ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಸುವರ್ಣ ಸಮಯ ಆರಂಭ:ಹೆಚ್ಚುವುದು ಸುಖ ಸಮೃದ್ದಿ, ಸಿರಿ ಸಂಪತ್ತು ಒಲಿದು ಬರುವ ಕಾಲ
Mercury Rise ̄2026 : ಜ್ಯೋತಿಷ್ಯದಲ್ಲಿ, ಗ್ರಹಗಳ ಚಲನೆ ಮತ್ತು ಸ್ಥಾನವು ವ್ಯಕ್ತಿಯ ಜೀವನದಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದೆ. ಬುಧವನ್ನು ಬುದ್ಧಿವಂತಿಕೆ, ಮಾತು, ತರ್ಕ, ವ್ಯವಹಾರ, ಸಂವಹನ ಮತ್ತು ನಿರ್ಧಾರ ತೆಗೆದುಕೊಳ್ಳುವ ಅಂಶವೆಂದು ಹೇಳಲಾಗುತ್ತದೆ. ನವಗ್ರಹಗಳ ಪೈಕಿ ಬುಧನನ್ನು ರಾಜಕುಮಾರ ಎಂದು ಕರೆಯಲಾಗುತ್ತದೆ. ಇನ್ನೆರಡು ದಿನಗಳಲ್ಲಿ ಅಂದರೆ ಸೆಪ್ಟೆಂಬರ್ 18 ರಂದು ಬುಧ ಗ್ರಹವು ಕನ್ಯಾರಾಶಿಯಲ್ಲಿ ಉದಯಿಸಲಿದೆ. ಬುಧನ ಚಲನೆಯಲ್ಲಿನ ಈ ಬದಲಾವಣೆಯು ಕೆಲವು ರಾಶಿಯವರಿಗೆ ಹೊಸ ಅವಕಾಶಗಳಿಗೆ ಬಾಗಿಲು ತೆರೆಯುವುದು. ಈ ಸಮಯದಲ್ಲಿ ವೃತ್ತಿ, ವ್ಯವಹಾರ ಮತ್ತು ಕುಟುಂಬ ಜೀವನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು.
ಬುಧನ ಉದಯ ಅಥವಾ ಸಂಚಾರದಲ್ಲಿನ ಬದಲಾವಣೆಯು ವೃತ್ತಿ, ವ್ಯವಹಾರ, ಆರ್ಥಿಕ ಸ್ಥಿತಿ ಮತ್ತು ಸಂಬಂಧಗಳ ಮೇಲೆ ಪರಿಣಾಮ ಬೀರುವುದು. ಅಸ್ತವಾಗಿರುವ ಬುಧ ಸೆಪ್ಟೆಂಬರ್ 18ಕ್ಕೆ ಕನ್ಯಾರಾಶಿಯಲ್ಲಿ ಉದಯಿಸುತ್ತಾನೆ. ಬುಧನ ಈ ಸ್ಥಾನವು ಕೆಲವು ರಾಶಿಯವರ ಪ್ರಗತಿಗೆ ಬಾಗಿಲು ತೆರೆಯುವುದು.

ಕನ್ಯಾ ರಾಶಿ 2026 ರಲ್ಲಿ ಬುಧ ಉದಯ :
ಸೆಪ್ಟೆಂಬರ್ 18 ರಂದು ಸಂಜೆ 7:09 ಕ್ಕೆ ಬುಧ ಗ್ರಹವು ಕನ್ಯಾರಾಶಿಯಲ್ಲಿ ಉದಯಿಸಲಿದೆ. ಇದರ ನಂತರ, ಬುಧ ಸುಮಾರು 32 ದಿನಗಳವರೆಗೆ ತನ್ನ ಉದಯ ಸ್ಥಿತಿಯಲ್ಲಿಯೇ ಇರುತ್ತಾನೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಈ ಅವಧಿಯಲ್ಲಿ ಕೆಲವು ರಾಶಿಯವರು ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಪ್ರಯೋಜನ ಪಡೆಯುವ ಸಾಧ್ಯತೆ ಇದೆ. ಹಳೆಯ ಭಿನ್ನಾಭಿಪ್ರಾಯಗಳು ಕಡಿಮೆಯಾಗುವುದು. ಸಂಬಂಧಗಳಲ್ಲಿ ಹೆಚ್ಚು ಸಾಮರಸ್ಯ ಇರುವುದು.ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುವಿರಿ. ಸಾಲ ಬಾಧೆಯಿಂದ ಮುಕ್ತಿ ಪಡೆಯುವಿರಿ.
ವೃಷಭ ರಾಶಿ (Taurus): ಈ ರಾಶೀಯವರಿಗೆ ಬುಧನ ಉದಯವು ಹೆಚ್ಚು ಪ್ರಯೋಜನಕಾರಿಯಾಗಿರುವುದು. ಐದನೇ ಮನೆಯಲ್ಲಿ ಬುಧನ ಸ್ಥಾನವು ಬುದ್ಧಿವಂತಿಕೆ ಮತ್ತು ಸೃಜನಶೀಲತೆಯನ್ನು ಬಲಪಡಿಸುವ ಸಾಧ್ಯತೆಯಿದೆ. ಉದ್ಯೋಗದಲ್ಲಿರುವವರು ತಮ್ಮ ಯೋಜನೆಗಳು ಮತ್ತು ಸೃಜನಶೀಲತೆಯಿಂದ ಯಶಸ್ಸು ಪಡೆಯುವರು. ಹೊಸ ಜವಾಬ್ದಾರಿಗಳು ಸಿಗುವುದಕ್ಕೆ ಇದು ಕಾರಣವಾಗಬಹುದು. ಉದ್ಯಮಿಗಳು ತಮ್ಮ ವ್ಯವಹಾರವನ್ನು ವಿಸ್ತರಿಸುವುದಕ್ಕೆ ಸಮಯ ಅನುಕೂಲಕರವಾಗಿದೆ. ಹೊಸ ವ್ಯವಹಾರ ಶುರು ಮಾಡುವುದಕ್ಕೂ ಸಮಯ ಅನುಕೂಲಕರವಾಗಿದೆ. ಆಸ್ತಿ ಖರೀದಿ ಮಾಡುವುದಕ್ಕೆ ಶುಭ ಸಮಯ.
ಕರ್ಕಾಟಕ ರಾಶಿ (Cancer): ಬುಧನ ಉದಯವು ಕರ್ಕಾಟಕ ರಾಶಿಯವರ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರಬಹುದು. ಮೂರನೇ ಮನೆಯಲ್ಲಿ ಬುಧನ ಪ್ರಭಾವವು ಧೈರ್ಯ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ದೀರ್ಘಕಾಲದ ಸಮಸ್ಯೆಗಳು ಬಗೆಹರಿಯುವುದು. ಈ ಸಮಯದಲ್ಲಿ, ಅನೇಕ ತೊಡಕುಗಳು ನಿವಾರಣೆಯಾಗುವುದು. ಆರೋಗ್ಯ ಸುಧಾರಿಸುವ ಲಕ್ಷಣಗಳು ಕಂಡುಬರುವುದು. ಉದ್ಯೋಗದಲ್ಲಿರುವವರು ಹೊಸ ಅವಕಾಶಗಳು ಮತ್ತು ಆರ್ಥಿಕ ಲಾಭಗಳನ್ನು ಅನುಭವಿಸಬಹುದು. ಹಣ ಗಳಿಸವ ಅವಕಾಶಗಳು ಸಿಗುವುದು.
ಮಕರ ರಾಶಿ (Capricorn): ಉದಯಿಸುತ್ತಿರುವ ಬುಧವು ಮಕರ ರಾಶಿಯವರ ಅದೃಷ್ಟವನ್ನು ಹೆಚ್ಚಿಸುತ್ತದೆ. ಬುಧನ ಈ ಸಂಚಾರದ ಪ್ರಭಾವವು ವೃತ್ತಿಜೀವನದ ಪ್ರಗತಿಗೆ ಅವಕಾಶಗಳನ್ನು ನೀಡಬಹುದು. ಉದ್ಯೋಗಿಗಳಿಗೆ ಅವರು ಬಯಸಿದ ಸ್ಥಳಕ್ಕೆ ವರ್ಗಾವಣೆಯಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ಗೌರವ ಹೆಚ್ಚಾಗುವುದು. ಬಡ್ತಿ ಸಿಗುವ ಮೂಲಕ ಸಂಬಳ ಹೆಚ್ಚಳವಾಗುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಸಮಯ ಅನುಕೂಲಕರವಾಗಿದೆ. ಉದ್ಯಮಿಗಳಿಗೆ ವ್ಯವಹಾರ ವಿಸ್ತರಣೆಗೆ ಸೂಕ್ತ ಸಮಯ ಇದಾಗಿದೆ. ಹೊಸ ಹೊಸ ಅವಕಾಶಗಳು ಒಲಿದು ಬರುವುದು.
ಈ ನಡುವೆ ಬುಧ ಹಸ್ತ ನಕ್ಷತ್ರಕ್ಕೆ ಪ್ರವೇಶಿಸಿದ್ದು, ಕೆಲವು ದಿನಗಳವರೆಗೆ ಅದೇ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿರುತ್ತಾನೆ. ನಂತರ, ಚಿತ್ರ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಜ್ಯೋತಿಷಿಗಳ ಪ್ರಕಾರ, ಬುಧ ನಕ್ಷತ್ರದಲ್ಲಿನ ಈ ಬದಲಾವಣೆಯು ಬೇರೆ ಬೇರೆ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರಬಹುದು.


Click it and Unblock the Notifications
