Get Updates
Get notified of breaking news, exclusive insights, and must-see stories!

Artificial Intelligence: ಎಐ ಸ್ಕಿಲ್‌ ಗೊತ್ತಿದ್ದವರಿಗೆ ಶೇ.28ರಷ್ಟು ಹೆಚ್ಚು ವೇತನ!

ಹೊಸ ಸಮೀಕ್ಷೆಗಳ ಪ್ರಕಾರ ಕೃತಕ ಬುದ್ಧಿಮತ್ತೆ (ಎಐ) ಕೌಶಲ್ಯಗಳನ್ನು ಹೊಂದಿರುವ ಉದ್ಯೋಗಗಳಿಗೆ ಹೆಚ್ಚು ಸಂಬಳವನ್ನು ನೀಡಲಾಗುತ್ತಿದೆ. ಹೀಗಾಗಿ AI ಕೌಶಲ್ಯಗಳ ಬೇಡಿಕೆಯು ಇಂದು ತಂತ್ರಜ್ಞಾನದಲ್ಲಿ ಮಾತ್ರವಲ್ಲ, ಮಾರುಕಟ್ಟೆ, ಹಣಕಾಸು, ಮಾನವ ಸಂಪನ್ಮೂಲ, ಶಿಕ್ಷಣ ಮುಂತಾದ ಹಲವು ಕ್ಷೇತ್ರಗಳಲ್ಲೂ ಹೆಚ್ಚಾಗುತ್ತಿದೆ. ಎಐ ಕೆಲಸಗಳನ್ನು ಕಸಿಯುತ್ತವೆ ಎಂಬ ಆರೋಪಗಳ ನಡುವೆ, ಎಐ ಗೊತ್ತಿದ್ದವರಿಗೆ ಉದ್ಯೋಗಗಳಲ್ಲಿ ಹೆಚ್ಚಿನ ಸಂಬಳ ಪಡೆಯಬಹುದು ಎಂಬ ವಿಚಾರವು ನಿಟ್ಟುಸಿರುಬಿಡುವಂತಿದೆ.

ಕಾರ್ಮಿಕ ಮಾರುಕಟ್ಟೆ ಗುಪ್ತಚರ ಸಂಸ್ಥೆ ಲೈಟ್‌ಕ್ಯಾಸ್ಟ್‌ನ ಹೊಸ ವರದಿಯ ಪ್ರಕಾರ ಕೃತಕ ಬುದ್ಧಿಮತ್ತೆ (AI) ಕೌಶಲ್ಯ ಅಗತ್ಯವಿರುವ ಉದ್ಯೋಗಗಳು ಈಗ ಎಐ ಜ್ಞಾನವಿಲ್ಲದ ಇದೇ ರೀತಿಯ ಉದ್ಯೋಗಗಳಿಗಿಂತ ಬರೋಬ್ಬರಿ ಶೇ.28ರಷ್ಟು ಹೆಚ್ಚು ವೇತನ ನೀಡುತ್ತಿವೆ. ವರದಿಯು 1.3 ಬಿಲಿಯನ್ ಉದ್ಯೋಗಗಳ ಪೋಸ್ಟಿಂಗ್‌ಗಳನ್ನು ಆಧರಿಸಿದೆ. ಎಐ ಕೈಗಾರಿಕೆಗಳಾದ್ಯಂತ ನೇಮಕಾತಿಯನ್ನು ಮರುರೂಪಿಸುತ್ತಿದೆ ಎಂದು ತೋರಿಸುತ್ತದೆ.

Jobs Requiring AI Skills Pay 28 Percent More Latest Study Reveals Salary Surge

ಎಐ ಕೌಶಲ್ಯಗಳನ್ನು ಕೇಳುವ ಅರ್ಧಕ್ಕಿಂತ ಹೆಚ್ಚು ಉದ್ಯೋಗಗಳು ಐಟಿ ಅಥವಾ ಕಂಪ್ಯೂಟರ್ ಸೈನ್ಸ್‌ನಿಂದ ಹೊರಗಿನಿಂದಲೇ ಇವೆ. ಅವುಗಳಲ್ಲಿ ಪ್ರಮುಖವಾಗಿ ಮಾರ್ಕೆಟಿಂಗ್, ಹಣಕಾಸು, ಮಾನವ ಸಂಪನ್ಮೂಲ ಮತ್ತು ಶಿಕ್ಷಣ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಎಐ ಅನ್ನು ಹೇಗೆ ಅಳವಡಿಸಿಕೊಳ್ಳುತ್ತಿವೆ ಎಂಬುವುದರಲ್ಲಿ ಬದಲಾವಣೆಯಾಗುತ್ತಿದೆ. 2022ರಿಂದ ಗಮನಿಸಿದರೆ ತಂತ್ರಜ್ಞಾನೇತರ ವಲಯಗಳಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ ಶೇ 800ರಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.

ಎಐ ಅನ್ನು ಒಂದು ಸ್ಥಾಪಿತ ತಾಂತ್ರಿಕ ಕೌಶಲ್ಯವೆಂದು ಕಂಪನಿಗಳು ಪರಿಗಣಿಸುತ್ತಿವೆ. ತಮ್ಮ ಸಂಪೂರ್ಣ ಕಾರ್ಯಪಡೆಯಲ್ಲಿ ಎಐ ಕೌಶಲ್ಯ ಹೊಂದಿರುವ ಸಂಸ್ಥೆಗಳೊಂದಿಗೆ ಪ್ರತಿಭೆಗಾಗಿ ಸ್ಪರ್ಧಿಸುತ್ತಿವೆ. AI ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಲಾಗುತ್ತಿದ್ದು, ಇತರ ಕೌಶಲ್ಯಗಳ ಬದಲಿಗೆ AI ಕೌಶಲ್ಯಗಳನ್ನು ಸೇರಿಸಲು ಮುಂದಾಗಿದ್ದಾರೆ. ಒಂದು ನಿರ್ದಿಷ್ಟ ಎಐ ಸಂಬಂಧಿತ ಕೌಶಲ್ಯಗಳು ಉದ್ಯೋಗ ಬೆಳವಣಿಗೆ ಮತ್ತು ಮೌಲ್ಯವನ್ನು ಹೆಚ್ಚಿಸುತ್ತಿವೆ ಎಂದು ವರದಿ ಹೇಳಿದೆ. ಇದು ಕೌಶಲ್ಯಗಳನ್ನು ಅವುಗಳ ಬೆಳವಣಿಗೆ, ಕಾರ್ಯಪಡೆಯಲ್ಲಿ ಪ್ರಾಮುಖ್ಯತೆ ಮತ್ತು ಎಐನಿಂದ ಬದಲಾಯಿಸಲ್ಪಡುವ ಆಧಾರದ ಮೇಲೆ ವರ್ಗೀಕರಿಸುವ ಚೌಕಟ್ಟನ್ನು ಪರಿಚಯಿಸುತ್ತದೆ. ಇದು ಶಿಕ್ಷಣತಜ್ಞರು ಮತ್ತು ಉದ್ಯೋಗದಾತರು ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಸಹಾಯ ಮಾಡುವ ಗುರಿ ಹೊಂದಿವೆ.

ಭಾರತದಲ್ಲಿನ AI ಉದ್ಯೋಗಗಳಿಗೆ ಸರಾಸರಿ ವಾರ್ಷಿಕ ವೇತನವು ಪ್ರಾಯೋಗಿಕ ವಲಯ ಮತ್ತು ಹುದ್ದೆಯ ಅನುಭವದ ಆಧಾರದಲ್ಲಿ ಬದಲಾಗುತ್ತದೆ. ಸಾಮಾನ್ಯವಾಗಿ: AI ಇಂಜಿನಿಯರ್‌ಗಳು ₹10 ಲಕ್ಷದಿಂದ ₹15 ಲಕ್ಷದವರೆಗೆ ಸಂಬಳ ಪಡೆಯುತ್ತಾರೆ. ಪ್ರವೇಶ ಹಂತದ ಜನರೇಟಿವ್ AI ಹುದ್ದೆಗಳಿಗೆ ಸಂಬಳ ₹6 ಲಕ್ಷದಿಂದ ₹12 ಲಕ್ಷದವರೆಗೆ ಇರುತ್ತದೆ. ಎಐ ವೃತ್ತಿಪರರ ಸರಾಸರಿ ಸಂಬಳ ಸುಮಾರು ₹12 ಲಕ್ಷಗಳ ಸುತ್ತಲೂ ಇರುತ್ತದೆ, ಇದು ಇತರೆ ಐಟಿ ಹುದ್ದೆಗಳಿಗಿಂತ ಹೆಚ್ಚಿರಬಹುದು. ತಜ್ಞರು ಮತ್ತು ಸೀನಿಯರ್ ಹುದ್ದೆಗಳಲ್ಲಿ ಸಂಬಳ ₹50 ಲಕ್ಷಕ್ಕೂ‌ ಹೆಚ್ಚು ತಲುಪಿಕೊಳಬಹುದು ಎಂದು ಅಂದಾಜಿಸಲಾಗಿದೆ. ಈ ವೇತನವು ಕಂಪನಿ, ಸ್ಥಳ, ಅನುಭವ, ಹಾಗೂ ತಂತ್ರಜ್ಞಾನದ ಪರಿಣತಿಯಿಂದ ಬದಲಾಗುತ್ತದೆ. ಹೀಗಾಗಿ, ಭಾರತದಲ್ಲಿ ಎಐ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸರಾಸರಿ ಸಂಬಳವು ವರ್ಷಕ್ಕೆ ₹10-12 ಲಕ್ಷಗಳ ಮಧ್ಯೆ ಇರಲಿದೆ ಎಂದು ವರದಿಯಾಗಿದೆ.

ಯಾವ ಐಎ ಕೌಶಲ್ಯಕ್ಕೆ ಬೇಡಿಕೆ?

ಭಾರತದಲ್ಲಿ ಎಐ ಉದ್ಯೋಗಗಳಲ್ಲಿ ಹೆಚ್ಚು ಬೇಡಿಕೆ ಇರುವ ತಂತ್ರಜ್ಞಾನಗಳು ಮತ್ತು ಕೌಶಲ್ಯಗಳೆಂದರೆ ಮೆಷಿನ್ ಲರ್ನಿಂಗ್. ಇದು ಯಂತ್ರಗಳನ್ನು ಡೇಟಾ ಮೂಲಕ ಕಲಿಸಲು ಮತ್ತು ನಿರ್ಧಾರಗಳನ್ನು ಕೈಗೊಳ್ಳಲು ಅನುವು ಮಾಡಿಕೊಳ್ಳುವ ತಂತ್ರಜ್ಞಾನವಾಗಿದೆ. ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ ಭಾಷೆಗಳ ವಿಚಾರವನ್ನು ಅರ್ಥಮಾಡಿಕೊಳ್ಳುವ ಮತ್ತು ಸಂವಹನ ಮಾಡಲು ಬಳಸುವ ಎಐ ಮಾದರಿ. ಡೀಪ್ ಲರ್ನಿಂಗ್, ಪ್ರಾಂಪ್ಟ್ ಎಂಜಿನಿಯರಿಂಗ್ ಎನ್ನುವ ಎಐ ಮಾದರಿಗಳಿಗೆ ಸೂಕ್ತವಾದ ಸೂಚನೆಗಳನ್ನು ರೂಪಿಸುವ ತಂತ್ರಜ್ಞಾನ, ಚಿತ್ರ ಮತ್ತು ವಿಡಿಯೋ ಡೇಟಾವನ್ನು ಡೀಕೋಡ್ ಮಾಡಲು ಬಳಸುವುದು, ಎಐ ಪ್ರಾಡಕ್ಟ್‌ ಮ್ಯಾನೇಜ್‌ಮೆಂಟ್‌ ಎಂಬ ತಂತ್ರಜ್ಞಾನಗಳನ್ನು ವ್ಯಾಪಾರದಲ್ಲಿ ಅನುಷ್ಟಾನಗೊಳಿಸುವುದಕ್ಕೆ ಕೂಡ ಭಾರಿ ಬೇಡಿಕೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+