ಸುಮಲತಾ ಪರ ಪ್ರಚಾರಕ್ಕೆ ರೈತ ನಾಯಕ ಪುಟ್ಟಣ್ಣಯ್ಯ ಪತ್ನಿ
ಮಂಡ್ಯ, ಏಪ್ರಿಲ್ 06: ಸುಮಲತಾ ಅಂಬರೀಶ್ ಅವರ ಪರ ಪ್ರಚಾರಕ್ಕೆ ರೈತ ನಾಯಕ ದಿವಂಗತ ಪುಟ್ಟಣ್ಣಯ್ಯ ಅವರ ಪತ್ನಿ ಸುನಿತಾ ಪುಟ್ಟಣ್ಣಯ್ಯ ಅವರು ಪ್ರಚಾರಕ್ಕೆ ನಿಂತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಂಡ್ಯದ ರೈತ ಸಂಘವು ಈಗಾಗಲೇ ಸುಮಲತಾ ಅವರಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದೆ. ಜೊತೆಗೆ ಇಂದು ಸ್ವತಃ ಸುನಿತಾ ಪುಟ್ಟಣ್ಣಯ್ಯ ಅವರೇ ಸುಮಲತಾ ಅವರ ಪರ ಪ್ರಚಾರ ಮಾಡುತ್ತಿರುವುದು ಸುಮಲತಾ ಅವರಿಗೆ ಶಕ್ತಿ ಹೆಚ್ಚಿಸಿದೆ.
ಪುಟ್ಟಣ್ಣಯ್ಯ ಅವರು ರೈತ ಸಂಘದ ಬಲದಿಂದ ಶಾಸಕರೂ ಆಗಿದ್ದವರು, ಹಾಗಾಗಿ ಅವರ ಪತ್ನಿ ಸುಮಲತಾ ಅವರಿಗೆ ಬೆಂಬಲ ನೀಡಿರುವುದು ಸುಮಲತಾ ಅವರ ಬಲ ಹೆಚ್ಚಳಕ್ಕೆ ಕಾರಣವಾಗಿದೆ. ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದನ್ನೂ ಸಹ ಇಲ್ಲಿ ನೆನಪಿಸಿಕೊಳ್ಳಬೇಕು.

ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿಯ ಬೆಂಬಲ, ರೈತ ಸಂಘದ ಬೆಂಬಲ ದೊರೆತಿದ್ದು ಅವರ ಪ್ರಚಾರ ಜೋರಿನಿಂದ ಸಾಗಿದೆ. ಕಾಂಗ್ರೆಸ್ ನ ಕಾರ್ಯಕರ್ತರು ಕೆಲವು ಮುಖಂಡರು ಸಹ ಸುಮಲತಾ ಅವರಿಗೆ ಬೆಂಬಲ ನೀಡುತ್ತಿರುವುದು ಸಹಜವಾಗಿಯೇ ಸುಮಲತಾ ಅವರಿಗೆ ಹೆಚ್ಚಿನ ಶಕ್ತಿ ತುಂಬಿದೆ.
ಇಂದು ಯುಗಾದಿಯಂದೂ ಸಹ ಸುಮಲತಾ ಅವರು ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಅವರು ಹೋದಲ್ಲೆಲ್ಲಾ ಜನರು ಬೇವು-ಬೆಲ್ಲ ನೀಡಿ ಅವರಿಗೆ ಸ್ವಾಗತ ಮಾಡುತ್ತಿದ್ದಾರೆ. ಸುಮಲತಾ ಅವರು ಮಂಡ್ಯದಲ್ಲಿ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಅವರನ್ನು ಎದುರಿಸಲಿದ್ದಾರೆ.












Click it and Unblock the Notifications