ಯಾವ್ಯಾವ ಕೃಷಿ ಆಧಾರಿತ ಉತ್ಪನ್ನಗಳ ಉತ್ಪಾದನೆಯಲ್ಲಿ ಕರ್ನಾಟಕದ ಸ್ಥಾನ ಏನು?, ಇಲ್ಲಿದೆ ವಿವರ
ನವದೆಹಲಿ, ಆಗಸ್ಟ್, 17: ಭಾರತದಲ್ಲಿ ಕಾಫಿ, ರೇಷ್ಮೆ, ರಾಗಿ, ಸೂರ್ಯಕಾಂತಿ, ಹಸಿ ಮೆಣಸಿನಕಾಯಿ, ಅಡಿಕೆ, ದಪ್ಪ ಮೆಣಸಿನಕಾಯಿ, ಹುಣಸೆ ಹಣ್ಣು ಉತ್ಪಾದನೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಹಾಗೆಯೇ ಇನ್ನು ಯಾವ್ಯಾವ ಕೃಷಿ ಆಧಾರಿತ ಉತ್ಪನ್ನಗಳ ಉತ್ಪಾದನೆಯಲ್ಲಿ ಕರ್ನಾಟದ ಸ್ಥಾನ ಏನು ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಭಾರತ ಕೃಷಿ ಪ್ರಧಾನ ರಾಷ್ಟ್ರ ಅಂತಲೇ ಪ್ರಸಿದ್ಧಿಯಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಇಲ್ಲಿ ಕೃಷಿ ಮಾಡುವವರ ಸಂಖ್ಯೆ ತುಸು ಹೆಚ್ಚಾಗಿಯೇ ಇದೆ. ದೇಶದಲ್ಲಿ ಆಯಾ ರಾಜ್ಯವಾರು ವಿವಿಧ ಬೆಳೆಗಳನ್ನ ಬೆಳೆಯುವುದನ್ನು ಕಾಣಬಹುದಾಗಿದೆ. ಅದರಲ್ಲೂ ಕರ್ನಾಟಕ ಅಂತಾ ಬಂದರೆ ಇಲ್ಲಿ ಹೆಚ್ಚಾಗಿ ರಾಗಿ, ಕಾಫಿ ಬೆಳೆಯುವುದಂತೂ ನಿಜ. ಹಾಗಾದರೆ ವಿವಿಧ ಕೃಷಿ ಆಧಾರಿತ ಉತ್ಪನ್ನಗಳ ಉತ್ಪಾದನೆಯಲ್ಲಿ ಕರ್ನಾಟಕ ಯಾವ ಸ್ಥಾನ ಪಡೆದಿದೆ ಎಂದು ಗಮನಿಸಿ.

ಕರ್ನಾಟಕದ ಸ್ಥಾನ ಏನು?
1. ಕಾಫಿ - ಪ್ರಥಮ
2. ರೇಷ್ಮೆ- ಪ್ರಥಮ
3. ರಾಗಿ - ಪ್ರಥಮ
4. ಹಸಿರು ಮೆಣಸಿನಕಾಯಿ - ಪ್ರಥಮ
5. ಸೂರ್ಯಕಾಂತಿ - ಪ್ರಥಮ
6. ಹುಣಸೆಹಣ್ಣು - ಪ್ರಥಮ
7. ಅಡಿಕೆ - ಪ್ರಥಮ
8. ಕ್ಯಾಪ್ಸಿಕಂ - ಪ್ರಥಮ
9. ಟೊಮೇಟೊ: ದ್ವಿತೀಯ
10. ಸಪೋಟಾ: ದ್ವಿತೀಯ
11. ತೆಂಗಿನಕಾಯಿ - ದ್ವಿತೀಯ
12. ದಾಳಿಂಬೆ - ತೃತೀಯ
13. ಅನಾನಸ್ - ತೃತೀಯ
14. ಪಪ್ಪಾಯಿ - ತೃತೀಯ
15. ಕಲ್ಲಂಗಡಿ: ತೃತೀಯ
16. ಈರುಳ್ಳಿ : ತೃತೀಯ












Click it and Unblock the Notifications