Year-end Travel: ರಜೆ ಇದಿಯಾ? ಹಾಗಾದರೆ ಈ 7 ನಗರಗಳಿಗೆ ಭೇಟಿ ನೀಡಿ... ಕ್ರಿಸ್ಮಸ್ ಆಚರಣೆ ಸಖತ್ತಾಗಿರುತ್ತೆ....
ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಸಾಲು ಸಾಲು ರಜೆಗಳು ಇರುವವರು ಪ್ರವಾಸ ಕೈಗೊಳ್ಳಲು ಯೋಚನೆ ಮಾಡುವುದು ಸಹಜ. ನೀವೇನಾದರೂ ಕ್ರಿಸ್ಮಸ್ ಆಚರಣೆ ಮಾಡುತ್ತಿದ್ದು ಅಥವಾ ಕ್ರಿಸ್ಮಸ್ ಆಚರಣೆಯನ್ನು ನೋಡಲು ಮನಸ್ಸು ಮಾಡಿದ್ದರೆ ಈ 7 ನಗರಗಳಿಗೆ ಭೇಟಿ ನೀಡಬಹುದು. ಹಾಗಾದರೆ ಆ ನಗರಗಳ ಬಗ್ಗೆ ಮಾಹಿತಿ ಇಲ್ಲಿದೆ.
ಕ್ರೈಸ್ತ ಧರ್ಮೀಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಕ್ರಿಸ್‌ಮಸ್ ಹಬ್ಬ ಒಂದಾಗಿದೆ. ಇದನ್ನು ಪ್ರತಿ ವರ್ಷ ಡಿಸೆಂಬರ್ 25 ರಂದು ಕ್ರಿಸ್‌ಮಸ್ ದಿನವಾಗಿ ಆಚರಿಸಲಾಗುತ್ತದೆ. ಕ್ರಿಸ್‌ಮಸ್‌ನ ಸಂಭ್ರಮವು ಒಂದು ದಿನ ಮುಂಚಿತವಾಗಿ ಅಂದರೆ ಡಿಸೆಂಬರ್ 24 ರಿಂದ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡಬಹುದು ಎಂದು ನೋಡೋಣ.

1.ಲ್ಯಾಪ್ಲ್ಯಾಂಡ್ Lapland (Finland)
ಸುಮಾರು 160 ದೇಶಗಳಲ್ಲಿ ಕ್ರಿಸ್ಮಸ್ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಫಿನ್‌ಲ್ಯಾಂಡ್‌ನ ಲ್ಯಾಪ್ಲ್ಯಾಂಡ್ ಕೂಡ ಒಂದು. ಇಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಕ್ರಿಸ್ಮಸ್ ಆಚರಣೆಯನ್ನು ಮಾಡಲಾಗುತ್ತದೆ. ಈ ಸಮಯದಲ್ಲಿ ಲ್ಯಾಪ್ಲ್ಯಾಂಡ್ನಲ್ಲಿ ಹೆಚ್ಚು ಹಿಮಪಾತವಾಗುತ್ತದೆ.
ನೀವೇನಾದ್ರೂ ಇಲ್ಲಿಗೆ ಭೇಟಿ ನೀಡಿದರೆ ನಿಮ್ಮ ಪ್ರಯಾಣ ಸವಿನೆನಪಾಗಿರುವುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ ಇಲ್ಲಿ ನೀವು ಹಿಮವಾಹನದಲ್ಲಿ ಪ್ರಯಾಣ ಮಾಡಿ ಹೆಪ್ಪುಗಟ್ಟಿದ ನದಿಯಲ್ಲಿ ಸವಾರಿ ಮಾಡಬಹುದು. ಮಾತ್ರವಲ್ಲದೆ ಹಿಮ ಹೋಟೆಲ್‌ನಲ್ಲೂ ಊಟ ಮಾಡಿ ಆನಂದಿಸಬಹುದು. ಇಲ್ಲಿ ಪ್ರಸಿದ್ಧವಾದ ರಾನುವಾ ವನ್ಯಜೀವಿ ಉದ್ಯಾನವವಿದೆ. ನಿಮ್ಮೊಂದಿಗೆ ಮಕ್ಕಳಿದ್ದರೆ ಇಲ್ಲಿಗೂ ನೀವು ಭೇಟಿ ನೀಡಬಹುದು.
ತಿನ್ನಲೇಬೇಕಾದದ್ದು: ಜಿಂಜರ್ ಬ್ರೆಡ್, ಜೌಲುಟೋರ್ಟು (ಕ್ರಿಸ್ಮಸ್ ಪೇಸ್ಟ್ರಿಗಳು) ಮತ್ತು ಗ್ಲಾಗ್ (ಮಲ್ಲ್ಡ್ ವೈನ್)

2. ಪ್ರೇಗ್ Prague (Czechia)
ಜೆಕಿಯಾದ ಪ್ರೇಗ್ ನಲ್ಲಿ ಕ್ರಿಸ್ಮಸ್ ಹೆಚ್ಚು ಜನಪ್ರಿಯ. ಇಲ್ಲಿ ಕ್ರಿಸ್ಮಸ್ ಹಬ್ಬವನ್ನು ಪ್ರತೀ ಪ್ರಮುಖ ಬೀದಿಯಲ್ಲೂ ಅಲಂಕಾರ ಮಾಡುವ ಮೂಲಕ ಆಚರಿಸಲಾಗುತ್ತದೆ. ಒಂದು ವಾರಕ್ಕೂ ಮುಂಚಿತವಾಗಿ ಮನೆ, ಬೀದಿಗಳು ಎಲ್ಲವೂ ಅಲಂಕಾರಗೊಂಡಿರುತ್ತವೆ. ಮುಖ್ಯವಾಗಿ ಇಲ್ಲಿ ಓಲ್ಡ್ ಟೌನ್ ಸ್ಕ್ವೇರ್ ಮಾರುಕಟ್ಟೆಗಳು ಹೆಚ್ಚು ಪ್ರಸಿದ್ಧ. ಇಲ್ಲಿ ಕ್ರಿಸ್ಮಸ್ ಗಾಗಿನೇ ಬಗೆ ಬಗೆಯ ಅಲಂಕಾರಿಕ ವಸ್ತುಗಳು ಸಿಗುತ್ತವೆ. ಇದಲ್ಲದೇ ಸಾಕಷ್ಟು ಸ್ಥಳಗಳಿಗೆ ನೀವು ಭೇಟಿ ನೀಡಬಹುದು.
ತಿನ್ನಲೇಬೇಕಾದದ್ದು: ಕರಿದ ಕಾರ್ಪ್; ಆಲೂಗಡ್ಡೆ ಸಲಾಡ್; ಕ್ರಿಸ್ಮಸ್ ಬ್ರೆಡ್; ಮಶ್ರೂಮ್ ಸೂಪ್; ಜಾಟರ್ನಿಸ್ (ಜೆಕ್ ಸಾಸೇಜ್); ಹನಿ ಕೇಕ್.
3. ನ್ಯೂಯಾರ್ಕ್ New York City (USA)
ಹೋಸ ವರ್ಷ ಅಥವಾ ಕ್ರಿಸ್ಮಸ್ ಆಚರಣೆಗೆಂದು ನೀವೇನಾದ್ರೂ ನ್ಯೂಯಾರ್ಕ್‌ಗೆ ಭೇಟಿ ನಿಡಬೇಕು ಅಂದುಕೊಂಡಿದ್ದರೆ ತುಂಬಾ ಒಳ್ಳೆಯದು. ಯಾಕೆಂದರೆ ಇಲ್ಲಿನ ಕ್ರಿಸ್ಮಸ್ ಆಚರಣೆ ಮನಸೂರೆಗೊಳಿಸುತ್ತದೆ. ಇಲ್ಲಿ ನೀವು ಪ್ರಪಂಚದ ಅತಿ ದೊಡ್ಡ ಜಿಂಜರ್ ಬ್ರೆಡ್ ಗ್ರಾಮವಾದ ಜಿಂಜರ್ ಬ್ರೆಡ್ ಲೇನ್ ಗೆ ಭೇಟಿ ನೀಡಿ. ಬ್ರೂಕ್ಲಿನ್ ಬೊಟಾನಿಕಲ್ ಗಾರ್ಡನ್‌ನಲ್ಲಿ ಲೈಟ್‌ಸ್ಕೇಪ್ ಇರುತ್ತದೆ. ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್‌ನಲ್ಲಿ ಹಾಲಿಡೇ ಟ್ರೈನ್ ಶೋ ಇರುತ್ತೆ. ರಾಕ್‌ಫೆಲ್ಲರ್ ಸೆಂಟರ್ ಕ್ರಿಸ್ಮಸ್ ಟ್ರೀಯನ್ನು ನೋಡಬಹುದು. ಇದು ಫೋಟೋ ಶೂಟ್‌ಗೆ ಅದ್ಬುತವಾದ ಸ್ಥಳ. ಜೊತೆಗೆ ಡೈಕರ್ ಹೈಟ್ಸ್ ಕ್ರಿಸ್ಮಸ್ ದೀಪಗಳು, ಬ್ರ್ಯಾಂಟ್ ಪಾರ್ಕ್‌ನಲ್ಲಿರುವ ವಿಂಟರ್ ವಿಲೇಜ್ ಅನ್ನು ವೀಕ್ಷಿಸಿ.
ತಿನ್ನಲೇಬೇಕಾದದ್ದು: ಹುರಿದ ಗೋಮಾಂಸ; ಕ್ರಿಸ್ಮಸ್ ಕುಕೀ, ಚಾಕೊಲೇಟ್, ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಊಟ ಮಾಡುವುದನ್ನು ಮರೆಯಬೇಡಿ.

4. ಲಂಡನ್ London (UK)
ಲಂಡನ್‌ನಲ್ಲೂ ಕ್ರಿಸ್ಮಸ್ ಆಚರಣೆ ಕಣ್ಮನ ಸೆಳೆಯುವಂತಿರುತ್ತದೆ. ಕೋವೆಂಟ್ ಗಾರ್ಡನ್ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ 60-ಅಡಿ ಕ್ರಿಸ್ಮಸ್ ಟ್ರೀಯನ್ನು ವೀಕ್ಷಿಸಲು ಎರಡು ಕಣ್ಣು ಸಾಲದು. ಸೌತ್‌ಬ್ಯಾಂಕ್ ಸೆಂಟರ್ ವಿಂಟರ್ ಫೆಸ್ಟಿವಲ್ ಹಾಗೂ ಕ್ರಿಸ್ಮಸ್ ದಿನದ ಹಾಪ್-ಆನ್ ಹಾಪ್-ಆಫ್ ಬಸ್ ಪ್ರವಾಸ ಜೊತೆಗೆ ಹ್ಯಾಂಪ್ಟನ್ ಕೋರ್ಟ್ ಪ್ಯಾಲೇಸ್ ಐಸ್ ರಿಂಕ್‌ನಲ್ಲಿ ಸ್ಕೇಟ್ ಮಾಡುವುದು ಮಜಾವಾಗಿರುತ್ತದೆ.
ತಿನ್ನಲೇಬೇಕಾದದ್ದು: ಕ್ರಿಸ್ಮಸ್ ಚಿಕನ್, ಸಾಂಪ್ರದಾಯಿಕ ಬ್ರಿಟಿಷ್ ಕ್ರಿಸ್ಮಸ್ ಕೇಕ್, ಬ್ರಿಟಿಷ್ ಬ್ರಾಂಡಿ ಬೆಣ್ಣೆ.

5. ಹಾಂಗ್ ಕಾಂಗ್ (Hong Kong)
ವೆಸ್ಟ್ ಕೌಲೂನ್ ಆರ್ಟ್ ಪಾರ್ಕ್‌ನಲ್ಲಿ ಹಾಂಗ್ ಕಾಂಗ್ ವಿಂಟರ್‌ಫೆಸ್ಟ್ (ಜನವರಿ 1, 2024 ರವರೆಗೆ) ನಡೆಯುತ್ತೆದ. ಪೆಸಿಫಿಕ್ ಪ್ಲೇಸ್ ಮತ್ತು ಸ್ಟಾರ್‌ಸ್ಟ್ರೀಟ್ ಆವರಣದಲ್ಲಿ ಫೇರಿಟೇಲ್ ಕ್ರಿಸ್ಮಸ್ ಆಚರಣೆಯನ್ನು ಮಾಡಲಾಗುತ್ತದೆ. ಚೀನಾ ಹಾಂಗ್ ಕಾಂಗ್ ಸಿಟಿ ಕಾರ್ ಬೂಟ್ ಮಾರುಕಟ್ಟೆಯಲ್ಲಿ ಕಂಗೊಳಿಸುವ ಕ್ರಿಸ್ಮಸ್ ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡಬಹುದು. ಡಿಸ್ಕವರಿ ಬೇ & ಸ್ಟಾನ್ಲಿ ಪ್ಲಾಜಾ ಕ್ರಿಸ್ಮಸ್ ಮಾರುಕಟ್ಟೆಗಳು ಇಲ್ಲಿನ ಪ್ರಸಿದ್ಧ ಮಾರುಕಟ್ಟೆಗಳಾಗಿವೆ.

6. ರೋಮ್ Rome (Italy)
ಇಟಲಿಯ ರೋಮ್‌ನಲ್ಲಿ ಕ್ಮಿಸ್ಮಸ್ ಆಚರಣೆಯನ್ನು ನೋಡುವುದು ಒಂದು ಅದೃಷ್ಟವೇ ಸರಿ. ಈ ಸಮಯದಲ್ಲಿ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಬಹುತೇಕ ಸ್ಥಳಗಳು ಒಂದಕ್ಕಿಂತ ಒಂದು ಪೈಪೋಟಿಯಂತೆ ಅಲಂಕರಿಸಲ್ಪಟ್ಟಿರುತ್ತವೆ. ಪಿಯಾಝಾ ನವೋನಾದಲ್ಲಿ ಕ್ರಿಸ್ಮಸ್ ಮಾರುಕಟ್ಟೆ ನೋಡಲು ಪ್ರವಾಸಿಗರು ಭೇಟಿ ನೀಡುತ್ತಾರೆ. ನಗರದ ಕ್ರಿಸ್ಮಸ್ ದೀಪಗಳನ್ನು ನೋಡಲು ಬಸ್ ಪ್ರವಾಸವನ್ನು ಕೈಗೊಳ್ಳಬಹುದು. ಕ್ಯಾಸ್ಟೆಲ್ ಸ್ಯಾಂಟ್ ಏಂಜೆಲೊದಲ್ಲಿ ಐಸ್ ಸ್ಕೇಟಿಂಗ್‌ಗೆ ಹೋಗುವುದು ಇನ್ನೂ ಮಜಾ ನೀಡುತ್ತದೆ.
ತಿನ್ನಲೇಬೇಕಾದದ್ದು: ಅಬ್ಬಾಚಿಯೊ, ಕುರಿಮರಿ ಭಕ್ಷ್ಯ, ಆಲೂಗಡ್ಡೆ ಮತ್ತು ತರಕಾರಿಗಳೊಂದಿಗೆ ಬಡಿಸಲಾಗುತ್ತದೆ, ಕ್ರಿಸ್ಮಸ್ ಈವ್, ವಾಲ್‌ನಟ್ಸ್, ಚಾಕೊಲೇಟ್ ಮತ್ತು ಜೇನುತುಪ್ಪದಿಂದ ತುಂಬಿದ ಸಿಹಿ ಬ್ರೆಡ್ ತಿನ್ನುವುದನ್ನ ಮರೆಯದಿರಿ.

7.ವಿಯೆನ್ನಾ Vienna (Austria)
ವಿಯೆನ್ನಾ ಒಂದು ಅದ್ಬುತವಾದ ಪ್ರವಾಸಿ ತಾಣವಾಗಿದೆ. ಪ್ರತೀ ವರ್ಷ ಸಾವಿರಾರು ಭಕ್ತರು ಈ ಸ್ಥಳಕ್ಕೆ ಆಗಮಿಸುತ್ತಾರೆ. ನೀವೇನಾದರೂ ಈ ಸ್ಥಳಕ್ಕೆ ಭೇಟಿ ಣೀಡಬೇಕು ಅಂದುಕೊಂಡಿದ್ದರೆ ಸುಸಜ್ಜಿತವಾಗಿ ಪ್ಲ್ಯಾನ್ ಮಾಡಿ. ನೀವಿಲ್ಲಿ ಹಾಫ್‌ಬರ್ಗ್ ಅರಮನೆ ಮತ್ತು ಜೈಂಟ್ ಕ್ರಿಸ್ಮಸ್ ಬೋಗೆ ಭೇಟಿ ನೀಡಬಹುದು. ಇಲ್ಲಿ ಕ್ರಿಸ್ಮಸ್ ಅಲಂಕಾರವನ್ನು ಕಣ್ತುಂಬಿಕೊಳ್ಳಬಹುದು. 1786 ರಲ್ಲಿ ಟೀ ಸಲೂನ್ ಆಗಿ ಸ್ಥಾಪಿಸಲಾದ ಡೆಮೆಲ್ ಬೇಕರಿಗೆ ಭೇಟಿ ನೀಡಿ ಕುದುರೆ ಮತ್ತು ಗಾಡಿಯಲ್ಲಿ ನಗರವನ್ನು ಸುತ್ತಾಡಿ ನೋಡಿ.
ತಿನ್ನಲೇಬೇಕಾದದ್ದು: ನಾಡೆಲ್, ಮರೋನಿ (ಹುರಿದ ಚೆಸ್ಟ್ನಟ್); ಕ್ಲೆಟ್ಜೆನ್ಬ್ರೋಟ್ (ಆಸ್ಟ್ರಿಯನ್ ಹಣ್ಣಿನ ಬ್ರೆಡ್)












Click it and Unblock the Notifications