ಗೂಗಲ್‌ನ AIನಿಂದ ಡಿಜಿಟಲ್ ಸುದ್ದಿ ಮಾಧ್ಯಮಗಳಿಗೆ ಅಪಾಯ: ಕಾರಣವೇನು?
ಆನ್‌ಲೈನ್ ಸುದ್ದಿ ಪ್ರಕಾಶಕರು ಪ್ರಸ್ತುತವಾಗಿ ಜನರೇಟಿವ್ AI ಚಾಟ್‌ಬಾಟ್‌ಗಳ ಏರಿಕೆಯಿಂದ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಗೂಗಲ್ ಸರ್ಚ್‌ನಿಂದ ಬರುವ ಟ್ರಾಫಿಕ್ ಅನ್ನು ಹೆಚ್ಚಾಗಿ ಅವಲಂಬಿಸಿರುವ ಅನೇಕ ಮಾಧ್ಯಮ ಸಂಸ್ಥೆಗಳು, ಸರ್ಚ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು AI-ಚಾಲಿತ ಪ್ಲಾಟ್‌ಫಾರ್ಮ್‌ಗಳು ಮತ್ತು ಚಾಟ್‌ಬಾಟ್‌ಗಳು ಬದಲಾಯಿಸುತ್ತಿರುವುದರಿಂದ, ಈಗ ದೊಡ್ಡ ಮಟ್ಟದಲ್ಲಿ ಸವಾಲುಗಳನ್ನು ಎದುರಿಸುವಂತಾಗಿದೆ.
AI ಉತ್ತರಗಳಿಂದ ಸುದ್ದಿ ತಾಣಗಳಿಗೆ ಟ್ರಾಫಿಕ್ ನಷ್ಟ: ಹುಫ್‌ಪೋಸ್ಟ್ ಮತ್ತು ಬಿಸಿನೆಸ್ ಇನ್‌ಸೈಡರ್‌ನಂತಹ ತಾಣಗಳು AI-ಉತ್ಪಾದಿತ ಉತ್ತರಗಳಿಂದ ತಮ್ಮ ಗೂಗಲ್ ಸರ್ಚ್ ಟ್ರಾಫಿಕ್‌ನ ಶೇಕಡ 50ಕ್ಕಿಂತ ಹೆಚ್ಚು ಕಳೆದುಕೊಂಡಿವೆ. ಟ್ರಾಫಿಕ್ ಕಡಿಮೆಯಾದ ಹಿನ್ನೆಲೆ ಉದ್ಯೋಗಗಳು ಕೂಡ ಕಡಿತವಾಗಿವೆ. ಬಿಸಿನೆಸ್ ಇನ್‌ಸೈಡರ್ ಸಿಬ್ಬಂದಿಯ ಶೇಕಡ 21ರಷ್ಟು ಜನರನ್ನು ಕೆಲಸದಿಂದ ತೆಗೆದುಹಾಕಿದೆ, ಇದಕ್ಕೆ ಕಾರಣ ನಿಯಂತ್ರಿಸಲಾಗದ ಟ್ರಾಫಿಕ್ ಕುಸಿತ ಎಂದು ಹೇಳಿದೆ.

ಸಾಮಾನ್ಯವಾಗಿ, ಈ AI ಚಾಟ್‌ಬಾಟ್‌ಗಳು ವೆಬ್‌ಸೈಟ್‌ಗಳ ಪಟ್ಟಿಯನ್ನು ತೋರಿಸುವ ಬದಲು ತಕ್ಷಣವೇ ಪುಟದ ಮೇಲ್ಭಾಗದಲ್ಲಿ ಉತ್ತರಗಳನ್ನು ನೀಡುತ್ತವೆ. ಇದರ ಅರ್ಥ ಮಾಹಿತಿಯನ್ನು ಪಡೆಯಲು ಜನರು ಇನ್ಮುಂದೆ ಸುದ್ದಿ ಲೇಖನದ ಮೇಲೆ ಕ್ಲಿಕ್ ಮಾಡುವ ಅಗತ್ಯ ಇಲ್ಲ. ಮತ್ತು ಸುದ್ದಿ ವೆಬ್‌ಸೈಟ್‌ಗಳಿಗೆ, ಕಡಿಮೆ ಕ್ಲಿಕ್‌ಗಳು ಎಂದರೆ ಕಡಿಮೆ ಓದುಗರು ಮತ್ತು ಕಡಿಮೆ ಹಣ ಸಿಕ್ಕಂತಾಗಲಿದೆ.
ಸಿಮಿಲರ್ ವೆಬ್‌ನ ದತ್ತಾಂಶದ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಗೂಗಲ್ ಸರ್ಚ್‌ನಿಂದ ಹಫ್‌ಪೋಸ್ಟ್‌ಗೆ ಟ್ರಾಫಿಕ್ ಶೇಕಡ 50ಕ್ಕಿಂತ ಹೆಚ್ಚು ಕಡಿಮೆಯಾಗಿದೆ. ಹಾಗೆಯೇ ಬಿಸಿನೆಸ್ ಇನ್‌ಸೈಡರ್ ಅದೇ ಅವಧಿಯಲ್ಲಿ ತನ್ನ ಸರ್ಚ್ ಟ್ರಾಫಿಕ್‌ನ ಶೇಕಡ 55ರಷ್ಟು ನಷ್ಟವನ್ನು ಅನುಭವಿಸಿದೆ. ನಮ್ಮ ನಿಯಂತ್ರಣಕ್ಕೆ ಮೀರಿದ ವಿಪರೀತ ಟ್ರಾಫಿಕ್ ಕುಸಿತ ಎಂದು ಹೇಳಿ ಕಂಪನಿಯು ತನ್ನ ಸಿಬ್ಬಂದಿಯ ಶೇಕಡ 21ರಷ್ಟು ಉದ್ಯೋಗಿಗಳನ್ನು ತೆಗೆದುಹಾಕಿದೆ.
ದಿ ವಾಷಿಂಗ್ಟನ್ ಪೋಸ್ಟ್‌ನ ಸಿಇಒ ವಿಲಿಯಂ ಲೂಯಿಸ್ ಅವರು 'ಇದು ಪತ್ರಿಕೋದ್ಯಮಕ್ಕೆ ನಿಜವಾದ ಅಪಾಯ,' ಎಂದು ಹೇಳಿದ್ದಾರೆ. ಈಗಾಗಲೇ ಇದರಿಂದ ಅವರ ಸಂಸ್ಥೆಯು ಕೂಡ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಕುಸಿತವನ್ನು ಕಾಣುತ್ತಿದೆ. ನ್ಯೂಯಾರ್ಕ್ ಟೈಮ್ಸ್‌ನ ಸರ್ಚ್ ಟ್ರಾಫಿಕ್ ಶೇಕಡ 44ರಿಂದ 36.5ಕ್ಕೆ ಇಳಿಕೆಯಾಗಿದೆದೆ.
ಗೂಗಲ್‌ನ AI ಪರಿಣಾಮಗಳು: ಈ ಬದಲಾವಣೆಯು ಗೂಗಲ್‌ನ AI ಅವಲೋಕನಗಳೊಂದಿಗೆ ಪ್ರಾರಂಭವಾಗಿದ್ದು, ಇದು ಕೇಳಿದ ಪ್ರಶ್ನೆಗಳಿಗೆ ಪುಟದ ಮೇಲ್ಭಾಗದಲ್ಲಿ ಉತ್ತರಗಳನ್ನು ನೀಡುತ್ತದೆ. ಅದರ ಹೊಸ AI ಮೋಡ್ ಅನ್ನು ಕಳೆದ ತಿಂಗಳು US ನಲ್ಲಿ ಪ್ರಾರಂಭಿಸಲಾಯಿತು. ಇದು ಚಾಟ್‌ಬಾಟ್ ಶೈಲಿಯ ಉತ್ತರಗಳನ್ನು ನೀಡುತ್ತದೆ. ಹೆಚ್ಚಾಗಿ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡದೆಯೇ ಮಾಹಿತಿಯನ್ನು ನೀಡುತ್ತದೆ. ಅಟ್ಲಾಂಟಿಕ್‌ನ ಸಿಇಒ ನಿಕೋಲಸ್, "ಗೂಗಲ್ ಸರ್ಚ್ ಎಂಜಿನ್‌ನಿಂದ ಉತ್ತರ ಎಂಜಿನ್‌ಗೆ ಬದಲಾಗುತ್ತಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಓದುಗರನ್ನು ತಲುಪಲು ಸುದ್ದಿ ಸಂಸ್ಥೆಗಳ ಹೊಸ ಪ್ರಯತ್ನಗಳು: ಸುದ್ದಿ ಕಂಪನಿಗಳು ಈಗ ಓದುಗರನ್ನು ನೇರವಾಗಿ ತಲುಪಲು ಹೊಸ ಮಾರ್ಗಗಳನ್ನು ಪ್ರಯತ್ನಿಸುತ್ತಿವೆ. ಕೆಲವು ತಮ್ಮ ಅಪ್ಲಿಕೇಶನ್‌ಗಳನ್ನು ಸುಧಾರಿಸುತ್ತಿವೆ. ಹೆಚ್ಚು ಇಮೇಲ್ ಸುದ್ದಿ ಪತ್ರಗಳನ್ನು ಕಳುಹಿಸುತ್ತಿವೆ ಮತ್ತು ಪ್ರೇಕ್ಷಕರೊಂದಿಗೆ ಬಲವಾದ ಸಂಬಂಧಗಳನ್ನು ನಿರ್ಮಿಸಲು ಲೈವ್ ಈವೆಂಟ್‌ಗಳನ್ನು ನಡೆಸುತ್ತಿವೆ.
ನ್ಯೂಯಾರ್ಕ್ ಟೈಮ್ಸ್‌ನಂತಹ ಸಂಸ್ಥೆಗಳು ತಮ್ಮ ವಿಷಯವನ್ನು ಅನುಮತಿ ಇಲ್ಲದೆ ಬಳಸಿದ್ದಕ್ಕಾಗಿ ಬಹುದೊಡ್ಡ ಸಮಸ್ಯೆಯನ್ನು ಎದುರಿಸುತ್ತಿವೆ. ನ್ಯೂಸ್ ಕಾರ್ಪ್‌ನಂತಹ ಇತರರು AI ಟೂಲ್‌ಗಳು ತಮ್ಮ ಲೇಖನಗಳನ್ನು ಬಳಸಿದಾಗ ಹಣ ಪಡೆಯಲು ತಮ್ಮ ಮಾಹಿತಿಯನ್ನು ಪರವಾನಗಿ ನೀಡಲು ಆಯ್ಕೆ ಮಾಡಿಕೊಂಡಿವೆ.
ಗೂಗಲ್ ತಾನು ಇನ್ನೂ ವೆಬ್‌ಸೈಟ್‌ಗಳಿಗೆ ಟ್ರಾಫಿಕ್ ಅನ್ನು ಕಳುಹಿಸುತ್ತದೆ ಮತ್ತು ಅಗತ್ಯ ಸುದ್ದಿ ವಿಷಯಗಳಿಗೆ ಲಿಂಕ್‌ಗಳನ್ನು ತೋರಿಸುತ್ತದೆ ಎಂದು ಹೇಳುತ್ತದೆ. ಆದಾಗ್ಯೂ, ಸರ್ಚ್ ಇಂಜಿನ್‌ಗಳ ಬದಲಾಗುತ್ತಿರುವ ಡೈನಾಮಿಕ್ಸ್‌ನೊಂದಿಗೆ, ಜನರು ಈ ಸುದ್ದಿ ವೆಬ್‌ಸೈಟ್‌ಗಳಿಗಿಂತ AI ಚಾಟ್‌ಬಾಟ್‌ಗಳಿಗೆ ಆದ್ಯತೆ ನೀಡುತ್ತಿದ್ದಾರೆ.
ಒಟ್ಟಾರೆಯಾಗಿ, ಜನರೇಟಿವ್ AI ಚಾಟ್‌ಬಾಟ್‌ಗಳ ಏರಿಕೆಯಿಂದಾಗಿ ಆನ್‌ಲೈನ್ ಸುದ್ದಿ ಪ್ರಕಾಶಕರು ತೀವ್ರ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸರ್ಚ್ ಟ್ರಾಫಿಕ್‌ನಲ್ಲಿನ ಕುಸಿತವು ಉದ್ಯೋಗ ಕಡಿತಕ್ಕೆ ಕಾರಣವಾಗಿದೆ. ಇನ್ನು ಸುದ್ದಿ ಸಂಸ್ಥೆಗಳು ಓದುಗರನ್ನು ತಲುಪಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಪ್ರಯತ್ತಿಸುತ್ತಿವೆ.












Click it and Unblock the Notifications