2100 ರೈತರ ಸಾಲ ತೀರಿಸಿದ ನಟ ಅಮಿತಾಬ್ ಬಚ್ಚನ್
ಮುಂಬೈ, ಜೂನ್ 12: ಬಾಲಿವುಡ್ ದಂತಕತೆ ನಟ ಅಮಿತಾಬ್ ಬಚ್ಚನ್ ಅವರು ಬಿಹಾರದ 2100 ರೈತರ ಕೃಷಿ ಸಾಲವನ್ನು ಖಾಸಗಿಯಾಗಿ ತೀರಿಸಿದ್ದಾರೆ.
ರೈತರ ಸಾಲವನ್ನು ತೀರಿಸುವುದಾಗಿ ಈ ಹಿಂದೆಯೇ ಅವರು ಹೇಳಿದ್ದರು, ಅಂತೆಯೇ ಅಮಿತಾಬ್ ಬಚ್ಚನ್ ಅವರು ಸಾಲವನ್ನು ತೀರಿಸಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
2100 ರೈತರ ಸಾಲವನ್ನು ಕಂತುಗಳಲ್ಲದೆ ಕೇವಲ ಒಂದೇ ಬಾರಿಗೆ ಚೆಕ್ ನೀಡುವ ಮೂಲಕ ಅಮಿತಾಬ್ ಬಚ್ಚನ್ ಅವರು ತೀರಿಸಿದ್ದಾರೆ. ಇದು ಮೊದಲಲ್ಲ ಈ ಮೊದಲೂ ಸಹ ಅವರು ಹೀಗೆ ಸಾಲ ತೀರಿಸಿದ್ದಾರೆ. ಈ ಹಿಂದೆ ಉತ್ತರ ಪ್ರದೇಶದ 1000 ರೈತರ ಸಾಲವನ್ನು ಅವರು ತೀರಿಸಿದ್ದರು.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಕ್ಕೆ ಸಹ ನೆರವು ನೀಡುವುದಾಗಿ ಅಮಿತಾಬ್ ಬಚ್ಚನ್ ಅವರು ಹೇಳಿದ್ದಾರೆ.












Click it and Unblock the Notifications