Baba Vanga prediction: ಹೊಳೆಯುವುದು ಈ ಐದು ರಾಶಿಯವರ ಅದೃಷ್ಟ: ಕನಸುಗಳು ನನಸಾಗುವುದು, ಸಂಪತ್ತು ಹರಿದು ಬರುವ ಕಾಲ
ಬಾಬಾ ವಂಗಾ ಅವರ ಭವಿಷ್ಯವಾಣಿಗಳ ಕುರಿತು ವಿವಿಧ ಹೇಳಿಕೆಗಳು ಕಾಲಕಾಲಕ್ಕೆ ಹೊರ ಬರುತ್ತಲೇ ಇವೆ. ಜ್ಯೋತಿಷ್ಯ ಮತ್ತು ಭವಿಷ್ಯವಾಣಿಯಲ್ಲಿ ಆಸಕ್ತಿ ಹೊಂದಿರುವವರು ಬಾಬಾ ವಂಗಾ ಭವಿಷ್ಯವಾಣಿಗಳನ್ನು ಕುತೂಹಲದಿಂದ ಫಾಲೋ ಮಾಡ್ತಾರೆ. ಇದರ ಪ್ರಕಾರ ಮುಂದಿನ 15 ದಿನಗಳವರೆಗೆ ಐದು ರಾಶಿಯವರಿಗೆ ಸಮಯ ಅನುಕೂಲಕರವಾಗಿರುವುದು. ಈ ಸಮಯದಲ್ಲಿ ಇವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಅದೃಷ್ಟ ಹೆಚ್ಚಾಗುವುದು. ಮುಂದಿನ 15 ದಿನಗಳು ಈ ರಾಶಿಯವರ ಪಾಲಿಗೆ ಅದೃಷ್ಟವನ್ನು ಹೊತ್ತು ತರುವುದು.
ವೃಷಭ ರಾಶಿ (Taurus):
ಬಾಬಾ ವಂಗಾ ಅವರ ಪ್ರಕಾರ, ವೃಷಭ ರಾಶಿಯವರಿಗೆ ಮುಂದಿನ 15 ದಿನಗಳು ಆರ್ಥಿಕವಾಗಿ ತುಂಬಾ ಪ್ರಯೋಜನಕಾರಿಯಾಗುವುದು. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ಬಾಕಿ ಉಳಿದಿರುವ ಹಣ ಕೈ ಸೇರುವುದು. ಹೂಡಿಕೆಗಳಿಂದ ಲಾಭವಾಗುವುದು. ಆದರೂ ಹಣಕಾಸಿನ ವಹಿವಟು ನಡೆಸುವಾಗ ಎಚ್ಚರಿಕೆ ಅಗತ್ಯ. ಪ್ರತೀ ನಿರ್ಧಾರಗಳನ್ನು ಎಚ್ಚರಿಕೆಯಿಂದ ಮಾಡುವುದು ಒಳ್ಳೆಯದು. ಸಾಲದ ಹೊರೆಯಿಂದ ಹೊರ ಬರುವಿರಿ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸುಲಭವಾಗುವುದು. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳುವುದು. ಹೊಸ ಜವಾಬ್ದಾರಿಗಳು ಹೆಗಲೇರುವುದು. ಉನ್ನತ ಹುದ್ದೆಗೆ ಏರುವ ಸಾಧ್ಯತೆ ಇದೆ. ವ್ಯವಹಾರದಿಂದ ದೊಡ್ಡ ಮಟ್ಟದ ಲಾಭವಾಗುವುದು.

ಮಿಥುನ ರಾಶಿ (Gemini):
ಈ ಅವಧಿಯು ಮಿಥುನ ರಾಶಿಯವರಿಗೆ ವೃತ್ತಿ ಮತ್ತು ಶಿಕ್ಷಣದ ವಿಷಯದಲ್ಲಿ ಮಹತ್ವದ್ದಾಗಿರುವುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಯಶಸ್ಸನ್ನು ಸಾಧಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರ ಆತ್ಮವಿಶ್ವಾಸ ಹೆಚ್ಚಾಗುವುದು. ಹಣ ಗಳಿಸಲು ಉತ್ತಮ ಅವಕಾಶಗಳು ಸಿಗುವುದು. ವೃತ್ತಿಪರರಿಗೆ ಶುಭ ಸುದ್ದಿ ಸಿಗುವುದು. ನಿಂತು ಹೀಗಿರುವ ವ್ಯಾಪಾರ ವಹಿವಾಟುಗಳು ಮತ್ತೆ ಶುರುವಾಗುವುದು. ಆರ್ಥಿಕ ಸ್ಥಿತಿ ಬಲಗೊಳ್ಳುವುದು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚುವುದು.
ತುಲಾ ರಾಶಿ (Libra):
ಮುಂದಿನ 15 ದಿನಗಳಲ್ಲಿ ತುಲಾ ರಾಶಿಯವರ ಕೈ ಹಿಡಿಯುವುದು ಅದೃಷ್ಟ. ಕೆಲಸ ಮಾಡುವ ವೃತ್ತಿಪರರಿಗೆ ಬಡ್ತಿ ಸಿಗುವುದು. ಸಂಬಳದಲ್ಲಿ ಹೆಚ್ಚಳವಾಗುವುದು ಅಥವಾ ಹೊಸ ಜವಾಬ್ದಾರಿಗಳ ಅವಕಾಶಗಳು ಸಿಗುವುದು. ಹೊಸ ಸಂಪರ್ಕಗಳಿಂದ ಉದ್ಯಮಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗುವುದು. ಹಿಂದಿನ ಹೂಡಿಕೆಗಳಿಂದ ಸಕಾರಾತ್ಮಕ ಫಲಿತಾಂಶಗಳು ಸಿಗುವುದು. ಸಾಲಗಳನ್ನು ಮರುಪಾವತಿಸುವುದು ಸಾಧ್ಯವಾಗುವುದು. ವೈಯಕ್ತಿಕ ಜೀವನದಲ್ಲಿ ಸಂಬಂಧಗಳು ಹೆಚ್ಚು ಸಾಮರಸ್ಯದಿಂದ ಕೂಡಿರುವುದು. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಅವಕಾಶ ಸಿಗುವುದು.
ಧನು ರಾಶಿ (Sagittarius):
ಧನು ರಾಶಿಯವರ ಹೊಸ ಆರಂಭಕ್ಕೆ ಈ ಅವಧಿ ಸಾಕ್ಷಿಯಾಗುವುದು. ಉದ್ಯೋಗ ಮತ್ತು ವ್ಯವಹಾರ ಎರಡರಲ್ಲೂ ಪ್ರಗತಿಗೆ ಅವಕಾಶ ಸಿಗುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ. ಆದಾಯ ಹೆಚ್ಚಿಸಿಕೊಳ್ಳಲು ಹೊಸ ಮಾರ್ಗಗಳು ಹುಟ್ಟಿಕೊಳ್ಳುವುದು. ಶಿಕ್ಷಣ ಕ್ಷೇತ್ರದಲ್ಲಿ ಕಠಿಣ ಪರಿಶ್ರಮಕ್ಕೆ ಸರಿಯಾದ ಪ್ರತಿಫಲ ಸಿಗುವುದು. ದೇವಸ್ಥಾನಗಳಿಗೆ ಭೇಟಿ ನೀಡುವಿರಿ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುವುದು. ಮಾಡುವ ಕೆಲಸಗಳಿಗೆ ಸಂಗಾತಿ ಮತ್ತು ಕುಟುಂಬದ ಬೆಂಬಲ ಸಿಗುವುದು.
ಕುಂಭ ರಾಶಿ (Aquarius) :
ಮುಂದಿನ 15 ದಿನಗಳು ಕುಂಭ ರಾಶಿಯವರಿಗೆ ಹೆಚ್ಚು ಶುಭವಾಗಿರುವುದು. ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಉದ್ಯೋಗದಲ್ಲಿ ಯಶಸ್ಸಿಗೆ ಅವಕಾಶಗಳು ಸಿಗುವುದು. ವ್ಯವಹಾರದಲ್ಲಿ ಲಾಭ ಗಳಿಸುವ ಅವಕಾಶಗಳು ಹುಟ್ಟಿಕೊಳ್ಳುವುದು. ಹಿಂದಿನ ಹೂಡಿಕೆಗಳಿಂದ ಲಾಭ ಪಡೆಯುವ ಸಾಧ್ಯತೆಯಿದೆ. ಹಣಕಾಸಿನ ತೊಂದರೆಗಳು ಕಡಿಮೆಯಾಗುವುದು. ಸಾಲ ತೀರಿಸುವ ಪ್ರಯತ್ನಕ್ಕೆ ಯಶಸ್ಸು ಸಿಗುವುದು. ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಫಲಿತಾಂಶಗಳನ್ನು ಪಡೆಯುವರು. ವೈಯಕ್ತಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಆಗುವುದು. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣ ನೆಲೆಯಾಗುವುದು.


Click it and Unblock the Notifications
