Daily Horoscope September 10: ಮಾಳವ್ಯ ಯೋಗದಿಂದ ಈ 4 ರಾಶಿಯವರಿಗೆ ಧನಲಾಭ, ವೃತ್ತಿಯಲ್ಲಿ ಪ್ರಗತಿ, ಸಾಲದಿಂದ ಮುಕ್ತಿ
Daily Horoscope September 10: ಗ್ರಹಗಳು ಮತ್ತು ನಕ್ಷತ್ರಗಳ ಚಲನೆಗಳು ಪ್ರತಿದಿನ ನಮ್ಮ ಜೀವನದ ಮೇಲೆ ಹೊಸ ರೀತಿಯಲ್ಲಿ ಪ್ರಭಾವ ಬೀರುತ್ತವೆ. ಇಂದಿನ ಜಾತಕವು ವೃತ್ತಿ, ವ್ಯವಹಾರ, ಆರ್ಥಿಕ ಪರಿಸ್ಥಿತಿ, ಆರೋಗ್ಯ ಮತ್ತು ಪ್ರೇಮ ಜೀವನದಲ್ಲಿನ ಏರಿಳಿತಗಳಿಗೆ ಕಾರಣವಾಗುವುದು. ಮಾಳವ್ಯ ಯೋಗದಿಂದ ಇವತ್ತು ಕೆಲವು ರಾಶಿಯವರಿಗೆ ಹೆಚ್ಚು ಲಾಭವಾಗುವುದು.
ಮೇಷ ರಾಶಿ (Aries)
ಮನೆಯಲ್ಲಿ ಸಾಮರಸ್ಯದ ವಾತಾವರಣವಿರುವುದು. ಸಂಗಾತಿ ಮತ್ತು ಕುಟುಂಬದ ಬೆಂಬಲ ಸಿಗುವುದು. ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳು ನಡೆಯುವುದು. ಕೌಟುಂಬಿಕ ವಿವಾದಗಳು ಪರಿಹಾರವಾಗುವುದು. ಉದ್ಯೋಗಿಗಳಿಗೆ ಹೊಸ ಜವಾಬ್ದಾರಿಗಳು ಸಿಗಬಹುದು. ಮೇಲಧಿಕಾರಿಗಳು ನಿಮ್ಮ ಕೆಲಸದಿಂದ ಪ್ರಭಾವಿತರಾಗುವರು. ವೃತ್ತಿಜೀವನವು ಉತ್ತಮಗೊಳ್ಳುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವುದು.

ವೃಷಭ ರಾಶಿ (Taurus)
ಕುಟುಂಬದೊಳಗೆ ಸಣ್ಣಪುಟ್ಟ ವಾದಗಳು ಉಂಟಾಗಬಹುದು. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯ ನೆಲೆಯಾಗುವುದು. ಕುಟುಂಬದ ಹಿರಿಯ ಸದಸ್ಯರ ಸಲಹೆಯಿಂದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಹಣಕಾಸಿನ ವಿಷಯಗಳಲ್ಲಿ ಸಕಾರಾತ್ಮಕ ಅವಕಾಶಗಳು ಎದುರಾಗುವುದು. ಕಚೇರಿಯಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಆರೋಗ್ಯ ಸಾಮಾನ್ಯವಾಗಿರುವುದು.
ಮಿಥುನ ರಾಶಿ (Gemini)
ಮನೆಯಲ್ಲಿನ ವಾತಾವರಣ ಸಾಮಾನ್ಯವಾಗಿರುವುದು. ನಿಮ್ಮ ಮಾತಿನಿಂದ ಎದುರಿಗಿರುವವರ ಮನಸ್ಸು ನೋಯಿಸುವಿರಿ. ಮಾತಿನಲ್ಲಿ ಸಂಯಮವನ್ನು ಕಾಪಾಡಿಕೊಳ್ಳಿ. ಮಕ್ಕಳ ಶಿಕ್ಷಣ ಅಥವಾ ಕುಟುಂಬದ ಬಗ್ಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ಉದ್ಯಮಿಗಳಿಗೆ ದಿನ ಅನುಕೂಲಕರವಾಗಿರುವುದು. ಉದ್ಯೋಗ ಬದಲಾವಣೆ ಬಗ್ಗೆ ಯೋಚಿಸುತ್ತಿದ್ದರೆ ದಿನ ಸೂಕ್ತವಾಗಿದೆ.
ಕರ್ಕಾಟಕ ರಾಶಿ (Cancer)
ಹಳೆಯ ಯೋಜನೆಯಲ್ಲಿ ಯಶಸ್ಸು ಸಿಗುವುದು. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಜವಾಬ್ದಾರಿಗಳು ಹೆಚ್ಚಾಗುವುದು. ಉದ್ಯೋಗಿಗಳ ಕಠಿಣ ಪರಿಶ್ರಮವನ್ನು ಮೇಲಧಿಕಾರಿಗಳು ಗುರುತಿಸುವರು. ಕೆಲಸದಲ್ಲಿ ಹೆಚ್ಚುತ್ತಿರುವ ಜವಾಬ್ದಾರಿಗಳು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಕಚೇರಿಯಲ್ಲಿ ಬಡ್ತಿ ಸಿಗುವುದು. ಜವಾಬ್ದಾರಿ ಹೆಚ್ಚಾಗುವುದು. ಭೂಮಿ ಅಥವಾ ಪೂರ್ವಜರ ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಲಾಭವಾಗುವ ನಿರೀಕ್ಷೆ ಇದೆ.
ಸಿಂಹ ರಾಶಿ (Leo)
ಕಠಿಣ ಸಂದರ್ಭಗಳಲ್ಲಿಯೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ. ಮನೆಯಲ್ಲಿ ಶಾಂತಿ ಮತ್ತು ಸಂತೋಷ ನೆಲೆಯಾಗುವುದು. ನಾಯಕತ್ವಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಯಶಸ್ಸು ಸಿಗುವುದು. ವಿದ್ಯಾರ್ಥಿಗಳಿಗೆ ಈ ದಿನ ಹೆಚ್ಚಿನ ಲಾಭವಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುವವರಿಗೆ ಯಶಸ್ಸು ಸಿಗುವುದು. ಆರೋಗ್ಯ ಉತ್ತಮವಾಗಿರುವುದು. ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು.
ಕನ್ಯಾ ರಾಶಿ (Virgo)
ಕುಟುಂಬದಲ್ಲಿ ಸಾಮರಸ್ಯ ನೆಲೆಸುವುದು. ಸಂಗಾತಿ ಮತ್ತು ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಮಕ್ಕಳಿಗೆ ಸಂಬಂಧಿಸಿದ ಎಲ್ಲಾ ಕೆಲಸವು ನಿರೀಕ್ಷೆಯಂತೆ ಪೂರ್ಣಗೊಳ್ಳುವುದು. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರುವುದು. ಅತಿಯಾಗಿ ಯೋಚಿಸುವುದು ಮತ್ತು ಕೆಲಸದ ಹೊರೆ ಮಾನಸಿಕ ಒತ್ತಡವನ್ನು ಹೆಚ್ಚಿಸುವುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು.
ತುಲಾ ರಾಶಿ (Libra)
ಮನೆಯಲ್ಲಿ ಶಾಂತಿ, ಸಂತೋಷ ಮತ್ತು ಸಾಮರಸ್ಯ ನೆಲೆಸುವುದು. ಕುಟುಂಬ ಸದಸ್ಯರ ಬೆಂಬಲ ಸಿಗುವುದು. ಮನೆಯಲ್ಲಿ ಶುಭ ಕಾರ್ಯಗಳು ಅಥವಾ ದೇವರ ಕೆಲಸ ನಡೆಸುವ ಬಗ್ಗೆ ಚರ್ಚೆ ಆಗುವುದು. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಾಗುವುದು. ವಿದ್ಯಾರ್ಥಿಗಳಿಗೆ ಈ ದಿನ ಶುಭವಾಗಿರುವುದು. ಏಕಾಗ್ರತೆ ಹೆಚ್ಚಾಗುವುದು. ವೃತ್ತಿ ಪ್ರಗತಿಗೆ ಹೊಸ ಅವಕಾಶಗಳು ಸಿಗುವುದು.
ವೃಶ್ಚಿಕ ರಾಶಿ (Scorpio)
ಮನೆಯಲ್ಲಿ ಶಾಂತಿ ಮತ್ತು ಸಂತೋಷ ಹೆಚ್ಚುವುದು. ಮಕ್ಕಳೊಂದಿಗೆ ಸಂತೋಷದ ಸಮಯವನ್ನು ಕಳೆಯುವಿರಿ. ಮಾತಿನ ಬಗ್ಗೆ ಎಚ್ಚರಿಕೆ ಇರಲಿ. ಕೆಲಸದಲ್ಲಿ ಬಡ್ತಿ ಅಥವಾ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿರುವುದು. ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆಯಾಗುವುದು. ಹಳೆಯ ಸಾಲಗಳಿಂದ ಮುಕ್ತಿ ಸಿಗುವುದು.
ಧನು ರಾಶಿ (Sagittarius)
ಮನೆಯಲ್ಲಿ ಸಕಾರಾತ್ಮಕ ವಾತಾವರಣವಿರುವುದು. ಕುಟುಂಬಕ್ಕೆ ಸಂಬಂಧಿಸಿದ ಕೆಲವು ಖರ್ಚುಗಳು ಹುಟ್ಟಿಕೊಳ್ಳಬಹುದು. ಆದರೆ ಅವು ಆರ್ಥಿಕ ಪರಿಸ್ಥಿತಿಯ ಮೇಲೆ ಒತ್ತಡ ಬೀರುವುದಿಲ್ಲ. ಉದ್ಯೋಗಗಳನ್ನು ಬದಲಾಯಿಸುವ ಅಥವಾ ಹೊಸ ಜವಾಬ್ದಾರಿ ಸ್ವೀಕರಿಸುವ ಬಗ್ಗೆ ಯೋಚಿಸಬಹುದು. ವ್ಯವಹಾರ ವಿಸ್ತರಣೆಗೂ ಅನುಕೂಲಕರ ಸಮಯ.
ಮಕರ ರಾಶಿ (Capricorn)
ಮನೆಯಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳು ಸಿಗುವ ಅಥವಾ ಬದಲಾವಣೆಗಳ ಸ್ಪಷ್ಟ ಸೂಚನೆಗಳಿವೆ. ಭಾವನೆಗಳಿಗೆ ಕಟ್ಟು ಬಿದ್ದು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮದ ಪ್ರತಿಫಲ ಪಡೆಯುವರು. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುವುದು.
ಕುಂಭ ರಾಶಿ (Aquarius)
ಮನೆಯಲ್ಲಿ ಅನುಕೂಲಕರ ವಾತಾವರಣವಿರುವುದು. ಆಸ್ತಿಗೆ ಸಂಬಂಧಿಸಿದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹಿರಿಯರೊಂದಿಗೆ ಸಮಾಲೋಚಿಸಿ. ರಿಯಲ್ ಎಸ್ಟೇಟ್ ಸಂಬಂಧಿತ ವಿಷಯಗಳಲ್ಲಿ ಗಮನಾರ್ಹ ಲಾಭಗಳಾಗುವುದು. ಮಾನಸಿಕ ಶಾಂತಿಗೆ ವಿಶೇಷ ಗಮನ ಬೇಕು. ನಿರಂತರ ಚಿಂತನೆಯು ಒತ್ತಡ ಮತ್ತು ನಿದ್ರೆಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಮೀನ ರಾಶಿ (Pisces)
ಮನೆಯಲ್ಲಿ ಸಾಮರಸ್ಯದ ವಾತಾವರಣವಿರುವುದು. ಕುಟುಂಬ ಸದಸ್ಯರೊಂದಿಗಿನ ನಿಮ್ಮ ಬಾಂಧವ್ಯ ಗಾಢವಾಗುವುದು. ಉದ್ಯಮಿಗಳು ಹೊಸ ಆಲೋಚನೆಗಳ ಮೇಲೆ ಕೆಲಸ ಮಾಡಲು ಪ್ರಾರಂಭಿಸುವ ಅವಕಾಶ ಪಡೆಯುವರು. ಸೃಜನಶೀಲ ಮತ್ತು ಕಲಾತ್ಮಕ ಕ್ಷೇತ್ರಗಳಲ್ಲಿ ಯಶಸ್ಸು ಸಿಗುವುದು. ವಿದ್ಯಾರ್ಥಿಗಳಿಗೆ ಇದು ಅನುಕೂಲಕರ ಸಮಯ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುವುದು.


Click it and Unblock the Notifications
