ಪ್ರಧಾನ ಮಂತ್ರಿ ಕಿಸಾನ್ ಮಾನಧನ್ ಯೋಜನೆ: ರೈತರಿಗಾಗಿ 3 ಸಾವಿರ ರೂ. ಪಿಂಚಣಿ

ಬೆಂಗಳೂರು, ನವೆಂಬರ್‌ 4: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರೈತರಿಗಾಗಿ ನಡೆಸುತ್ತಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದರಡಿ ರೈತರಿಗಾಗಿ ವಾರ್ಷಿಕವಾಗಿ 6 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. ಈ ಮೊತ್ತವನ್ನು ತಲಾ ಎರಡು ಸಾವಿರ ರೂಪಾಯಿಯಂತೆ ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಈ ಯೋಜನೆಯ ಫಲಾನುಭವಿ ರೈತರು ಪ್ರಧಾನಮಂತ್ರಿ ಮಾನಧನ್ ಯೋಜನೆಯ ಲಾಭವನ್ನು ಸಹ ರೈತರು ಪಡೆಯಬಹುದು.

ಪ್ರಧಾನಮಂತ್ರಿ ಮಾನ ಧನ್ ಯೋಜನೆಯು ದೇಶದ ರೈತರಿಗಾಗಿ ನಡೆಸಲಾಗುವ ಸರ್ಕಾರದ ಒಂದು ಯೋಜನೆಯಾಗಿದ್ದು, ಇದರ ಅಡಿಯಲ್ಲಿ ರೈತರಿಗೆ ಪಿಂಚಣಿ ನೀಡಲಾಗುತ್ತದೆ. ಈ ಯೋಜನೆಯಲ್ಲಿ ನೋಂದಣಿಗಾಗಿ ರೈತರು ಯಾವುದೇ ಪ್ರತ್ಯೇಕ ನಮೂನೆಯನ್ನು ಭರ್ತಿ ಮಾಡುವ ಅಗತ್ಯವಿಲ್ಲ. ಈಗಾಗಲೇ ಚಾಲ್ತಿಯಲ್ಲಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೋಂದಾಯಿಸಿದ ರೈತರು ಪಿಎಂ ಕಿಸಾನ್ ಮಾನ್‌ ಧನ್‌ ಯೋಜನೆಯಲ್ಲಿ ನೋಂದಾಯಿಸಲ್ಪಡಲು ಸರಳವಾಗಿ ಸಾಧ್ಯವಾಗುತ್ತದೆ.

ರೈತರಿಗೆ ಈ ಯೋಜನೆಯ ಪ್ರಮುಖ ಲಾಭದಾಯಕ ಸಂಗತಿಯೆಂದರೆ ನೀವು ಈ ಯೋಜನೆಯಲ್ಲಿ ಕಂತುಗಳನ್ನು ಪಾವತಿಸಬೇಕಾಗಿಲ್ಲ, ಬದಲಾಗಿ ಸರ್ಕಾರ ಕಂತು ನೀಡುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಮಾನ್ ಧನ್ ಯೋಜನೆಯ ಕಂತುಗಳನ್ನು ನೀವು ಒಂದು ವರ್ಷದಲ್ಲಿ ಪಡೆಯುವ 6 ಸಾವಿರ ರೂಪಾಯಿಗಳಿಂದ ಕಡಿತಗೊಳಿಸಲಾಗುತ್ತದೆ.

ಏನಿದು ಪಿಎಂ ಕಿಸಾನ್ ಮಾನ್‌ಧನ್ ಯೋಜನೆ?

ಏನಿದು ಪಿಎಂ ಕಿಸಾನ್ ಮಾನ್‌ಧನ್ ಯೋಜನೆ?

ದೇಶದ ಸಣ್ಣ ಮತ್ತು ಕಡಿಮೆ ವ್ಯವಸಾಯ ಹೊಂದಿರುವ ರೈತರಿಗೆ ಮಾಸಿಕ ಪಿಂಚಣಿ ನೀಡುವ ಉದ್ದೇಶದಿಂದ ಪಿಎಂ ಕಿಸಾನ್ ಮಾನ್‌ ಧನ್‌ ಯೋಜನೆ ಆರಂಭಿಸಲಾಗಿದೆ. ಇದರ ಅಡಿಯಲ್ಲಿ 60 ವರ್ಷದ ನಂತರ ಫಲಾನುಭವಿಗಳಿಗೆ ಪ್ರತಿ ತಿಂಗಳು ಪಿಂಚಣಿಯಾಗಿ 3,000 ರೂ.ಯಂತೆ ರೈತರಿಗೆ ವಾರ್ಷಿಕ 36 ಸಾವಿರ ರೂ. ಪಡೆಯಬಹುದು. 18ರಿಂದ 40 ವರ್ಷದೊಳಗಿನ ಯಾವುದೇ ರೈತರು ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಈ ಪಿಂಚಣಿಗಾಗಿ ರೈತರು ತಮ್ಮ ವಯಸ್ಸಿನ ಪ್ರಕಾರ ಪ್ರತಿ ತಿಂಗಳು ಈ ಯೋಜನೆಯಲ್ಲಿ ಹಣವನ್ನು ಠೇವಣಿ ಮಾಡಬೇಕಾಗುತ್ತದೆ.

ಎಷ್ಟು ಪ್ರೀಮಿಯಂ ಪಾವತಿಸಬೇಕಾಗುತ್ತದೆ?

ಎಷ್ಟು ಪ್ರೀಮಿಯಂ ಪಾವತಿಸಬೇಕಾಗುತ್ತದೆ?

ಪ್ರಧಾನಮಂತ್ರಿ ಕಿಸಾನ್ ಮನ್ಧನ್ ಯೋಜನೆಯಡಿ ರೈತರಿಗೆ ಪ್ರತಿ ತಿಂಗಳು 3,000 ರೂಪಾಯಿ ಪಿಂಚಣಿ ನೀಡಲಾಗುತ್ತದೆ. ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಯಾಗಿದ್ದರೆ ಪಿಎಂ ಕಿಸಾನ್ ಮಾನ್‌ಧನ ಯೋಜನೆಯಲ್ಲಿ ನಿಮ್ಮ ನೋಂದಣಿ ಸ್ವಯಂಚಾಲಿತವಾಗಿ ಮಾಡಲಾಗುತ್ತದೆ. ಈ ಯೋಜನೆಯ ಪ್ರೀಮಿಯಂ ಸಮ್ಮಾನ್ ನಿಧಿ ಅಡಿಯಲ್ಲಿ ಪಡೆದ ಹಣದಿಂದ ಕಡಿತಗೊಳಿಸಲಾಗುತ್ತದೆ. ಆದರೆ ಇದಕ್ಕಾಗಿ ನೀವು ಫಾರ್ಮ್ ಅನ್ನು ಭರ್ತಿ ಮಾಡಬೇಕು.

ಪಿಎಂ ಕಿಸಾನ್ ಮನ್‌ಧನ್‌ ಯೋಜನೆಯ ಲಾಭ ಪಡೆಯಲು, ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪಡೆದ ಹಣದಲ್ಲಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಇದರ ಪ್ರೀಮಿಯಂ ಮೊತ್ತ 55 ರಿಂದ 200 ರೂ. 60 ವರ್ಷವಾದ ನಂತರ, ಪ್ರೀಮಿಯಂ ಹಣ ಕಡಿತಗೊಳ್ಳುವುದನ್ನು ನಿಲ್ಲಿಸುತ್ತದೆ ಮತ್ತು ರೈತರಿಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ ಪಿಂಚಣಿ ಪಡೆಯಲು ಪ್ರಾರಂಭಿಸುತ್ತದೆ.

ಈ ಯೋಜನೆಯ ನೋಂದಣಿ ಪ್ರಕ್ರಿಯೆ ಹೇಗೆ?

ಈ ಯೋಜನೆಯ ನೋಂದಣಿ ಪ್ರಕ್ರಿಯೆ ಹೇಗೆ?

ಪಿಎಂ ಕಿಸಾನ್ ಮಾನ್‌ ಧನ ಯೋಜನೆಗೆ ಹೆಸರನ್ನು ಸೇರಿಸಲು ನೀವು ಮೊದಲು ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಈ ನೋಂದಣಿಯ ನಂತರ ನೀವು ಪಿಎಂ ಕಿಸಾನ್ ಮಾನ್‌ಧನ್‌ ಯೋಜನೆಗೆ ಹೆಸರನ್ನು ಸೇರಿಸಲು ಫಾರ್ಮ್ ಭರ್ತಿ ಮಾಡಿ ಅಗತ್ಯವಿರುವ ವಿವರಗಳನ್ನು ಗಾಗೂ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು. ಈ ಫಾರ್ಮ್‌ನ್ನು ನೀವು ಭರ್ತಿ ಮಾಡಿದ ತಕ್ಷಣ, ನಿಮ್ಮ ಕಂತುಗಳು ಮಾನ್‌ಧನ ಪಿಂಚಣಿ ಯೋಜನೆಗೆ ಪ್ರತಿ ತಿಂಗಳು ಕಡಿತಗೊಳ್ಳಲು ಈ ಯೋಜನೆ ಸಕ್ರಿಯಗೊಳ್ಳುತ್ತದೆ.

ಪಿಎಂ ಶ್ರಮ್ ಯೋಗಿ ಮಾನ್-ಧನ್ ಯೋಜನಾ

ಪಿಎಂ ಶ್ರಮ್ ಯೋಗಿ ಮಾನ್-ಧನ್ ಯೋಜನಾ

ಭಾರತ ದೇಶದ ಅರ್ಧದಷ್ಟು ಆದಾಯವು ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರಿಂದ ಉತ್ಪಾದನೆಯಾಗುತ್ತಿದೆ. ನಮ್ಮ ದೈನಂದಿನ ಜೀವನದಲ್ಲಿ ಬೀದಿ ವ್ಯಾಪಾರಿಗಳು, ರಿಕ್ಷಾ ಎಳೆಯುವವರು, ಕಟ್ಟಡ ಕಾರ್ಮಿಕರು, ಮನೆಕೆಲಸದವರು, ಕೃಷಿ ಕಾರ್ಮಿಕರು, ಕಸ ಹೆಕ್ಕುವವರು, ಬೀಡಿ ಕಾರ್ಮಿಕರು, ಹ್ಯಾಡ್‍ಲೂಮ್ ಕಾರ್ಮಿಕರು, ಚರ್ಮೋದ್ಯಮ, ಚಿಂದಿ ಆಯುವವರು ಮತ್ತು ಇತರೇ ವಿವಿಧ ವೃತ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರು ಕಂಡು ಬರುತ್ತಾರೆ. ಈ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃದ್ಧ ವೇಳೆಯಲ್ಲಿ ರಕ್ಷಣೆ ಕಲ್ಪಿಸಲು ಪಿಂಚಣಿ ಸೌಲಭ್ಯವನ್ನು ವಿಸ್ತರಿಸಿ ಭಾರತ ಸರ್ಕಾರವು ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ (ಪಿಎಮ್-ಸಿಮ್) ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+