ಗಮನಿಸಿ; ಹಲವು ರೈಲುಗಳ ಸಂಚಾರ ಜೂ.4, 6ರ ತನಕ ಭಾಗಶಃ ರದ್ದು

ಮಂಗಳೂರು, ಮೇ 22; ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗಕ್ಕೆ ಸಂಚಾರ ನಡೆಸುವ ಜನರಿಗೆ ಮಹತ್ವದ ಮಾಹಿತಿಯೊಂದಿದೆ. ಹಳಿಗಳ ನಿರ್ವಹಣೆಯ ಕಾರಣ ನೈಋತ್ಯ ರೈಲ್ವೆ ಹಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಬೇಸಿಗೆ ಸಮಯದಲ್ಲಿ ಸಂಚಾರ ನಡೆಸುವ ಜನರು ಈ ಕುರಿತು ಮಾಹಿತಿ ತಿಳಿದಿರಬೇಕು.

ಹಳಿ ನಿರ್ವಹಣೆ ಕಾಮಗಾರಿಯ ಕಾರಣ ವಿಜಯಪುರ- ಮಂಗಳೂರು (ರೈಲು ಸಂಖ್ಯೆ 07377) ರೈಲಿನ ಸಂಚಾರವನ್ನು ಹಾಸನ-ಮಂಗಳೂರು ನಡುವೆ ಮೇ 21ರಿಂದ ಜೂನ್ 4ರವಗೆ ಭಾಗಶಃ ರದ್ದುಪಡಿಸಲಾಗಿದೆ. ಈ ರೈಲಿನ ಸಂಚಾರ ಹಾಸನದಲ್ಲೇ ಮೊಟಕುಗೊಳ್ಳಲಿದೆ ಎಂದು ಪ್ರಕಟಣೆ ಹೇಳಿದೆ.

Vijayapura Mangaluru Train Cancelled

ಮಂಗಳೂರು-ವಿಜಯಪುರ ನಡುವಿನ ರೈಲು (ರೈಲು ಸಂಖ್ಯೆ 07378) ಮೇ 22ರಿಂದ ಜುಲೈ 5ರವರೆಗೆ ಮಂಗಳೂರು ಬದಲು ಹಾಸನದಿಂದ ಹೊರಡಲಿದೆ. ಪ್ರಯಾಣಿಕರು ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಕೆಲವು ರೈಲುಗಳು ರದ್ದು; ಬೆಳಗಾವಿ- ಸಿಕಂದರಾಬಾದ್ ನಡುವೆ ಸಂಚಾರ ನಡೆಸುವ ಪ್ರತಿದಿನದ ಎಕ್ಸ್‌ಪ್ರೆಸ್ ವಿಶೇಷ ರೈಲು (ರೈಲು ಸಂಖ್ಯೆ 07335) ಕಾಜಿಪೇಟ-ಮಣುಗೂರು ನಿಲ್ದಾಣಗಳ ನಡುವಿನ ಸಂಚಾರವನ್ನು ಮೇ 20ರಿಂದ ಜೂನ್ 6ರವರೆಗೆ ಭಾಗಶಃ ರದ್ದು ಮಾಡಲಾಗಿದೆ.

rail

ಅದೇ ರೀತಿ ಮಣುಗೂರು-ಬೆಳಗಾವಿ ಪ್ರತಿದಿನದ ವಿಶೇಷ ರೈಲು ( ರೈಲು ಸಂಖ್ಯೆ 07336) ಮಣುಗೂರು ಮತ್ತು ಕಾಜಿಪೇಟ ನಿಲ್ದಾಣದ ನಡುವೆ ಮೇ 20, ಜೂನ್‌ 6ರ ತನಕ ರದ್ದುಗೊಳಿಸಲಾಗಿದೆ.

ರೈಲುಗಳ ಸಂಚಾರ; ಬೇಸಿಗೆ ರಜೆಯ ಹಿನ್ನಲೆಯಲ್ಲಿ ನೈಋತ್ಯ ರೈಲ್ವೆ ವಿಶೇಷ ರೈಲುಗಳ ಸಂಚಾರವನ್ನು ನಡೆಸಿತ್ತು. ಇದುವರೆಗೂ ಕರ್ನಾಟಕದಲ್ಲಿ 1,790 ಸಲ ರೈಲುಗಳು ಬೇಸಿಗೆಯಲ್ಲಿ ಸಂಚಾರ ನಡೆಸಿವೆ. ಕಳೆದ ವರ್ಷ 779 ಸಲ ರೈಲು ಸಂಚರಿಸಿದ್ದವು ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. ಭಾರತೀಯ ರೈಲ್ವೆಯ 380 ರೈಲುಗಳು 6,369 ಸಲ ಸಂಚರಿಸಿವೆ. ಕಳೆದ ವರ್ಷ 348 ರೈಲುಗಳು 4,599 ಸಲ ಸಂಚಾರ ಮಾಡಿದ್ದವು.

ರೈಲುಗಳ ಸೇವೆ ವಿಸ್ತರಣೆ; ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸುವ ಸಲುವಾಗಿ ಬೇಸಿಗೆ ವಿಶೇಷ ರೈಲುಗಳ ಸೇವೆಯನ್ನು ವಿಸ್ತರಿಸಿ ಪೂರ್ವ ಮಧ್ಯ ರೈಲ್ವೆ ವಲಯ ಆದೇಶ ಹೊರಡಿಸಿದೆ.

ರೈಲು ಸಂಖ್ಯೆ 05271 ಮುಜಾಫರ್‌ಪುರ ಮತ್ತು ಯಶವಂತಪುರ ನಡುವೆ ಪ್ರತಿ ಶುಕ್ರವಾರ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಈ ಮೊದಲು ಮೇ 26 ರವರೆಗೆ ಓಡಿಸಲು ಸೂಚಿಸಲಾಗಿತ್ತು. ಅದನ್ನು ಜೂನ್ 2 ರಿಂದ 30 ರವರೆಗೆ (5 ಟ್ರಿಪ್) ವಿಸ್ತರಿಸಲಾಗಿದೆ.

ರೈಲು ಸಂಖ್ಯೆ 05272 ಯಶವಂತಪುರ ಮತ್ತು ಮುಜಾಫರ್‌ಪುರ ನಡುವೆ ಪ್ರತಿ ಸೋಮವಾರ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಮೇ 29 ರವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಜೂನ್ 5 ರಿಂದ ಜುಲೈ 3 ರವರೆಗೆ (5 ಟ್ರಿಪ್) ವಿಸ್ತರಣೆ ಮಾಡಲಾಗಿದೆ.

ರೈಲು ಸಂಖ್ಯೆ 05215 ಬರೌನಿ ಮತ್ತು ಯಶವಂತಪುರ ನಡುವೆ ಪ್ರತಿ ಶನಿವಾರ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಮೇ 27 ರವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಜೂನ್ 3 ರಿಂದ 24 ರವರೆಗೆ (4 ಟ್ರಿಪ್) ವಿಸ್ತರಿಸಲಾಗಿದೆ.

ರೈಲು ಸಂಖ್ಯೆ 05216 ಯಶವಂತಪುರ ಮತ್ತು ಬರೌನಿ ನಡುವೆ ಪ್ರತಿ ಮಂಗಳವಾರ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಮೇ 30 ರವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಜೂನ್ 6 ರಿಂದ 27 ರವರೆಗೆ (4 ಟ್ರಿಪ್) ವಿಸ್ತರಣೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+