Winter Travel Guide: ಪ್ರವಾಸ ಹೋಗ್ತೀರಾ..? ಕರ್ನಾಟಕದ ಈ ಸ್ಥಳದಲ್ಲಿ ಮಂಜು ನೋಡಬಹುದು...

ಚಳಿಗಾಲ ಆರಂಭವಾಗಿದೆ. ಸಂಜೆ ಆಗುತ್ತಿದ್ದಂತೆ ಚಳಿ ಹೆಚ್ಚಾಗಿ ಮಂಜು ಆವರಿಸುತ್ತೆ. ಡಿಸೆಂಬರ್ ಹಾಗೂ ಜನವರಿಯಲ್ಲಿ ಮಂಜು ಕವಿದ ಸ್ಥಳಗಳನ್ನು ನೋಡುವುದೇ ಒಂದು ಖುಷಿ. ಇಂತಹ ಸ್ಥಳಗಳು ನಮ್ಮ ಸುತ್ತಲೂ ಹಲವಾರು ಇವೆ. ನೀವೇನಾದ್ರೂ ಇಂತಹ ಸ್ಥಳಗಳಿಗೆ ಭೇಟಿ ನೀಡಬೇಕು ಅಂದುಕೊಂಡಿದ್ದರೆ ನಾವು ನಿಮಗೆ ಅಂಥಹ ಸ್ಥಳಗಳ ಪರಿಚಯ ಮಾಡಿಕೊಡುತ್ತೇವೆ.

Winter Travel Guide: you see fog in this karnataka place

ಕೊಡಗು ಮಳೆಯೊಂದಿಗೆ ಮಂಜು

ಕರ್ನಾಟಕದ ಕೊಡಗು ಬಗ್ಗೆ ಸಾಮಾನ್ಯವಾಗಿ ನೀವೆಲ್ಲಾ ಕೇಳಿರುತ್ತೀರಾ. ಇದು ಮೈಸೂರಿನಿಂದ ರಸ್ತೆಯ ಮೂಲಕ 120 ಕಿಮೀ ದೂರದಲ್ಲಿದೆ. ಈ ಗಿರಿಧಾಮ ಕಾಫಿ ತೋಟಗಳಿಂದ ಹಸಿರು ಸೌಂದರ್ಯವನ್ನು ಹೊಂದಿದೆ. ಇಲ್ಲಿ ತಲಕಾವೇರಿ, ಇರುಪ್ಪು ಜಲಪಾತ, ಅಬ್ಬೆ ಜಲಪಾತ, ಹೊನ್ನಮ್ಮ ಕೆರೆ, ಮಡಿಕೇರಿ ಕೋಟೆ, ಜೇನು ಕಣಿವೆ ಮತ್ತು ಭಾಗಮಂಡಲ ಹೀಗೆ ಅನೇಕ ಭೇಟಿ ನೀಡಬೇಕಾದ ಸ್ಥಳಗಳಾಗಿವೆ. ಇಲ್ಲಿ ಯಾವಾಗಲು ಮಳೆ ಮತ್ತು ಬಿಸಿಲು ಕಣ್ಣಾಮುಚ್ಚಾಲೆ ಆಡುತ್ತಲೇ ಇರುತ್ತದೆ. ಇದರಿಂದಾಗಿ ಚಳಿಗಾಲದಲ್ಲಿ ಮಳೆಯೊಂದಿಗೆ ಮಂಜು ಯಾವಾಗಲೂ ಆವರಿಸಿರುತ್ತದೆ. ಡಿಸೆಂಬರ್‌ ಹಾಗೂ ಜನವರಿಯಲ್ಲಿ ಇಲ್ಲಿ ದಟ್ಟ ಮಂಜು ಕಾಣ ಸಿಗುತ್ತದೆ.

Winter Travel Guide: you see fog in this karnataka place

ಸಕಲೇಶಪುರದಲ್ಲಿ ಹೇಗಿರುತ್ತೆ ಗೊತ್ತಾ ಮಂಜು?

ಸಕಲೇಶಪುರದಲ್ಲಿರುವ ಪಾಂಡವರ ಗುಡ್ಡಕ್ಕೆ ಭೇಟಿ ನೀಡಲು ಈ ಸಮಯದಲ್ಲಿ ಜನರು ತುದಿಗಾಲಲ್ಲಿ ನಿಲ್ಲುತ್ತಾರೆ. ಕರ್ನಾಟಕದ ಪುಟ್ಟ ಗಿರಿಧಾಮವಾಗಿರುವ ಸಕಲೇಶಪುರ, ಅದ್ಭುತ ಆಕರ್ಷಣೆಗಳನ್ನು ಹೊಂದಿದೆ. ಪಾಂಡವರ ಗುಡ್ಡ ಅಥವಾ ಬೆಟ್ಟ ಬೈರವೇಶ್ವರ ದೇವಸ್ಥಾನದಿಂದ ನೀವು ಜೇನುಕಲ್ಲು ಶಿಖರಕ್ಕೆ ಹೋಗಬಹುದು. ಮಾರ್ಗದಲ್ಲಿ ಕಾಫಿ ತೋಟಗಳು, ಹಸಿರು ಕಾಡುಗಳು ಮತ್ತು ಅರಬ್ಬಿ ಸಮುದ್ರದ ನೋಟಗಳು ಸೇರಿದಂತೆ ಸಾಕಷ್ಟು ಆಕರ್ಷಣೆಗಳನ್ನು ದಾರಿಯುದ್ದಕ್ಕೂ ನೋಡಬಹುದು. ಸ್ನೇಹಿತರ ಜೊತೆ ಈ ಪಾಂಡವರ ಗುಡ್ಡದಲ್ಲಿ ಬೆಳಗಿನ ಜಾವ ಮಂಜು ನೋಡುವುದು ಥ್ರಿಲ್ಲಿಂಗ್‌ ಆಗಿರುತ್ತದೆ.

Winter Travel Guide: you see fog in this karnataka place

ಚಳಿಗಾಲದಲ್ಲಿ ಕೊಡಚಾದ್ರಿ ನೋಡಿ

ಡಿಸೆಂಬರ್ ತಿಂಗಳಿನಲ್ಲಿ ಮಂಜು ನೋಡಲು ಕೊಡಚಾದ್ರಿ ಬೆಟ್ಟಗಳು ಕೂಡ ಪರ್ಫೇಕ್ಟ್‌ ಸ್ಥಳಗಳಾಗಿವೆ. ಕರ್ನಾಟಕದ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ನಡುವೆ ಸಮುದ್ರ ಮಟ್ಟದಿಂದ 4411 ಅಡಿ ಎತ್ತರದಲ್ಲಿ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿದೆ. ಕರ್ನಾಟಕದ ಅತ್ಯುತ್ತಮ ವೀಕ್ಷಣೀಯ ಸ್ಥಳ ಇದಾಗಿದೆ. ಚಳಿಗಾಲದಲ್ಲಿ ಕೊಡಚಾದ್ರಿಯ ಸೌಂದರ್ಯವನ್ನು ನೋಡಿಯೇ ಅನುಭವಿಸಬೇಕು.

Winter Travel Guide: you see fog in this karnataka place

ಮುಳ್ಳಯ್ಯನಗಿರಿ

ಕರ್ನಾಟಕದ ಚಾರಣಿಗರ ನೆಚ್ಚಿನಸ್ಥಳಗಳಲ್ಲಿ ಮುಳ್ಳಯ್ಯನಗಿರಿ ಕೂಡ ಒಂದು. ಸಮುದ್ರ ಮಟ್ಟದಿಂದ 1930 ಮೀಟರ್ ಎತ್ತರದಲ್ಲಿ ನೆಲೆಸಿರುವ ಮುಳ್ಳಯ್ಯನಗಿರಿ ಶಿಖರವು ಪಶ್ಚಿಮ ಘಟ್ಟಗಳ ಬಾಬಾ ಬುಡನ್ ಗಿರಿ ಶ್ರೇಣಿಯಲ್ಲಿದೆ. ಇದು ಚಿಕ್ಕಮಗಳೂರಿನಿಂದ ಕೇವಲ 45 ನಿಮಿಷಗಳ ದೂರದಲ್ಲಿದೆ. ಇಲ್ಲಿನ ಪ್ರಶಾಂತ ವಾತಾವರಣ ಮತ್ತು ಪ್ರಕೃತಿಯ ಹಸಿ ಸೌಂದರ್ಯಕ್ಕೆ ಮರುಳಾಗದ ಜನರೇ ಇಲ್ಲ. ಬೆಳಗಿನ ಜಾವ ಮೋಡ ಮಂಜು ಕಣ್ತುಂಬಿಕೊಳ್ಳಲು ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಇದಲ್ಲದೆ ಬಲ್ಲಾಳರಾಯನ ದುರ್ಗ, ಶಿವಗಂಗೆ, ಬಿಳಿಕಲ್ ರಂಗಸ್ವಾಮಿ ಬೆಟ್ಟ, ಅಗನಿ ಶಿಖರ, ಸ್ಕಂದಗಿರಿ, ದೇವರಾಯನದುರ್ಗ, ಕುದುರೆಮುಖ, ಬಾಬಾ ಬುಡನ್ ಗಿರಿ ಸೇರಿದಂತೆ ಅನೇಕ ಸ್ಥಳಗಳು ಕರ್ನಾಟಕದ ಜನಪ್ರಿಯ ಸ್ಥಳಗಳಾಗಿವೆ. ಚಳಿಗಾಲದಲ್ಲಿ ಬೆಟ್ಟಗಳಲ್ಲಿ ಮಂಜು ಆವರಿಸಿರುವುದನ್ನು ಕಣ್ತುಂಬಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+