ಗಣರಾಜ್ಯೋತ್ಸವ ಫಲಪುಷ್ಪ ಜಾತ್ರೆಗೆ ಲಾಲ್ ಬಾಗ್ ಸಜ್ಜು

lal bagh
ಬೆಂಗಳೂರು, ಜ.6 : ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಲಾಲ್ ಬಾಗ್ ನಲ್ಲಿ ತಯಾರಿ ಆರಂಭವಾಗಿದೆ. ಜ.17ರಿಂದ 26ರವರಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ. ತೋಟಗಾರಿಕಾ ಇಲಾಖೆ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಅದನ್ನು ವರ್ಣಿಸುವ ಪ್ರಾತ್ಯಕ್ಷಿಕೆ ಈ ಬಾರಿಯ ಪ್ರದರ್ಶನದ ವಿಶೇಷವಾಗಿದೆ.

ತೋಟಗಾರಿಕೆ ಇಲಾಖೆಯ ಸುವರ್ಣ ಮಹೋತ್ಸವ ಸಂಭ್ರಮದ ಜೊತೆಗೆ 199ನೇ ಫಲಪುಷ್ಪ ಪ್ರದರ್ಶನವನ್ನು ಅದ್ದೂರಿಯಾಗಿ ನಡೆಸಲು ಇಲಾಖೆ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಜ.17ರಿಂದ 26ರವರಗೆ ಈ ಬಾರಿಯ ಫಲಪುಷ್ಪ ಪ್ರದರ್ಶನ ನಡೆಯಲಿದೆ. ತೋಟಗಾರಿಕೆ ಬೆಳಗಳ ಪದ್ಧತಿ, ನೀರಾವರಿ ವ್ಯವಸ್ಥೆ ಬಗ್ಗೆ ಮಾಹಿತಿ ನೀಡುವ ಪ್ರಾತ್ಯಕ್ಷಿಕೆಗಳು ಗಾಜಿನ ಮನೆಯಲ್ಲಿ ನಡೆಯಲಿವೆ.

ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಗುಲಾಬಿ, ಕಾರ್ನೆಷನ್, ಆರ್ಕಿಡ್ಸ್, ಡ್ರಸಿನಾ ಸೇರಿದಂತೆ 33 ಬಗೆಯ ಹೂಗಳನ್ನು ಊಟಿ, ನಂದಿಬೆಟ್ಟ ಹಾಗೂ ದೇಶದ ವಿವಿಧ ಪ್ರದೇಶಗಳಿಂದ ತರಿಸಲಾಗುತ್ತಿದೆ. ಮಾವು, ಕಿತ್ತಲೆ, ದ್ರಾಕ್ಷಿ, ಜೇನು ಸೇರಿದಂತೆ ವಿವಿಧ ಬಗೆಯ ಕಾರ್ಯಚಟುವಟಿಕೆ ಮತ್ತು ಕೃಷಿಯ ವಿಧಾನಳನ್ನು ತಿಳಿಸುವ ಕಲಾಕೃತಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. [ಲಾಲ್‌ಬಾಗ್‌ನಲ್ಲಿ ಕಹಿ ಘಟನೆ]

ಫಲಪುಷ್ಪ ಪ್ರದರ್ಶನದ ಪ್ರವೇಶದ ದರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಗುವಂತ ತಿಳಿಸಿದ್ದಾರೆ. ಸಾಮಾನ್ಯ ದಿನ 30 ಮತ್ತು ರಜಾ ದಿನಗಳಲ್ಲಿ 40 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ವಿವಿಧ ಕಲಾಕೃತಿಗಳಿಗಾಗಿ ಸುಮಾರು 20 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+