ಹಾಪ್‌ಕಾಮ್ಸ್‌ನಲ್ಲಿ ಇನ್ನುಮುಂದೆ ಹೋಲ್‌ಸೇಲ್ ದರದಲ್ಲಿ ತರಕಾರಿ ಮಾರಾಟ
ಬೆಂಗಳೂರು, ಜನವರಿ 24: ಹಾಪ್‌ಕಾಮ್ಸ್‌ನಲ್ಲಿ ಇನ್ನುಮುಂದೆ ಹೋಲ್‌ಸೇಲ್ ದರದಲ್ಲಿ ತರಕಾರಿಗಳು ಲಭ್ಯವಾಗಲಿದೆ.
ಹೋಟೆಲ್‌ಗಳು, ಖಾಸಗಿ ಕಾರ್ಖಾನೆಗಳು, ತಳ್ಳುವ ಗಾಡಿಯ ತರಕಾರಿ ವ್ಯಾಪಾರಿಗಳು ಸೇರಿದಂತೆ ಇತರೆ ಸಣ್ಣಪುಟ್ಟ ತರಕಾರಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಮಾರುಕಟ್ಟೆಯ ಹೋಲ್‌ಸೇಲ್ ದರಕ್ಕಿಂತ ಕಡಿಮೆ ಬೆಲೆಯಲ್ಲಿ ತರಕಾರಿ ಮಾರಾಟ ಮಾಡಲು ಹಾಪ್‌ಕಾಮ್ಸ್‌ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಲಾಲ್‌ಬಾಗ್ ಸಮೀಪದ ಹಾಪ್‌ಕಾಮ್ಸ್ ಕೇಂದ್ರದಲ್ಲಿ ಕ್ಯಾಷ್ ಅಂಡ್ ಕ್ಯಾರಿ ಮಳಿಗೆ ಇಂದಿನಿಂದ ಆರಂಭವಾಗಿದೆ. ಖಾಸಗಿ ಸಂಘ, ಸಂಸ್ಥೆಗಳು, ಕಾರ್ಖಾನೆಗಳು, ತಳ್ಳುವ ಗಾಡಿ, ತರಕಾರಿ ವ್ಯಪಾರಿಗಳು, ಕ್ಲಬ್ , ಹೋಟೆಲ್‌ಗಳಿಗೂ ತರಕಾರಿ ಸರಬರಾಜು ಮಾಡಲು ನಿರ್ಧರಿಸಿದೆ.

ಇನ್ನುಮುಂದೆ ಹೋಲ್‌ಸೇಲ್ ಮಾರುಕಟ್ಟೆಯಲ್ಲಿನ ದರಕ್ಕಿಂತ ಸ್ವಲ್ಪ ಕಡಿಮೆ ದರದಲ್ಲಿ ಎಲೆಕೋಸು, ನುಗ್ಗಕಾಯಿ, ಕ್ಯಾರೆಟ್, ಬೀಟ್‌ರೂಟ್, ಟೊಮೆಟೋ, ಬದನೆ, ಬೆಳ್ಳುಳ್ಳಿ, ಈರುಳ್ಳಿ ಲಭ್ಯವಾಗಲಿದೆ.
ಕ್ಯಾಶ್ ಅಂಡ್ ಕ್ಯಾರಿ ಮಳಿಗೆಯಲ್ಲಿ ಸಾಲ ಸಿಗುವುದಲ್ಲ ಎಲ್ಲವೂ ನಗದು ವ್ಯವಹಾರವಾಗಿರುತ್ತದೆ. ರೈತರಿಗೆ ಹಣ ಪಾವತಿಸಬೇಕಾಗಿರುವುದರಿಂದ ಕ್ಯಾಶ್ ಅಂಡ್ ಕ್ಯಾರಿ ಮಳಿಗೆ ಎಂದು ಹೆಸರಿಡಲಾಗಿದೆ.












Click it and Unblock the Notifications