• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜ್ಯೋತಿಷ್ಯ: ಮಕರ ರಾಶಿಯಲ್ಲಿ ಗುರು- ಶನಿ ಇರುವಾಗ ಏನೆಲ್ಲ ಆಗಬಹುದು?

By ಪಂಡಿತ್ ವಿಠ್ಠಲ ಭಟ್
|

ಹನ್ನೆರಡು ವರ್ಷದ ಹಿಂದೆ ಆರ್ಥಿಕ ಹಿಂಜರಿತ ಅನುಭವಿಸಿದ್ದು ನಿಮಗೆ ನೆನಪಿದೆ ಅನ್ನೋದಾದರೆ ಇಂದು ಹೇಳುವ ಭವಿಷ್ಯ ಹೆಚ್ಚು ಚೆನ್ನಾಗಿ ಅರ್ಥ ಆಗುತ್ತದೆ. ಒಂದು ವೇಳೆ ಆ ಬಗ್ಗೆ ಗೊತ್ತಿಲ್ಲ ಅನ್ನೋದಾದರೆ ಸರಿಯಾಗಿ ತಿಳಿದುಕೊಳ್ಳಿ. ಏಕೆಂದರೆ ಈ ವರ್ಷದ ನವೆಂಬರ್ ನಲ್ಲಿ ಶುರುವಾಗಿ, ಅಲ್ಲಿಂದ ಆರು ತಿಂಗಳು ಆರ್ಥಿಕತೆಯಲ್ಲಿ ಭಾರೀ ಕುಸಿತ ಕಾಣಿಸಿಕೊಳ್ಳಲಿದೆ.

   IND VS NZ 1st T20 : ಕೇನ್ ವಿಲಿಯಮ್ಸನ್ ಬಗ್ಗೆ ವಿರಾಟ್ ಹೇಳಿದ್ದೇನು ನೋಡಿ | Kane Williamson | Virat Kohli

   ಇಂಥ ಸಂದರ್ಭದಲ್ಲಿ ತೊಂದರೆ, ಸಂಕಷ್ಟ ಎದುರಾಗಲಿದೆ. ಬಹಳ ಎಚ್ಚರವಾಗಿರಿ ಎಂದು ಭವಿಷ್ಯ ಬರೆದಲ್ಲಿ, ಬರೀ ನೆಗೆಟಿವ್ ಆಗಿದ್ದನ್ನೇ ಹೇಳ್ತಾರೆ ಎನ್ನುತ್ತಾರೆ. ದೊಡ್ಡ ಅನಾಹುತ ಆದ ಮೇಲೆ, ಎಲ್ಲಿ ಹೋದರು ಜ್ಯೋತಿಷಿಗಳು? ಈ ಬಗ್ಗೆ ಮುಂಚಿತವಾಗಿ ಏಕೆ ತಿಳಿಸಲಿಲ್ಲ ಎನ್ನುತ್ತಾರೆ. ಇದೊಂದು ಬಗೆಯ ಉಭಯ ಸಂಕಟ.

   ಜ್ಯೋತಿಷ್ಯ: ಈ 6 ರಾಶಿಯವರಿಗೆ ಅದೃಷ್ಟವೋ ಅದೃಷ್ಟ

   ಇಂಥ ಮಾತುಗಳು, ಬೈಗುಳ, ನಿಂದೆ ಕೇಳಿದರೂ ಪರವಾಗಿಲ್ಲ. ಜನರಿಗೆ ಮುಂಜಾಗ್ರತೆಯಾಗಿ ಇರಲು ತಿಳಿಸಬೇಕು. ಮಾನಸಿಕವಾಗಿ ಸಿದ್ಧವಾಗಿರಲು ಒಂದು ಸೂಚನೆ ಆಗಬೇಕು ಎಂಬುದಷ್ಟೇ ಉದ್ದೇಶ. ಆದ್ದರಿಂದಲೇ ಈ ಲೇಖನ ನೀವು ಓದುತ್ತಿದ್ದೀರಿ. ಕೇಂದ್ರ ಬಜೆಟ್ ಕಣ್ಣೆದುರು ಇರುವಾಗ ಅರ್ಥಿಕ ಸನ್ನಿವೇಶದ ಬಗ್ಗೆ ಆತಂಕ ಇದೆ. ಈಗಿನ ವಿಚಾರ ಸಕಾಲಿಕವಾಗಿದೆ.

   ಮಕರ ರಾಶಿಯಲ್ಲಿ ನೀಚ ಸ್ಥಿತಿ ತಲುಪುವ ಗುರು

   ಮಕರ ರಾಶಿಯಲ್ಲಿ ನೀಚ ಸ್ಥಿತಿ ತಲುಪುವ ಗುರು

   ಈ ವರ್ಷದ ನವೆಂಬರ್ ನಲ್ಲಿ ಗುರು ಗ್ರಹ ಮಕರ ರಾಶಿಯನ್ನು ಪ್ರವೇಶ ಮಾಡಲಿದೆ. ಅದೇ ಸಮಯದಲ್ಲಿ ಶನಿ ಗ್ರಹ ಕೂಡ ಮಕರ ರಾಶಿಯಲ್ಲೇ ಇರಲಿದೆ. ಹನ್ನೆರಡು ವರ್ಷಗಳ ಹಿಂದೆ ಮಕರ ರಾಶಿಯಲ್ಲಿ ಗುರು ಗ್ರಹ ಒಂದೇ ಇದ್ದಾಗ ಆದ ತೊಂದರೆಗಳನ್ನು, ಅದರಲ್ಲೂ ಆರ್ಥಿಕ ಸಮಸ್ಯೆಗಳನ್ನು ನೆನಪಿಸಿಕೊಳ್ಳಿ. ಹನ್ನೆರಡು ವರ್ಷಕ್ಕೊಮ್ಮೆ ತಿರುಗುವ ಚಕ್ರ ಇದು. ಹಾಗೆ ಮಕರ ರಾಶಿಯಲ್ಲಿ ಪ್ರವೇಶ ಆಗುತ್ತಿದ್ದಂತೆಯೇ ಗುರು ನೀಚನಾಗುತ್ತಾನೆ. ಕರ್ಕಾಟಕ ರಾಶಿಯಲ್ಲಿ ಗುರು ಉಚ್ಚನಾದರೆ, ಮಕರ ರಾಶಿಯಲ್ಲಿ ನೀಚ. ಗುರು ಸಾನ್ನಿಧ್ಯ, ಗುರು ಸ್ಥಾನದಲ್ಲಿ ಇರುವವರಿಗೆ ಸಮಸ್ಯೆಗಳು ಬಂದೊದಗುತ್ತದೆ. ರಾಜಕಾರಣಿಗಳು ಗುರು ಸ್ಥಾನದಲ್ಲಿ ಇರುವವರನ್ನು ದುರ್ಬಳಕೆ ಮಾಡಿಕೊಳ್ಳಲಿದ್ದಾರೆ. ಸಜ್ಜನರು- ಹಿರಿಯರಾದ ಗುರುಗಳ ಅಯುಷ್ಯ ಸ್ಥಾನಕ್ಕೆ ಸಮಸ್ಯೆಗಳು ಬರುತ್ತವೆ. ಒಬ್ಬ ನೀಚ ಸ್ಥಾನದ ಗುರು ಗ್ರಹದಿಂದಲೇ ಇಷ್ಟೆಲ್ಲ ಸಮಸ್ಯೆಗಳು ಅಂದರೆ, ಜತೆಗೆ ಸ್ವಸ್ಥಾನದ ಶನಿಯು ಸೇರಿಬಿಟ್ಟರೆ ಇನ್ನೇನಾಗುತ್ತದೆ?

   ಪಾಪ- ಪುಣ್ಯದ ವಿವೇಚನೆ ಕಳೆದುಕೊಳ್ಳುತ್ತಾರೆ

   ಪಾಪ- ಪುಣ್ಯದ ವಿವೇಚನೆ ಕಳೆದುಕೊಳ್ಳುತ್ತಾರೆ

   ಆರ್ಥಿಕ ಮಹಾ ಕುಸಿತ ಆಗುತ್ತದೆ. ಇದನ್ನು ಜಾಗತಿಕ ಮಟ್ಟದಲ್ಲಿ ಅನ್ವಯಿಸಿ ಹೇಳಬಹುದು. ಗುರು ಗ್ರಹದ ಜತೆಗೆ ಶನಿಯ ಸಂಯೋಗ ಇರುವುದರಿಂದ ಆರ್ಥಿಕ ಕುಸಿತದ ಪರಿಣಾಮ ಭೀಕರವಾಗಿ ಇರುತ್ತದೆ. ಧರ್ಮ ಗುರುಗಳು, ಧಾರ್ಮಿಕ ಪೀಠಗಳು ವಿವಾದಕ್ಕೆ ಎಡೆಯಾಗುವುದು ನಿಶ್ಚಿತ. ಈ ವರ್ಷದ ಏಪ್ರಿಲ್ ನಿಂದ ಜೂನ್ ತನಕ ಮಕರ ರಾಶಿಯಲ್ಲಿ ಅಲ್ಪಾವಧಿಗೆ ಶನಿ- ಗುರು ಗ್ರಹಗಳು ಜತೆಗೆ ಇರುತ್ತವೆ. ನವೆಂಬರ್ ನಂತರ ಎದುರಾಗುವ ಪರಿಣಾಮಗಳನ್ನು ಪೂರ್ಣಾವಧಿಯ ಸಿನಿಮಾ ಎಂದು ಕರೆಯುವುದಾದರೆ ಈ ಮೂರು ತಿಂಗಳಲ್ಲಿ ಅದರ ಟ್ರೇಲರ್ ನೋಡಬಹುದು. ಜನರಲ್ಲಿ ದೈವ ಭಕ್ತಿ ಕಡಿಮೆ ಆಗಲಿದೆ. ನಾಸ್ತಿಕವಾದ ಮುಂಚೂಣಿಗೆ ಬರಲಿದೆ. ಪಾಪ- ಪುಣ್ಯಗಳ ಬಗ್ಗೆ ಜನರು ವಿವೇಚನೆಯನ್ನು ಕಳೆದುಕೊಳ್ಳುತ್ತಾರೆ. ಗುರು- ಹಿರಿಯರು ಎಂಬ ಗೌರವ ಇಲ್ಲದೆ ಬಾಯಿಗೆ ಬಂದಂತೆ ದೂರುತ್ತಾರೆ.

   ಜ್ಯೋತಿಷ್ಯ: ಈ 4 ರಾಶಿಯವರು ಎಂಥ ಸಾಧನೆಯನ್ನಾದರೂ ಮಾಡಬಲ್ಲರು

   ಬಂಗಾರದ ಬೆಲೆ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳ

   ಬಂಗಾರದ ಬೆಲೆ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳ

   ಸರಿ, ಇನ್ನು ಈ ವರ್ಷದ ನವೆಂಬರ್ ನಂತರ ಆರ್ಥಿಕ ಮಹಾ ಕುಸಿತ ಅಂದರೆ ಏನಾಗಬಹುದು? ಹನ್ನೆರಡು ವರ್ಷಗಳ ಹಿಂದೆ ಏನೆಲ್ಲ ಆಗಿತ್ತೋ ಅವೆಲ್ಲ ಮರುಕಳಿಸುತ್ತವೆ. ಬಂಗಾರದ ಬೆಲೆ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಆಕಾಶದೆತ್ತರಕ್ಕೆ ಏರುತ್ತದೆ. ನಿರುದ್ಯೋಗ ಸಮಸ್ಯೆ ಹಿಂದೆಂದಿಗಿಂತ ಹೆಚ್ಚಾಗುತ್ತದೆ. ಷೇರು ಮಾರುಕಟ್ಟೆ ನೆಲ ಕಚ್ಚುತ್ತದೆ. ಕಟ್ಟಡ ನಿರ್ಮಾಣ ಕ್ಷೇತ್ರವು ವಿಲ ವಿಲ ಒದ್ದಾಡುವಂತಾಗುತ್ತದೆ. ಈ ಸಮಸ್ಯೆಗಳನ್ನು ಎದುರುಗೊಳ್ಳುವುದೇ ಸವಾಲಾಗುತ್ತದೆ. ಜನರು ತಾಳ್ಮೆಯನ್ನು ಕಳೆದುಕೊಂಡು, ಅಸಮಾಧಾನ ಹೊರಹಾಕಲು ಆರಂಭಿಸುತ್ತಾರೆ. ಹಣ ಗಳಿಸುವುದೊಂದೇ ಉದ್ದೇಶ ಮಾಡಿಕೊಂಡು ತಪ್ಪು ದಾರಿಯನ್ನು ತುಳಿಯಲು ಆರಂಭಿಸುತ್ತಾರೆ. ದೇಶದಲ್ಲಿ ಅರಾಜಕತೆ ಕಾಣಿಸಿಕೊಳ್ಳಲಿದೆ. ನವೆಂಬರ್ ನಂತರ ಸುಮಾರು ಆರು ತಿಂಗಳ ಕಾಲ ಈ ರೀತಿಯ ಪರಿಣಾಮ ಇರುವುದರಿಂದ ಸಾಮಾನ್ಯ ಜನರಾಗಿ ಏನು ಮಾಡಬಹುದು ಎಂಬ ಪ್ರಶ್ನೆ ಎದುರಾಗುತ್ತದೆ.

   1961ರಲ್ಲಿ ಮಕರ ರಾಶಿಯಲ್ಲಿ ಗುರು- ಶನಿ ಸಂಯೋಗ ಆಗಿತ್ತು

   1961ರಲ್ಲಿ ಮಕರ ರಾಶಿಯಲ್ಲಿ ಗುರು- ಶನಿ ಸಂಯೋಗ ಆಗಿತ್ತು

   ಹಣಕ್ಕಾಗಿ ಧರ್ಮವಿರೋಧಿ ಆಲೋಚನೆಯನ್ನು ಮಾಡಬಾರದು. ಗುರು ಪೀಠ, ಗುರು ಸಾನ್ನಿಧ್ಯಕ್ಕೆ ಅಗೌರವ ತೋರಬೇಡಿ. ಮುಂದೆ ಎಂದೋ ಬರಬಹುದಾದ ದುಡ್ಡನ್ನು ನೆಚ್ಚಿಕೊಂಡು ಸಾಲ ಮಾಡಬೇಡಿ. ಜಾತಕದಲ್ಲಿ ಗುರುವಿನ ಪರಿಸ್ಥಿತಿಯನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಅಥವಾ ಜ್ಯೋತಿಷಿಯೊಬ್ಬರಲ್ಲಿ ತೋರಿಸಿಕೊಳ್ಳಿ. ಒಂದು ವೇಳೆ ಜನ್ಮ ಜಾತಕದಲ್ಲಿ ಗುರು ನೀಚ ಸ್ಥಿತಿಯಲ್ಲಿ ಇದ್ದಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡಬೇಕು. ಪರಿಹಾರ ಎಂಬಂತೆ ಗುರು ಸೇವೆಯನ್ನು ಮಾಡಬೇಕು. ಗುರುಗಳ ಸಾನ್ನಿಧ್ಯದ ದರ್ಶನ ಮಾಡಬೇಕು. ಯಥಾಶಕ್ತಿ ದಾನ- ಧರ್ಮಾದಿಗಳನ್ನು ಕೈಗೊಳ್ಳಬೇಕು. 1961ನೇ ಇಸವಿಯಲ್ಲಿ ಮಕರ ರಾಶಿಯಲ್ಲಿ ಗುರು- ಶನಿ ಸಂಯೋಗ ಆಗಿತ್ತು. ಆದ್ದರಿಂದ ಆ ಸಮಯದಲ್ಲಿ ಆಗಿದ್ದ ಅನಾಹುತಗಳು ಏನೇನು ಎಂಬ ಬಗ್ಗೆ ಒಮ್ಮೆ ಸರಿಯಾಗಿ ಅವಲೋಕಿಸಿದರೆ ಒಂದು ಚಿತ್ರಣ ದೊರೆತಂತಾಗುತ್ತದೆ.

   English summary
   Astrology: Jupiter will enter Capricorn on November 2020. Later India will face major economy slowdown. Here is an explainer.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X