ಲಕ್ಷ್ಮೀ ನಾರಾಯಣ ಯೋಗದಿಂದ ಬದಲಾಗುವುದು ಈ ರಾಶಿಯವರ ಅದೃಷ್ಟ:ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ
ಲಕ್ಷ್ಮಿ ನಾರಾಯಣ ಯೋಗ 2026 : ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಮತ್ತು ನಕ್ಷತ್ರಗಳ ಚಲನೆ ಪ್ರತಿಯೊಬ್ಬರ ಜಾತಕ ಫಲದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಎರಡು ಅಥವಾ ಅದಕ್ಕಿಂತ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿ ಸೇರಿದಾಗ ಗ್ರಹಗಳ ಸಂಯೋಗ ಏರ್ಪಡುತ್ತದೆ. ಇದು ಕೂಡಾ ಹುಟ್ಟು ರಾಶಿಯನ್ನು ಆಧರಿಸಿ ಶುಭ ಅಶುಭ ಫಲವನ್ನು ನೀಡುತ್ತದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಶುಕ್ರನು ಮೇ 14, 2026 ರಂದು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ನಂತರ, ಬುಧ ಗ್ರಹ ಕೂಡಾ ಮೇ 29 ರಂದು ಅದೇ ರಾಶಿಯಲ್ಲಿ ಸಂಚಾರ ಆರಂಭಿಸುತ್ತಾನೆ. ಪರಿಣಾಮವಾಗಿ, ಮಿಥುನ ರಾಶಿಯಲ್ಲಿ ಶುಕ್ರ ಮತ್ತು ಬುಧದ ಸಂಯೋಗದಿಂದ ಲಕ್ಷ್ಮೀ ನಾರಾಯಣ ಯೋಗ ಸೃಷ್ಟಿಯಾಗುತ್ತದೆ. ಈ ಲಕ್ಷ್ಮಿ ನಾರಾಯಣ ಯೋಗದಿಂದ ನಾಲ್ಕು ರಾಶಿಯವರಿಗೆ ಹೆಚ್ಚು ಪ್ರಯೋಜನವಾಗುವುದು.
ಲಕ್ಷ್ಮಿ-ನಾರಾಯಣ ಯೋಗದ ಫಲ
ಈ ಯೋಗವು ಭೌತಿಕ ಸೌಕರ್ಯಗಳು, ಐಷಾರಾಮಿ ಜೀವನ, ವ್ಯವಹಾರದಲ್ಲಿ ಯಶಸ್ಸು ಮತ್ತು ಗೌರವವನ್ನು ಹೆಚ್ಚಿಸುತ್ತದೆ. ಮಿಥುನ ರಾಶಿಯಲ್ಲಿ ರೂಪುಗೊಂಡ ಲಕ್ಷ್ಮೀ-ನಾರಾಯಣ ಯೋಗ ಯಾವ ನಾಲ್ಕು ರಾಶಿಯವರಿಗೆ ಪ್ರಯೋಜನಕಾರಿ ಎಂದು ನೋಡುವುದಾದರೆ

ಮಿಥುನ ರಾಶಿ
ಮಿಥುನ ರಾಶಿಯಲ್ಲಿಯೇ ಈ ಯೋಗ ರೂಪುಗೊಳ್ಳುತ್ತಿರುವುದರಿಂದ ಇವರಿಗೆ ಹೆಚ್ಚು ಲಾಭದಾಯಕವಾಗಿರಲಿದೆ. ದೀರ್ಘಕಾಲದಿಂದ ನಿಂತು ಹೋಗಿದ್ದ ಅಥವಾ ಮಾಡಲು ಸಾಧ್ಯವಾಗದೇ ಉಳಿದಿರುವ ಕೆಲಸ ಕಾರ್ಯಗಳು ಇದೀಗ ಪೂರ್ಣಗೊಳ್ಳುವುದು. ಮಾಡುವ ಕೆಲಸಗಳು ವೇಗ ಪಡೆದುಕೊಳ್ಳುವುದು. ಯಾವ ಕೆಲಸ ಮಾಡಿದರೂ ಅದೃಷ್ಟ ನಿಮ್ಮ ಕಡೆ ಇರುವುದು. ಉದ್ಯೋಗ ಬದಲಾವಣೆ ಬಗ್ಗೆ ಯೋಚಿಸುತ್ತಿದ್ದರೆ ಬದಲಾವಣೆಗೆ ಇದು ಸಕಾಲ. ಕೆಲಸದಲ್ಲಿ ಬಡ್ತಿ ಪಡೆಯುವ ಬಲವಾದ ಸಾಧ್ಯತೆಗಳಿವೆ. ವ್ಯವಹಾರದಲ್ಲಿ ಕೂಡಾ ಆರ್ಥಿಕ ಲಾಭವಾಗುವುದು.
ಕನ್ಯಾ ರಾಶಿ
ಕನ್ಯಾ ರಾಶಿಯವರ ಹತ್ತನೇ ಮನೆಯಲ್ಲಿ ಅಂದರೆ ಕರ್ಮದ ಮನೆಯಲ್ಲಿ ಈ ಯೋಗ ರೂಪುಗೊಳ್ಳುತ್ತಿದೆ. ಈ ರಾಜಯೋಗದ ಪ್ರಭಾವದಿಂದ ನೀವು ಯಾವುದೇ ಕೆಲಸ ಮಾಡಿದರೂ ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುವುದು. ಕಠಿಣ ಪರಿಶ್ರಮಕ್ಕೆ ಪ್ರತಿಫಲ ದೊರೆಯುವ ಸಮಯ. ನಿಮ್ಮ ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆಯಾಗುವುದು.ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವವರಿಗೆ ಗಮನಾರ್ಹ ಜನಪ್ರಿಯತೆ ಸಿಗುವುದು.
ತುಲಾ ರಾಶಿ
ಲಕ್ಷ್ಮೀ ನಾರಾಯಣ ಯೋಗದ ಪ್ರಭಾವವು ತುಲಾ ರಾಶಿಯ ಒಂಭತ್ತನೇ ಮನೆಯಲ್ಲಿ ಅಂದರೆ ಭಾಗ್ಯದ ಮನೆಯಲ್ಲಿ ಗೋಚರಿಸುತ್ತದೆ. ಪರಿಣಾಮವಾಗಿ, ನಿಮ್ಮ ಮನಸ್ಸಿನ ಗೊಂದಲಗಳು ದೂರ ಆಗುವುದು. ಇಲ್ಲಿಯವರೆಗೆ ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗಳಿಗೆ ಮುಕ್ತಿ ಸಿಗುವ ಸಾಧ್ಯತೆ ಇದೆ. ರಿಯಲ್ ಎಸ್ಟೇಟ್ ಅಥವಾ ಇತರ ಹೂಡಿಕೆಗಳ ಕಡೆಗೆ ಗಮನ ಹರಿಸಬಹುದು. ವ್ಯವಹಾರದಲ್ಲಿನ ಹೂಡಿಕೆಗಳು ಗಣನೀಯ ಮಟ್ಟದಲ್ಲಿ ಲಾಭ ತಂದುಕೊಡುವುದು.
ಧನು ರಾಶಿ
ಧನು ರಾಶಿಯವರ ಏಳನೇ ಮನೆಯಲ್ಲಿ ಈ ರಾಜಯೋಗ ರೂಪುಗೊಳ್ಳುತ್ತಿದೆ. ನಿಮ್ಮ ರಾಶಿಯವರಿಗೆ ಹೆಚ್ಚು ಶುಭ ಫಲ ಸಿಗುವುದು. ಸಂಗಾತಿಯೊಂದಿಗಿನ ಮನಸ್ತಾಪ ಕೊನೆಯಾಗುವುದು. ಮತ್ತೆ ಸಂಬಂಧವು ಹೆಚ್ಚು ಸಾಮರಸ್ಯವನ್ನು ಹೊಂದುತ್ತದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಗಮನಾರ್ಹ ಆರ್ಥಿಕ ಲಾಭವಾಗುವುದು. ವ್ಯವಹಾರ ವಿಸ್ತರಣೆಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ನಿಮ್ಮ ಸಂಗಾತಿಯಿಂದ ಭಾವನಾತ್ಮಕವಾಗಿ ಮಾತ್ರವಲ್ಲದೆ ವೃತ್ತಿಪರ ಬೆಂಬಲವೂ ಸಿಗುವುದು.












Click it and Unblock the Notifications