ಲಾಲ್ ಬಾಗ್ ಪುಷ್ಪ ಪ್ರದರ್ಶನ ಟಿಕೇಟ್ : ಬುಕ್ ಮೈ ಶೋನಲ್ಲಿ ಲಭ್ಯ!
ಬೆಂಗಳೂರು, ಜನವರಿ 17: ನಗರದ ಕೆಂಪು ತೋಟ ಲಾಲ್ ಬಾಗ್ ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನಡೆಯಲಿರುವ ಬಾಹುಬಲಿ ಕುರಿತ ಪುಷ್ಪ ಪ್ರದರ್ಶನಕ್ಕೆ ಇದೇ ಮೊದಲ ಬಾರಿ ಬುಕ್ ಮೈ ಶೋ ಮೂಲಕ ಟಿಕೇಟ್ ಖರೀದಿ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ಜನವರಿ 19 ರಿಂದ 28 ರವರೆಗೆ ನಡೆಯುವ ಪುಷ್ಪ ಪ್ರದರ್ಶನದಲ್ಲಿ ಬಾಹುಬಲಿ ಕುರಿತ ಪ್ರದರ್ಶನ ನಡೆಯುತ್ತಿದ್ದು, ದೇಶದ ವಿವಿಧ ಭಾಗಗಳಿಂದ ಜನರು ಬರಲಿದ್ದಾರೆ. ಹಾಗಾಗಿ ಎಲ್ಲಿರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಮೊಬೈಲ್ ಅಪ್ಲಿಕೇಷನ್ ಮೂಲಕ ಟಿಕೇಟ್ ಖರೀದಿ ವ್ಯವಸ್ಥೆ ಮಾಡಿದೆ.

ಇದರಿಂದಾಗಿ ಲಾಲ್ ಬಾಗ್ ನ ದ್ವಾರದಲ್ಲಿ ಟಿಕೇಟ್ ಖರೀದಿಗೆ ಸಾಲುಗಟ್ಟಿ ನಿಲ್ಲುವ ಸಮಸ್ಯೆ ದುರಾಗುವುದಿಲ್ಲ. ಟಿಕೇಟ್ ಬೆಲೆ ಹಿರಿಯರಿಗೆ 60 ರೂ ಹಾಗೂ ಮಕ್ಕಳಿಗೆ 20 ರೂ ನಿಗದಿಮಾಡಲಾಗಿದೆ. ಅಪ್ಲಿಕೇಷನ್ ಮುಖಂಡರೊಂದಿಗೆ ಮಾತುಕತೆ ನಡೆಸಿ ಅತ್ಯಂತ ಕಡಿಮೆ ದರ ಟೆಕೇಟ್ ಮೇಲೆ 2 ರೂ ಮಾತ್ರ ಹೆಚ್ಚುವರಿಯಾಗಿ ಪಡೆಯಲು ಸಮ್ಮತಿ ಸೂಚಿಸಲಾಗಿದೆ. ಟಿಕೇಟ್ ಖರೀದಿಗೆ ಹೊರೆಯಾಗುವುದಿಲ್ಲ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಎಂ. ಜಗದೀಶ್ ತಿಳಿಸಿದ್ದಾರೆ.












Click it and Unblock the Notifications