ಅಂಬರೀಶ್ ರಾಜಕೀಯ ಭವಿಷ್ಯದ ಟಾರೋ ಕಾರ್ಡ್ ಏನು ಹೇಳುತ್ತದೆ?
Recommended Video

ನಟ ಅಂಬರೀಷ್ ರಾಜಕೀಯ ಭವಿಷ್ಯದ ವಿಶ್ಲೇಷಣೆ | Oneindia Kannada
ನಟ- ಶಾಸಕ ಅಂಬರೀಶ್ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಾರೋ ಇಲ್ಲವೋ? ಒಟ್ಟಾರೆ ಈ ಸಲ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬೆಲ್ಲ ಪ್ರಶ್ನೆಗಳು ಸುಳಿದಾಡುತ್ತಿವೆ. ಈ ಬಗ್ಗೆ ಟಾರೋ ಕಾರ್ಡ್ ರೀಡರ್, ಮುಂಬೈ ಮೂಲದ ಪ್ರಕಾಶ್ ದಳವಾಯಿ ಭವಿಷ್ಯದ ಮುನ್ಸೂಚನೆ ನೀಡಿದ್ದಾರೆ.
ಈ ಸಲ ಕಾಂಗ್ರೆಸ್ ಟಿಕೆಟ್ ನಿಂದ ಅಂಬರೀಷ್ ಸ್ಪರ್ಧಿಸುವುದು ಅನುಮಾನ ಎಂಬುದು ಅವರ ಕಾರ್ಡ್ ರೀಡಿಂಗ್ ನ ಭವಿಷ್ಯ. ಒಂದು ವೇಳೆ ಕಾಂಗ್ರೆಸ್ ನಿಂದ ಕೊನೆ ಸ್ಪರ್ಧಿಸುವುದು ಕೊನೆ ಕ್ಷಣದಲ್ಲಿ ಖಾತ್ರಿಯಾಯಿತು ಅಂದ ಪಕ್ಷದಲ್ಲಿ ಅಂಬರೀಶ್ ಈ ಬಾರಿ ಚುನಾವಣೆಯಲ್ಲಿ ಸೋಲುವುದು ನಿಶ್ಚಿತ ಎಂದು ಅವರು ಹೇಳಿದ್ದಾರೆ.

ಆದರೆ, ಅಂಬರೀಶ್ ಏನಾದರೂ ಬೇರೆ ಪಕ್ಷದಿಂದ ಅಥವಾ ಪಕ್ಷೇತರರಾಗಿ ಸ್ಪರ್ಧೆಗೆ ಇಳಿದರೆ ಮೂರರಿಂದ ಐದು ಸಾವಿರ ಮತಗಳ ಅಂತರದಿಂದ ಜಯ ಗಳಿಸಲಿದ್ದಾರೆ ಎಂದು ಕೂಡ ಪ್ರಕಾಶ್ ತಿಳಿಸಿದ್ದಾರೆ. ಮತ್ತೂ ಆಸಕ್ತಿಕರ ಸಂಗತಿ ಏನೆಂದರೆ, ಮುಂದಿನ ಐದು ವರ್ಷಗಳ ಕಾಲ ಅಂಬರೀಶ್ ರ ರಾಜಕೀಯ ಭವಿಷ್ಯ ಬಹಳ ಚೆನ್ನಾಗಿದೆಯಂತೆ.












Click it and Unblock the Notifications