ಯಶವಂತಪುರ-ಹೊಸೂರು ಹೊಸ ಮೆಮು ರೈಲು: ನಿಲ್ದಾಣ, ವೇಳಾಪಟ್ಟಿ
ಬೆಂಗಳೂರು, ಸೆಪ್ಟೆಂಬರ್ 23: ನೈಋತ್ಯ ರೈಲ್ವೆ ಬೆಂಗಳೂರು ನಗರದಿಂದ ಉಪ ನಗರಕ್ಕೆ ಸಂಚಾರ ವ್ಯವಸ್ಥೆ ಸುಧಾರಿಸಲು ಹೊಸ ಮೆಮು ರೈಲುಗಳ ಘೋಷಣೆ ಮಾಡಿದೆ. ಯಶವಂತಪುರ-ಹೊಸೂರು ಮತ್ತು ಬಾಣಸವಾಡಿ-ತುಮಕೂರು ನಡುವೆ ಹೊಸ ಮೆಮು ರೈಲುಗಳ ಸಂಚಾರವನ್ನು ಆರಂಭಿಸಲಿದೆ. ಈ ರೈಲು ಸೇವೆಗೆ ಸೆಪ್ಟೆಂಬರ್ 27ರಂದು ಚಾಲನೆ ಸಿಗಲಿದೆ, ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ವೇಳಾಪಟ್ಟಿ, ನಿಲ್ದಾಣಗಳ ಮಾಹಿತಿಯನ್ನು ಪ್ರಕಟಿಸಲಾಗಿದೆ.
ತುಮಕೂರು ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸೆಪ್ಟೆಂಬರ್ 27ರಂದು ತುಮಕೂರು-ಯಶವಂತಪುರ-ತುಮಕೂರು, ಯಶವಂತಪುರ-ಹೊಸೂರು ಮತ್ತು ಬಾಣಸವಾಡಿ-ತುಮಕೂರು ನಡುವಿನ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ. ಎಲ್ಲಾ ಮೆಮು ರೈಲುಗಳು 8 ಬೋಗಿಯನ್ನು ಹೊಂದಿವೆ ಎಂದು ಇಲಾಖೆ ಮಾಹಿತಿ ನೀಡಿದೆ.

ರೈಲು ನಂಬರ್ 06203/ 06204 ಯಶವಂತಪುರ-ಹೊಸೂರು-ಯಶವಂತಪುರ ನಡುವೆ ಸಂಚಾರವನ್ನು ನಡೆಸಲಿವೆ. ಬಾಣಸವಾಡಿ-ತುಮಕೂರು ನಡುವೆ ರೈಲು ನಂಬರ್ 06205/ 06206 ರೈಲು ಸಂಚಾರವನ್ನು ನಡೆಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲು ವೇಳಾಪಟ್ಟಿ, ನಿಲ್ದಾಣಗಳು: ಸೆಪ್ಟೆಂಬರ್ 27ರಂದು ಯಶವಂತಪುರ-ಹೊಸೂರು-ಯಶವಂತಪುರ ನಡುವಿನ ಮೆಮು ರೈಲು ಸೇವೆಗೆ ಚಾಲನೆ ಸಿಗಲಿದೆ. ಸೆಪ್ಟೆಂಬರ್ 28ರಿಂದ ರೈಲು ಸಂಚಾರ ಆರಂಭವಾಗಲಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ. ಭಾನುವಾರ ಹೊರತುಪಡಿಸಿ ವಾರದ ಎಲ್ಲಾ ದಿನ ಈ ರೈಲು ಸಂಚಾರ ನಡೆಸಲಿದೆ.
ರೈಲು ಸಂಖ್ಯೆ 06203 ಯಶವಂತಪುರ-ಹೊಸೂರು ರೈಲು ಯಶವಂತಪುರದಿಂದ ಬೆಳಗ್ಗೆ 8.45ಕ್ಕೆ ಹೊರಡಲಿದೆ, ಹೊಸೂರಿಗೆ 12.30ಕ್ಕೆ ತಲುಪಲಿದೆ. ಮಾರ್ಗದಲ್ಲಿ ರೈಲು ಹೆಬ್ಬಾಳ (10:59/ 11:00), ಬಾಣಸವಾಡಿ (11:10/ 11:11), ಬೆಳಂದೂರು ರೋಡ್ (11:25/ 11:26), ಕಾರ್ಮೆಲರಾಮ್ (11:31/ 11:32), ಹೀಲಲಿಗೆ (11:41/ 11:42), ಆನೇಕಲ್ ರೋಡ್ (11:51/ 11:52) ಆಗಮನ/ ನಿರ್ಗಮನ.
ರೈಲು ನಂಬರ್ 06204. ಹೊಸೂರು-ಯಶವಂತಪುರ ರೈಲು ಹೊಸೂರಿನಿಂದ ಮಧ್ಯಾಹ್ನ 3.20ಕ್ಕೆ ಹೊರಡಲಿದೆ. ಯಶವಂತಪುರಕ್ಕೆ ಸಂಜೆ 5.15ಕ್ಕೆ ಆಗಮಿಸಲಿದೆ. ರೈಲು ಆನೇಕಲ್ ರೋಡ್ (03:35/ 03:36), ಹೀಲಲಿಗೆ (03:46/ 03:47), ಕಾರ್ಮೆಲರಾಮ್ (03:56/ 03:57), ಬೆಳಂದೂರು ರೋಡ್ (04:00/ 04:01), ಬಾಣಸವಾಡಿ (04:14/ 04:15) ಮತ್ತು ಹೆಬ್ಬಾಳ (04:26/ 04:27) ಆಗಮನ/ ನಿರ್ಗಮನ.
ಬಾಣಸವಾಡಿ-ತುಮಕೂರು: ಸೆಪ್ಟೆಂಬರ್ 30ರಿಂದ ಬಾಣಸವಾಡಿ-ತುಮಕೂರು ಮೆಮು ರೈಲು ಸಂಚಾರವನ್ನು ನಡೆಸಲಿದೆ. ವಾರದಲ್ಲಿ ಒಂದು ದಿನ (ಸೋಮವಾರ) ಮಾತ್ರ ಈ ರೈಲು ಸಂಚಾರ ನಡೆಸಲಿದೆ. ರೈಲು ಸಂಖ್ಯೆ 06205. ರೈಲು ಬಾಣಸವಾಡಿ ಬೆಳಗ್ಗೆ 06:15ಕ್ಕೆ ಹೊರಡಲಿದೆ, ತುಮಕೂರು ನಗರಕ್ಕೆ 08:35ಕ್ಕೆ ಆಗಮಿಸಲಿದೆ. ರೈಲು ಹೆಬ್ಬಾಳ (06:25/ 06:26 AM), ಚಿಕ್ಕಬಣಾವರ (07:10/ 07:11 AM), ಬೈರನಾಯಕನಹಳ್ಳಿ (07:25/ 07:26 AM), ಮುದ್ದಲಿಂಗನಹಳ್ಳಿ (07:37/07:38 AM), ನಿಲುವಂದ (07:43/ 07:44 AM), ದಾಬಸ್ ಪೇಟೆ (07:50/ 07:51 AM), ಕ್ಯಾತ್ಸಂದ್ರ ಹಾಲ್ಟ್ (08:04/08:05 AM) ಆಗಮನ/ ನಿರ್ಗಮನ.
ತುಮಕೂರು-ಬಾಣಸವಾಡಿ. ರೈಲು ಸಂಖ್ಯೆ 06206. ಶನಿವಾರ ಮಾತ್ರ ಸಂಚಾರ ನಡೆಸಲಿದೆ. ರೈಲು ತುಮಕೂರಿನಿಂದ ಸಂಜೆ 7.40ಕ್ಕೆ ಹೊರಟು, ಬಾಣಸವಾಡಿಗೆ 10:05ಕ್ಕೆ ತಲುಪಲಿದೆ. ಕ್ಯಾತ್ಸಂದ್ರ ಹಾಲ್ಟ್ (07:46/ 07:47 PM), ದಾಬಸ್‌ಪೇಟೆ (08:02/ 08:03 PM), ನಿಲವಂದ (08:07/ 08:08 PM), ಮುದ್ದಲಿಂಗನಹಳ್ಳಿ (08:12/ 08:13 PM), ದೊಡ್ಡಬೆಲೆ (08:18/ 08:19 PM), ಬೈರನಾಯಕನಹಳ್ಳಿ (08:24/ 08:25 PM), ಚಿಕ್ಕಬಣಾವರ (08:44/08:45 PM) and ಹೆಬ್ಬಾಳ (09:06/09:07 PM) ಆಗಮನ ನಿರ್ಗಮನ.












Click it and Unblock the Notifications