರೆ ಇಲ್ಲದಿದ್ದರೂ ಆರನೇ ಮನೆಯ ಗುರು ಮಾನಸಿಕ ಹಿಂಸೆ ಕೊಡುತ್ತಾನೆ. ಆದಷ್ಟು ಯಾರೊಂದಿಗೂ ವಾಗ್ವಾದಕ್ಕೆ ಹೋಗಬೇಡಿ. ಅಲಂಕಾರಿಕ ಸಾಮಗ್ರಿಗಳಿಗೆ ಖರ್ಚು ಮಾಡುತ್ತೀರಿ.

Monthly Horoscope For January 2025 Masika Rashi Bhavishya For 12 Zodiac Signs In Kannada

ಮಕರ ರಾಶಿ ಭವಿಷ್ಯ

ನಿಮಗೆ ಹೊಸವರ್ಷದ ಮೊದಲ ದಿನದಿಂದಲೇ ಒಂದು ವಿಧದ ನಿರಾಳತೆ ಅನುಭವಿಸುತ್ತೀರಿ. ಸುಮಾರು ಏಳು ವರ್ಷಗಳಿಂದ ಸಾಡೆಸಾತಿಯ ಪ್ರಭಾವಕ್ಕೆ ಸಿಕ್ಕು ಬಹಳ ನುಜ್ಜುಗಜ್ಜಾಗಿದ್ದೀರಿ. ಈಗ ಜನವರಿಯಿಂದಲೇ ಸಾಡೆಸಾತಿ ಶನಿಯ ಪ್ರಭಾವ ನಿಮ್ಮಿಂದ ದೂರವಾಗುತ್ತದೆ. ಮೇ ತಿಂಗಳಲ್ಲಿ ಮೂರನೇ ಮನೆಗೆ ಶನಿ ಪ್ರವೇಶವಾಗುತ್ತಾನೆ. ಇದು ನಿಮಗೆ ಬಹುದೊಡ್ಡ ಶಕ್ತಿ ನೀಡುತ್ತದೆ. ಮೂರನೇ ಮನೆಯಲ್ಲಿ ಶನಿ-ರಾಹು, ಐದನೇ ಮನೆಯಲ್ಲಿ ಗುರು ನಿಮ್ಮ ಆಸೆ ಕನಸು ನಿರೀಕ್ಷೆಗಳನ್ನು ಈಡೇರಿಸುತ್ತಾರೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ಬಡ್ತಿ, ಉನ್ನತ ಪದವಿ ಅಧಿಕಾರ ಸಿಗುವ ಯೋಗ ಇದೆ.

ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ವಿದೇಶಪ್ರಯಾಣ ಯೋಗ ಇದೆ. ಉನ್ನತಶಿಕ್ಷಣಕ್ಕೆ ಅವಕಾಶಗಳು ದೊರೆಯುತ್ತದೆ. ನಿಮ್ಮ ವಿರುದ್ಧ ಕೋರ್ಟಿನಲ್ಲಿ ಪ್ರಕರಣಗಳು ಇದ್ದಲ್ಲಿ ಅದರಿಂದ ನಿರಾಳತೆ ಸಿಗುತ್ತದೆ. ಮೇ ತಿಂಗಳಲ್ಲಿ ಗುರು ಆರನೇ ಮನೆಗೆ ಪ್ರವೇಶವಾದರೂ ನೀವು ಅಂಜಬೇಕಿಲ್ಲ. ಶನಿ ಮೂರನೇ ಮನೆಯಲ್ಲಿ ಈ ವರ್ಷಪೂರ್ತಿ ಇದ್ದು ನಿಮ್ಮನ್ನು ಅನುಗ್ರಹಿಸುತ್ತಾನೆ. ಈ ಮಾಸದ ಪ್ರಕಾರ ಶನಿ ಶುಕ್ರ ಎರಡನೇ ಮನೆಯಲ್ಲಿ ಇದ್ದು ನಿಮಗೆ ಧನಲಾಭ ಕಾರ್ಯ ಸಿದ್ಧಿ ಕೊಡುತ್ತಾರೆ. ಅವಕಾಶಗಳು ಬಂದು ಬಾಗಿಲು ತಟ್ಟುತ್ತವೆ.

Monthly Horoscope For January 2025 Masika Rashi Bhavishya For 12 Zodiac Signs In Kannada

ಕುಂಭ ರಾಶಿ ಭವಿಷ್ಯ

ಕಳೆದ ಐದುವರ್ಷಗಳಿಂದ ಸಾಡೆಸಾತಿ ಶನಿಯ ಹಿಡಿತಕ್ಕೆ ಸಿಕ್ಕಿ ಬಹಳ ಕಷ್ಟನಷ್ಟಗಳನ್ನು ಅನುಭವಿಸಿದ್ದೀರಿ. ಈ ಮಾರ್ಚಿ ತಿಂಗಳಿಗೆ ಸಾಡೆಸಾತಿಯ ಐದು ವರ್ಷಗಳು ಕಳೆದುಹೋಗುತ್ತದೆ. ಉಳಿದ ಕಡೆಯ ಎರಡೂವರೆ ವರ್ಷ ಅಷ್ಟೇನೂ ತೊಂದರೆ ಮಾಡುವುದಿಲ್ಲ. ಮೇ ಯಿಂದ ಗುರುಬಲ ಸಿಗುತ್ತದೆ. ಹೀಗಾಗಿ 2025 ನಿಮಗೆ ಆಶಾದಾಯಕ ವರ್ಷ. ಇಷ್ಟು ದಿನ ಹಿಂದೆ ಬಿದ್ದಿದ್ದ ಕೆಲಸಗಳು ಈಗ ಚಾಲನೆ ಪಡೆದುಕೊಳ್ಳುತ್ತದೆ. ನಿಮ್ಮ ದಿನಚರಿ ಚುರುಕಾಗುತ್ತದೆ. ನೀವು ಯಾವುದಕ್ಕೆ ಕಾಯುತ್ತಿದ್ದೀರೋ ಆ ಕೆಲಸ ಈಗ ಮುಂಚೂಣಿಗೆ ಬರುತ್ತದೆ. ನಿಮ್ಮನ್ನು ಕ್ರಿಯಾಶಿಲರನ್ನಾಗಿ ಮಾಡುತ್ತದೆ.

ಅವಿವಾಹಿತರಿಗೆ ವಿವಾಹ, ವಿದೇಶ ಯಾತ್ರೆ ಮಾಡಬಯಸುವವರಿಗೆ ವೀಸಾ ಸಿಕ್ಕಿ ಎಲ್ಲ ದಾರಿಗಳೂ ಸರಾಗವಾಗುವುದು, ಉನ್ನತ ವ್ಯಾಸಂಗಕ್ಕೆ ಅವಕಾಶ ಸಿಗುವುದು ಕೆಲಸದಲ್ಲಿ ಬಡ್ತಿ, ಆಸ್ತಿ ಕೊಳ್ಳುವುದು ಮುಂತಾದ ಒಳ್ಳೆಯ ಸಂಗತಿಗಳು ಈ ಹೊಸವರ್ಷದಲ್ಲಿ ನಡೆಯುತ್ತದೆ. ಈ ಮಾಸದ ಪ್ರಕಾರ ಶುಕ್ರ ನಿಮ್ಮ ರಾಶಿಯಲ್ಲೇ ಇದ್ದು, ಆರನೇ ಮನೆಯಲ್ಲಿ ಕುಜ, ಲಾಭಸ್ಥಾನದಲ್ಲಿ ಮನೆಯಲ್ಲಿ ಬುಧ ನಿಮ್ಮ ಧನಾಗಮನವನ್ನು ಉತ್ತಮಗೊಳಿಸುತ್ತಾರೆ.

Monthly Horoscope For January 2025 Masika Rashi Bhavishya For 12 Zodiac Signs In Kannada

ಮೀನ ರಾಶಿ ಭವಿಷ್ಯ

ನೀವು ಸಾಡೆಸಾತಿಶನಿಯ ಮೊದಲ ಭಾಗದಲ್ಲೇ ಇದ್ದೀರಿ. ಮಾರ್ಚ್‌ನಲ್ಲಿ ಮೊದಲ ಭಾಗ ಮುಗಿದು 2ನೇ ಭಾಗ ಶುರುವಾಗುತ್ತದೆ. 2025 ನಿಮಗೆ ಅಷ್ಟೇನೂ ಲಾಭದಾಯಕ ವರ್ಷ ಅಲ್ಲ. ಮೇನಲ್ಲಿ ಗುರು ನಾಲ್ಕನೇ ಮನೆಗೆ ಪ್ರವೇಶವಾಗುತ್ತಾನೆ. ಇದು ಕೊಂಚ ನಿಮಗೆ ಒತ್ತಡಗಳನ್ನು ಸೃಷ್ಟಿಸುತ್ತದೆ. ಕಾರ್ಯಕ್ಷೇತ್ರದಲ್ಲಿ ಮೇಲಧಿಕಾರಿಗಳ, ಸಹೋದ್ಯೋಗಿಗಳ ಕಿರಿಕಿರಿ ಇರುತ್ತದೆ. ಆದಷ್ಟು ಯಾವುದೇ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಆರೋಗ್ಯದಲ್ಲಿ ಜಾಗ್ರತೆ ವಹಿಸಿ. ಮಾರ್ಚಿನಲ್ಲಿ ಶನಿ ನಿಮ್ಮ ರಾಶಿಗೇ ಪ್ರವೇಶವಾಗುವುದು ಆರೋಗ್ಯಕ್ಕೆ ತೊಂದರೆ ಇರುತ್ತದೆ. ಸಾಧ್ಯವಾದಷ್ಟು ಯಾರೊಂದಿಗೂ ವಾದ ವಿವಾದಕ್ಕೆ ಹೋಗಬೇಡಿ. ಈಗ ಮಾಡುತ್ತಿರುವ ನೌಕರಿ ಯಾವುದೇ ಕಾರಣಕ್ಕೆ ಬಿಡಬೇಡಿ. ಕೆಲವು ಕಾಲ ಅದೇ ಮುಂದುವರೆಸಿ. ವಿವಾಹ, ಉನ್ನತ ವ್ಯಾಸಂಗ ಬಡ್ತಿ, ವರ್ಗಾವಣೆ ಇಂಥ ನಿಮಗೆ ಅನುಕೂಲವಾಗುವಂತ ಸಂಗತಿಗಳಿಗೆ ಕೆಲವು ತೊಡಕುಗಳು ಎದುರಾಗುತ್ತದೆ. ಆದಷ್ಟು ಸಹನೆಯಿಂದ ಸವಾಲುಗಳನ್ನು ಎದುರಿಸಿ. ಈ ಮಾಸದ ಪ್ರಕಾರವಾಗಿಯೂ ಆಶಾದಾಯಕ ಸಂಗತಿಗಳೇನೂ ಇಲ್ಲ. ಯಾವುದೇ ನಿರ್ಧಾರಗಳನ್ನು ವಿವೇಚಿಸಿ ತೆಗೆದುಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+