Kendra Drishti Yoga: ಕೇಂದ್ರ ದೃಷ್ಟಿ ಯೋಗದಿಂದ 4 ರಾಶಿಗೆ ಸಂಕಷ್ಟ ಕೊನೆ: ಸಾಲಕ್ಕೆ ಮುಕ್ತಿ, ಇನ್ನೇನಿದ್ದರೂ ಸಂಪತ್ತು ಸಮೃದ್ಧಿ

Kendra Drishti Yoga 2026: ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಮಂಗಳವಾರ ಅಂದರೆ ಸೆಪ್ಟೆಂಬರ್ 1ರ ಮಧ್ಯಾಹ್ನ 3:25 ಕ್ಕೆ, ಮಂಗಳ ಮತ್ತು ಶನಿ 90 ಡಿಗ್ರಿ ಕೋನದಲ್ಲಿದ್ದು, ಕೇಂದ್ರ ದೃಷ್ಟಿ ಯೋಗವನ್ನು ಸೃಷ್ಟಿಸುತ್ತವೆ. ಈ ಯೋಗವು ನಾಲ್ಕು ರಾಶಿಯವರ ಜೀವನದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. ಅವರ ವೃತ್ತಿ ಮತ್ತು ವ್ಯವಹಾರಗಳಲ್ಲಿ ಎದುರಾಗಿರುವ ಸಮಸ್ಯೆಗಳು ನಿವಾರಣೆಯಾಗುವುದು. ಅರ್ಧಕ್ಕೆ ನಿಂತಿರುವ ಕೆಲಸ ಕಾರ್ಯಗಳು ಪೂರ್ಣವಾಗುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.

Kendra Drishti Yoga 2026 Aries Scorpio Sagittarius amp amp Capricorn for Success and Happiness best time

ಕೇಂದ್ರ ದೃಷ್ಟಿಯೋಗದಿಂದ ಯಾವ ರಾಶಿಯವರಿಗೆ ಅದೃಷ್ಟ :

ಮೇಷ ರಾಶಿ (Aries) :
ಶನಿ ಮತ್ತು ಮಂಗಳನ ಈ ಸಂಯೋಜನೆಯು ಮೇಷ ರಾಶಿಯವರ ಪಾಲಿಗೆ ತುಂಬಾ ಶುಭ ಫಲವನ್ನು ಕರುಣಿಸುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ವ್ಯವಹಾರದಲ್ಲಿ ಲಾಭವಾಗುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಸಾಲಗಳಿಂದ ಮುಕ್ತಿ ಸಿಗುವುದು. ಆದಾಯ ಹೆಚ್ಚಾಗುವುದು. ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಹಣ ಕೈ ಸೇರುವುದು. ನ್ಯಾಯಾಲಯದ ಪ್ರಕರಣಗಳು ನಿಮ್ಮ ಪರವಾಗಿ ಇತ್ಯರ್ಥವಾಗುವ ಸಾಧ್ಯತೆ ಹೆಚ್ಚು. ಸಂಬಂಧಗಳಲ್ಲಿನ ಮನಸ್ತಾಪ ಕೊನೆಯಾಗುವುದು. ಹಳಸಿದ ಸಂಬಂಧಗಳು ಮತ್ತೆ ಚಿಗುರೊಡೆಯುವುದು.

Kendra Drishti Yoga 2026 ವೃಶ್ಚಿಕ ರಾಶಿ (Scorpio) :

ವೃಶ್ಚಿಕ ರಾಶಿಯವರಿಗೂ ಈ ಮಂಗಳ-ಶನಿ ಗ್ರಹದ ಸಂಯೋಗವು ತುಂಬಾ ಸಕಾರಾತ್ಮಕ ಫಲವನ್ನೇ ನೀಡುವುದು. ಆತ್ಮವಿಶ್ವಾಸ ಮತ್ತು ದೈಹಿಕ ಶಕ್ತಿ ಹೆಚ್ಚುವುದು. ಕೆಲಸ ಕಾರ್ಯಗಳಲ್ಲಿ ಉತ್ಸಾಹ ಹೆಚ್ಚುವುದು. ಹಳೆಯ ಸ್ನೇಹಿತನ ಸಹಾಯದಿಂದ ಬಾಕಿ ಇರುವ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದು. ಹೊಸ ಕೆಲಸ ಆರಂಭಿಸಿದರೂ ಲಾಭವಾಗುವುದು. ಕಚೇರಿ ಕೆಲಸಗಳಲ್ಲಿ ನಿಮಗೆ ಹೆಚ್ಚಿನ ಮನ್ನಣೆ ಸಿಗುವುದು. ಈ ಸಮಯವು ಆರ್ಥಿಕ ಲಾಭಗಳಿಗೆ ಶುಭವಾಗಿರುವುದು.

Kendra Drishti Yoga 2026 ಧನು ರಾಶಿ (Sagittarius) :

ಈ ಯೋಗವು ಧನು ರಾಶಿಯವರಿಗೆ ಅದೃಷ್ಟದ ಸಮಯವನ್ನು ತರುವುದು. ಜೀವನದಲ್ಲಿ ಪ್ರಗತಿ ಶಾಂತಿ ಮತ್ತು ಸಂತೋಷ ಹೆಚ್ಚುವುದು. ಕಠಿಣ ಪರಿಶ್ರಮವು ಫಲ ನೀಡುವುದು. ಪ್ರಮೋಷನ್‌ ಸಿಗುವ ಸಾಧ್ಯತೆ ಇದೆ. ವಿದೇಶದಲ್ಲಿ ನಿಮ್ಮ ವೃತ್ತಿ ಅಥವಾ ವ್ಯವಹಾರವನ್ನು ವಿಸ್ತರಿಸುವ ಪ್ರಯತ್ನಗಳು ಯಶಸ್ವಿಯಾಗುವುದು. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವವರಿಗೆ ಗೌರವ ಸಿಗುವುದು. ಹಣ ಗಳಿಸುವ ಅವಕಾಶಗಳು ಹೆಚ್ಚಾಗುವುದು.

ಮಕರ ರಾಶಿ (Capricorn):

ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿಂದೆ ಮಾಡಬೇಕು ಅಂದುಕೊಂಡಿದ್ದ ಕೆಲಸವನ್ನು ಆರಂಭಿಸಲು ಸಹಾಯವಾಗುವುದು. ಕೆಲಸ ಕಾರ್ಯಗಳಲ್ಲಿ ಅದ್ಬುತ ಯಶಸ್ಸು ಸಿಗುವುದು. ಹೊಸ ಕೆಲಸ ಪ್ರಾರಂಭಿಸುವುದು ಸಾಧ್ಯವಾಗುವುದು. ನಿಮಗೆ ಬರಬೇಕಿದ್ದ ಬಾಕಿ ಹಣ ಕೈ ಸೇರುವುದು. ವ್ಯವಹಾರವನ್ನು ವಿಸ್ತರಿಸುವ ನಿಮ್ಮ ಆಸೆ ಈಡೇರುವುದು. ಈ ಸಮಯದಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗುವುದು. ಉದ್ಯೋಗದಲ್ಲಿರುವವರ ಜವಾಬ್ದಾರಿ ಹೆಚ್ಚಾಗುವುದು.

ನವಪಂಚಮ ಯೋಗದಿಂದಲೂ ಲಾಭ :

ಇನ್ನೊಂದೆಡೆ, ಇದೇ ದಿನ ಗುರು (luck) ಮತ್ತು ಶನಿಯ ಸ್ಥಾನದಿಂದಾಗಿ ನವ ಪಂಚಮ ಯೋಗ ಕೂಡಾ ರೂಪುಗೊಳ್ತಾ ಇದೆ. ಜ್ಯೋತಿಷ್ಯದ ಪ್ರಕಾರ, ಎರಡು ಗ್ರಹಗಳು ಪರಸ್ಪರ 5 ಮತ್ತು 9 ನೇ ಮನೆಗಳಲ್ಲಿದ್ದಾಗ ಈ ನವ ಪಂಚಮ ಯೋಗ ನಿರ್ಮಾಣವಾಗುತ್ತದೆ. ಈ ಯೋಗದ ಪರಿಣಾಮವಾಗಿ ಗುರು ಮತ್ತು ಉದ್ಯೋಗ, ಆರ್ಥಿಕ ಪರಿಸ್ಥಿತಿ ಮತ್ತು ಶಿಕ್ಷಣದಂತಹ ವಿಷಯಗಳಲ್ಲಿ ಅನುಕೂಲಕರ ಫಲ ಸಿಗುವುದು. ಈ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗುವುದು.

ವೃಷಭ, ಕರ್ಕಾಟಕ, ವೃಶ್ಚಿಕ, ಧನು ಮತ್ತು ಮೀನ ರಾಶಿಯವರು ಈ ನವಪಂಚಮ ಯೋಗದಿಂದ ಉತ್ತಮ ಫಲ ಪಡೆಯುವರು. ಇವರಿಗೆ ಪ್ರಗತಿಗೆ ಅವಕಾಶಗಳು ಸಿಗುವುದು. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗುವುದು. ಆದಾಯದ ಹೊಸ ಮಾರ್ಗಗಳು ಹುಟ್ಟಿಕೊಳ್ಳುವುದು. ಹಿಂದೆ ಮಾಡಿರುವ ಹೂಡಿಕೆಗಳಿಂದ ಹಣ ಹರಿದು ಬರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+