ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಹಂಗಾಮು; ಭತ್ತ ಬಿತ್ತನೆಯಲ್ಲಿ ಕುಂಠಿತ

|
Google Oneindia Kannada News

ನವದೆಹಲಿ ಜುಲೈ 12: ಮಳೆ ಕೊರತೆಯ ಕಾರಣದಿಂದ ದೇಶದಲ್ಲಿ ಪ್ರಸಕ್ತ ವರ್ಷ ನಿರೀಕ್ಷೆಯಂತೆ ಖಾರಿಫ್ ಬೆಳೆಯಾದ ಭತ್ತದ ಬಿತ್ತನೆ ಆಗಿಲ್ಲ. ಜುಲೈನಲ್ಲಿ ಬೀಳುವ ಮಳೆ ಆಧಾರದ ಮೇಲೆ ನಿರೀಕ್ಷೆಯಂತೆ ಭತ್ತ ಸೇರಿದಂತೆ ವಿವಿಧ ಖಾರಿಫ್ ಬೆಳೆಗಳ ಬಿತ್ತನೆಯಲ್ಲಿ ಏರಿಕೆ ಕಾಣಲಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.

ಮುಂಗಾರು ಆರಂಭವಾಗುತ್ತಿದ್ದಂತೆ ಈ ಋತುವಿನ ಖಾರಿಫ್ ಬೆಳೆಯಾದ ಭತ್ತ ಬಿತ್ತನೆ ಸಹ ಆಂಭವಾಗುತ್ತದೆ. ಆದರೆ ಜೂನ್‌ ತಿಂಗಳಲ್ಲಿ ಮಳೆ ಕೊರತೆ ಉಂಟಾಗಿದ್ದ ಹಾಗೂ ಜುಲೈನಲ್ಲೂ ಕೆಲವು ರಾಜ್ಯಗಳಲ್ಲಿ ಮಳೆ ಸಮರ್ಪವಾಗಿ ಬಾರದ ಕಾರಣ ಭತ್ತ ಬಿತ್ತನೆಯಲ್ಲಿ ಶೇ. 9.27 ರಷ್ಟು ಕಡಿಮೆಯಾಗಿದೆ.

ಕರ್ನಾಟಕದಲ್ಲಿ ಭಾರಿ ಮಳೆ: ದೀರ್ಘಾವಧಿ ಬೆಳೆಗೆ ತಜ್ಞರ ಸಲಹೆಕರ್ನಾಟಕದಲ್ಲಿ ಭಾರಿ ಮಳೆ: ದೀರ್ಘಾವಧಿ ಬೆಳೆಗೆ ತಜ್ಞರ ಸಲಹೆ

ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಕಳೆದ ವಾರದವರೆಗೆ ಒಟ್ಟು ಖಾರಿಫ್ ಬೆಳೆಗಳಿಗೆ ಬಿತ್ತನೆ ಕೇವಲ 406.66 ಲಕ್ಷ ಹೆಕ್ಟೇರ್‌ಗೆ ನಷ್ಟು ಆಗಿದೆ. ಇದು ಈ ವರ್ಷದಲ್ಲಿ ನಿರೀಕ್ಷೆಗಿಂತಲೂ ಶೇ. 9.27 ರಷ್ಟು ಕಡಿಮೆ ಎಂದು ಅಂದಾಜಿಸಲಾಗಿದೆ.

A Kharif crop paddy sowing has not been done as expected this year

ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಮುಖ್ಯ ಖಾರಿಫ್ ಬೆಳೆಯಾದ ಭತ್ತ ಬಿತ್ತನೆ ಬೆಳೆಯು 95ಲಕ್ಷ ಹೆಕ್ಟೇರ್‌ ಬದಲಿಗೆ ಕೇವಲ 72.24 ಲಕ್ಷ ಹೆಕ್ಟೇರ್‌ ನಲ್ಲಿ ಆಗಿದೆ. ಇದರಿಂದ ಜುಲೈ ಅವಧಿಯ ಈವರೆಗೆ ಶೇ. 24 ರಷ್ಟು ಕಡಿಮೆಯಾಗಿದೆ. ಪ್ರಸಕ್ತ ಖಾರಿಫ್ ಬಿತ್ತನೆಯಲ್ಲಿ ಸಹ ಕೆಲವು ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ವಾಣಿಜ್ಯ ಬೆಳೆಗಳ ಬಿತ್ತನೆ ಕೂಡ ಕುಂಠಿತಗೊಂಡಿದೆ.

ಸೂರತ್ ಮಾದರಿಯ ನೈಸರ್ಗಿಕ ಕೃಷಿ ಇಡೀ ದೇಶಕ್ಕೆ ಮಾದರಿ: ಪಿಎಂ ಮೋದಿಸೂರತ್ ಮಾದರಿಯ ನೈಸರ್ಗಿಕ ಕೃಷಿ ಇಡೀ ದೇಶಕ್ಕೆ ಮಾದರಿ: ಪಿಎಂ ಮೋದಿ

ಹಿಂದಿನ ವರ್ಷದಲ್ಲಿ ಜುಲೈ ಎರಡನೇ ವಾರದ ವೇಳೆಗೆ ಆಗುತ್ತಿದ್ದ ಬಿತ್ತನೆ ಪ್ರಮಾಣವು ಈ ವರ್ಷದಲ್ಲಿ ಆಗಿಲ್ಲ. ಖಾರಿಫ್ ಬೆಳೆಗಳ ಬಿತ್ತನೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಖಾರಿಫ್ ಬಿತ್ತನೆ ಬೆಳೆಗಳ ಪ್ರಮಾಣ ಈ ತಿಂಗಳಾಂತ್ಯಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಜೂನ್ 1-ಜು.6ರ ಮಧ್ಯೆ ಸಾಮಾನ್ಯ ಮುಂಗಾರು; ಭಾರತೀಯ ಹವಾಮಾನ ಇಲಾಖೆ (IMD) ಈ ವರ್ಷ ಸಾಮಾನ್ಯವಾಗಿ ನಿರೀಕ್ಷಿತ ಮುಂಗಾರಿನ ಮುನ್ಸೂಚನೆ ನೀಡಿದೆ. ಈ ಪೈಕಿ ಈಗಾಗಲೇ ಜೂನ್ 1ರಿಂದ ಜುಲೈ 6ರ ನಡುವೆ ದೇಶದಲ್ಲಿ ದಾಖಲಾದ ಮಳೆ 'ಸಾಮಾನ್ಯ ಮಟ್ಟದಲ್ಲಿದೆ ಎಂದು ವರದಿ ಆಗಿದೆ. ಈ ಅಂಕಿ ಅಂಶ ಗಮನಿಸಿದರೆ ಭಾರತದಲ್ಲಿ ಶೇಕಡಾ 10 ರಷ್ಟು ಮತ್ತು ದೇಶದ ವಾಯುವ್ಯ ಪ್ರದೇಶದಲ್ಲಿ ಶೇಕಡಾ 2 ರಷ್ಟು ಮಳೆಯ ಕೊರತೆ ಉಂಟಾಗಿದೆ.

A Kharif crop paddy sowing has not been done as expected this year

ಐಎಂಡಿ ವರದಿ ಪ್ರಕಾರ, ಜುಲೈ 6ಕ್ಕೆ ಕೊನೆಗೊಂಡ ಹಿಂದಿನ ವಾರದಲ್ಲಿ ಪೂರ್ವ ಮತ್ತು ಈಶಾನ್ಯ ಭಾರತದ ಪ್ರಮುಖ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಶೇ. 36 ರಷ್ಟು ಮಳೆ ಕೊರತೆ ಸೃಷ್ಟಿಯಾಗಿದೆ. ಈ ಕಾರಣದಿಂದ ಖಾರಿಫ್ ಬೆಳೆಯಾದ ಭತ್ತ ಬಿತ್ತನೆಯನ್ನು ಸಮಗ್ರವಾಗಿ ನೋಡುವುದಾದರೆ ಹಿಂದಿನ ವರ್ಷದ ಇದೇ ಅವಧಿಗಿಂತಲೂ ಪ್ರಸಕ್ತ ವರ್ಷ ಕಡಿಮೆ ಭಿತ್ತನೆ ಆಗಿದೆ ಎಂದು ತಿಳಿದು ಬಂದಿದೆ.

English summary
The Kharif crop of paddy sowing has not been done as expected this year. According to the union minister of Agriculture there well be an increase in the sowing of various Kharif crops including paddy as expected on this july rainfall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X