ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರ ಗ್ರಹಣ 2019: ಮೇಷದಿಂದ ಮೀನ ರಾಶಿಯವರೆಗಿನ ಶುಭಾಶುಭ ಫಲಗಳು

By ಹರಿಶಾಸ್ತ್ರಿ ಗುರೂಜಿ
|
Google Oneindia Kannada News

Recommended Video

ಜನವರಿ 20 ಹಾಗು 21, 2019 ಚಂದ್ರ ಗ್ರಹಣ | 12 ರಾಶಿಗಳ ಶುಭಾಶುಭ ಫಲಗಳು | Oneindia Kannada

ರಕ್ತ ಚಂದ್ರ ಗ್ರಹಣ 2019 ಜನವರಿಯ 20ರ ರಾತ್ರಿ ಹಾಗೂ 21ರಂದು ಸಂಭವಿಸಲಿದೆ. ಅದು ಭಾರತದಲ್ಲಿ ಗೋಚರಿಸುವುದಿಲ್ಲ ಎಂಬುದು ನಿಜ. ಆದರೆ ಅದರ ಪ್ರಭಾವ ಇರುವುದೇ ಇಲ್ಲವಾ ಎಂದು ಪ್ರಶ್ನೆ ಮಾಡಿಕೊಂಡರೆ, ಖಂಡಿತಾ ಇರುತ್ತದೆ. ಏಕೆಂದರೆ ಇರುವುದೊಂದೇ ಭೂಮಿ, ಸೂರ್ಯ ಹಾಗೂ ಚಂದ್ರ ಆದ್ದರಿಂದ ಅವುಗಳ ಮೇಲೆ ಆಗುವ ಪರಿಣಾಮ ಮನುಷ್ಯರ ಮೇಲೂ ಆಗುತ್ತದೆ.

ಅಷ್ಟೇ ಅಲ್ಲ, ಈ ಗ್ರಹಣದ ಪರಿಣಾಮ ಪರಿಸರದ ಮೇಲೂ ಆಗಲಿದೆ. ಅದರ ಬಗ್ಗೆ ಮತ್ತೊಮ್ಮೆ ತಿಳಿದುಕೊಂಡರಾಯಿತು. ಆದರೆ ಸದ್ಯಕ್ಕೆ ಹನ್ನೆರಡು ರಾಶಿಗಳವರಿಗೆ ಚಂದ್ರ ಗ್ರಹಣ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ತಿಳಿದುಕೊಳ್ಳೋಣ. ಹಾಗೆ ತಿಳಿದುಕೊಳ್ಳುವ ಮೂಲಕ ಮುಂಜಾಗ್ರತೆಯಿಂದ ಇರುವುದಕ್ಕೆ ಅನುಕೂಲ ಆಗುತ್ತದೆ.

ಇನ್ನೊಂದು ವಿಚಾರ ನೆನಪಿಟ್ಟುಕೊಳ್ಳಿ, ಈ ಚಂದ್ರ ಗ್ರಹಣದ ವೇಳೆ ಯಾವುದೇ ಆಚರಣೆಗಳು ಭಾರತದಲ್ಲಿ ಇಲ್ಲ. ಅರ್ಥಾತ್, ಸ್ನಾನ-ತರ್ಪಣಾದಿಗಳನ್ನು ಮಾಡಬೇಕು ಎಂಬ ಆಚರಣೆಗಳು ಇಲ್ಲ. ಆದರೆ ಚಂದ್ರ ಗ್ರಹಣದಿಂದ ದ್ವಾದಶ ರಾಶಿಗಳವರ ಮೇಲೆ ಆಗುವ ಪ್ರಭಾವ ಪೂರ್ಣ ಪ್ರಮಾಣದಲ್ಲೇನೂ ಆಗುವುದಿಲ್ಲ. ಶೇಕಡಾ ನಲವತ್ತರಿಂದ ಅರವತ್ತರಷ್ಟು ಆಗಬಹುದು. ಇದೇನೇ ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವಿದ್ದರೆ ಉತ್ತಮ.

ನಿಗೂಢ ಮಹಿಳೆ ಬಾಬಾ ವಂಗಾ ನುಡಿದ 2019ರ ಭೀಕರ ಭವಿಷ್ಯ!ನಿಗೂಢ ಮಹಿಳೆ ಬಾಬಾ ವಂಗಾ ನುಡಿದ 2019ರ ಭೀಕರ ಭವಿಷ್ಯ!

ಈಗ ದ್ವಾದಶ ರಾಶಿಗಳವರ ಮೇಲೆ ಚಂದ್ರ ಗ್ರಹಣದ ಪರಿಣಾಮವನ್ನು ತಿಳಿದುಕೊಳ್ಳಿ.

ಮೇಷ: ವಾಹನ ಅಪಘಾತ ಸಾಧ್ಯತೆ, ಎಚ್ಚರ

ಮೇಷ: ವಾಹನ ಅಪಘಾತ ಸಾಧ್ಯತೆ, ಎಚ್ಚರ

ನಿಮಗೆ ಚತುರ್ಥ ಸ್ಥಾನದಲ್ಲಿ ಗ್ರಹಣ ಸಂಭವಿಸುತ್ತದೆ. ನಾಲ್ಕನೇ ಮನೆ ಅಂದರೆ ಸುಖ ಸ್ಥಾನ. ಈ ಬಾರಿಯ ಗ್ರಹಣದಿಂದ ನಿಮ್ಮ ಪಾಲಿನ ಸುಖಗಳು ಕಡಿಮೆ ಆಗುತ್ತವೆ. ನಿದ್ದೆ ಕಡಿಮೆ ಆಗುತ್ತದೆ. ಕಾರುಗಳು ಅಥವಾ ವಾಹನದಿಂದ ತೊಂದರೆ ಆಗುತ್ತದೆ. ಸಣ್ಣ-ಪುಟ್ಟ ಅಪಘಾತ ಸಾಧ್ಯತೆಗಳು ಇವೆ. ಮನಸಿಗೆ ನೋವುಂಟಾಗುತ್ತದೆ. ಸ್ನೇಹಿತರ ಮಾತಿನಿಂದ ಮನಸಿಗೆ ನೋವು ಇಂಥ ಸಮಸ್ಯೆಗಳು ಮೇಷ ರಾಶಿಯವರಿಗೆ ಎದುರಾಗುತ್ತವೆ. ಆಹಾರ ಕ್ರಮದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಗ್ರಹಣದ ದಿನ ಕನಿಷ್ಠ ಒಂದು ಬೊಗಸೆಯಷ್ಟು ಅಕ್ಕಿಯನ್ನು ದಾನ ಮಾಡಿದರೆ ಉತ್ತಮ. ಹಾಗೆ ಮಾಡುವುದರಿಂದ ಗ್ರಹಣ ದೋಷದಿಂದ ಪರಿಹಾರ ಸಿಗುತ್ತದೆ.

ವೃಷಭ: ಶುಭಾಶುಭಗಳ ಮಿಶ್ರ ಫಲ ಪಡೆಯುತ್ತೀರಿ

ವೃಷಭ: ಶುಭಾಶುಭಗಳ ಮಿಶ್ರ ಫಲ ಪಡೆಯುತ್ತೀರಿ

ನಿಮಗೆ ಈ ಚಂದ್ರ ಗ್ರಹಣದಿಂದ ಮಿಶ್ರ ಫಲ ಇದೆ. ಏಕೆಂದರೆ, ರಾಶಿಯಿಂದ ಮೂರನೇ ಸ್ಥಾನದಲ್ಲಿ ಗ್ರಹಣ ಸಂಭವಿಸುತ್ತದೆ. ಆದ್ದರಿಂದ ಅರ್ಧ ಶುಭ ಹಾಗೂ ಅರ್ಧ ಅಶುಭ ಫಲ ಪಡೆಯುತ್ತೀರಿ. ಒಂದು ಕಡೆ ಸಮಸ್ಯೆಗಳು ಉದ್ಭವಿಸುತ್ತದೆ. ಅಯ್ಯೋ ಇದೇನಾಯಿತು ಅಂದುಕೊಳ್ಳುವಷ್ಟರಲ್ಲಿ ಅದಕ್ಕೆ ಪರಿಹಾರ ಗೋಚರವಾಗುತ್ತದೆ. ಕಾಯಿಲೆಗಳು ಕಾಣಿಸುಕೊಳ್ಳುತ್ತವೆ. ಆ ನಂತರ ಅದಕ್ಕೆ ಸೂಕ್ತ ಔಷಧೋಪಚಾರ ಸಿಗುತ್ತದೆ. ನಿಮ್ಮ ತಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ನಂತರ ಹೆಂಡತಿ, ಮಗಳು, ಸೋದರ ಮಾವನ ಆರೋಗ್ಯದ ಕಡೆಗೂ ನಿಗಾ ವಹಿಸಿ. ಅವರ ಜತೆ ವೈರತ್ವ ಬೇಡ. ನೀವು ಯಾವುದೇ ಪರಿಹಾರ ಮಾಡಿಕೊಳ್ಳುವ ಅಗತ್ಯ ಇಲ್ಲ.

ಮಿಥುನ: ಧನವೃದ್ಧಿ ಆಗುತ್ತದೆ

ಮಿಥುನ: ಧನವೃದ್ಧಿ ಆಗುತ್ತದೆ

ನಿಮಗೆ ಈ ಬಾರಿಯ ಚಂದ್ರ ಗ್ರಹಣ ಅದ್ಭುತವಾದ ಫಲಗಳನ್ನು ನೀಡುತ್ತದೆ. ಧನ ಸ್ಥಾನದಲ್ಲಿ ಅಂದರೆ ನಿಮ್ಮ ರಾಶಿಯಿಂದ ಎರಡನೇ ಮನೆಯಲ್ಲಿ ಗ್ರಹಣ ಸಂಭವಿಸುವುದರಿಂದ ಧನ ವೃದ್ಧಿ ಆಗುತ್ತದೆ. ಜ್ಯೋತಿಷಿಗಳು, ಪುರೋಹಿತರು, ಇತಿಹಾಸ- ಶಾಸ್ತ್ರಾಧ್ಯಯನ ಮಾಡುತ್ತಿರುವವರಿಗೆ ಅದ್ಭುತವಾದ ಸಮಯ ಇದು. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ಸಿಗುತ್ತದೆ. ಬೀಜಾಕ್ಷರ ಮಂತ್ರಾನುಷ್ಠಾನ ಮಾಡಲು ಸೂಕ್ತವಾದ ಸಮಯ ಇದು. ಈ ಗ್ರಹಣದಿಂದ ಅತಿ ಮುಖ್ಯ ಫಲ ಧನಾಗಮ. ಅದರಿಂದ ಜೀವನ ಸಂತೋಷದಾಯಕವಾಗಿರುತ್ತದೆ.

ಕರ್ಕಾಟಕ: ಅಕ್ಕಿ ಹಾಗೂ ಬಿಳಿವಸ್ತ್ರ ದಾನ ಮಾಡಿ

ಕರ್ಕಾಟಕ: ಅಕ್ಕಿ ಹಾಗೂ ಬಿಳಿವಸ್ತ್ರ ದಾನ ಮಾಡಿ

ನಿಮ್ಮ ರಾಶಿಯಲ್ಲಿ, ಪುಷ್ಯ ನಕ್ಷತ್ರದಲ್ಲಿ ಚಂದ್ರ ಗ್ರಹಣ ಸಂಭವಿಸುತ್ತಿದೆ. ಆದ್ದರಿಂದ ಮಾತುಕತೆಯಲ್ಲಿ ಏರಿಳಿತಗಳು ಬಹಳ ಇರುತ್ತದೆ. ತುಬ ಭಯ ಪಡುತ್ತೀರಿ. ಯೋಚನೆ ಮಾಡುತ್ತೀರಿ. ನಕಾರಾತ್ಮಕ ಆಲೋಚನೆಗಳೇ ಹೆಚ್ಚಾಗಿ ಬರುತ್ತವೆ. ಇಂಥದ್ದರಿಂದ ನೀವು ಹೊರ ಬರಲೇಬೇಕು. ಇನ್ನು ಕರ್ಕಾಟಕ ರಾಶಿಗೆ ಚಂದ್ರನೇ ಅಧಿಪತಿ. ಅವನೇ ಮನಸಿನ ಕಾರಕ. ಮನಸ್ಸು ಸಮತೋಲನ ಇಲ್ಲ ಅಂದರೆ ಯಾವ ಕೆಲಸವೂ ಆಗುವುದಿಲ್ಲ. ಈ ಅವಧಿಯಲ್ಲಿ ನೀವು ಯಾವುದೇ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಬಾರದು. ಯಾರಿಗೂ ಮಾತು ಕೊಡಬೇಡಿ. ಬ್ಯಾಂಕ್ ಗೆ ಸಂಬಂಧಿಸಿದ ವ್ಯವಹಾರ ಮಾಡಬೇಡಿ. ಬಡ್ಡಿ, ಫೈನಾನ್ಸ್ ವ್ಯವಹಾರಗಳು ಬೇಡ. ಯಾವುದೇ ಮುಖ್ಯ ಒಪ್ಪಂದಗಳಿಗೆ ಸಹಿ ಹಾಕಬೇಡಿ. ಮುಂಗಡ ನೀಡಬೇಡಿ. ಮನೆ ಖಾಲಿ ಮಾಡಬೇಡಿ. ದೂರ ಪ್ರಯಾಣ ಬೇಡ. ಜಂಕ್ ಫುಡ್ ಸೇವನೆ ಬೇಡ. ದ್ರವಾಹಾರ ಸೇವನೆ ಹೆಚ್ಚು ಮಾಡಿ. ಚಂದ್ರನಿಗೆ ಸಂಬಂಧಿಸಿದ ಸ್ತೋತ್ರ ಪಠಣ ಮಾಡಿ ಹಾಗೂ ಅಕ್ಕಿ- ಬಿಳಿ ವಸ್ತ್ರ ದಾನ ಮತ್ತು ಗೋವಿನ ದರ್ಶನ ಮಾಡಿ.

ಸಿಂಹ: ನಷ್ಟ ಸಾಧ್ಯತೆ, ನಿರ್ಧಾರದಲ್ಲಿ ಎಚ್ಚರ

ಸಿಂಹ: ನಷ್ಟ ಸಾಧ್ಯತೆ, ನಿರ್ಧಾರದಲ್ಲಿ ಎಚ್ಚರ

ನಿಮ್ಮ ರಾಶಿಗೆ ಹನ್ನೆರಡನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತದೆ. ವ್ಯಯ ಸ್ಥಾನದಲ್ಲಿ ಚಂದ್ರ ಬಂದಿರುತ್ತಾನೆ. ಯಾವುದೋ ಮಾತನಾಡುವ ಜಾಗದಲ್ಲಿ ಮತ್ತೇನೋ ಮಾತನಾಡಿ ಖರ್ಚಿಗೆ ಸಿಲುಕಿಕೊಳ್ಳುತ್ತೀರಿ. ಮೂರನೇ ವ್ಯಕ್ತಿಗಳ ಸ್ನೇಹ ಆರಂಭವಾಗುತ್ತದೆ. ದುಶ್ಚಟಗಳು ಆರಂಭವಾಗುವ ಅಥವಾ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅದಕ್ಕೆ ನಿಮ್ಮ ಸ್ನೇಹಿತರಿಂದಲೇ ಪ್ರೇರಣೆ ದೊರೆಯುತ್ತದೆ. ಆದ್ದರಿಂದ ಸ್ನೇಹಿತರನ್ನು ಸ್ವಲ್ಪ ದೂರ ಇಡುವುದು ಉತ್ತಮ. ಆದಷ್ಟು ಏಕಾಂತವಾಗಿ ಹೆಚ್ಚಿನ ಸಮಯ ಕಳೆಯಿರಿ. ವ್ಯಾವಹಾರಿಕವಾಗಿ ಯಾವುದೇ ಕೆಲಸ ಮಾಡಿದರೂ ವೃದ್ಧಿ ಇದೆ. ಆ ಬಗ್ಗೆ ಯೋಚಿಸುವ ಅಗತ್ಯ ಇಲ್ಲ. ನಷ್ಟ ಸ್ಥಾನದಲ್ಲೇ ಚಂದ್ರ ಇರುವುದರಿಂದ ಕೆಲವು ನಷ್ಟಗಳು ಆಗುವ ಸಾಧ್ಯತೆಗಳಿವೆ. ಆದ್ದರಿಂದ ಜಾಗ್ರತೆಯಿಂದ ಇರಬೇಕು. ನಿಮಗೆ ಮೂಲತಃ ಕೋಪ ಮತ್ತು ಆತುರ ಸ್ವಭಾವ ಜಾಸ್ತಿ. ಆತುರದಲ್ಲಿ ತೀರ್ಮಾನ ಕೈಗೊಂಡರೆ ನಂತರ ಪಶ್ಚಾತಾಪ ಪಡುವಂತಾಗುತ್ತದೆ, ಎಚ್ಚರ.

ಕನ್ಯಾ: ಶತ್ರು ಬಾಧೆ, ಸಾಲ ಬಾಧೆ ನಿವಾರಣೆ ಆಗುತ್ತದೆ

ಕನ್ಯಾ: ಶತ್ರು ಬಾಧೆ, ಸಾಲ ಬಾಧೆ ನಿವಾರಣೆ ಆಗುತ್ತದೆ

ಅತ್ಯಂತ ಅತಿಶಯ ಫಲ ಸಿಗುತ್ತದೆ. ಏಕಾದಶದಲ್ಲಿ ಚಂದ್ರ ಇರುತ್ತಾನೆ. ಲಾಭ ಸ್ಥಾನದಲ್ಲಿ ಚಂದ್ರ ಇರುವುದರಿಂದ ವ್ಯಾಪಾರ ಅಭಿವೃದ್ಧಿ, ಹೊಸ ವ್ಯಾಪಾರದಲ್ಲಿ ವೃದ್ಧಿ, ಈಗಾಗಲೇ ವ್ಯಾಪಾರ ಮಾಡುತ್ತಿದ್ದವರು ಅದನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತೀರಿ. ಧನಾಗಮ ಹಾಗೂ ಆಕಸ್ಮಿಕ ಧನಲಾಭ ಇದೆ. ಶತ್ರು ಬಾಧೆ ನಿವಾರಣೆ ಆಗುತ್ತದೆ. ಸಾಲ ಬಾಧೆ ಪರಿಹಾರ ಆಗುತ್ತದೆ. ಹೊಸ ವ್ಯಕ್ತಿಗಳ ಪರಿಚಯ ಆಗಲಿದೆ. ಹೊಸ ಕೆಲಸಗಳಲ್ಲಿ ವೃದ್ಧಿ ಆಗಲಿದೆ. ಹಲವು ಅವಕಾಶಗಳು ನಿಮಗೆ ದೊರೆಯಲಿವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಆಗ ಯಶಸ್ಸನ್ನು ಕಾಣುತ್ತೀರಿ. ವೃದ್ಧಿಯನ್ನು ಕಾಣುತ್ತೀರಿ. ರೈತಾಪಿ ವರ್ಗದವರಿಗೆ ಉತ್ತಮವಾದ ಫಲ ಇದೆ.

ತುಲಾ: ಬಡ್ತಿ, ವರ್ಗಾವಣೆ ಆಗುವ ಸಾಧ್ಯತೆ ಇದೆ

ತುಲಾ: ಬಡ್ತಿ, ವರ್ಗಾವಣೆ ಆಗುವ ಸಾಧ್ಯತೆ ಇದೆ

ನಿಮ್ಮ ರಾಶಿಯಲ್ಲಿ ಹತ್ತನೇ ಸ್ಥಾನದಲ್ಲಿ ಚಂದ್ರ ಗ್ರಹಣ ನಡೆಯುವುದರಿಂದ ಕರ್ಮಕ್ಕೆ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ವಿಚಾರಗಳ ಮೇಲೆ ಪರಿಣಾಮ ಆಗುತ್ತದೆ. ಕೆಲಸಗಳಲ್ಲಿ ಅಭಿವೃದ್ಧಿ ಆಗುತ್ತದೆ. ವಿಶೇಷವಾಗಿ ಬಡ್ತಿ ಆಗುತ್ತದೆ. ವರ್ಗಾವಣೆ ಆಗಿ ಉನ್ನತ ಸ್ಥಾನ ದೊರೆಯುವ ಸಾಧ್ಯತೆಗಳಿರುತ್ತವೆ. ಹಳ್ಳಿಗಳಲ್ಲಿ ಕೆಲಸ ಮಾಡುತ್ತಿದ್ದು, ನಗರ ಪ್ರದೇಶಗಳಿಗೆ ವರ್ಗಾವಣೆ ಬಯಸುತ್ತಿರುವವರಿಗೆ ಸ್ಥಾನ ಪಲ್ಲಟ ಆಗುತ್ತದೆ. ಜೀವನ ಸುಂದರ ಆಗುತ್ತಿರುವುದು ಅನುಭವಕ್ಕೆ ಬರುತ್ತದೆ. ಇದರ ಜತೆಗೆ ಗುರುವಿನ ಅನುಗ್ರಹ ಕೂಡ ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಮೇಲೆ ಇರುವುದರಿಂದ ಅದರ ಸತ್ಪರಿಣಾಮವನ್ನೂ ಕಾಣುತ್ತೀರಿ. ನಿಮ್ಮ ರಾಶಿಯವರಿಗೆ ಚಂದ್ರ ಗ್ರಹಣದಿಂದ ಶುಭ ಫಲವೇ ಇದೆ.

ವೃಶ್ಚಿಕ: ಶುಭ ಕಾರ್ಯಗಳು ನಡೆಯುವ ಯೋಗ

ವೃಶ್ಚಿಕ: ಶುಭ ಕಾರ್ಯಗಳು ನಡೆಯುವ ಯೋಗ

ನಿಮ್ಮ ರಾಶಿಯವರಿಗೆ ಭಾಗ್ಯ ಅಥವಾ ಅದೃಷ್ಟ ಅಥವಾ ಪಿತೃ ಸ್ಥಾನ ಎಂದು ಕರೆಯುವ ಒಂಬತ್ತನೇ ಮನೆಯಲ್ಲಿ ಚಂದ್ರ ಗ್ರಹಣ ಸಂಭವಿಸುತ್ತಿದೆ. ರಾಹು ಯಾವ ಮನೆಯಲ್ಲಿ ಇರುತ್ತಾನೋ ಆ ಮನೆಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತಾನೆ. ಈಗ ಚಂದ್ರನು ರಾಹುವಿನ ವಶದಲ್ಲಿ ಇರುತ್ತಾನೆ. ರಾಹು ಕಾರಕಕ್ಕೆ ಸಂಬಂಧಿಸಿದ ಫಲಗಳನ್ನು ನೀವು ಪಡೆಯುತ್ತೀರಿ. ಅದು ಸಕಾರಾತ್ಮಕವೋ ಅಥವಾ ನಕಾರಾತ್ಮಕವೋ ಅನ್ನೋದು ಬೇರೆ ಮಾತು. ಆದರೆ ಮುಖ್ಯವಾಗಿ, ನಿಮಗೆ ಜನ್ಮ ರಾಶಿಯಲ್ಲೇ ಗುರು ಇರುವುದರಿಂದ ಶುಭ ಕಾರ್ಯಕ್ಕೆ ಸಂಬಂಧಿಸಿದ ಸುದ್ದಿ ಕೇಳಿ ಬರುತ್ತದೆ. ಮದುವೆ, ಸಂತಾನ, ವ್ಯಾಪಾರದಲ್ಲಿ ಹೊಸ ಅವಕಾಶ, ವಿದೇಶ ಪ್ರಯಾಣದಲ್ಲಿ ಅನುಕೂಲ ಇಂಥ ಹಲವು ಶುಭ ಕಾರ್ಯಗಳು ನಡೆಯುತ್ತವೆ- ಸಂತೋಷದಾಯಕ ಬೆಳವಣಿಗೆಗಳು ಆಗುತ್ತವೆ. ಇದರಿಂದ ಸಂತೃಪ್ತದಾಯಕ ಜೀವನ ಇರುತ್ತದೆ.

ಧನುಸ್ಸು: ಕಡ್ಡಾಯವಾಗಿ ವಾಹನ ಚಾಲನೆ, ದೂರ ಪ್ರಯಾಣ ಬೇಡ

ಧನುಸ್ಸು: ಕಡ್ಡಾಯವಾಗಿ ವಾಹನ ಚಾಲನೆ, ದೂರ ಪ್ರಯಾಣ ಬೇಡ

ನಿಮ್ಮ ರಾಶಿಯವರ ಮೇಲೆ ಈ ಗ್ರಹಣದ ಪರಿಣಾಮ ನಕಾರಾತ್ಮಕವಾಗಿರುತ್ತದೆ. ಏಕೆಂದರೆ ನಿಮ್ಮ ರಾಶಿಯಿಂದ ಎಂಟನೇ ಮನೆಯಾದ ಕರ್ಕಾಟಕ ರಾಶಿಯ ಅಧಿಪತಿಯೇ ಆದ ಚಂದ್ರನು ಅಲ್ಲೇ ಇರುವುದರಿಂದ, ಜತೆಗೆ ರಾಹುವು ಇದ್ದು, ಇದು ಆಯುಷ್ಯಕ್ಕೆ ಸಂಬಂಧಿಸಿದ ಸ್ಥಾನವೂ ಆದ್ದರಿಂದ ಯಾವುದೇ ಕಾರಣಕ್ಕೂ ವಾಹನ ಪ್ರಯಾಣ ಮಾಡದಿರುವುದು ಉತ್ತಮ. ಕಡ್ಡಾಯವಾಗಿ ದೂರ ಪ್ರಯಾಣ ಮಾಡಬೇಡಿ. ವೃತ್ತಿಯಲ್ಲಿ ಚಾಲಕರೇ ಆಗಿದ್ದವರು ಕೂಡ ಚಂದ್ರ ಗ್ರಹಣದ ದಿನವಾದ ಜನವರಿ ಇಪ್ಪತ್ತು-ಇಪ್ಪತ್ತೊಂದರಿಂದ ಪ್ರಯಾಣ ಮಾಡಬೇಡಿ. ಒಂದು ದಿನದ ಸಂಪಾದನೆಗಿಂತ ನಿಮ್ಮ ದೈಹಿಕ ಆರೋಗ್ಯ ಹಾಗೂ ಆಯುಷ್ಯ ಮುಖ್ಯ ಎಂಬುದನ್ನು ನೆನಪಿಟ್ಟುಕೊಳ್ಳಿ. ರಜಾ ತೆಗೆದುಕೊಂಡು ಮನೆಯಲ್ಲೇ ಇದ್ದುಬಿಡಿ. ನದಿ, ಬಾವಿ, ಸಮುದ್ರದಲ್ಲಿ ಈಜಾಡುವುದಕ್ಕೆ ತೆರಳಬೇಡಿ. ಅಕ್ಕಿ ಹಾಗೂ ಬಿಳಿಯ ವಸ್ತ್ರವನ್ನು ದಾನ ಮಾಡುವ ಮೂಲಕ ದೋಷವನ್ನು ನಿವಾರಣೆ ಮಾಡಿಕೊಳ್ಳಿ.

ಮಕರ: ವಿವಾಹ ನಿಶ್ಚಯ ಆಗುವ ಸಾಧ್ಯತೆಗಳು

ಮಕರ: ವಿವಾಹ ನಿಶ್ಚಯ ಆಗುವ ಸಾಧ್ಯತೆಗಳು

ನಿಮಗೆ ವಿಶೇಷವಾದ ಫಲವೂ ಅಲ್ಲ, ಸಾಧಾರಣವಾದ ಫಲವೂ ಅಲ್ಲ. ಮಧ್ಯಮ ಫಲವನ್ನು ಪಡೆಯುತ್ತೀರಿ. ಕಳತ್ರ ಸ್ಥಾನ ಅಂಥ ವೈವಾಹಿಕ ಸಂಬಂಧಗಳನ್ನು ಸೂಚಿಸುವ ಸ್ಥಾನದಲ್ಲಿ ಗ್ರಹಣ ಸಂಭವಿಸುವುದರಿಂದ ವಿವಾಹ ವಯಸ್ಕರಾಗಿದ್ದು, ಕನ್ಯಾ ಅಥವಾ ವರಾನ್ವೇಷಣೆಯಲ್ಲಿ ತೊಡಗಿದ್ದವರಿಗೆ ತಾಯಿ ಕಡೆಯ ಸಂಬಂಧದಿಂದ ವಿವಾಹ ನಿಶ್ಚಯ ಮಾಡಿಕೊಳ್ಳವ ಸಾಧ್ಯತೆ ಇರುತ್ತದೆ. ಪುಣ್ಯ ಕ್ಷೇತ್ರ ದರ್ಶನ ಸಾಧ್ಯತೆ ಇದೆ. ನದಿ ಅಥವಾ ಸಮುದ್ರ ಸ್ನಾನದ ಪುಣ್ಯ ದೊರೆಯುವ ಸಮಯ ಇದು. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ. ದಾನ-ಧರ್ಮಗಳನ್ನು ಮಾಡುತ್ತೀರಿ. ಗೋವಿನ ಸೇವೆ ಮಾಡುವ ಅವಕಾಶ ಸಿಗುತ್ತದೆ. ಇಷ್ಟೆಲ್ಲದರ ಹೊರತಾಗಿಯೂ ನಿಮ್ಮ ಕೆಲಸದಲ್ಲಿ ಅದ್ಭುತ ಜಯ ಸಾಧಿಸಬೇಕು ಅಂದರೆ ಚಂದ್ರಶೇಖರ ಅಂದರೆ ಈಶ್ವರನ ಆರಾಧನೆಯನ್ನು ಮಾಡಿ.

ಕುಂಭ: ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ

ಕುಂಭ: ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ

ನಿಮಗೆ ಶತ್ರು ಅಥವಾ ರೋಗ ಸ್ಥಾನವಾದ ಆರನೇ ಮನೆಯಲ್ಲಿ ಚಂದ್ರ ಗ್ರಹಣ ಸಂಭವಿಸುತ್ತಿದೆ. ರೋಗ ಭಯ ಕಾಡುತ್ತದೆ. ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸ ಆಗುತ್ತದೆ. ನಿಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಚಿಂತೆ ಹೆಚ್ಚಾಗುತ್ತದೆ. ಆಹಾರ ಜೀರ್ಣವಾಗುವುದಿಲ್ಲ. ಹೊಟ್ಟೆಗೆ ಸಂಬಂಧಿಸಿದಂತೆ ಅನಾರೋಗ್ಯ ಸಮಸ್ಯೆಗಳು ಆಗುತ್ತವೆ. ದೂರ ಪ್ರಯಾಣ ಮಾಡಬೇಕಾಗುತ್ತದೆ. ದೂರದ ಬಂಧುಗಳಿಂದ ತೊಂದಗಳಾಗುವ ಸಾಧ್ಯತೆ ಇದೆ. ಯಾರೋ ಮಾಡಿದ ತಪ್ಪಿಗೆ ನಿಮ್ಮ ತಲೆ ಮೇಲೆ ಅಪವಾದ ಬರುವ ಸಾಧ್ಯತೆಗಳಿವೆ. ಕಾಯಿಲೆ ಉಲ್ಬಣಿಸುವ ಸಾಧ್ಯತೆಗಳು ಇರುವುದರಿಂದ ಧನ್ವಂತರಿ ಜಪ ಮಾಡುವುದು ಉತ್ತಮ. ಹೊಸ ಕೆಲಸ ಆರಂಭಿಸಬೇಡಿ. ಹೊಸ ಒಪ್ಪಂದಗಳಿಗೆ ಸಹಿ ಹಾಕಬೇಡಿ. ಗ್ರಹಣದ ಫಲಗಳು ನಿಮ್ಮ ಪಾಲಿಗೆ ನಕಾರಾತ್ಮವಾಗಿವೆ. ನಿಮ್ಮ ವೇಗ ಕೂಡ ತಗ್ಗಿಸಿಕೊಳ್ಳಿ. ಯಾವುದೇ ಕೆಲಸದಲ್ಲಿ ಆತುರ ಬೇಡ. ಹಿರಿಯರ ಆಶೀರ್ವಾದ- ಸಲಹೆ ಪಡೆಯಿರಿ. ಅನುಭವಸ್ಥರಿಂದ ಸಲಹೆ ಪಡೆದುಕೊಳ್ಳಿ.

ಮೀನ: ಸ್ಥಿರಾಸ್ತಿ ಖರೀದಿ ಆಲೋಚನೆ ಬರುತ್ತದೆ

ಮೀನ: ಸ್ಥಿರಾಸ್ತಿ ಖರೀದಿ ಆಲೋಚನೆ ಬರುತ್ತದೆ

ನಿಮ್ಮ ರಾಶಿಗೆ ಐದನೇ ಮನೆಯಲ್ಲಿ ಚಂದ್ರ ಗ್ರಹಣ ಸಂಭವಿಸುತ್ತಿದೆ. ಐದನೇ ಸ್ಥಾನ ಅಂದರೆ ಅದು ಸಂತಾನ ಸ್ಥಾನ. ಅಂದರೆ ಮಕ್ಕಳಿಂದ ಸುಖ ಸಿಗುತ್ತದೆ. ಸಂತೋಷ ಸಿಗುತ್ತದೆ. ಮಕ್ಕಳ ಸಾಧನೆಯಿಂದ ನಿಮಗೆ ಹೆಮ್ಮೆ ಎನಿಸುತ್ತದೆ. ಪಿತ್ರಾರ್ಜಿತ ಆಸ್ತಿ ನಿಮ್ಮ ಕೈ ಸೇರುವ ಸಾಧ್ಯತೆ ಇದೆ. ಧನಾಗಮ ಇದೆ. ಮೂರ್ನಾಲ್ಕು ಮೂಲಗಳಿಂದ ಧನಾಗಮ ಇದೆ. ಹೊಸ ಕೆಲಸಗಳ ನಿರೀಕ್ಷೆಯಲ್ಲಿ ಇರುವವರಿಗೆ ಜಯ ಪ್ರಾಪ್ತಿ ಯೋಗ ಇದೆ. ಸ್ಥಿರಾಸ್ತಿ ಖರೀದಿಗೆ ಆಲೋಚನೆ ಮಾಡುತ್ತೀರಿ. ಇನ್ನು ಕೃಷಿಕ ವರ್ಗದವರಿಗೆ ಅದ್ಭುತವಾದ ಫಲ ಇದೆ. ಕೃಷಿಯಿಂದ ಅದ್ಭುತವಾದ ಬೆಳವಣಿಗೆ ಆಗುತ್ತದೆ. ಆದರೆ ಸಾಕಿದ ಪ್ರಾಣಿಗಳು ಸಮಸ್ಯೆ ಮಾಡುವ ಸಾಧ್ಯತೆಗಳಿವೆ. ಆ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು.

ಗುರೂಜಿ ಹರಿ ಶಾಸ್ತ್ರಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಂಪರ್ಕ ಸಂಖ್ಯೆ 7996729783.

English summary
Blood moon lunar eclipse on January 20th and 21st. But it will not visible in India. Still there will be impact on zodiac signs. Here is the prediction according to vedic astrology by well known astrologer Hari Guruji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X