ಮಹಾರಾಷ್ಟ್ರದ 26 ಜಿಲ್ಲೆಗಳ 151 ತಾಲೂಕುಗಳು ಬರ ಪೀಡಿತ

ಮುಂಬೈ, ನವೆಂಬರ್ 2: ಕರ್ನಾಟಕದಲ್ಲಿ ಈಗಾಗಲೇ 24 ಜಿಲ್ಲೆಗಳ 100 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ಇದೀಗ ಮಹಾರಾಷ್ಟ್ರದಲ್ಲೂ ಕೂಡ 26 ಜಿಲ್ಲೆಗಳ 151 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ.

ಮಹಾರಾಷ್ಟ್ರದ 26 ಜಿಲ್ಲೆಗಳಲ್ಲಿರುವ 355 ತಾಲೂಕುಗಳ ಪೈಕಿ 151 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದೆ.

ಮಹಾರಾಷ್ಟ್ರದ ವಿದರ್ಭಾ ಹಾಗೂ ಮರಾಠವಾಡಾ ರೈತರು ಹೆಚ್ಚಿನ ಸಂಕಷ್ಟದಲ್ಲಿದ್ದಾರೆ ಆ ಪ್ರದೇಶದ ಬಹುತೇಕ ಭಾಗ ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಈ ಬಾರಿ ಮಹಾರಾಷ್ಟ್ರವು ಶೇ.75 ರಷ್ಟು ಮಳೆಯನ್ನು ಕಂಡಿದೆ. ಆ ಭಾಗಗಳಿಗೆ ಕೃಷಿ ಚಟುವಟಿಕೆಗಳಿಗೆ ಟ್ಯಾಂಕರ್ ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇನ್ನೂ ಎರಡು ಮೂರು ತಿಂಗಳುಗಳ ಕಾಲ ಇದೇ ರೀತಿ ಮುಂದುವರೆಯಲಿದೆ.

Maharashtra govt declared drought in 151 taluks

ಈ ಭಾಗದ ರೈತರು ಹಲವು ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದಾರೆ, ಇದೀಗ ಬೆಳೆಯೂ ಇಲ್ಲದೆ ಕಂಗಾಲಾಗಿದ್ದಾರೆ. ಕರ್ನಾಟಕದ ಪರಿಸ್ಥಿತಿಯೇ ಇಲ್ಲಿಯೂ ಕಂಡುಬಡುತ್ತಿದೆ. ಆ 151 ತಾಲೂಕುಗಳ ಪೈಕಿ 112 ತಾಲೂಕುಗಳಿಗೆ ಸಂಪೂರ್ಣವಾಗಿ ಬರ ಆವರಿಸಿದೆ ಉಳಿದ 39 ತಾಲೂಕುಗಳಲ್ಲಿ ಮಧ್ಯಮ ಬರ ಪೀಡಿತ ಪಟ್ಟಿಯಲ್ಲಿ ಸೇರಿದೆ.

ಕರ್ನಾಟಕದ 24 ಜಿಲ್ಲೆಗಳ 100 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ. ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯನ್ನು ಅನುಭವಿಸಿ ನೂರು ತಾಲೂಕುಗಳು ಬರಪೀಡಿತವಾಗಿವೆ. ಈ ತಾಲೂಕುಗಳಲ್ಲಿ ಒಟ್ಟು 16,662 ಕೋಟಿ ರೂ ನಷ್ಟವಾಗಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ 2434 ಕೋಟಿ ರೂಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+