Daily Horoscope: ಸರ್ವಾರ್ಥಸಿದ್ಧಿ ಯೋಗ! ಈ 4 ರಾಶಿಯವರ ಅದೃಷ್ಟ, ಆರ್ಥಿಕ ಲಾಭ, ಬಡ್ತಿ ನಿರೀಕ್ಷೆ

ಗ್ರಹಗಳು ಮತ್ತು ನಕ್ಷತ್ರಗಳ ದೃಷ್ಟಿಕೋನದಿಂದ ನೋಡುವುದಾದರೆ ಎಲ್ಲಾ 12 ರಾಶಿಯವರಿಗೆ ಇಂದು ಹೊಸ ಅವಕಾಶ ಸಿಗುವುದು. ಇಂದು ಕೃಷ್ಣ ಪಕ್ಷದ ಎರಡನೇ ದಿನ ಬೆಳಿಗ್ಗೆ 9:38 ರವರೆಗೆ ಇರುತ್ತದೆ. ನಂತರ ಮೂರನೇ ದಿನ ಪ್ರಾರಂಭವಾಗುತ್ತದೆ. ಉತ್ತರಭಾದ್ರಪದ ನಕ್ಷತ್ರವು ದಿನವಿಡೀ ಇರುವುದು. ಇವತ್ತು ಚಂದ್ರ ಮೀನ ರಾಶಿಗೆ ಸಾಗುತ್ತಾನೆ. ಅಲ್ಲಿ ಚಂದ್ರ-ಶನಿ ವಿಷ ದೋಷವೂ ಇರುವುದು.

ಭಾನುವಾರದಂದು, ಸೂರ್ಯನ ಆಶೀರ್ವಾದದ ಜೊತೆಗೆ, ಸರ್ವಾರ್ಥ ಸಿದ್ಧಿ ಯೋಗ, ಬುಧಾದಿತ್ಯ ಯೋಗ ಮತ್ತು ಶೂಲ ಯೋಗದ ಪ್ರಭಾವವು ಗೋಚರಿಸುವುದು.

Daily Horoscope August 30 Today Rashi Bhavishya Zodiac Predictions Lucky Number Colour of all signs

ಮೇಷ ರಾಶಿ (Aries):

ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ಕೋಪದ ಮೇಲೆಯೂ ನಿಯಂತ್ರಣ ಇರಲಿ. ಕೋಪದ ಕಾರಣ ಇಡೀ ದಿನ ಮನಸ್ಥಿತಿ ಸರಿ ಇರುವುದಿಲ್ಲ. ಚಂದ್ರ ಮತ್ತು ಶನಿಯ ವಿಷ ದೋಷದಿಂದಾಗಿ, ಮನಸ್ಸಿನ ಒತ್ತಡ ಹೆಚ್ಚಾಗುವುದು. ವೈವಾಹಿಕ ಜೀವನದಲ್ಲೂ ಸಮಸ್ಯೆ ಕಾಣಿಸಿಕೊಳ್ಳುವುದು.

ವೃಷಭ ರಾಶಿ (Taurus):

ಅನುಕೂಲಕರ ಗ್ರಹ ಸಂಚಾರದಿಂದಾಗಿ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಸಮಯ. ವಿವಾಹಿತರು ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವರು. ಆರೋಗ್ಯ ಸ್ಥಿತಿ ಸುಧಾರಿಸುವುದು. ಆಸ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮನೆಯಲ್ಲಿ ಚರ್ಚೆ ನಡೆಯಬಹುದು.

ಮಿಥುನ ರಾಶಿ (Gemini):

ಶೂಲ ಮತ್ತು ಸರ್ವಾರ್ಥ ಸಿದ್ಧಿ ಯೋಗವು ವ್ಯವಹಾರದಲ್ಲಿ ಆದಾಯ ಹೆಚ್ಚಳಕ್ಕೆ ಕಾರಣವಾಗುವುದು. ಕೆಲಸದಲ್ಲಿ ನೀವು ತೋರುವ ನಿಷ್ಟೆಗೆ ಮೇಲಧಿಕಾರಿಯಿಂದ ಪ್ರಶಂಸೆ ಪಡೆಯುವಿರಿ. ಭಾವನಾತ್ಮಕ ಬಂಧಗಳು ಬಲಗೊಳ್ಳುವುದು. ಸಾಮಾಜಿಕ ಸ್ಥಾನಮಾನ ಹೆಚ್ಚಾಗುವುದು.

ಕಟಕ ರಾಶಿ (Cancer):

ಹೊಸ ಕೆಲಸದಲ್ಲಿ ಗಮನಾರ್ಹ ಪ್ರಯೋಜನಗಳಾಗುವುದು. ಕೆಲಸದಲ್ಲಿ ಹೊಸ ಜವಾಬ್ದಾರಿ ಹೆಗಲೇರುವುದು. ನಿಮ್ಮ ಆಹಾರ ಮತ್ತು ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಿ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಮಾತನಾಡಿ ಮನಸ್ತಾಪ ಬಗೆಹರಿಸಲು ಪ್ರಯತ್ನಿಸಿ.

ಸಿಂಹ ರಾಶಿ (Leo):

ಅತಿಯಾದ ವ್ಯಾಪಾರ ವೆಚ್ಚ ವ್ಯವಹಾರದ;್ಲಿ ನಷ್ಟಕ್ಕೆ ಕಾರಣವಾಗಬಹುದು. ವಿಷ ದೋಷದ ಪ್ರಭಾವದಿಂದಾಗಿ, ಆರ್ಥಿಕ ಸಮಸ್ಯೆಗಳು ಮುಂದುವರೆಯುವುದು. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅಹಂಕಾರ ಬದಿಗಿಟ್ಟು ಕೆಲಸ ಮಾಡಿದರೆ ಯಶಸ್ಸು ಸಿಗಬಹುದು.

ಕನ್ಯಾರಾಶಿ (Virgo):

ವ್ಯಾಪಾರ, ವ್ಯವಹಾರದಲ್ಲಿ ಲಾಭವಾಗುವುದು. ಹೊಸ ಕೆಲಸದ ಆಫರ್‌ ಬರಬಹುದು. ಬಹಳ ದಿನಗಳ ನಂತರ ಸ್ನೇಹಿತರ ಭೇಟಿಯಾಗುವುದು. ವೈವಾಹಿಕ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮಾಧಾನವಾಗಿ ಬಗೆಹರಿಸಲು ಪ್ರಯತ್ನಿಸಿ.

ತುಲಾ ರಾಶಿ (Libra):

ಸರ್ವಾರ್ಥ ಸಿದ್ಧಿ ಯೋಗದ ಪ್ರಭಾವದಿಂದಾಗಿ, ವ್ಯವಹಾರದಲ್ಲಿನ ಅಡೆತಡೆಗಳು ದೂರವಾಗುವುದು. ಸಂಜೆಯ ವೇಳೆಗೆ ಗಳಿಕೆ ದ್ವಿಗುಣಗೊಳ್ಳುವುದು. ಮನಸ್ಸಿನಲ್ಲಿ ಕಾಡುತ್ತಿದ್ದ ಭಯ ಕೊನೆಯಾಗುವುದು. ಆತ್ಮವಿಶ್ವಾಸ ಹೆಚ್ಚಾಗುವುದು. ಸಂಗಾತಿಯನ್ನು ಸಂತೋಷವಾಗಿಡುವ ಪ್ರಯತ್ನಗಳಲ್ಲಿ ಯಶಸ್ವಿಯಾಗುವಿರಿ.

ವೃಶ್ಚಿಕ ರಾಶಿ (Scorpio):

ವ್ಯವಹಾರದಲ್ಲಿ ಹೂಡಿಕೆ ಮಾಡಲು ಮತ್ತು ನಿಮ್ಮ ಷೇರುಗಳನ್ನು ಹೆಚ್ಚಿಸಲು ದಿನವು ಅನುಕೂಲಕರವಾಗಿದೆ. ಸಾರ್ವಜನಿಕ ಸಂಪರ್ಕಗಳ ಮೂಲಕ ಹೊಸ ವ್ಯವಹಾರ ಮೂಲಗಳು ತೆರೆದುಕೊಳ್ಳುತ್ತವೆ. ಸಹೋದ್ಯೋಗಿಗಳೊಂದಿಗೆ ಸಹಕರಿಸುವುದರಿಂದ ಯೋಜನೆಗಳು ಯಶಸ್ವಿಯಾಗುವುದು. ಕೋಪವನ್ನು ನಿಯಂತ್ರಿಸುವುದು ಮುಖ್ಯ.

ಧನು ರಾಶಿ (Sagittarius):

ವ್ಯಾಪಾರ ವ್ಯವಹಾರಗಳಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಿ. ಇಲ್ಲದಿದ್ದರೆ ನಷ್ಟಗಳು ಸಂಭವಿಸಬಹುದು. ಪೂರ್ವಜರ ವ್ಯವಹಾರದಲ್ಲಿ ನೀವು ಕುಟುಂಬ ಸದಸ್ಯರ ಅಸಮಾಧಾನವನ್ನು ಎದುರಿಸಬಹುದು.ನಕಾರಾತ್ಮಕ ಸಲಹೆಗಳಿಗೆ ಕಿವಿಗೊಡಬೇಡಿ. ತಾಳ್ಮೆಯಿಂದಿರಿ.

ಮಕರ ರಾಶಿ (Capricorn):

ಆಪ್ತ ಸ್ನೇಹಿತರ ಬೆಂಬಲ ಸಿಗುವುದು. ವಿವಾಹಿತರು ಸಂತೋಷದ ಸಮಯವನ್ನು ಕಳೆಯುವರು. ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗುವಿರಿ. ವೃತ್ತಿ ಸಂಬಂಧಿತ ಸಮಸ್ಯೆಗಳು ಬಗೆಹರಿಯುವುದು.

ಕುಂಭ ರಾಶಿ (Aquarius):

ಸರ್ವಾರ್ಥ ಸಿದ್ಧಿ ಯೋಗದಿಂದ ಹೊರಗೆ ಉಳಿದಿರುವ ಹಣ ವಾಪಸ್‌ ಬರುವುದು. ಅಂದುಕೊಂಡ ಕೆಲಸಗಳು ಅಂದುಕೊಂಡಂತೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಳ್ಳುವುದು. ಕುಟುಂಬ ಜೀವನವು ಸಂತೋಷದಿಂದ ಕೂಡಿರುವುದು. ಆರೋಗ್ಯವು ಉತ್ತಮವಾಗಿರುವುದು.

ಮೀನ ರಾಶಿ (Pisces):

ಅದೃಷ್ಟ ನಿಮ್ಮ ಕಡೆ ಇರುವುದು. ಹಾಗಾಗಿ ಕಡಿಮೆ ಶ್ರಮದಿಂದ ಹೆಚ್ಚಿನ ಲಾಭವನ್ನು ಗಳಿಸುವಿರಿ. ಧಾರ್ಮಿಕ ಪ್ರವಾಸಕ್ಕೆ ಯೋಜನೆಗಳನ್ನು ರೂಪಿಸಿಕೊಳ್ಳುವಿರಿ. ವೈವಾಹಿಕ ಜೀವನವು ಉತ್ತಮವಾಗಿರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+