Daily Horoscope May 18: ಮುಕ್ತ ಮಾತುಕತೆಯಿಂದ ಸಮಸ್ಯೆ ಪರಿಹರಿಸಿಕೊಳ್ಳಿ, ಇಂದಿನ 12 ರಾಶಿ ಭವಿಷ್ಯ
Horoscope May 18: ಮೇ18ರಂದು ಸೋಮವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ವಿವರ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯವಾಗಿದೆ. ಮೇ 18ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲಗಳು ಹೇಗಿರುತ್ತವೆ. ಈ ದಿನ ನಿಮ್ಮ ಪರವಾಗಿದೆಯೋ ಅಥವಾ ವಿರುದ್ಧವಾಗಿದೆಯೋ ತಿಳಿಯಿರಿ.
ದ್ವಾದಶ ರಾಶಿಗಳ ದಿನ ಭವಿಷ್ಯ
ಮೇಷ ರಾಶಿ:
ಮೇಷ ರಾಶಿಯವರಿಗೆ ತುಂಬಾ ಒಳ್ಳೆಯ ದಿನ. ಚಿಂತೆಗಳು ಕಡಿಮೆಯಾಗುವುದು. ಪ್ರೇಮ ಸಂಬಂಧಗಳು ಬಲಗೊಳ್ಳುವುದು. ಹೊಸ ಪರಿಚಯ ಮಾಡಿಕೊಳ್ಳುವ ಸಾಧ್ಯತೆಯಿದೆ. ಸಂತೋಷ, ಪ್ರೀತಿ ಮತ್ತು ಸಕಾರಾತ್ಮಕತೆ ಹೆಚ್ಚುವುದು.

ವೃಷಭ ರಾಶಿ:
ವೃಷಭ ರಾಶಿಯವರಿಗೆ ಮಾನಸಿಕ ಒತ್ತಡ ಹೆಚ್ಚಾಗಬಹುದು. ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಉಂಟಾಗುವ ಸಾಧ್ಯತೆ ಹೆಚ್ಚು. ಮಾತನಾಡುವಾಗ ಜಾಗರೂಕರಾಗಿರಿ. ಮಾತು ಮಾತಿಗೂ ಸಿಟ್ಟಾಗಬೇಡಿ. ತಾಳ್ಮೆ ಬಹಳ ಮುಖ್ಯ.
ಮಿಥುನ ರಾಶಿ:
ಯಾರ ಜೊತೆಗೂ ವಾದಕ್ಕೆ ಇಳಿಯಬೇಡಿ. ಎದುರಿಗಿರುವವರ ಮಾತನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿ. ಹೊಸ ಅವಕಾಶಗಳನ್ನು ಮುಕ್ತವಾಗಿ ಒಪ್ಪಿಕೊಂಡರೆ ಸಮಸ್ಯೆಗಳಿಗೆ ಪರಿಹಾರ ಸಿಗುವುದು.
ಕರ್ಕಾಟಕ ರಾಶಿ:
ಹೊಸ ಅವಕಾಶಗಳು ಎದುರಾಗುವುದು. ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಉತ್ತಮ ಸಂಬಂಧವನ್ನು ಹೊಂದುವಿರಿ. ನೀವು ಮಾಡುವ ಕೆಲಸಕ್ಕೆ ಹಿರಿಯರ ಬೆಂಬಲ ಸಿಗುವುದು.
ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಇಂದು ತುಂಬಾ ಸಕಾರಾತ್ಮಕವಾಗಿರುತ್ತದೆ. ನಿಮ್ಮ ನಾಯಕತ್ವದ ಗುಣಕ್ಕೆ ಎಲ್ಲರ ಮೆಚ್ಚುಗೆ ಸಿಗುವುದು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತೋಷದ ಸಮಯವನ್ನು ಕಳೆಯುವಿರಿ. ನಿಮ್ಮ ಮಾತಿನ ಮೂಲಕ ಇತರರನ್ನು ಆಕರ್ಷಿಸುವಿರಿ. ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗುವುದು.
ಕನ್ಯಾರಾಶಿ:
ಕನ್ಯಾ ರಾಶಿಯವರು ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಪ್ರೀತಿಪಾತ್ರರ ಜೊತೆ ಮಾತನಾಡುವಾಗ ಎಚ್ಚರಿಕೆ ಅಗತ್ಯ. ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ತಾಳ್ಮೆಯಿಂದ ವ್ಯವಹರಿಸಿದರೆ ಎಲ್ಲವೂ ಸರಿಯಾಗುತ್ತದೆ. ನಕಾರಾತ್ಮಕ ಆಲೋಚನೆಗಳನ್ನು ದೂರವಿಡಿ.
ತುಲಾ ರಾಶಿ:
ಮಾನಸಿಕ ಒತ್ತಡವಿರುವುದು. ಸಂಬಂಧಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ಮುಖ್ಯ. ಪ್ರೀತಿಪಾತ್ರರ ಜೊತೆ ಸಣ್ಣಪುಟ್ಟ ತಪ್ಪು ತಿಳುವಳಿಕೆಗಳು ಉಂಟಾಗಬಹುದು. ತಾಳ್ಮೆಯಿಂದ ವ್ಯವಹರಿಸುವುದರಿಂದ ಸಮಸ್ಯೆಗಳು ಬಗೆಹರಿಯುವುದು.
ವೃಶ್ಚಿಕ ರಾಶಿ:
ಪ್ರೇಮ ಸಂಬಂಧಗಳಲ್ಲಿ ನಿಕಟತೆ ಹೆಚ್ಚಾಗುತ್ತದೆ. ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಶಾಂತಿ ನೆಲೆಯಾಗುವುದು. ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದು ಸಾಧ್ಯವಾಗುತ್ತದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ.
ಧನು ರಾಶಿ:
ಧನು ರಾಶಿಯವರಿಗೆ ಇಂದು ತುಂಬಾ ಶುಭ ದಿನ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ. ನಿಮ್ಮ ಮಾತಿಗೆ ವಿಶೇಷ ಮನ್ನಣೆ ಸಿಗುವುದು. ನೀವಂದುಕೊಂಡ ಕೆಲಸದಲ್ಲಿ ಯಶಸ್ಸು ಸಿಗುವುದು.
ಮಕರ ರಾಶಿ:
ಈ ದಿನ ಸ್ವಲ್ಪ ಬೇಸರ ತರಿಸಬಹುದು. ಮನಸ್ಸಿನ ತಳಮಳ ಹೆಚ್ಚಾಗುವುದು. ವೈಯಕ್ತಿಕ ಸಂಬಂಧಗಳಲ್ಲಿ ಒತ್ತಡವಿರುವುದು. ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಬಹುದು.
ಕುಂಭ ರಾಶಿ:
ಕುಂಭ ರಾಶಿಯವರಿಗೆ ಇಂದು ತುಂಬಾ ಒಳ್ಳೆಯ ದಿನ. ಸಕಾರಾತ್ಮಕ ಆಲೋಚನೆಗಳು ಹೆಚ್ಚಾಗುತ್ತವೆ. ಸಂಬಂಧಗಳಲ್ಲಿ ಪ್ರೀತಿ ಮತ್ತು ಬಾಂಧವ್ಯ ಬಲಗೊಳ್ಳುತ್ತದೆ. ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವುದರಿಂದ ಸಂಬಂಧಗಳು ಸುಧಾರಿಸುತ್ತವೆ.
ಮೀನ ರಾಶಿ:
ಮೀನ ರಾಶಿಯವರಿಗೆ ಇಂದು ಸವಾಲಿನ ದಿನವಾಗಬಹುದು. ಪ್ರೀತಿಪಾತ್ರರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಮಾತನಾಡುವಾಗ ತಾಳ್ಮೆ ಅಗತ್ಯ. ಸಕಾರಾತ್ಮಕವಾಗಿ ಯೋಚಿಸಿದರೆ ಸಂಬಂಧಗಳು ಸುಧಾರಿಸುತ್ತವೆ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications