Get Updates
Get notified of breaking news, exclusive insights, and must-see stories!

ದೇಶದ 95% ಕಂಪನಿಗಳಿಗೆ ಎಐನಿಂದ ಶಾಕ್: ಉದ್ಯೋಗಿಗಳಿಗೆ ಗುಡ್‌ನ್ಯೂಸ್ ಏನದು ?

ವಿಶ್ವದಾದ್ಯಂತ ಎಐ ಬಳಕೆ ಹೆಚ್ಚಾಗುತ್ತಿದೆ. ಭಾರತದಲ್ಲೂ ಎಐ ಬಳಕೆ ಹೆಚ್ಚಳವಾಗಿದೆ. ಆದರೆ ಎಐ ಬಳಕೆಯಿಂದಾಗಿ ಹೆಚ್ಚು ಲಾಭವಾಗದೆ ಇರುವುದು ಹೊಸ ಚರ್ಚೆಗೆ ಕಾರಣವಾಗಿದೆ. ವಿಶ್ವದಾದ್ಯಂತ ವಿವಿಧ ಕ್ಷೇತ್ರಗಳ ಕಂಪನಿಗಳು ಕಂಪನಿಯ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಹಾಗೂ ಕೆಲಸಗಳನ್ನು ವೇಗವಾಗಿ ಮಾಡಿಕೊಳ್ಳುವ ಉದ್ದೇಶದಿಂದ ಎಐ ಮೊರೆ ಹೋಗಿವೆ. ಆದರೆ ಇದೀಗ ಎಐನಿಂದ ನಿರೀಕ್ಷಿತ ಲಾಭ ಸಿಗದೆ ಇರುವುದು ಅಧ್ಯಯನ ವರದಿಯೊಂದರಲ್ಲಿ ಬಹಿರಂಗವಾಗಿದೆ.

ಹೌದು ಕಂಪನಿಗಳು ಮಾಡುವ ವೆಚ್ಚವನ್ನು ಕಡಿಮೆ ಮಾಡುವುದು ಹಾಗೂ ಬೇಗ ಕೆಲಸ ಮುಗಿಸಬೇಕು ಎನ್ನುವ ಕಾರಣಕ್ಕೆ ಹಲವು ಪ್ರತಿಷ್ಠಿತ ಕಂಪನಿಗಳು ಎಐ ಮೊರೆ ಹೋಗಿದ್ದವು. ಅಲ್ಲದೇ ಇದರ ಹಿಂದೆ ಲಾಭವನ್ನು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರವೂ ಇತ್ತು. ಆದರೆ ಆ ಲೆಕ್ಕಾಚಾರವೆಲ್ಲವೂ ತಲೆಕೆಳಗಾಗಿವೆ. ಭಾರತವೂ ಸೇರಿದಂತೆ ಪ್ರಪಂಚದಾದ್ಯಂತದ ಕಂಪನಿಗಳು ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದಕ್ಕೆ ಮುಂದಾಗುತ್ತಿದ್ದು. ಇದರಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿಯೂ ಎದುರಾಗಿದೆ. ಈ ರೀತಿ ಇರುವಾಗಲೇ ಅಚ್ಚರಿಯ ವರದಿಯೊಂದು ಬಹಿರಂಗವಾಗಿದೆ.

95 of Companies See No AI Benefit MIT Good news for employees

ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಎನ್ನುವ ಸಂಸ್ಥೆ ನಡೆಸಿರುವ ಹೊಸ ಅಧ್ಯಯ ವರದಿಯು ಇದೀಗ ಭಾರೀ ಸಂಚಲವನ್ನು ಸೃಷ್ಟಿ ಮಾಡಿದೆ. ಎಐ ಬಳಕೆಯಿಂದಾಗಿ ಭಾರತದಲ್ಲಿ ಹೆಚ್ಚಿನ ವ್ಯತ್ಯಾಸಗಳು ಆಗಿಲ್ಲ. ಅಲ್ಲದೇ AI ವ್ಯವಸ್ಥೆಯನ್ನು ತಮ್ಮ ಸಂಸ್ಥೆಗಳಲ್ಲಿ ಅಳವಡಿಸಿಕೊಂಡಿರುವ ಶೇ 95 ಪ್ರತಿಶತ ಸಂಸ್ಥೆಗಳು ಹೂಡಿಕೆಯ ಮೇಲೆ ಶೂನ್ಯ ಲಾಭ ಗಳಿಸಿವೆ ಎನ್ನುವ ಅಂಶವನ್ನು ಎಂಐಟಿ ಸಂಸ್ಥೆಯ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

GenAI ನಲ್ಲಿ $30-40 ಬಿಲಿಯನ್ ಉದ್ಯಮಗಳ ಹೂಡಿಕೆಯ ಹೊರತಾಗಿಯೂ ಶೇ. 95 ಪ್ರತಿಶತ ಸಂಸ್ಥೆಗಳು ಶೂನ್ಯ ಲಾಭವನ್ನು ಪಡೆಯುತ್ತಿವೆ ಎಂಬ ಅಚ್ಚರಿಯ ಸಂಗತಿಯು ಇದೀಗ ಬಹಿರಂಗವಾಗಿದೆ. ದಿ GenAI ಡಿವೈಡ್: ಸ್ಟೇಟ್ ಆಫ್ AI ಇನ್ ಬ್ಯುಸಿನೆಸ್ 2025 ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ. ಪ್ರಾರಂಭಿಕ ಹಂತವಾಗಿರುವುದರಿಂದ ಎಐ ನಿಂದ ಲಾಭ ಸಿಗದೆ ಇರುವ ಸಾಧ್ಯತೆ ಇದೆ ಎಂದೂ ಚರ್ಚೆ ನಡೆದಿದೆ. ಆದರೆ ಎಐನಿಂದ ಭಾರೀ ಅನುಕೂಲವಾಗಲಿದೆ ಎಂದು ಚರ್ಚೆ ನಡೆದಿರುವಾಗಲೇ ಈ ವರದಿಯ ಅಂಶವೂ ತಲ್ಲಣ ಮೂಡಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ಎಐ ಮೇಲೆ ಹೂಡಿಕೆ ಪ್ರಮಾಣ ಕಡಿಮೆ ಆಗುವ ಸಾಧ್ಯತೆಯೂ ಇದೆ.

95 of Companies See No AI Benefit MIT Good news for employees

ಈ ಸಂಶೋಧನಾ ವರದಿಯ ಪ್ರಕಾರ, 350 ಉದ್ಯೋಗಿಗಳ ಸಂದರ್ಶನ ನಡೆಸಲಾಗಿದೆ. ಅದರಲ್ಲಿ 300 ಜನ AI ಬಳಕೆ ಮಾಡುತ್ತಿರುವವರು ಸೇರಿದ್ದಾರೆ. ChatGPT ಮತ್ತು Copilot ನಂತಹ AI ಟೂಲ್‌ಗಳನ್ನು ಬಳಕೆ ಮಾಡುವುದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಬೇಕು. ಆದರೆ ಅದರಿಂದ ಬರುತ್ತಿರುವ ಲಾಭಾಂಶವು ಅತ್ಯಲ್ಪ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ದೇಶದ ಶೇ80% ಕ್ಕೂ ಹೆಚ್ಚು ಸಂಸ್ಥೆಗಳು ಎಐ ಟೂಲ್‌ಗಳನ್ನು ಬಳಸಿವೆ. ಅಂದಾಜು ಶೇ 35ರಿಂದ 40ರಷ್ಟು ಎಐ ಅನುಭವ ಹೊಂದಿರುವವರನ್ನು ನಿಯೋಜನೆ ಮಾಡಲಾಗಿದೆ. ಆದರೆ ಈ ಟೂಲ್‌ಗಳು ಪ್ರಾಥಮಿಕವಾಗಿ ವೈಯಕ್ತಿಕ ಉತ್ಪಾದಕತೆಯನ್ನು ಹೆಚ್ಚಿಸುತ್ತವೆ. ಲಾಭ ಮತ್ತು ನಷ್ಟದ ಲೆಕ್ಕಾಚಾರದಲ್ಲಿ ಲಾಭ ಗಳಿಕೆ ಇಲ್ಲ ಎಂದೇ ಹೇಳಲಾಗುತ್ತಿದೆ. ಆದರೆ ಇದೇ ಅಂತಿಮವಲ್ಲ ಎಂದೂ ಹೇಳಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+