Mercury rise in Leo 2023: ಸಿಂಹ ರಾಶಿಯಲ್ಲಿ ಮೂಡುವ ಬುಧ- ಸೆಪ್ಟೆಂಬರ್ 13 ರಿಂದ ಈ 3 ರಾಶಿಯವರ ಆದಾಯ ಹೆಚ್ಚಳ
ಬುಧನನ್ನು ನವಗ್ರಹಗಳ ರಾಜಕುಮಾರ ಎಂದು ಜ್ಯೋತಿಷ್ಯದಲ್ಲಿ ಪರಿಗಣಿಸಲಾಗುತ್ತದೆ. ಈ ಬುಧ ಬುದ್ಧಿವಂತಿಕೆ, ಮಾತು, ಅಧ್ಯಯನ ಮತ್ತು ವ್ಯವಹಾರದ ಅಂಶವೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಬುಧನು ಉತ್ತಮವಾಗಿ ಸ್ಥಿತನಾದರೆ ಅಂತವರು ಬುದ್ದಿವಂತರಾಗುತ್ತಾರೆ, ಮಾತುಗಾರನಾರುತ್ತಾರೆ, ಅಧ್ಯಯನದಲ್ಲಿ ಚುರುಕಾಗುತ್ತಾರೆ ಮತ್ತು ವ್ಯವಹಾರವನ್ನು ಪರಿಣಾಮಕಾರಿಯಾಗಿ ನಡೆಸಬಲ್ಲರು.
ಒಂದು ವೇಳೆ ಬುಧ ಗ್ರಹ ದುರ್ಬಲನಾಗಿದ್ದರೆ ಅಥವಾ ಕೆಟ್ಟ ಸ್ಥಾನದಲ್ಲಿದ್ದರೆ, ಅಂತವರ ಜೀವನ ಸಮಸ್ಯೆಗಳಿಂದ ಕೂಡಿರುತ್ತದೆ. ಗ್ರಹಗಳಲ್ಲಿ ಬುಧ ಕಡಿಮೆ ಸಮಯದಲ್ಲಿ ತನ್ನ ಸ್ಥಾನಗಳಲ್ಲಿ ಬದಲಾವಣೆಗಳನ್ನು ಮಾಡಬಹುದು. ಬುಧಗ್ರಹದ ಸ್ಥಾನಗಳಲ್ಲಿ ಬದಲಾವಣೆಯಾದಾಗ, ಅದರ ಪರಿಣಾಮವು ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ.
ಅಂದಹಾಗೆ ಸದ್ಯ ಸಿಂಹರಾಶಿಯಲ್ಲಿ ಸಂಚರಿಸುತ್ತಿರುವ ಬುಧಗ್ರಹ ಸೆಪ್ಟೆಂಬರ್ 13ರಂದು ಉದಯವಾಗಲಿದೆ. ಬುಧ ಏರಿದಂತೆ ಅದರ ಪ್ರಭಾವವು ಎಲ್ಲಾ ರಾಶಿಗಳ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಮುಖ್ಯವಾಗಿ 3 ರಾಶಿಯ ಜನರು ಬುಧ ಗ್ರಹದ ಅನುಗ್ರಹದಿಂದ ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಆದಾಯದಲ್ಲಿ ಏರಿಕೆ ಕಾಣುತ್ತಾರೆ. ಈಗ ಆ ಅದೃಷ್ಟದ ರಾಶಿಗಳು ಯಾರೆಂದು ನೋಡೋಣ.

ಮಿಥುನ ರಾಶಿ
ಬುಧನು ಮಿಥುನ ರಾಶಿಯ 3ನೇ ಮನೆಯಲ್ಲಿ ಉದಯಿಸುತ್ತಾನೆ. ಇದು ಮಿಥುನ ರಾಶಿಯವರ ಧೈರ್ಯ ಮತ್ತು ಶೌರ್ಯವನ್ನು ಹೆಚ್ಚಿಸುತ್ತದೆ. ಸಮಾಜದಲ್ಲಿ ಮೌಲ್ಯ ಮತ್ತು ಗೌರವ ಹೆಚ್ಚಾಗುತ್ತದೆ. ಪಿತ್ರಾರ್ಜಿತ ಆಸ್ತಿಯಿಂದ ಉತ್ತಮ ಲಾಭ ದೊರೆಯಲಿದೆ. ಕಠಿಣ ಪರಿಶ್ರಮದ ಸಂಪೂರ್ಣ ಲಾಭವನ್ನು ಪಡೆಯಬಹುದು. ಕನಸುಗಳು ನನಸಾಗುವವು. ಹೊಸ ವಾಹನ ಮತ್ತು ಆಸ್ತಿ ಖರೀದಿಸಲು ಅವಕಾಶವಿರುತ್ತದೆ. ಕೆಲಸದಲ್ಲಿ ತಾಯಿಯ ಬೆಂಬಲ ಇರುತ್ತದೆ.

ಧನು ರಾಶಿ
ಬುಧನು ಧನು ರಾಶಿಯ 9ನೇ ಮನೆಯಲ್ಲಿ ಉದಯಿಸುತ್ತಾನೆ. ಹೀಗಾಗಿ ಸೆಪ್ಟೆಂಬರ್ 13ರಿಂದ ಈ ರಾಶಿಚಕ್ರದವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಪರಿಣಾಮವಾಗಿ ನಿರ್ಬಂಧಿಸಲಾದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಉದ್ಯೋಗ ಬದಲಾಯಿಸಲು ಬಯಸುವವರಿಗೆ ಉತ್ತಮ ಉದ್ಯೋಗ ದೊರೆಯಲಿದೆ. ಉದ್ಯೋಗಿಗಳು ಮತ್ತು ವ್ಯಾಪಾರಸ್ಥರು ಪ್ರಯಾಣಿಸುವ ಸಾಧ್ಯತೆಯಿದೆ. ಈ ಪ್ರವಾಸ ಆರ್ಥಿಕ ಲಾಭವನ್ನು ತರುತ್ತದೆ. ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬಯಸಿದ ಉದ್ಯೋಗ ದೊರೆಯುತ್ತದೆ.

ಸಿಂಹ ರಾಶಿ
ಸಿಂಹ ರಾಶಿಯ ಮೊದಲ ಮನೆಯಲ್ಲಿ ಬುಧ ಉದಯಿಸುತ್ತಾನೆ. ಪರಿಣಾಮವಾಗಿ ಈ ಸಿಂಹ ರಾಶಿಯವರು ಸಕಾರಾತ್ಮಕ ಶಕ್ತಿಯಿಂದ ಕೂಡಿರುತ್ತಾರೆ. ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ. ವ್ಯಾಪಾರಸ್ಥರಿಗೆ ಧನಲಾಭ ಸಿಗಲಿದೆ. ಈ ವೇಳೆ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು. ಆ ಫಲಿತಾಂಶ ಯಶಸ್ಸು ಮತ್ತು ಲಾಭವನ್ನು ತರುತ್ತದೆ. ಜಂಟಿ ಉದ್ಯಮಗಳನ್ನು ಮಾಡುವವರು ಅಧಿಕ ಲಾಭವನ್ನು ಪಡೆಯುತ್ತಾರೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications