Diwali Travel: ದೀಪಾವಳಿ ಸಮಯದಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ.. ನಿಮಗಾಗುವ ಆನಂದ ಅಷ್ಟಿಷ್ಟಲ್ಲ..
ದೀಪಾವಳಿಯ ಸಮಯದಲ್ಲಿ ಇಡೀ ದೇಶವು ಹಬ್ಬದ ಸಂತೋಷದಲ್ಲಿ ಮುಳುಗಿರುತ್ತದೆ. ಅದಾಗ್ಯೂ ದೇಶದ ಹಲವೆಡೆ ದೀಪಾವಳಿಯನ್ನು ವಿಶೇಷವಾಗಿ ಆಚರಿಸುವ ಅನೇಕ ನಗರಗಳಿವೆ. ಈ ಸಮಯದಲ್ಲಿ ಈ ಸ್ಥಳಗಳನ್ನು ಕಣ್ತುಂಬಿಕೊಳ್ಳುವುದು ಅದೃಷ್ಟವೇ ಸರಿ. ಹಾಗಾದರೆ ಈ ದೀಪಾವಳಿಯ ರಜಾ ದಿನಗಳಲ್ಲಿ ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡಬಹುದು. ಯಾವೆಲ್ಲಾ ಸ್ಥಳಗಳಲ್ಲಿ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.
ಅಮೃತಸರ
ಅಮೃತಸರದಲ್ಲಿ ದೀಪಾವಳಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಲ್ಲಿ ದೀಪಗಳ ಅಂಲಕಾರ ಕಣ್ತುಂಬಿಕೊಳ್ಳುವುದರಲ್ಲಿರುವ ಆನಂದವೇ ಬೇರೆ. ಈ ಸ್ಥಳ ನಿಮ್ಮನ್ನು ಆಧ್ಯಾತ್ಮದಲ್ಲಿ ಮುಳುಗಿಸುತ್ತದೆ. ಹೀಗಾಗಿ ಅಮೃತಸರವನ್ನು ದೀಪಾವಳಿಯ ದಿನದಂದು ಮಿಸ್ ಮಾಡದೇ ನೋಡಿ. ಇಲ್ಲಿನ ಐಕಾನಿಕ್ ಗೋಲ್ಡನ್ ಟೆಂಪಲ್ ನ ಅದ್ಬುತ ನೋಟ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ದೇವಾಲಯದ ಸಂಕೀರ್ಣವನ್ನು ಅಪಾರ ಸಂಖ್ಯೆಯ ದೀಪಗಳಿಂದ ಅಲಂಕರಿಸಲಾಗಿರುತ್ತದೆ. ಸುತ್ತಮುತ್ತಲಿನ ಸರೋವರದಲ್ಲಿ ಪ್ರಕಾಶಿತ ದೇವಾಲಯದ ಪ್ರತಿಬಿಂಬ ನೋಡುಗರನ್ನು ಮೋಡಿಮಾಡುತ್ತದೆ. ಅಮೃತಸರಕ್ಕೆ ವಿಶೇಷವಾಗಿ ರೈಲಿನಲ್ಲಿ ಪ್ರಯಾಣಿಸಿ. ಇದು ಪ್ರತಿಯೊಬ್ಬರೂ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.

ಕೋಲ್ಕತ್ತಾ
ಕೋಲ್ಕತ್ತಾ ಕೆಲವು ವಿಶಿಷ್ಟ ಸಂಪ್ರದಾಯಗಳನ್ನು ಹೊಂದಿದೆ. ದೀಪಾವಳಿಯ ರಾತ್ರಿ ಇಡೀ ದೇಶವು ಲಕ್ಷ್ಮಿ ದೇವಿಯನ್ನು ಪೂಜಿಸುವಾಗ ಕೋಲ್ಕತ್ತಾದ ಜನರು ಕಾಳಿ ದೇವಿಯನ್ನು ಪೂಜಿಸುತ್ತಾರೆ. ದೀಪಾವಳಿಯ ರಾತ್ರಿ ನಡೆಯುವ ಕಾಳಿ ಪೂಜೆಯು ಅದ್ಭುತವಾಗಿದೆ. ನಗರದಾದ್ಯಂತ ಕಾಳಿ ದೇವಾಲಯಗಳಿಗೆ ಭಕ್ತರು ಭೇಟಿ ನೀಡುತ್ತಾರೆ. ಬೀದಿಗಳು ಬೆರಗುಗೊಳಿಸುವಂತೆ ದೀಪಗಳಿಂದ ಹೊಳೆಯುತ್ತವೆ. ಇಲ್ಲಿನ ರುಚಿಕರ ತಿನಿಸುಗಳು ವಿಭಿನ್ನವಾಗಿರುತ್ತವೆ.
ಅಯೋಧ್ಯೆ
ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯು ದೀಪಾವಳಿಯೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ. ಈಗ ಇಲ್ಲಿ ಬೃಹತ್ ರಾಮಮಂದಿರ ನಿರ್ಮಾಣವಾಗುತ್ತಿದೆ. ದೀಪಾವಳಿ ಸಮಯದಲ್ಲಿ ಈ ಯಾತ್ರಾಸ್ಥಳಕ್ಕೆ ಭೇಟಿ ನೀಡುವುದು ತುಂಬಾ ವಿಶೇಷವಾಗಿರುತ್ತದೆ. ಇಡೀ ಅಯೋಧ್ಯೆಯು ದೀಪಗಳಿಂದ ಕಂಗೊಳಿಸುತ್ತದೆ. ಇದು ಕಣ್ಣುಗಳಿಗೆ ದೈವಿಕ ದರ್ಶನದಂತಿರುತ್ತದೆ. ಈ ಘಾಟ್‌ಗಳ ಮೇಲೆ ಲಕ್ಷಾಂತರ ದೀಪಗಳು ಒಟ್ಟಿಗೆ ಬೆಳಗುವುದನ್ನು ನೋಡುವುದು ಸ್ವರ್ಗೀಯ ಆನಂದವನ್ನು ನೀಡುತ್ತದೆ.
ವಾರಣಾಸಿ
ಆಧ್ಯಾತ್ಮಿಕತೆಯೊಂದಿಗೆ ದೀಪಾವಳಿಯನ್ನು ಆನಂದಿಸಲು ಬಯಸಿದರೆ ಬನಾರಸ್ ಅಂದರೆ ವಾರಣಾಸಿಗೆ ಬನ್ನಿ. ಭೋಲೆ ಬಾಬಾನ ನಗರದಲ್ಲಿ ದೀಪಾವಳಿಯನ್ನು ಬಹಳ ವಿಜೃಂಭಣೆಯಿಂದ ಮತ್ತು ವಿಶೇಷ ಶೈಲಿಯಲ್ಲಿ ಆಚರಿಸಲಾಗುತ್ತದೆ. ಗಂಗಾನದಿಯ ದಡದಲ್ಲಿ ನಿರ್ಮಿಸಲಾದ ಘಾಟ್‌ಗಳ ಮೇಲೆ ಪ್ರಜ್ವಲಿಸುವ ದೀಪಗಳನ್ನು ನೋಡುವುದು, ಗಂಗಾನದಿಯಲ್ಲಿ ದೋಣಿ ವಿಹಾರ ಮಾಡುವುದು ಮತ್ತು ಇಲ್ಲಿ ಗಂಗಾ ಆರತಿಯನ್ನು ನೋಡುವುದು ಸ್ವತಃ ಸ್ಮರಣೀಯವಾಗಿದೆ. ಒಂದು ವೇಳೆ ಇಲ್ಲಿಗೆ ನೀವೇನಾದರು ಭೇಟಿ ನೀಡಿದರೆ ಇಲ್ಲಿ ಲಸ್ಸಿ, ಕಚೋರಿ ಮತ್ತು ಪಾನ್ ಆನಂದಿಸಲು ಮರೆಯಬೇಡಿ.
ಜೈಪುರ
ದೀಪಾವಳಿಯ ಸಮಯದಲ್ಲಿ ಪಿಂಕ್ ಸಿಟಿ ಜೈಪುರಕ್ಕೆ ಭೇಟಿ ನೀಡುವುದು ತುಂಬಾ ರೋಮಾಂಚನಕಾರಿಯಾಗಿರುತ್ತದೆ. ಹಬ್ಬದ ಸಮಯದಲ್ಲಿ ಜೈಪುರಕ್ಕೆ ಭೇಟಿ ನೀಡಿದರೆ ಸಾವಿರಾರು ದೀಪಗಳ ಅಲಂಕಾರದಿಂದ ಹಾಗೂ ಲೈಟ್‌ಗಳ ಹೊಳಪಿನಿಂದ ನಗರ ಕಂಗೊಳಿಸುತ್ತದೆ.
ಇಲ್ಲಿ ವಿಶೇಷವಾಗಿ ಅಲಂಕರಿಸಿದ ಅರಮನೆಯನ್ನು ನೋಡಲು ಮರೆಯದಿರಿ. ವಿಶೇಷವಾಗಿ ರಾಜಸ್ಥಾನಿ ಆಹಾರದ ರುಚಿ ನೋಡದೆ ಜೈಪುರಕ್ಕೆ ವಿದಾಯ ಹೇಳಬೇಡಿ.
(ಗಮನಿಸಿ: ಈ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕಿ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ದಯವಿಟ್ಟು ಸಂಬಂಧಿತ ತಜ್ಞರ ಸಲಹೆಯನ್ನು ಪಡೆಯಿರಿ)












Click it and Unblock the Notifications